ಕೆಲಸಕ್ಕೆ ಹೋಗು ಎಂದಿದ್ದೇ ತಪ್ಪಾಯ್ತು, ಹೆಂಡತಿಯನ್ನು ಕತ್ತು ಹಿಸುಕಿ ಕೊಂದ ಪತಿ!

By Gowthami K  |  First Published Jun 3, 2023, 2:24 PM IST

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದಲ್ಲಿ ಕೆಲಸಕ್ಕೆ ಹೋಗು ಎಂದ ಪತ್ನಿಯನ್ನೇ ಕತ್ತು ಹಿಸುಕಿ ಕೊಂದು ಪತಿರಾಯ ಪೊಲೀಸರಿಗೆ ಶರಣಾದ ಘಟನೆ ನಡೆದಿದೆ.  


ಬೆಳಗಾವಿ (ಜೂ.3): ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದಲ್ಲಿ ಕೆಲಸಕ್ಕೆ ಹೋಗು ಎಂದ ಪತ್ನಿಯನ್ನೇ ಕತ್ತು ಹಿಸುಕಿ ಕೊಂದು ಪತಿರಾಯ ಪೊಲೀಸರಿಗೆ ಶರಣಾದ ಘಟನೆ ನಡೆದಿದೆ.   ನಾಗನೂರ ಗ್ರಾಮದ ಬಸವ್ವ ಹಣಮಂತ ಹಿಡಕಲ್(35) ಗಂಡ ಹಣಮಂತ ಹಿಡಕಲ್ ನಿಂದ  ಕೊಲೆಯಾದ ದುದೈವಿಯಾಗಿದ್ದಾಳೆ.  ಕಳೆದ ಕೆಲ ದಿನಗಳಿಂದ ಕೆಲಸಕ್ಕೆ ಹೋಗದೆ ಹಣಮಂತ ಮನೆಯಲ್ಲಿ ಇರುತ್ತಿದ್ದ. ಕೆಲಸಕ್ಕೆ ಹೋಗು ಹೀಗೆ ಎಷ್ಟು ದಿನ ಖಾಲಿ ಮನೆಯಲ್ಲಿರ್ತಿಯಾ ಎಂದು ಪ್ರಶ್ನಿಸಿದ್ದಕ್ಕೆ ಪತ್ನಿ ಬಸವ್ವನ ಮೇಲೆ ಕೋಪಗೊಂಡ ಹಣಮಂತ ಪದೇ ಪದೇ ಹೇಳಿದನ್ನೇ ಹೇಳ್ತಿಯಾ ಎಂದು ಸಿಟ್ಟಿಗೆದ್ದು ಕತ್ತು ಹಿಸುಕಿ  ಕೊಲೆ ಮಾಡಿದ್ದಾನೆ. ಹೆಂಡತಿಯನ್ನು ಕೊಲೆ‌ ಮಾಡಿ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಸೆ ಮಣೆ ಏರಬೇಕಿದ್ದ ಯುವಕನ ಬರ್ಬರ ಹತ್ಯೆ
ಕಲಘಟಗಿ: ಕೆಲವೇ ದಿನಗಳಲ್ಲಿ ಹಸೆ ಮಣೆ ಏರಬೇಕಿದ್ದ ಯುವಕನನ್ನು ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿ ಪರಾರಿಯಾದ ಘಟನೆ ಜಿನ್ನೂರ ಗ್ರಾಮದಲ್ಲಿ ಗುರುವಾರ ತಡರಾತ್ರಿ ಜರುಗಿದೆ.

Tap to resize

Latest Videos

ಅಪ್ರಾಪ್ತೆಯನ್ನು ಸಾಮೂಹಿಕ ಅತ್ಯಾಚಾರವೆಸಗಿ ರೋಡಿಗೆ ಎಸೆದ ಅಲ್ಪಸಂಖ್ಯಾತ ಫೇಸ್‌ಬುಕ್

ಗ್ರಾಮದ ನಿಂಗಪ್ಪ ಬುದಪ್ಪ ನವಲೂರ (28) ಎಂಬ ಯುವಕನು ಗುರುವಾರ ರಾತ್ರಿ ಮನೆಯಲ್ಲಿ ಊಟ ಮುಗಿಸಿಕೊಂಡು ತೋಟದ ಮನೆಯಲ್ಲಿ ಮಲಗಿದ್ದಾಗ ದುಷ್ಕರ್ಮಿಗಳು ಕಣ್ಣಿಗೆ ಕಾರಪುಡಿ ಎರಚಿ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ.

ಜಿಂಕೆ ಕೊಂದು ಅರಣ್ಯ ಪ್ರದೇಶದಲ್ಲೆ ಮಾಂಸ ಕತ್ತರಿಸುತ್ತಿದ್ದವರ ಬಂಧನ, ಮೂವರು ಪರಾರಿ!

ಇದೇ ಜೂ.7ರಂದು ತಾವರಗೇರಿ ಗ್ರಾಮದ ಯುವತಿ ಜೊತೆ ಕುಟುಂಬದವರು ಮದುವೆ ನಿಶ್ಚಯ ಮಾಡಿದ್ದರು. ಈಗ ಹಸೆ ಮಣೆ ಏರಿ ಸುಖ ಜೀವನ ಮಾಡಬೇಕಾದವನು ಕೊಲೆಯಲ್ಲಿ ಅಂತ್ಯವಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

click me!