Kalaburagi Murder: ಹಣಕ್ಕಾಗಿ ಹೆಂಡತಿಯನ್ನೇ ಕೊಂದು ಹಾಕಿದ ಪಾಪಿ ಗಂಡ

By Girish Goudar  |  First Published Mar 15, 2022, 10:43 AM IST

*   ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ನಡೆದಿದ್ದ ಕೊಲೆ
*  ಮಾ.4 ರಂದು ನಡೆದಿದ್ದ ಮಹಿಳೆಯ ಕೊಲೆ ಪ್ರಕರಣದ ರಹಸ್ಯ ಬಯಲು
*  ಹಣಕ್ಕಾಗಿ ಹೆಂಡತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ ಗಂಡ
 


ಕಲಬುರಗಿ(ಮಾ.15):  ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಮಾ.4 ರಂದು ನಡೆದಿದ್ದ ಮಹಿಳೆಯ ಕೊಲೆ(Murder) ಪ್ರಕರಣದ ರಹಸ್ಯ ಬಯಲಾಗಿದೆ. ಹೌದು, ಘಟನೆ ಹನ್ನೆರಡು ದಿನಗಳ ನಂತರ ಕೊಲೆ ರಹಸ್ಯ ಬಯಲಾಗಿದೆ. ಹೆಂಡತಿಯ ರೇಪ್ & ಮರ್ಡರ್(Rape and Murder) ಆಗಿದೆ ಅಂತ ದೂರು ನೀಡಿದ ಆಕೆಯ ಗಂಡನೇ ಹಂತಕನಾಗಿದ್ದಾನೆ. ಬಸವರಾಜ ಎಂಬಾತನೇ ಹೆಂಡತಿಯನ್ನ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. 

ಹೌದು, ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಮಾ.4 ರಂದು ಹೊಲದಲ್ಲಿ ಗೋದಿಗೆ ನೀರುಣಿಸುತ್ತಿದ್ದ ಮಹಿಳೆಯ(Women) ಬರ್ಬರ ಹತ್ಯೆ ನಡೆದಿತ್ತು. ಕಬ್ಬು ಮಾರಾಟದ ಹಣ ಆಕೆಯ ಅಕೌಂಟ್‌ಗೆ ಜಮೆ ಆಗಿತ್ತು. ಹಣಕ್ಕಾಗಿ ಗಂಡ ತನ್ನ ಹೆಂಡತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದನು. ಘಟನೆಯಲ್ಲಿ ಶಾಮಲಾ(33) ಎಂಬ ಮಹಿಳೆಯ ಕೊಲೆ ಮಾಡಲಾಗಿತ್ತು. 

Tap to resize

Latest Videos

ಮದುವೆ ಬಳಿಕವೂ ಮುಂದುವರೆದ ಅಕ್ರಮ ಸಂಬಂಧ, ಮನೆಯವರೊಂದಿಗೆ ಸೇರಿ ಪ್ರೇಮಿಯ ಹತ್ಯೆ!

ಬಟ್ಟೆ ಬಿಚ್ಚಿದ ಸ್ಥಿತಿಯಲ್ಲಿ ಶವ(Deadbody) ಪತ್ತೆಯಾಗಿತ್ತು. ರೇಪ್ & ಮರ್ಡರ್ ಅಂತ ಗಂಡ ಹಾಗೂ ಮನೆಯವರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆ ಆರಂಭಿಸಿದ್ದ ಪೊಲೀಸರು ಇದೀಗ ಮಹಿಳೆಯನ್ನ ಕೊಲೆ ಮಾಡಿದ್ದು ಆಕೆಯ ಗಂಡನೇ ಎಂದು ಹೇಳಿದ್ದಾರೆ. 

ತನಿಖೆ ಆರಂಭಿಸಿದ ಪೊಲೀಸರಿಗೆ(Police) ಗಂಡನೇ ಕೊಲೆ ಮಾಡಿರುವ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ  ಬಸವರಾಜನನ್ನ ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಕಬ್ಬಿನ ಹಣ ಕೊಡದಿದ್ದಕ್ಕೆ ಹೆಂಡತಿಯನ್ನು ಕೊಂದು ರೇಪ್ & ಮರ್ಡರ್‌ ಸ್ಟೋರಿ ಕಟ್ಟಿದ್ದ ಪತಿ ಬಸವರಾಜ. 

ಹೆಂಡತಿ ಸತ್ತ ನಂತರ ಆಕೆಯ ಬ್ಲೌಜ್ ಬಿಚ್ಚಿ, ಸೀರೆ ಮೇಲೆತ್ತಿ ರೇಪ್ ಎಂದು ಬಿಂಬಿಸಲು ಯತ್ನಿಸಿದ್ದ ಪತಿ ಬಸವರಾಜ. ಕುಡಿತದ ಚಟದಿಂದ ಹಣ ಹಾಳು ಮಾಡ್ತಾನೆ ಅಂತ ಶಾಮಲಾ ಗಂಡನಿಗೆ ಹಣ ಕೊಡಲು ಹಿಂದೇಟು ಹಾಕಿದ್ದಳು. ಹಣ ಕೊಡದಕ್ಕೆ ಹೆಂಡತಿಯನ್ನೇ ಕೊಂದು ಹಾಕಿದ್ದ ಪಾಪಿ ಗಂಡ. ಒಮ್ಮೆ ಹೆಂಡತಿ ಇನ್ನೊಮ್ಮೆ ತಾನು ಗ್ರಾಮ ಪಂಚಾಯತ್ ಸದಸ್ಯನಾಗಿದ್ದ ಆರೋಪಿ ಬಸವರಾಜ. 

ಪ್ರೀತಿಸಿ ಮದ್ವೆಯಾದ ಹೆಂಡ್ತಿ ಮೇಲೆ ಅನುಮಾನ, ಅದೇ ಅನುಮಾನದಿಂದಲೇ ಪತಿ ಅಂದರ್

ಹಾಸನ: ಪ್ರೀತಿಸಿ ಮದುವೆಯಾದವಳಿಗೆ(Love Marriage) ಪತಿಯೇ ಸೀಮೆ ಎಣ್ಣೆ ಸುರಿದು ಹತ್ಯೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮರಡಿಕೆರಿ ಗ್ರಾಮದಲ್ಲಿ ಮಾ.08 ರಂದು ನಡೆದಿತ್ತು. 

Illicit Relationship ತನ್ನ ಪಲ್ಲಂಗದಾಟಕ್ಕೆ ಅಡ್ಡಿಯಾಗಿದ್ದಾನೆಂದು ಹೆತ್ತ ಮಗನನ್ನೆ ಕೊಂದ ಪಾಪಿ ತಾಯಿ

ಮರಡಿಕೆರಿ  ಗ್ರಾಮದ ಸತೀಶ್ ಎಂಬಾತ ಪತ್ನಿ ಭವ್ಯ(22) ಮೇಲೆ ಅಮಾನವೀಯವಾಗಿ ದಾಳಿ ನಡೆಸಿದ್ದಾನೆ. ಪ್ರೀತಿಸಿ ಮದುವೆಯಾಗಿದ್ದ ಮಡದಿ ಮೇಲಿನ ಅನುಮಾನದಿಂದ ಆಕೆ ಮಲಗಿದ್ದ ವೇಳೆ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದಾನೆ. ಮಹಿಳೆ ದೇಹ ಶೇಕಡಾ 70 ರಷ್ಟು ಸುಟ್ಟು ಹೋಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಳು. 

ತನಿಖೆ ವೇಳೆ ಬಯಲಾಯ್ತು ಪತಿ ನೀಚ ಕೃತ್ಯ

ಹೌದು...ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿಕೆ ಕೊಡಿಸಿದ್ದ. ಇದರಿಂದ ಪೊಲೀಸರು ಅನುಮಾನ ಬಂದಿದ್ದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಆಗ ಮಹಿಳೆಗೆ ಬೆಂಕಿ ಹಚ್ಚಿವುದಕ್ಕೆ ಕಾರಣ ಬಟಾಬಯಲಾಗಿತ್ತು.
ಐದು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಸತೀಶ್ ಮತ್ತು ಭವ್ಯ ಇಬ್ಬರೂ ಮದುವೆಯಾಗಿದ್ದರು. ಮದುವೆಯಾದ ಕೆಲವೇ ವರ್ಷದಲ್ಲಿ ಪತ್ನಿ ಮೇಲೆ ಪತಿಗೆ ಅನುಮಾನ ಹುಟ್ಟುಕೊಂಡಿದೆ. ಇದೇ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿ ಮಾರ್ಚ್ 5 ರ ಶನಿವಾರ ಪತ್ನಿ ಹತ್ಯೆಗೆ ಸತೀಶ್ ಸಂಚು ರೂಪಿಸಿದ್ದಾನೆ. ಪತ್ನಿ ಮಲಗಿದ್ದಾಗ ಬೆಂಕಿ ಹಚ್ಚಿ ಕೊಲೆ ಮಾಡಲು ಮುಂದಾಗಿದ್ದಾನೆ. ಅದೃಷ್ಟವಶಾತ್ ಆಕೆ ಉಸಿರಾಡುತ್ತಿದ್ದು ಆಕೆ ಬದುಕುಳಿದಾಗ ಗ್ಯಾಸ್ ಲೀಕ್ ಆಗಿ ಬೆಂಕಿ ಬಿದ್ದಿದ್ದಾಗಿ ಹೇಳಿಕೆ ನೀಡುವಂತೆ ಪತ್ನಿಯನ್ನು ಬೆದರಿಸಿ ಹೇಳಿಕೆ ಕೊಡಿಸಿದ್ದನು. 

ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡ ಬಗ್ಗೆ ಭವ್ಯ ಹೇಳಿಕೆ ನೀಡಿದ್ದರು. ಆದ್ರೆ ಘಟನೆ ಬಗ್ಗೆ ಅನುಮಾನದಿಂದ ತನಿಖೆ ನಡೆಸಿದಾಗ ಪೊಲೀಸರಿಗೆ ಘಟನೆ ಹಿಂದಿನ ಮರ್ಮದ ಸತ್ಯ ತಿಳಿದಿದೆ. ಅನುಮಾನದ ಪತಿಯ ರಹಸ್ಯ ಬಯಲಾಗಿದೆ. ಸದ್ಯ ಆರೋಪಿ ಪತಿ ಸತೀಶ್ನನ್ನ ಪೊಲೀಸರು ಬಂಧಿಸಿದ್ದಾರೆ. ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. 
 

click me!