ಬಾಗಲಕೋಟೆ ಜಿಲ್ಲೆಯ ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೇಸಂಶಿ ಗ್ರಾಮದಲ್ಲಿ ನಡೆದ ಘಟನೆ.
ಕಲಾದಗಿ(ಏ.08): ಸಾಲ ತೀರಿಸುವ ವಿಚಾರವಾಗಿ ಗಂಡ ತನ್ನ ಹೆಂಡತಿಯನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೇಸಂಶಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಬಾದಾಮಿ ತಾಲೂಕಿನ ಹಾಗನೂರಿನ (ಹಾಲಿ ವಸ್ತಿ ಹಿರೇಸಂಶಿ) ಮಾಯವ್ವ ಶಿವಪ್ಪ ಉದ್ದನ್ನವರ್(43) ಕೊಲೆಯಾದ ಮಹಿಳೆ. ಶಿವಪ್ಪ ಪುಂಡಪ್ಪ ಉದ್ದನ್ನವರ್(48) ಕೊಲೆ ಮಾಡಿದ ಆರೋಪಿ. ಸಾಲದ ವಿಚಾರವಾಗಿ ತನ್ನ ಪತ್ನಿಯೊಡನೆ ದಿನಾಲು ಜಗಳವಾಡುತ್ತಿದ್ದ. ತಾನು ಅವರಿವರ ಕಡೆ ಮಾಡಿದ ಸಾಲವನ್ನು ತೀರಿಸಲು ತನ್ನ ಹೆಂಡತಿ ಮಾಯವ್ವನ ಪಾಲಿನ ಆಸ್ತಿ ಮಾರುವಂತೆ ಪೀಡಿಸುತ್ತಿದ್ದ. ಅದಕ್ಕೆ ಒಪ್ಪದೇ ಇದ್ದಾಗ ಅವಳ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಆರೋಪಿ ಪರಾರಿಯಾಗಿದ್ದಾನೆ.
undefined
ಪಾನಮತ್ತ ಮಗನ ಕುಂಭಕರ್ಣ ನಿದ್ದೆ, ತಡವಾಗಿ ಎಬ್ಬಿಸಿದ ತಂದೆಯನ್ನೇ ಹತ್ಯೆಗೈದ ಪಾಪಿ ಪುತ್ರ!
ಘಟನಾ ಸ್ಥಳಕ್ಕೆ ಬಾಗಲಕೋಟೆ ಡಿಎಸ್‌ಪಿ ಪ್ರಶಾಂತ ಮುನ್ನೊಳ್ಳಿ, ಗ್ರಾಮೀಣ ಸಿಪಿಐ ಭೀಮಣ್ಣ ಸೂರಿ ಹಾಗೂ ಕಲಾದಗಿ ಪಿಎಸೈ ಪ್ರಕಾಶ ಬಣಕಾರ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.