
ಬೆಂಗಳೂರು (ಏ.8): ಮಾರತಹಳ್ಳಿ ಠಾಣೆ ಪಿಎಸ್ಐ ಅಂಡ್ ಟೀಂನಿಂದ ಕಿಡ್ನಾಪ್ ಮತ್ತು ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ದಿನ ಕಳೆದ್ರೂ ಪಿಎಸ್.ಐ ಮತ್ತು ಗ್ಯಾಂಗ್ ಇನ್ನೂ ಬಂಧನವಾಗಿಲ್ಲ. ಪಿಎಸ್ಐ ರಂಗೇಶ್, ಹೆಡ್ ಕಾನ್ಸ್ ಟೇಬಲ್ ಮಾಹದೇವ ನಾಯ್ಕ್, ಮಹೇಶ್ ತಲೆಮರೆಸಿಕೊಂಡಿದ್ದು, ಹುಡುಕಾಟ ಮುಂದುವರೆದಿದೆ. ಪಿಎಸ್ಐ ಅಂಡ್ ಟೀಂ ಬಂಧನ ಮಾಡದೇ ನಿರ್ಲಕ್ಷ್ಯ ಮಾಡುತ್ತಿದ್ದಾರಾ ಪೊಲೀಸರು..? ತಲೆಮರೆಸಿಕೊಂಡವರನ್ನ ಪತ್ತೆ ಮಾಡುವಲ್ಲಿಯೇ ಮೌನವಹಿಸಿದ್ರಾ? ಎಂದು ಈಗ ಪ್ರಶ್ನೆ ಎದ್ದಿದೆ.
ಆರೋಪಿಗಳ ಬಂಧನಕ್ಕೆ ಎರಡು ಟೀಂ ಮಾಡಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳ ಮಾಹಿತಿ ನೀಡಿದೆ. ರಂಗೇಶ್ ಮತ್ತು ಇಬ್ಬರು ಆರೋಪಿಗಳು ಎಸ್ಕೇಪ್ ಆಗುವ ಮುನ್ನ 8 ಮಂದಿಗೆ ಕರೆ ಮಾಡಿರೋ ಮಾಹಿತಿ ಕೂಡ ಲಭ್ಯವಿದೆ. ಹೀಗೆ ಕರೆ ಮಾಡಿದ್ದ 8 ಮಂದಿಯನ್ನ ಪೊಲೀಸರು ವಿಚಾರಣೆ ಕೂಡ ಮಾಡಿದ್ದರು. ಆದ್ರೆ ರಂಗೇಶ್ ಅಂಡ್ ಟೀಂ ಎಸ್ಕೇಪ್ ಬಳಿಕ ಪೊಲೀಸರಿಗೆ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ. ರಂಗೇಶ್ ಕುಟುಂಬದಿಂದ ಕೂಡ ಪೊಲೀಸರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಮೊಬೈಲ್ ಹಾಗು ಎಲ್ಲೂ ಕೂಡ ಪಿಎಸ್ ಐ ರಂಗೇಶ್ ಎಟಿಎಂ ಬಳಸುತ್ತಿಲ್ಲ. ಟೆಕ್ನಿಕಲ್ ಪ್ಲಾನ್ ಬಳಸಿ ತನಿಖಾಧಿಕಾರಿಗಳಿಗೆ ಸಿಗದಂತೆ ರಂಗೇಶ್ ತಲೆಮರೆಸಿಕೊಂಡಿದ್ದಾನೆ.
ಘಟನೆ ಹಿನ್ನೆಲೆ: ಪೊಲೀಸರೇ ಆರೋಪಿಯನ್ನು ಅಪಹರಿಸಿ ಆತನಿಂದಲೇ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಸಿನಿಮೀಯ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು. ಆರೋಪಿಯನ್ನೇ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟು ಪೊಲೀಸರೇ ತಗಲಾಕಿಕೊಂಡಿದ್ದರು. ಹುಲಿ ಉಗುರು, ಚರ್ಮವನ್ನ ಮಾರಾಟ ಮಾಡುತ್ತಿದ್ದವನನ್ನ ಪೊಲೀಸರು ಕರೆದೊಯ್ದ, ನಂತರ ಆತನ ಕಡೆಯವರಿಗೆ ಕರೆ ಮಾಡಿ 40 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು.
ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಪತ್ನಿ ವಿರುದ್ದ FIR ದಾಖಲು!
ಇದಾದ ಬಳಿಕ ಬಾಗಲೂರು ಪೊಲೀಸ್ ಠಾಣೆಯಲ್ಲಿ ಆರೋಪಿ ಕಡೆಯವರಿಂದ ಕಿಡ್ನಾಪ್ ಪ್ರಕರಣ ದಾಖಲು ಆಗಿತ್ತು. ಅನಂತರ ಕಿಡ್ನಾಪ್ ಮಾಡಿದವರಿಗಾಗಿ ಬಾಗಲೂರು ಪೊಲೀಸರು ಹುಡುಕಾಡಿದ್ದರು. ಆಗ ಪೊಲೀಸರಿಗೇ ಶಾಕ್ ಆಗಿತ್ತು ಕಿಡ್ನಾಪ್ ಮಾಡಿದ್ದವರು ಮಾರತಹಳ್ಳಿ ಠಾಣೆ ಪಿಎಸ್‌ಐ ರಂಗೇಶ್ ಮತ್ತು ಹೆಡ್ ಕಾನ್ಸ್ಟೇಬಲ್ ಹರೀಶ್ ಆಗಿದ್ದರು. ಈ ಪೊಲೀಸರ ತಂಡ ಪ್ರಕರಣ ಸಂಬಂಧ ಆರೋಪಿಯನ್ನ ಕರೆದೊಯ್ದು, ಆರೋಪಿ ತಲೆಗೆ ಗನ್ ಇಟ್ಟು ಹಣ ಕೊಡುವಂತೆ ಆರೋಪಿ ಮನೆಯವರಿಗೆ ರಂಗೇಶ್ ಕರೆ ಮಾಡಿಸಿದ್ದರು.
ಎಲೆಕ್ಷನ್ ಮೂಡ್‌ನಲ್ಲಿದ್ದ ರೌಡಿ ಶೀಟರ್ ಸೈಲೆಂಟ್ ಸುನೀಲ್‌ಗೆ ಕೇಸ್ ಜಡಿದು ಸ್ವಾಗತಿಸಿದ
ಘಟನೆ ಬಳಿಕ ಕಮೀಷನರ್ ಪ್ರತಾಪ್ ರೆಡ್ಡಿಗೆ ಮಾಹಿತಿ ಸಿಕ್ಕಿ ತಕ್ಷಣವೇ ಆರೋಪಿಗಳನ್ನ ಬಂಧಿಸುವಂತೆ ಕಮಿಷನರ್ ಸೂಚನೆ ಕೊಟ್ಟಿದ್ದರು. ಹೆಡ್ ಕಾನ್ಸ್ಟೇಬಲ್ ಹರೀಶ್‌ನನ್ನ ಬಾಗಲೂರು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಪಿಎಸ್‌ಐ ರಂಗೇಶ್‌ಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಶಬ್ಬೀರ್, ಜಾಕೀರ್, ಪೊಲೀಸರಾದ ರಂಗೇಶ್ ಪಿಎಸ್ಐ, ಹರೀಶ್ ಕೆ.ಎಲ್, ಮಹದೇವ ನಾಯಕ್, ಮಹೇಶ್‌ರವರ ಮೇಲೆ ದೂರು ದಾಖಲಾಗಿದ್ದು, ಎ-2 ಆರೋಪಿ ಹರೀಶ್, ಎ-3 ಆರೋಪಿ ಶಬ್ಬೀರ್ ಹಾಗೂ ಎ-4 ಆರೋಪಿ ಜಾಕೀರ್ ಬಂಧನವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ