ಗಂಡ-ಹೆಂಡತಿ ಅಂದ್ಮೇಲೆ ಸಾವಿರ ಜಗಳ ನಡಿತಾವೆ ಹೋಗ್ತಾವೆ, ಅದಕ್ಕೆ ಹಿರಿಯರು ಹೇಳಿರೋದು ಅವರ ಜಗಳ ಉಂಡು ಮಲಗೋ ತನಕ ಅಷ್ಟೆ ಅಂತ. ಆದರೆ ಇಲ್ಲೊಬ್ಬ ಪಾಪಿ ಗಂಡ ತನ್ನ ಹೆಂಡತಿಯ ಶೀಲವನ್ನೇ ಶಂಕಿಸಿ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರೋ ದುರ್ಘಟನೆ ನಡೆದಿದೆ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಏ.14): ಗಂಡ-ಹೆಂಡತಿ (Husband-Wife) ಅಂದ್ಮೇಲೆ ಸಾವಿರ ಜಗಳ ನಡಿತಾವೆ ಹೋಗ್ತಾವೆ, ಅದಕ್ಕೆ ಹಿರಿಯರು ಹೇಳಿರೋದು ಅವರ ಜಗಳ ಉಂಡು ಮಲಗೋ ತನಕ ಅಷ್ಟೆ ಅಂತ. ಆದರೆ ಇಲ್ಲೊಬ್ಬ ಪಾಪಿ ಗಂಡ ತನ್ನ ಹೆಂಡತಿಯ ಶೀಲವನ್ನೇ ಶಂಕಿಸಿ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರೋ (Murder) ದುರ್ಘಟನೆ ನಡೆದಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ಎಲ್ಲೆಂದರಲ್ಲಿ ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ, ಮತ್ತೊಂದೆಡೆ ಅನಾಥ ಶವವಾಗಿ ತಮ್ಮದೇ ಜಮೀನಿನಲ್ಲಿ ಬಿದ್ದಿರೋ ಮೃತ ದುರ್ದೈವಿ ನೇತ್ರಾವತಿ (30). ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಸೋಮಗುದ್ದು ಗ್ರಾಮ. ಕಳೆದ 10 ವರ್ಷಗಳ ಹಿಂದೆ ಸೋಮಗುದ್ದು ಗ್ರಾಮದ ದ್ಯಾಮಣ್ಣ ಹಾಗೂ ಕೆರೆಯಾಗಳಹಳ್ಳಿ ಗ್ರಾಮದ ಮೃತ ಯುವತಿ ನೇತ್ರಾವತಿಗೆ ವಿವಾಹ ಆಗುತ್ತದೆ. ಅದಾದ ಬಳಿಕ ಇಬ್ಬರು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು ಇಬ್ಬರು ಮಕ್ಕಳು ಕೂಡ ಇದ್ದರು. ಆದರೆ ಕಳೆದ ಎರಡ್ಮೂರು ವರ್ಷಗಳಿಂದ ಪಾಪಿ ಪತಿರಾಯ ದ್ಯಾಮಣ್ಣ ಮಾತ್ರ ತನ್ನ ಪತ್ನಿಯ ಮೇಲೆ ಅನುಮಾನ ಪಡುತ್ತಲೇ ಇದ್ದನಂತೆ.
ಮರ್ಯಾದಾ ಹತ್ಯೆ, ಪ್ರೇಮಿ ಮನೆ ತಲುಪಿದ ವಿದ್ಯಾರ್ಥಿನಿಯ ಕೊಂದ ತಂದೆ-ಮಗ!
ಬಳಿಕ ಹಲವು ಬಾರಿ ಪತ್ನಿ ನೇತ್ರಾವತಿಗೆ ನೀನು ಬೇರೆಯವರ ಜೊತೆ ಅಕ್ರಮ ಸಂಬಂಧ ಇಟ್ಕೊಂಡಿದ್ದೀಯ ಎಂದು ಗಲಾಟೆ ಮಾಡಿ ಹೊಡೆದಿದ್ದಾನೆ. ತಕ್ಷಣವೇ ಮಾಹಿತಿ ತಿಳಿದ ನೇತ್ರಾವತಿ ಸಂಬಂಧಿಕರು ಬಂದು ಇಬ್ಬರಿಗೂ ತಿಳಿ ಹೇಳಿ ರಾಜಿ ಪಂಚಾಯ್ತಿ ಮಾಡಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ದ್ಯಾಮಣ್ಣ ಇಂದು ಬೆಳಗಿನ ಜಾವ 5:30ರ ಸುಮಾರಿಗೆ ಪತ್ನಿಯನ್ನು ಉಪಾಯದಿಂದ ಜಮೀನು ಕೆಲಸಕ್ಕೆ ಎಂದು ಕರೆದುಕೊಂಡು ಬಂದು ಕುಡುಗೋಲಿನಿಂದ ಕುತ್ತಿಗೆ ಕತ್ತರಿಸಿ ಬರ್ಬರವಾಗಿ ಹತ್ಯೆಗೈದು ಭಯದಿಂದ ತಾನೇ ಪೊಲೀಸರ ಮುಂದೆ ಶರಣಾಗಿದ್ದಾನೆ. ಇಂತವನಿಗೆ ಸಾಯೋ ತನಕ ಜೈಲಲ್ಲೇ ಕೊಳೆಯುವ ರೀತಿ ಶಿಕ್ಷೆ ವಿಧಿಸಿ ಅಂತಿದ್ದಾರೆ ಸಂಬಂಧಿಕರು.
ವಿಷಯ ತಿಳಿದ ಕೂಡಲೇ ಎಸ್ಪಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಸಂಬಂಧಿಕರು ಆತನನ್ನು ಗಲ್ಲಿಗೆ ಏರಿಸಿ ಯಾವುದೇ ಕಾರಣಕ್ಕೂ ಹೊರಗಡೆ ಬಿಡಬೇಡಿ, ಇಲ್ಲ ನಮ್ಮ ಬಳಿ ಬಿಡಿ ಎಲ್ಲರೂ ಸೇರಿ ಹೊಡೆದು ಸಾಯಿಸಿ ಬಿಡ್ತೀವಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಈ ಕೊಲೆ ಬಗ್ಗೆ ಎಸ್ಪಿ ಅವರನ್ನೆ ವಿಚಾರಿಸಿದರೆ ಕೊಲೆ ಮಾಡಿದ ಆರೋಪಿ ದ್ಯಾಮಣ್ಣ ತನ್ನ ಹೆಂಡತಿಯನ್ನು ತಾನೇ ಉಪಾಯದಿಂದ ಜಮೀನಿಗೆ ಕರೆದೊಯ್ದು ಬರ್ಬರವಾಗಿ ಕತ್ತು ಕೊಯ್ದು ಕೊಲೆ ಮಾಡಿ ಕೂಡಲೇ ಠಾಣೆಗೆ ಬಂದು ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಹೆಂಡ್ತಿ ಜತೆ ವಾಟ್ಸಾಪ್ ಚಾಟ್ ಮಾಡಿದ ರೌಡಿ ಸಿಗದ ಸಿಟ್ಟಿಗೆ 10 ಕಾರಿನ ಗಾಜು ಪುಡಿ ಪುಡಿ..!
ಆದರೆ ಈ ಕೊಲೆಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಸಂಬಂಧಿಕರು ಕೊಡುವ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು. ಈಗಾಗಲೇ ಸಂಬಂಧಿಕರು ಹೇಳುವ ಹಾಗೆ ಮೃತ ನೇತ್ರಾವತಿಯ ಶೀಲ ಶಂಕಿಸಿ ಕೊಲೆ ಮಾಡಿದ್ದಾನೆ ಎನ್ನಲಾಗ್ತಿದೆ. ತನಿಖೆ ಬಳಿಕ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದರು. ಒಟ್ಟಾರೆ ಪತ್ನಿಯೊಂದಿಗೆ ಅನ್ಯೋನ್ಯವಾಗಿ ಸಂಸಾರ ಮಾಡಬೇಕಿದ್ದ ಗಂಡನೇ ಈ ರೀತಿ ಬರ್ಬರವಾಗಿ ಹತ್ಯೆ ಮಾಡಿರೋದು ಇಡೀ ಗ್ರಾಮದಲ್ಲೇ ಆತಂಕ ಮೂಡಿಸಿದೆ. ಅದೇನೆ ಇರಲಿ ಅರೋಪಿಗೆ ತಕ್ಕ ಕಠಿಣ ಶಿಕ್ಷೆ ಆಗಲಿ, ಎಂಬುದು ಪ್ರತಿಯೊಬ್ಬರ ಬಯಕೆಯಾಗಿದೆ.