ಬೆಂಗಳೂರು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕೇಸ್, ಇಡೀ ಪ್ರಕರಣಕ್ಕೆ ಸೈಬರ್ ಟೆರರಿಸಮ್ ಕರಿ ನೆರಳು..!

By Suvarna News  |  First Published Apr 14, 2022, 5:25 PM IST

* ಬೆಂಗಳೂರು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕೇಸ್
* ಇಡೀ ಪ್ರಕರಣಕ್ಕೆ ಸೈಬರ್ ಟೆರರಿಸಮ್ ಕರಿ ನೆರಳು..!
* ಖಾಸಗೀ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿತ್ತು


ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು
 
ಬೆಂಗಳೂರು, (ಏ.14) ;  ಬೆಂಗಳೂರು ನಗರ ಮತ್ತು ಹೊರವಲಯದಲ್ಲಿನ ಖಾಸಗಿ ಶಾಲೆಗಳಿಗೆ ಏಪ್ರಿಲ್ 8ರಂದು  ಬಾಂಬ್ ಸ್ಫೋಟದ ಬೆದರಿಕೆಯೊಡ್ಡಿ ಇಮೇಲ್ ಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ನೀಡಿದ್ದ ದೂರನ್ನು ಆಧರಿಸಿ ಪ್ರಕರಣಗಳೂ ದಾಖಲಾಗಿತ್ತು. ಆದ್ರೆ ಯಲಹಂಕ ಬಳಿಯ ಸ್ಟೋನ್‌ಹಿಲ್ ಶಾಲೆಗೆ ಬಂದಿದ್ದ ಇಮೇಲ್‌ಗೆ ಸಂಬಂಧಿಸಿ ಏಪ್ರಿಲ್ 9ರಂದು ಈಶಾನ್ಯ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ಐಟಿ ಆ್ಯಕ್ಟ್ 66F ಅಡಿ ಪ್ರಕರಣ ದಾಖಲು ಮಾಡಲಾಗಿದೆ. 

ಐಟಿ ಆ್ಯಕ್ಟ್, 66F ಅಂದ್ರೆ ಕಂಪ್ಯೂಟರ್ ಮೂಲಕ ರಾಷ್ಟ್ರೀಯ ಏಕತೆಗೆ, ಭದ್ರತೆಗೆ, ಸಾರ್ವಭೌಮತ್ವಕ್ಕೆ ಧಕ್ಕೆ ಉಂಟುಮಾಡುವುದು ಅಥವಾ ಜನರಲ್ಲಿ ಭಯ ಉಂಟು ಮಾಡುವ ಕೃತ್ಯವನ್ನು  ಮಾಡುವುದಕ್ಕೆ ಸಂಬಂಧಿಸಿ ಇರುವ ಕಾನೂನು.. ಇದನ್ನೇ ಸೈಬರ್ ಟೆರರಿಸಂ ಅಂತ ಹೇಳೋದು. ಇದು ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಸೈಬರ್ ಪೊಲೀಸರು ವಿಶೇಷ ತಂಡ ರಚನೆ ಮಾಡಿಕೊಂಡು ತನಿಖೆ ನಡೆಸ್ತಿದ್ದಾರೆ. 

Tap to resize

Latest Videos

ಶಾಲೆಯಲ್ಲಿ ಬಾಂಬ್ ಇಟ್ಟಿದ್ದೇವೆ, ಜೋಕ್ ಅಲ್ಲ, ಕಡೆಗಣಿಸ್ಬೇಡಿ: ಬೆಂಗಳೂರಿನ ಸ್ಕೂಲ್‌ಗಳಿಗೆ ಬೆದರಿಕೆ!

ಬೆಂಗಳೂರಿನ ಖಾಸಗೀ ಶಾಲೆಗಳಿಗೆ ಬೆದರಿಕೆ ಒಡ್ಡಲು 10ಕ್ಕೂ ಅಧಿಕ ಇ ಮೇಲ್‌ಗಳನ್ನು ಸೃಷ್ಟಿ ಮಾಡಲಾಗಿದೆ. ಇದಕ್ಕಾಗಿ 10ಕ್ಕೂ ಅಧಿಕ ಪ್ರಾಕ್ಸಿ ಸರ್ವರ್ ಬಳಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಶಾಲೆಯ ಆಡಳಿತ ಮಂಡಳಿಗೆ ಬಂದಿರುವ ಇ ಮೇಲ್‌ನ ಐಪಿ ಅಡ್ರೆಸ್‌ ಇನ್ನೂ ಪತ್ತೆಯಾಗಿಲ್ಲ. ಇದಕ್ಕೆ ಕಾರಣ ಏನಂದ್ರೆ ಪ್ರಾಕ್ಸಿ ಸರ್ವರ್‌ಗಳನ್ನು ಹಲವಾರು ಲೇಯರ್‌ಗಳನ್ನು ಒಳಗೊಂಡಿದ್ದು, ಒಂದು ಸರ್ವರ್‌ನಿಂದ ಮತ್ತೊಂದು ಸರ್ವರ್‌ಗೆ ಇರುವ ಸಂಪರ್ಕ ಪತ್ತೆ ಹಚ್ಚಲು ಸಾಧ್ಯವಾಗ್ತಿಲ್ಲ. ಹಾಗಾಗಿಯೇ ಪೊಲೀಸರು ಈಗ ರಿವರ್ಸ್ ಮೋಡ್‌ನಲ್ಲಿ ಒಂದು ಸರ್ವರ್‌ನಿಂದ, ಮತ್ತೊಂದು ಸರ್ವರ್‌ಗೆ ಇರುವ ಸಂಪರ್ಕ ಪತ್ತೆ ಹಚ್ಚಲು ಗೂಗಲ್ ಸಂಸ್ಥೆಗೆ ಪತ್ರ ಬರೆದಿದ್ದಾರೆ. 

ಈಶಾನ್ಯ ಸೆನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಐಟಿ ಆ್ಯಕ್ಟ್, 66F ದಾಖಲು ಮಾಡಿರೋದ್ರಿಂದ ಗೂಗಲ್ ಸಂಸ್ಥೆಯೂ ಗಂಭೀರವಾಗಿ ಪ್ರತಿಕ್ರಿಯೆ ನೀಡ್ತಿದೆ. ಇದೇ ಸ್ಪೀಡ್‌ನಲ್ಲಿ ತನಿಖೆ ಮುಂದುವರಿದ್ರೆ, ಇನ್ನೇನು ಕೆಲವೇ ದಿನಗಳಲ್ಲಿ ಇಮೇಲ್‌ನ ಮೂಲವನ್ನು ಪೊಲೀಸರು ಪತ್ತೆ ಹಚ್ಚಲು ಸಾಧ್ಯವಾಗಲಿದೆ..

ಬೆದರಿಕೆಗೆ ತುತ್ತಾದ ಶಾಲೆಗಳ ಪಟ್ಟಿ17ಕ್ಕೆ ಏರಿಕೆ
ಬೆಂಗಳೂರು ನಗರದಲ್ಲಿ ಮತ್ತೆ ಮೂರು ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ (prestigious private schools) ಬಾಂಬ್‌ ಬೆದರಿಕೆ (bomb threat) ಇಮೇಲ್‌ ಬಂದಿದ್ದು, ಈ ಕೃತ್ಯದಲ್ಲಿ ಸ್ಥಳೀಯರ ಕೈವಾಡದ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಾಮರಾಜರಸ್ತೆಯ ಆರ್ಮಿ ಪಬ್ಲಿಕ್‌ ಶಾಲೆ (Army Public School), ವರ್ತೂರಿನ (Vartur) ಹಾರ್ವೆಸ್ಟ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ (Harvest International School) ಹಾಗೂ ಎಚ್‌ಎಎಲ್‌ ಸಮೀಪದ ಶಿಷ್ಯ ಬೆಮೆಲ್‌ ಪಬ್ಲಿಕ್‌ ಶಾಲೆಗಳಿಗೆ (Bemel Public School) ಕೂಡ ಕಿಡಿಗೇಡಿಗಳು ಬೆದರಿಸಿದ್ದು, ಇದರೊಂದಿಗೆ ಬಾಂಬ್‌ ಬೆದರಿಕೆಗೆ ತುತ್ತಾದ ಶಾಲೆಗಳ ಪಟ್ಟಿ17ಕ್ಕೆ ಏರಿಕೆಯಾಗಿದೆ.

ಈ ಮೂರು ಶಾಲೆಗಳಿಗೆ ಕೂಡಾ ಶುಕ್ರವಾರ ಬೆಳಗ್ಗೆಯೇ ಇ-ಮೇಲ್‌ ಬಂದಿದೆ. ಆದರೆ ಆ ಶಾಲೆಯ ಸಿಬ್ಬಂದಿ, ಶನಿವಾರ ಇ-ಮೇಲ್‌ಗಳನ್ನು ಪರಿಶೀಲಿಸಿದಾಗ ಬೆದರಿಕೆ ಸಂದೇಶ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮೂರು ಶಾಲೆಗಳಲ್ಲಿ ಮುಂಜಾನೆಯೇ ಬಾಂಬ್‌ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಕರೆಸಿ ತಪಾಸಣೆ ನಡೆಸಿದ ಬಳಿಕ ಇವು ಸಹ ಹುಸಿ ಬೆದರಿಕೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಶುಕ್ರವಾರ ಬೆಳಗ್ಗೆ 11ಕ್ಕೆ ಕಿಡಿಗೇಡಿಗಳು ಬಾಂಬ್‌ ಬೆದರಿಕೆ ಇ-ಮೇಲ್‌ ಕಳುಹಿಸಿ ಆತಂಕ ಸೃಷ್ಟಿಸಿದ್ದರು.

click me!