
ಹರಪನಹಳ್ಳಿ(ಮೇ.26): ಶೀಲ ಶಂಕಿಸಿ ಪತ್ನಿಯನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಪತಿಯೇ ಕೊಲೆಗೈದ ಘಟನೆ ಹರಪನಹಳ್ಳಿ ಪಟ್ಟಣದ ವಾಲ್ಮೀಕಿ ನಗರದ ಹುಲ್ಲುಗರಡಿಕೇರಿಯಲ್ಲಿ ಶನಿವಾರ ನಸುಕಿನಜಾವ ನಡೆದಿದೆ. ಹುಲ್ಲುಗರಡಿಕೇರಿ ನಿವಾಸಿ ನಿಂಗಮ್ಮ ಪತಿಯಿಂದಲೇ ಕೊಲೆಗೀಡಾದವಳು. ಆಲೂರು ಸಣ್ಣ ಚೌಡಪ್ಪ (40) ಆರೋಪಿ.
ಆರು ವರ್ಷಗಳ ಹಿಂದೆ ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮದ ಬಂಡ್ರಿ ಮಾರಪ್ಪ ಎಂಬವರ ಪುತ್ರಿ ಜೊತೆ ಆರೋಪಿಯ ವಿವಾಹವಾಗಿತ್ತು. ಮೃತ ಪತ್ನಿ ನಿಂಗಮ್ಮ ಕೂಲಿ ಕೆಲಸ ಮಾಡುತ್ತಿದ್ದಳು. ಆರೋಪಿಯು ಫಾಸ್ಟ್‌ಫುಡ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ತಾನು ಕೆಲಸಕ್ಕೆ ಹೋದಾಗ ಪತ್ನಿ ಬೇರೆಯವರ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಆರೋಪಿ ಶೀಲ ಶಂಕಿಸಿದ್ದ.
ಹುಬ್ಬಳ್ಳಿ ಅಂಜಲಿ ಕೊಲೆಗೈದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ಗಿರೀಶ; 8 ದಿನ ಸಿಐಡಿ ಕಸ್ಟಡಿಗೊಪ್ಪಿಸಿದ ಕೋರ್ಟ್
ಶನಿವಾರ ನಸುಕಿನಜಾವ 3 ಗಂಟೆ ಸುಮಾರಿಗೆ ಪತಿ-ಪತ್ನಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆರೋಪಿಯು ಪತ್ನಿಗೆ ಹಗ್ಗದಿಂದ ಕುತ್ತಿಗೆ ಬಿಗಿದು ಹತ್ಯೆಗೈದಿದ್ದಾನೆ ಎಂದು ಮೃತಳ ತಂದೆ ಬಂಡ್ರಿ ಮಾರಪ್ಪ ನೀಡಿದ ದೂರಿನ ಮೇರೆಗೆ ಹರಪನಹಳ್ಳಿ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಿಗ್ಗೆವರೆಗೆ ಶವದ ಪಕ್ಕದಲ್ಲಿದ್ದ ಪತಿ:
ಪತ್ನಿಯನ್ನು ಕೊಲೆಗೈದ ಬಳಿಕ ಆರೋಪಿಯು ಬೆಳಿಗ್ಗೆವರೆಗೆ ಶವದ ಹತ್ತಿರವೇ ಇದ್ದ. ಬೆಳಿಗ್ಗೆ 7 ಗಂಟೆ ಸುಮಾರಿಗೆ ಶವವನ್ನು ಮನೆಯ ಕಟ್ಟೆ ಮೇಲೆ ಮಲಗಿಸಿ, ಆಕೆಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ನೆರೆಹೊರೆಯವರಲ್ಲಿ ಹೇಳಿಕೊಂಡಿದ್ದ. ವಿಷಯ ತಿಳಿದು ಮೃತಳ ತಂದೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಶ್ರೀಹರಿಬಾಬು, ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ಸಾಬಯ್ಯ ನಾಯಕ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ