Asianet Suvarna News Asianet Suvarna News

ಹುಬ್ಬಳ್ಳಿ ಅಂಜಲಿ ಕೊಲೆಗೈದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ಗಿರೀಶ; 8 ದಿನ ಸಿಐಡಿ ಕಸ್ಟಡಿಗೊಪ್ಪಿಸಿದ ಕೋರ್ಟ್

ಹುಬ್ಬಳ್ಳಿಯ ಯುವತಿ ಅಂಜಲಿ ಅಂಬಿಗೇರಳನ್ನು ಕೊಲೆಗೈದ ಕ್ರೂರಿ ಯುವಕ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾನೆ. ಆರೋಪಿಗೆ ಕನಿಕರ ತೋರದ ನ್ಯಾಯಾಧೀಶರು 8 ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಿದ್ದಾರೆ.

Hubballi Anjali murder case Accused Girish Sawant gone CID custody for 8 days sat
Author
First Published May 23, 2024, 2:34 PM IST

ಹುಬ್ಬಳ್ಳಿ (ಮೇ 23): ಹುಬ್ಬಳ್ಳಿಯಲ್ಲಿ ಬಡ ಕುಟುಂಬದ ಯುವತಿ ಅಂಜಲಿ ಅಂಬಿಗೇರಳನ್ನು ಮನೆಗೆ ಹೊಕ್ಕು ಬೆಲ್ಲಂಬೆಳಗ್ಗೆ ಭೀಕರವಾಗಿ ಚಾಕು ಚುಚ್ಚಿ ಕೊಲೆ ಮಾಡಿದ್ದ ವಿಶಶ್ವ ಅಲಿಯಾಸ್ ಗಿರೀಶ್ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾನೆ. ಆದರೆ, ಕನಿಕರ ತೋರದ ಕೋರ್ಟ್ ಆರೋಪಿಯನ್ನು 8 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.

ಹುಬ್ಬಳ್ಳಿಯಲ್ಲಿ ಕಳೆದೊಂದು ವಾರದ ಹಿಂದೆ ವೀರಾಪೂರ ಓಣಿಯಲ್ಲಿ ವಾಸವಿದ್ ಬಡ ಕುಟುಂಬದ ಹುಡುಗಿ ಅಂಜಲಿ ಅಂಬಿಗೇರಳನ್ನು ಪ್ರೀತಿಸುವಂತೆ ಬೆನ್ನುಬಿದ್ದ ಪಾಗಲ್ ಪ್ರೇಮಿ ಗಿರೀಶ್, ಪ್ರೀತಿಸಲೊಪ್ಪದ ಹಿನ್ನೆಲೆಯಲ್ಲಿ ಆಕೆಯ ಮನೆಗೆ ಹೊಕ್ಕು ಭೀಕರವಾಗಿ ಕೊಲೆ ಮಾಡಿದ್ದನು. ಇದಾದ ಬೆನ್ನಲ್ಇಯೇ ಹುಬ್ಬಳ್ಳಿಯಿಂದ ನಾಪತ್ತೆಯಾಗಿದ್ದನು. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರಲು ರೈಲು ಹತ್ತಿದ್ದ ಗಿರೀಶ್ ಪ್ರಯಾಣಿಕರೊಂದಿಗೆ ವಿಚಿತ್ರವಾಗಿ ನಡೆದುಕೊಂಡಿದ್ದಾನೆ. ಆಗ, ಪ್ರಯಾಣಿಕರು ಗುಂಪು ಸೇರಿ ವಿರೋಧ ಮಾಡಿದಾಗ ಅವರಿಗೆ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದನು. ಆಗ ಎಲ್ಲರೂ ಸೇರಿ ಆತನಿಗೆ ಮುಖಮೂತಿ ನೋಡದೇ ಹೊಡೆದು ರೈಲಿನಿಂದ ಕೆಳಗೆ ತಳ್ಳಿದ್ದರು.

ಕೊನೆಗೂ ಅಂಜಲಿ‌ ಹತ್ಯೆ ಪ್ರಕರಣ ತನಿಖೆ ಸಿಐಡಿಗೆ: ಗೃಹ ಸಚಿವ ಪರಮೇಶ್ವರ್‌

ಅಂಜಲಿಯ ಹಂತಕ ಗಿರೀಶನನ್ನು ಹುಡುಕುತ್ತಿದ್ದ ಪೊಲೀಸರಿಗೆ ದಾವಣಗೆರೆ ರೈಲ್ವೆ ನಿಲ್ದಾಣದ ಬಳಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ನಂತರ, ಆತನನ್ನು ಬಂಧಿಸಿ ಮೊದಲು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಇದಾದ ನಂತರ ಆತನನ್ನು ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ. ಹುಬ್ಬಳ್ಳಿಯ ಒಂದನೇ ಜೆಎಂಎಫ್.ಸಿ ಕೋರ್ಟ್ ಮುಂದೆ ಕೊಲೆಪಾತಕಿ ಗಿರೀಶನನ್ನು ಹಾಜರು ಪಡಿಸಿದಾಗ ಆತ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ್ದಾನೆ. ನ್ಯಾಯಾಧೀಶರ ಮುಂದೆ ಕೈ ಮುಗಿದು  ತಪ್ಪಾಯ್ತು ಎಂದು ಕಣ್ಣೀರು ಹಾಕಿದಾಗ, ಹತ್ಯೆ ಮಾಡುವಾಗ ನಿನಗೆ ಗೊತ್ತಾಗಲಿಲ್ಲವಾ ಅಂತ ನ್ಯಾಯಾಧೀಶರು ಗದಿರಿದ್ದಾರೆ.

Bengaluru Rave Party: ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದ ನಟಿ ಆಶಿ ರಾಯ್‌ಗೆ ಸಿಸಿಬಿ ನೊಟೀಸ್

ಅಂಜಲಿ ಹಂತಕನಿಗೆ 8 ದಿನದ ಸಿಐಡಿ ಕಸ್ಟಡಿ:  ಅಂಜಲಿಯ ಹಂತಕನನ್ನು ವಿಚಾರಣೆ ಮಾಡುವುದಕ್ಕೆ 15 ದಿನಗಳ ಕಾಲ ಸಿಐಡಿ ವಶಕ್ಕೆ ಒಪ್ಪಿಸುವಂತೆ ಪೊಲೀಸರು ಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ. ಆದರೆ, ಇದಕ್ಕೊಪ್ಪದ ನ್ಯಾಯಾಧೀಶರು 8 ದಿನಗಳ ಕಾಲ ಸಿಐಡಿ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ. ಹುಬ್ಬಳ್ಳಿಯ ಒಂದನೇ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರಾದ ನಾಗೇಶ್ ನಾಯ್ಕ್ ಅವರು ಸಿಐಡಿ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದು, ಈ ಅವಧಿಯೊಳಗೆ ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ.

Latest Videos
Follow Us:
Download App:
  • android
  • ios