ಪತ್ನಿ ಮನೆಯಿಂದ ಬಂದಿಲ್ಲ ಬುಲೆಟ್ ಬೈಕ್, 2 ಲಕ್ಷ ರೂ ವರದಕ್ಷಿಣೆ, ಫೋನ್‌ನಲ್ಲೇ ಡಿವೋರ್ಸ್ ನೀಡಿದ ಪತಿ!

By Suvarna NewsFirst Published Mar 12, 2024, 7:59 PM IST
Highlights

ಮದುವೆಯಾದ ತಿಂಗಳಲ್ಲೇ ಬುಲೆಟ್ ಬೈಕ್ ಹಾಗೂ 2 ಲಕ್ಷ ರೂಪಾಯಿ ವರದಕ್ಷಿಣೆ ನೀಡುವುದಾಗಿ ಹೇಳಿದ್ದಾರೆ. ಆದರೆ ಇನ್ನೂ ನೀಡಿಲ್ಲ ಎಂದು ಪತ್ನಿ ದೂರವಾಣಿ ಮೂಲಕ ಪತ್ನಿಗೆ ವಿಚ್ಚೇದನ ನೀಡಿದ ಘಟನೆ ನಡೆದಿದೆ.
 

ಲಖನೌ(ಮಾ.12) ಮದುವೆಯಾಗಿ ವರ್ಷಗಳು ಉರುಳಿದೆ. ಆದರೆ ಪತಿ ಹಾಗೂ ಆತನ ಕುಟುಂಬಸ್ಥರು ಪತ್ನಿಗೆ ಚಿತ್ರ ಹಿಂಸೆ ನೀಡುತ್ತಲೇ ಬಂದಿದ್ದಾರೆ. ಮದುವೆ ಸಂದರ್ಭದಲ್ಲಿ ವರದಕ್ಷಿಣೆ ನೀಡಲಾಗಿದೆ. ಆದರೆ ಮದುವೆ ಬಳಿಕ ಮತ್ತೆ ಹೆಚ್ಚುವರಿಯಾಗಿ ವರದಕ್ಷಿಣೆ ಕೇಳಿದ್ದಾರೆ. ಬುಲೆಟ್ ಬೈಕ್ ಹಾಗೂ 2 ಲಕ್ಷ ರೂಪಾಯಿ ನೀಡುವಂತೆ ಪತ್ನಿಗೆ ಪೀಡಿಸಲು ಆರಂಭಿಸಿದ್ದಾರೆ. ಪತ್ನಿ ತಂದೆ ಸಾಲ ಪಡೆದು ಬುಲೆಟ್ ಬೈಕ್ ಕೊಡಿಸಿದ್ದಾರೆ. ಆದರೆ 2 ಲಕ್ಷ ರೂಪಾಯಿ ನೀಡಲು ಸಾಧ್ಯವಾಗಿಲ್ಲ. ಇದೇ ಕಾರಣದಿಂದ ಪತಿ ದೂರವಾಣಿ ಮೂಲಕ ಪತ್ನಿಗೆ ತಲಾಕ್ ಹೇಳಿದ ಘಟನೆ ಉತ್ತರ ಪ್ರದೇಶ ಬಾಂಡಾದಲ್ಲಿ ನಡೆದಿದೆ.

ನರೈನಿ ಕೋಟ್ವಾಲಿ ಗ್ರಾಮ ಠಾಣೆಯಲ್ಲಿ ಈ ಕುರಿತು ನೊಂದ ಮುಸ್ಲಿಮ್ ಮಹಿಳೆ ಪ್ರರಕರಣ ದಾಖಲಾಗಿದೆ. ದೂರಿನ ಪ್ರಕಾರ, 2021ರಲ್ಲಿ ಮುಸ್ಲಿಮ್ ಮಹಿಳೆಯ ಮದುವೆಯಾಗಿದೆ. ಮದುವೆ ವೇಳೆ ಪತಿಗೆ ವರದಕ್ಷಿಣೆ ನೀಡಲಾಗಿದೆ. ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಹಾಗೂ ಆತನ ಮನೆಯವರು ಮತ್ತೆ ವರದಕ್ಷಿಣೆ ಕಿರುಕುಳ ಆರಂಭಿಸಿದ್ದಾರೆ.

ಮದುವೆಗಾಗಿ ಧರ್ಮವನ್ನೇ ಬಿಟ್ರು, ಆದ್ರೆ ಡಿವೋರ್ಸ್ ಆಯ್ತು; ಸ್ಟಾರ್ ನಟಿ ಬದುಕು ದುರಂತದಲ್ಲಿ ಕೊನೆಯಾಯ್ತು!

ಕಳೆದೊಂದು ವರ್ಷದಿಂದ ವರದಕ್ಷಿಣೆ ಬೇಡಿಕೆಯನ್ನು ಹೆಚ್ಚಿಸಿದ್ದಾನೆ. ರಾಯಲ್ ಎನ್‌ಫೀಲ್ಡ್ ಬೈಕ್ ಹಾಗೂ 2 ಲಕ್ಷ ರೂಪಾಯಿ ನಗದು ಹಣವನ್ನು ವರದಕ್ಷಿಣೆಯಾಗಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ. ಇದಕ್ಕಾಗಿ ಹಲವು ಪತ್ನಿ ಮೇಲೆ ದೌರ್ಜನ್ಯ ಎಸಗಿದ್ದಾನೆ. ಹಲವು ಬಾರಿ ಪತ್ನಿಯನ್ನು ತವರು ಮನೆಯಲ್ಲಿ ಬಿಟ್ಟಿದ್ದಾನೆ.

ಪತಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾನೆ. ತಿಂಗಳಿಗೆ ಒಂದು ಸಾರಿ ಮನಗೆ ಬಂದು ಪತ್ನಿ ಮೇಲೆ ದೌರ್ಜನ್ಯ ಎಸಗಿ ಮತ್ತೆ ಮುಂಬೈಗೆ ಮರಳುತ್ತಾನೆ. ಪ್ರತಿ ಬಾರಿಯೂ ವರದಕ್ಷಿಣೆ ಬೇಡಿಕೆ ಬಿಟ್ಟು ಮತ್ತೇನು ಮಾತುಕತೆ ಇಲ್ಲ. ಕೊನೆಗೆ ಮನನೊಂದ ಪೋಷಕರು 2.5 ಲಕ್ಷ ರೂಪಾಯಿ ಸಾಲ ಪಡೆದು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಖರೀದಿಸಿ ನೀಡಿದ್ದಾರೆ. ಆದರೆ ಮತ್ತೆ 2 ಲಕ್ಷ ರೂಪಾಯಿ ನಗದು ಹಣ ನೀಡಲು ಸಾಧ್ಯವಾಗಿಲ್ಲ. ಈ ಕುರಿತು ಮತ್ತೆ ಕಿರುಕುಳ ಆರಂಭಿಸಿದಾಗ, ಪತ್ನಿ ಖಡಕ್ ಆಗಿ ಹೇಳಿದ್ದಾಳೆ. ನನ್ನ ಪೋಷಕರು ಬಡವರು. ಈಗಾಗಲೇ ಸಾಕಷ್ಟು ಸಾಲ ಮಾಡಿ ವರದಕ್ಷಿಣೆ ನೀಡಿದ್ದಾರೆ. ಈ ಸಾಲದ ಕಂತು ಕಟ್ಟಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಹೀಗಾಗಿ ಮತ್ತೆ 2 ಲಕ್ಷ ರೂಪಾಯಿ ನಗದು ಹಣ ನೀಡಲು ಸಾಧ್ಯವಿಲ್ಲ ಎಂದಿದ್ದಾಳೆ.

ಹನಿಮೂನ್‌ನಲ್ಲೇ ಗೆಳೆಯರೊಂದಿಗೆ ಮಲಗಲು ಒತ್ತಾಯಿಸಿದ್ದ ಪತಿ; ದಾಂಪತ್ಯದಲ್ಲಿ ನರಕವನ್ನೇ ನೋಡಿದ್ರು ಈ ಖ್ಯಾತ ಬಾಲಿವುಡ್ ನಟಿ

ಈ ಮಾತಿನಿಂದ ರೊಚ್ಚಿಗೆದ್ದ ಪತಿ, ಮುಂಬೈನಿಂದ ದೂರವಾಣಿ ಮೂಲಕ ಪತ್ನಿಗೆ ತಲಾಕ್ ನೀಡಿದ್ದಾನೆ. ಇತ್ತ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಇತ್ತ ಈಕೆಯ ಪೋಷಕರು ಸಾಲ ಪಡೆದ ದಾಖಲೆ, ಇದಕ್ಕೂ ಮೊದಲು ನೀಡಿದ ವರದಕ್ಷಿಣೆಗಳ ಕೆಲ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದಾರೆ. ಇದೀಗ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. 

ಗರ್ಭಿಣಿಯಾಗಿರುವ ಪತ್ನಿಯನ್ನು ಮನೆಯಿಂದ ಹೊರಗೆ ಹಾಕಿ ಚಿತ್ರ ಹಿಂಸೆ ನೀಡಲಾಗಿದೆ. ಹೀಗಾಗಿ ಪತಿ ಹಾಗೂ ಪತಿಯ ಪೋಷಕರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಸಂಬಂಧ ನ್ಯಾಯ ಕೊಡಿಸುವುದಾಗಿ ಪೊಲೀಸರು ಮಹಿಳೆಗೆ ಭರವಸೆ ನೀಡಿದ್ದಾರೆ. 

click me!