Chamarajanagar: ಡೋಂಗಿ ಬಾಬಾನ ಮೋಹದ ಬಲೆಗೆ ಬಿದ್ದ ವಿವಾಹಿತೆ ಮಹಿಳೆ

By Suvarna News  |  First Published Apr 29, 2022, 7:45 PM IST

* ಡೋಂಗಿ ಬಾಬಾನ ಬಲೆಗೆ ಬಿದ್ದ ವಿವಾಹಿತೆ
* ಚಿಕಿತ್ಸೆ ನೆಪದಲ್ಲಿ ಮಹಿಳೆಯನ್ನು ಬಲೆಗೆ ಕೆಡವಿದ ಡೋಂಗಿ ಬಾಬಾ
* ಹೆಂಡ್ತಿ ಹಿಂದೆ ಬಿದ್ದ ಡೋಂಗಿ ಬಾಬಾನ ಕಾಟಕ್ಕೆ ಪತಿ ಆತ್ಮಹತ್ಯೆ


ವರದಿ - ಪುಟ್ಟರಾಜು. ಆರ್.ಸಿ.  ಏಷ್ಯಾನೆಟ್ ಸುವರ್ಣ ನ್ಯೂಸ್ ,  ಚಾಮರಾಜನಗರ

ಚಾಮರಾಜನಗರ, (ಏ.29):  
ಆ ದಂಪತಿಗಳು ಚಿಕಿತ್ಸೆಗೆಂದು ಈ ಬಾಬಾನ ಬಳಿಗೆ ತೆರಳಿದ್ರು.‌ ಚಿಕಿತ್ಸೆ ನೀಡಿ ಗುಣಪಡಿಸಿದ ಬಾಬಾನ ವಕ್ರದೃಷ್ಟಿ ಸುಂದರ ಸಂಸಾರದ ಮೇಲೆ ಬಿದ್ದಿತ್ತು. ಇದರಿಂದ ಸುಂದರವಾಗಿದ್ದ ಆ ಸಂಸಾರದಲ್ಲಿ ಬಿರುಗಾಳಿ ಬೀಸಿ ಮನೆಯ ಯಜಮಾನನೇ ಬಲಿಯಾಗಿದ್ದಾನೆ. ಏನಿದು ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ.

ಮಹಮದ್ ಅಫ್ಗಾನ್ ಮತ್ತು ತನ್ಜೀಯಾ ಕೌಸರ್ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಅಮೀರ್‌ಜಾನ್ ರೋಡ್‌ನ ನಿವಾಸಿಗಳು. ತನ್ಜೀಯಾ ಕೌಸರ್‌ಗೆ ಕಳೆದ ಕೆಲವು ತಿಂಗಳ ಹಿಂದೆ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ  ಮೈಸೂರಿನ ರಾಜೀವನಗರದ ಖುರ್ರಂ ಪಾಷಾನ ಬಳಿಗೆ ತೆರಳಿದ್ರು. ನಾನು ದೇವರ ಪ್ರತಿರೂಪ ಎಂದು ಹೇಳಿಕೊಂಡ ಈ ಬಾಬಾ ಥೈರಾಯ್ಡ್ ಸಮಸ್ಯೆ ಬಗೆಹರಿಸಿದ್ದ.‌‌ನಂತರ ತನ್ಜೀಯಾ ಜೊತೆ ಆತನ ಒಡನಾಟ ಜಾಸ್ತಿಯಾಗಿತ್ತು. ಇದರಿಂದ ಇವರ ಸಂಸಾರದಲ್ಲಿ ಬಿರುಗಾಳಿ ಬೀಸಿತ್ತು. ಸಾಕಷ್ಟು ಬಾರಿ ಜಗಳ ಸಹ ಆಗಿತ್ತು.ಇದೆಲ್ಲದರಿಂದ ಮನನೊಂದಿದ್ದ ಅಫ್ಘಾನ್ ನಿನ್ನೆ(ಗುರುವಾರ) ರಾತ್ರಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Tap to resize

Latest Videos

undefined

ನಡು ಬೀದಿಯಲ್ಲೇ ವಿಚ್ಛೇದಿತ ಪತ್ನಿ, ಮಗಳ ಗುಂಡಿಕ್ಕಿ ಕೊಂದ ಪತಿ, ತಾನೂ ಸಾವಿಗೆ ಶರಣು!

ಬಾಬಾ ಖುರ್ರಂ ಪಾಷಾ ತನ್ಜೀಯಾಗೆ ಸಂಪೂರ್ಣ ಮೈಂಡ್ ವಾಷ್ ಮಾಡಿದ್ದ ಎಂಬುದು ಅಫ್ಘಾನ್ ಸಂಬಂಧಿಕರ ಆರೋಪ. ಬಾಬಾನ ಮಾತು ಕೇಳಿಕೊಂಡು ತನ್ಜೀಯಾ ತನ್ನ ತವರು ಮನೆ ಮೈಸೂರಿಗೆ ಹೋಗಿ ಸೇರಿಕೊಂಡಿದ್ಳು. ಆಗೆಲ್ಲಾ ಅಫ್ಘಾನ್ ಕರೆದರೂ ಗಂಡನ ಮನೆಗೆ ಬರಲಿಲ್ಲ. ಇದೆಲ್ಲದರಿಂದ ಅಫ್ಘಾನ್ ಸಾಕಷ್ಟು ಮನನೊಂದಿದ್ದ. ಹೀಗಾಗಿ ಆತ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಡೆತ್‌ನೋಟ್‌ನಲ್ಲಿ  ನನ್ನ ಸಾವಿಗೆ ಖುರ್ರಂ ಪಾಷಾ, ಅಬ್ದುಲ್ ರೆಹಮಾನ್, ಮಹಮದ್ ಅಜೀಂ, ಆಯೂಬ್ ಷರೀಪ್ ಕಾರಣ ಎಂದು ಅಫ್ಘಾನ್ ಬರೆದಿದ್ದಾರೆ. ಘಟನೆ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ  ದಾಖಲಾಗಿದೆ.

ಚಿಕಿತ್ಸೆ ನೆಪದಲ್ಲಿ ಮಹಿಳೆಯನ್ನು ಬುಟ್ಟಿಗೆ ಹಾಕಿಕೊಂಡ ಬಾಬಾನಿಂದ ಒಂದು ಸುಂದರ ಸಂಸಾರವೇ ಹಾಳಾಗಿ ಹೋಗಿದೆ. ಇನ್ನಾದರೂ ಹೆಣ್ಮಕ್ಕಳು ಡೋಂಗಿ ಬಾಬಾರ ಬಳಿ ಚಿಕಿತ್ಸೆಗೆ ತೆರಳುವ ಮುನ್ನ ಸಾಕಷ್ಟು ಬಾರಿ ಯೋಚಿಸುವುದು ಉತ್ತಮ...

click me!