Dowry Blackmail: ಶಿವಮೊಗ್ಗ, ವರದಕ್ಷಿಣೆ ಹಣ ತರದಿದ್ರೆ ಬೆತ್ತಲೆ ವಿಡಿಯೋ ಅಪ್  ಮಾಡ್ತೆನೆ..ಎಂಥಾ ಗಂಡ!

By Suvarna NewsFirst Published Jan 16, 2022, 11:32 PM IST
Highlights

* ವರದಕ್ಷಿಣೆ ಹಣ ತರದಿದ್ದರೆ ಬೆತ್ತಲೆ ವಿಡಿಯೋ ಸೋಶಿಯಲ್ ಮೀಡಿಯಾಕ್ಕೆ ಹಾಕುತ್ತೇನೆ
* ಪಾಪಿ ಮತ್ತು ಕುಟುಂಬದವರಿಂದ ಬೆದರಿಕೆ
* ತವರು ಮನೆಗೆ ಬಂದರೂ ತಪ್ಪಲಿಲ್ಲ ಪೀಡನೆ

ಶಿವಮೊಗ್ಗ(ಜ. 16)  ಇದೊಂದು ವಿಚಿತ್ರ ಪ್ರಕರಣ. ವರದಕ್ಷಿಣೆ (Dowry) ತೆಗೆದುಕೊಂಡು ಬರದಿದ್ದರೆ ಪತ್ನಿಯ ಬೆತ್ತಲೆ ವಿಡಿಯೋವನ್ನೇ ಸೋಶಿಯಲ್ ಮೀಡಿಯಾಕ್ಕೆ (Social Media) ಅಪ್ ಲೋಡ್
ಮಾಡುತ್ತೇನೆ (Blackmail) ಎಂದು ಗಂಡ (Husband) ಮತ್ತು ಆತನ ಕುಟುಂಬದವರು ಬೆದರಿಕೆ ಹಾಕುತ್ತಿದ್ದರು.

ಶಿವಮೊಗ್ಗದ ರಿಪ್ಪನ್ ಪೇಟೆಯಿಂದ ಘಟನೆ ವರದಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ವೆಲ್ ಕಮ್ ಗೇಟ್ ನ ಸಂತ್ರಸ್ತೆಯ ಪತಿ ಸಲ್ಮಾನ್, ಅತ್ತೆ ಸಾಹೀರಾ, ಮಾವ ಶೌಕತ್ ಖಾನ್ ಮತ್ತು ನಾದಿನಿ ಸಮೀನಾ ವಿರುದ್ಧ ಪ್ರಕರಣ ದಾಖಲಾಗಿದೆ.

ಹೊಸನಗರ ಹುಂಚದ ಮಹಿಳೆಗೆ ಮತ್ತು  ಶೃಂಗೇರಿ  ವೆಲ್ ಕಮ್ ಗೇಟ್ ನ ಸಲ್ಮಾನ್ ಜತೆ ಕಳೆದ ವರ್ಷ ವಿವಾಹವಾಗಿತ್ತು. ವಿವಾಹದ ವೇಳೆ 90 ಗ್ರಾಂ ಬಂಗಾರ,  ಮೂರು ಲಕ್ಷ ರೂ. ವರದಕ್ಷಿಣೆ ನೀಡಲು ಸಂತ್ರಸ್ತ ಮಹಿಳೆ ತಂದೆ ಒಪ್ಪಿಗೆ ನೀಡಿದ್ದರು.  ಮದುವೆಗೆ ಮುಂಚೆ ಎರಡು ಲಕ್ಷ ರೂ. ಹಣ ಮತ್ತು ನಾಲ್ಕು ಗ್ರಾಂ ಉಂಗುರ ಮದುವೆ ಬಳಿಕ  90 ಗ್ರಾಂ ಬಂಗಾರ ಮತ್ತು ಗೃಹುಪಯೋಗಿ ಸಾಮಗ್ರಿಗಳನ್ನು ನೀಡಿದ್ದರು.

 ಪ್ರಿಯಕರನ ಜೊತೆ ಬೆತ್ತಲಾದ ಮೂರು ಮಕ್ಕಳ ತಾಯಿ: ಬಳಿಕ ನಡೆದಿದ್ದು ಭಯಾನಕ..!

ಮಾತುಕತೆ ಮಾಡಿಕೊಂಡಂತೆ ಇನ್ನೊಂದು ಲಕ್ಷ ರೂ. ಹಣ ಬರಬೇಕು ಎಂದು ವರನ ಕುಟುಂಬ ಪಟ್ಟು ಹಿಡಿದು ಕುಳಿತುಕೊಂಡಿತ್ತು.  ಕೆಲ ದಿನಗಳ ನಂತರ ಮಹಿಳೆಗೆ ಕಿರಿಕುಳ ಜೋರಾಯಿತು.  ಅತ್ತೆ ಮತ್ತು ಮಾವ ಹಣ  
ತರುವಂತೆ ಪೀಡಿಸುತ್ತಿದ್ದರು. ಗಂಡ ಸಹ ಅವರಿಗೆ ನೆರವಾಗಿ ನಿಂತಿದ್ದ.  ಇಷ್ಟು ಸಾಲದು ಎಂಬಂತೆ ನಿನ್ನ ಬೆತ್ತಲೆ ವಿಡಿಯೋ ಮಾಡಿಕೊಂಡಿದ್ದೇನೆ. ಹಣ ತರದಿದ್ದರೆ ಅದನ್ನು ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್
ಮಾಡುತ್ತೇನೆ ಎಂದು ಬೆದರಿಸಲು ಆರಂಭಿಸಿದ್ದಾನೆ. 

ಗಂಡನ ಮನೆ ಕಿರುಕುಳ ತಾಳಲಾರದೆ ಪತ್ನಿ ತವರು ಮನೆಗೆ ಬಂದಿದ್ದಾಳೆ. ಆದರೆ ಅಲ್ಲಿಗೂ ಬಂದ ಪತಿ ಸಲ್ಮಾನ್ ಹಣಕ್ಕಾಗಿ ಪೀಡಿಸಲು ಶುರುಮಾಡಿದ್ದಾನೆ.  ಈ ವೇಳೆ ತಲಾಖ್ ಸಹ ನೀಡಿದ್ದು ಹಣ ತರದಿದ್ದರೆ ಕೊಲೆ
ಮಾಡುವ ಬೆದರಿಕೆಯನ್ನು ಹಾಕಿದ್ದ. ಈ ಎಲ್ಲ ಆರೋಪಗಳನ್ನು ಹೊರಿಸಿ ಮಹಿಳೆ ದೂರು ದಾಖಲಿಸಿದ್ದಾರೆ. 

ಲುಧಿಯಾನದಲ್ಲಿ ಇಂಥದ್ದೇ ಪ್ರಕರಣ:  ಕಟ್ಟಿಕೊಂಡ  ಹೆಂಡ್ತಿ ಸ್ನಾನ ಮಾಡುವ ವಿಡಿಯೋ, ಫೋಟೋಗಳನ್ನು ತೆಗೆದುಕೊಂಡ ಪತಿಯೊಬ್ಬ ಹಣಕ್ಕಾಗಿ ಬ್ಲಾಕ್​ಮೇಲ್​ ಮಾಡಿದ್ದ.  ಪತಿ ಆಕೆಗೆ ಗೊತ್ತಾಗದಂತೆ ಬಾತ್​ರೂಂನಲ್ಲಿ ಕ್ಯಾಮೆರಾ ಅಡಗಿಸಿಟ್ಟಿದ್ದ. ನಂತರ ಅದರಲ್ಲಿ ಚಿತ್ರೀಕರಣವಾದ ವಿಡಿಯೋ, ಫೋಟೋಗಳನ್ನಿಟ್ಟುಕೊಂಡು ಆಕೆಗೆ ಹಣಕ್ಕಾಗಿ ಕಿರುಕುಳ ನೀಡಿದ್ದ.  20 ಲಕ್ಷ ರೂಪಾಯಿ ಕೊಡು, ಇಲ್ಲದಿದ್ದರೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದ.

ಇದರಿಂದ ಬೇಸತ್ತ ಪತ್ನಿ ತವರು ಮನೆಗೆ ಘಟನೆಯನ್ನು ತಂದೆ ತಾಯಿಗೆ ವಿವರಿಸಿದ್ದಾಳೆ. ಈ ವಿಚಾರವಾಗಿ ಮಹಿಳೆಯ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪತಿ ವಿರುದ್ಧ ಐಟಿ ಕಾಯ್ದೆ 2000 ರ ಸೆಕ್ಷನ್ 67 ಮತ್ತು 67-ಎ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. 

ಮೀರತ್ ಪ್ರಕರಣ: ಮೀರತ್ (Meerut) ನಿಂದ ವಿಚಿತ್ರ ಪ್ರಕರಣವೊಂದು ವರದಿಯಾಗಿತ್ತು.   ಉತ್ತರ ಪ್ರದೇಶದ (Uttar Pradesh) ಮೀರತ್ ನಲ್ಲಿ ಇಬ್ಬರು ಯುವಕರನ್ನು ಬೆತ್ತಲೆಗೊಳಿಸಿ
ಹುಡುಗಿಯೊಂದಿಗೆ ಅಶ್ಲೀಲ ರೀತಿಯಲ್ಲಿ ವಿಡಿಯೋ ರೆಕಾರ್ಡ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು.

ಈ ವಿಡಿಯೋ ಇಟ್ಟುಕೊಂಡು ಮೂರು ಲಕ್ಷ ರು. ಗೆ ( Money) ಆರೋಪಿಗಳು ಬೇಡಿಕೆ ಇಡಲು ಮುಂದಾಗಿದ್ದರು.  ಜಿಲ್ಲೆಯ ಖರ್ಖೌಡಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರು ಮಂದಿ ಯುವಕರು ಪ್ರಕರಣದಲ್ಲಿ
ಶಾಮೀಲಾಗಿದ್ದಾರೆ. ಗನ್ ತೋರಿಸಿ ಭಯ  ಹುಟ್ಟಿಸಿದ ತಂಡ ಯುವಕರಿಂದ ಮೊಬೈಲ್ ಫೋನ್ ಮತ್ತು 32,000 ರೂ ನಗದು ದೋಚಿದೆ. ಸಂತ್ರಸ್ತರು   ಖರ್ಖೌಡಾ ಪೊಲೀಸರಿಗೆ ದೂರು ನೀಡಿದ್ದು ಭಾನುವಾರ ರಾತ್ರಿ
ಲೋಹಿಯಾನಗರ ಮಂಡಿಯಲ್ಲಿ ಪಾರ್ಟಿ ಕೊಡಿಸುವ ನೆಪದಲ್ಲಿ ಆರು ಮಂದಿ ನಮ್ಮನ್ನು ಕರೆದುಕೊಂಡು ಹೋಗಿದ್ದರು ಎಂದು ಜುಬೇರ್ ಮತ್ತು ಆತನ ಸ್ನೇಹಿತ ಶಹಬಾಜ್‌ ದೂರಿನಲ್ಲಿ ಆರೋಪಿಸಿದ್ದರು. 

 

click me!