Gas Geyser Carbon Monoxide Leak : ಚಿಕ್ಕಬಾಣಾವರದ ತಾಯಿ-ಬಾಲಕಿ ಜೀವಕ್ಕೆ ಎರವಾದ ಗ್ಯಾಸ್ ಗೀಸರ್

Published : Jan 16, 2022, 09:57 PM IST
Gas Geyser Carbon Monoxide Leak : ಚಿಕ್ಕಬಾಣಾವರದ ತಾಯಿ-ಬಾಲಕಿ ಜೀವಕ್ಕೆ ಎರವಾದ ಗ್ಯಾಸ್ ಗೀಸರ್

ಸಾರಾಂಶ

* ತಾಯಿ ಮಗಳ ಜೀವಕ್ಕೆ  ಎರವಾದ ಗ್ಯಾಸ್ ಗೀಸರ್ * ಚಿಕ್ಕಬಾಣಾವರದ ತಾಯಿ ಮಗಳು ಸಾವು * ಈ ಹಿಂದೆಯೂ ವೈದ್ಯೆಯ ಜೀವಕ್ಕೆ ಕುತ್ತಾಗಿತ್ತು * ಸರಳ ಮುನ್ನೆಚ್ಚರಿಕೆ ತೆಗೆದುಕೊಳ್ಳಲೇಬೇಕು

ಬೆಂಗಳೂರು(ಜ. 16)  ಭೀಕರ ರಸ್ತೆ ಅಪಘಾತಕ್ಕೆ (Road Accident) ಅರಳಬೇಕಿದ್ದ ಪ್ರತಿಭೆ ಸಮನ್ವಿ ಸಾವು ಕಂಡಿದ್ದ ನೋವು ಮರೆಯಾಗಿಲ್ಲ. ಈ ನಡುವೆ ಅಂಥದ್ದೊಂದು ಸಾವಿನ ಸುದ್ದಿ ಬಂದಿದೆ.  ಸ್ನಾನಕ್ಕೆ ಹೋದ  ತಾಯಿ ಮಗಳಿಗೆ ಮನೆಯ ಗ್ಯಾಸ್ ಗೀಸರ್ (Gas Geyser) ಮೃತ್ಯುವಾಗಿದೆ.  ತಾಯಿ, ಮಗಳು ಉಸಿರುಗಟ್ಟಿ ದಾರುಣ ಸಾವು ಕಂಡಿದ್ದಾರೆ .  ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಸ್ನಾನದ ಮನೆ ಹೊಕ್ಕ ತಾಯಿ, ಮಗಳು  ಸಾವು ಕಂಡಿದ್ದಾರೆ.

ಗ್ಯಾಸ್ ಗೀಸರ್ ಬಳಸಿ ಸ್ನಾನ ಮಾಡುವಾಗ ದುರಂತ ಸಂಭವಿಸಿದೆ.  ಗೀಸರ್ ನಿಂದ ಅನಿಲ ಸೋರಿಕೆಯಾಗಿದ್ದು ಉಸಿರುಗಟ್ಟಿ ಮೃತಪಟ್ಟಿರುವುದು ಮೇಲ್ಕೋಟಕ್ಕೆ ತಿಳಿದು ಬಂದಿದೆ. ತಾಯಿ ಮಂಗಳ(35), ಮಗಳು ಗೌತಮಿ(07) ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಮನೆಯ ಮಾಲೀಕರಾದ ಗಾಯಿತ್ರಿ ಎಂಬುವರು ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಪತಿ ನರಸಿಂಹಮೂರ್ತಿ ಕೆಲಸಕ್ಕೆ ತೆರಳಿದ್ದಾಗ ಅವಘಡ ಸಂಭವಿಸಿದೆ. 15 ವರ್ಷದ ಹಿಂದೆ ರಾಮನಗರದಿಂದ ಬಂದು ನಗರದಲ್ಲಿ ಕುಟುಂಬಕ್ಕೆ ಇಂಥ ಸಾವು ಬಂದಿದೆ.  ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸೋರಿಕೆಯಾದ ಕಾರ್ಬನ್ ಮೋನಾಕ್ಸೈಡ್ ( Carbon monoxide)  ಸಾವಿಗೆ ಕಾರಣ ಎನ್ನುವುದು ಆರಂಭಿಕ ಮಾಹಿತಿ.

ಗ್ಯಾಸ್ ಗೀಸರ್ ಮುನ್ನೆಚ್ಚರಿಕೆ ಕ್ರಮಗಳು ಏನೇನು?

ವೈದ್ಯೆ ಜೀವ ಬಲಿ ಪಡೆದಿದ್ದ ಗೀಸರ್:  ಗ್ಯಾಸ್ ಗೀಸರ್  ಉಸಿರುಗಟ್ಟಿ ಎಂಬಿಬಿಎಸ್ ವಿದ್ಯಾರ್ಥಿನಿ ಸಾವನ್ನಪ್ಪಿದ್ದರು. ಸಂಪದ (23) ವರ್ಷದ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ದುರಂತ ಸಾವಿಗೀಡಾಗಿದ್ದರು.

ಕಳೆದ ವರ್ಷ ಸೆಪ್ಟೆಂಬರ್ 4 ರ ಮಧ್ಯಾಹ್ನ 12:30 ರ ವೇಳೆಗೆ ಸ್ನಾನಕ್ಕೆಂದು ತೆರಳಿದ್ದ ವಿದ್ಯಾರ್ಥಿನಿ ತೆರಳಿದ್ದರು. ಈ ವೇಳೆ ಕಾರ್ಬನ್ ಮೋನಾಕ್ಸೈಡ್ ಲೀಕ್ ಆಗಿ ಉಸಿರುಗಟ್ಟಿ ಸಾವು ಕಂಡಿದ್ದಾರೆ ಮಹಾಲಕ್ಷ್ಮೀ ಲೇಔಟ್ ನ ಮನೆಯ ಸ್ನಾನದ ಕೋಣೆಯಲ್ಲಿ ಕುಸಿದು ಬಿದ್ದಿದ್ದ ಸಂಪದ ಅಲ್ಲೇ ಸಾವು ಕಂಡಿದ್ದತು.

2 ಗಂಟೆ ಕಳೆದರೂ ಸ್ನಾನದ ಮನೆಯಿಂದ ವಿದ್ಯಾರ್ಥಿನಿ ಹೊರಬಂದಿಲ್ಲ. ಗಾಬರಿಗೊಂಡ ಕುಟುಂಬದವರು ಡೋರ್ ಮುರಿದು ನೋಡಿದ ಬಳಿಕ ಕುಸಿದು ಬಿದ್ದಿದ್ದ ಸಂಪದಳನ್ನು ಕಂಡಿದ್ದಾರೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಗೆ ಕರೆತರುವ ಮೊದಲೆ ಮೃತಪಟ್ಟಿರುವುದಾಗಿ ತಿಳಿಸಿದ ವೈದ್ಯರು ತಿಳಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಕಾರ್ಬನ್ ಮೋನಾಕ್ಸೈಡ್ ಲೀಕ್ ಆದರೆ ಜೀವಕ್ಕೆ ಎರವಾಗಬಹುದು ಎನ್ನುವುದು ಹಲವು ಸಂದರ್ಭಗಳಲ್ಲಿ ವೇದ್ಯವಾಗಿದೆ. ಗಾಗಾಗಿ ಕೆಲವು ಸರಳ ಮತ್ತು ಸುಲಭ ಮುನ್ನೆಚ್ಚರಿಕೆ ವಹಿಸಲೇಬೇಕಾಗುತ್ತದೆ. 

ಬೆಂಗಳೂರಿನಲ್ಲೇ ಮತ್ತೊಂದು ಪ್ರಕರಣ:  ಗ್ಯಾಸ್  ಗೀಸರ್‌ ಸೋರಿದ್ದರಿಂದ ವಿಷ ಅನಿಲ ಸೇವಿಸಿ ಮಹಿಳೆಯೊಬ್ಬರು ಸ್ನಾನದ ಮನೆಯಲ್ಲಿ ಮೃತಪಟ್ಟಿರುವ ಘಟನೆ ಹೊಸೂರು ರಸ್ತೆಯ ಎಸ್‌ಬಿಐ ಲೇಔಟ್ ನಿಂದ ವರದಿಯಾಗಿತ್ತು.

ದಂಪತಿ ಪ್ರಾಣಕ್ಕೆ ಸಂಚಕಾರ ತಂತು ಬಾತ್‌ರೂಮ್ ಶೃಂಗಾರ

ಬನ್ನೇರುಘಟ್ಟರಸ್ತೆ ಅರಕೆರೆ ನಿವಾಸಿ ತುಬಾ ತಜೀಮಾ (30) ಮೃತ ದುರ್ದೈವಿ. ತಮ್ಮ ತಂದೆ ಹುಟ್ಟುಹಬ್ಬದ ನಿಮಿತ್ತ ಸೋದರನ ಮನೆಗೆ ತಜೀಮಾ ಬಂದಿದ್ದಾಗ ಈ ಅವಘಡ ಸಂಭವಿಸಿತ್ತು. ಮೃತ ತಜೀಮಾ ಅವರು, ಅರಕೆರೆಯಲ್ಲಿ ತಮ್ಮ ಪತಿ ಮತ್ತು ಮಕ್ಕಳ ಜತೆ ನೆಲೆಸಿದ್ದರು. ತಮ್ಮ ತಂದೆಯ ಹುಟ್ಟುಹಬ್ಬದ ಆಚರಣೆ ಸಲುವಾಗಿ ಎಸ್‌ಬಿ ಲೇಔಟ್‌ನಲ್ಲಿರುವ ಸೋದರ ಮುಕ್ತಾರ್‌ ಅಹಮ್ಮದ್‌ ನಿವಾಸಕ್ಕೆ ಅವರು ಬಂದಿದ್ದರು. ಬೆಳಗ್ಗೆ 11ಕ್ಕೆ ಸ್ನಾನಕ್ಕೆ ತೆರಳಿದ ತಜೀಮಾ ಎಷ್ಟೋತ್ತಾದರೂ ಹೊರಬಂದಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬ ಸದಸ್ಯರು, ಬಾಗಿಲು ಬಡಿದು ಕೂಗಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆತಂಕಗೊಂಡ ಅವರು, ಕೂಡಲೇ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಸ್ನಾನಗೃಹದಲ್ಲಿ ತಜೀಮಾ ಪ್ರಜ್ಞಾಹೀನಾರಾಗಿ ಬಿದ್ದಿರುವುದು ಕಂಡಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕುಟುಂಬ ಸದಸ್ಯರು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ತಜೀಮಾ ಕೊನೆಯುಸಿರೆಳೆದಿದ್ದಳು .

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?