Sexual Harassment : ಗಂಡನೊಂದಿಗೆ ಶಾಪಿಂಗ್‌ಗೆ ತೆರಳಿದ ಮಹಿಳೆ ಮೇಲೆ  ಕೈ ಹಾಕಿದ ಕಿರಾತಕ!

Published : Jan 16, 2022, 07:47 PM ISTUpdated : Jan 16, 2022, 07:49 PM IST
Sexual Harassment : ಗಂಡನೊಂದಿಗೆ ಶಾಪಿಂಗ್‌ಗೆ ತೆರಳಿದ ಮಹಿಳೆ ಮೇಲೆ  ಕೈ ಹಾಕಿದ ಕಿರಾತಕ!

ಸಾರಾಂಶ

* ಶಾಪಿಂಗ್  ಗೆ ತೆರಳಿದ್ದ ಮಹಿಳೆಯೊಂದಿಗೆ ಅನುಚಿತ ವರ್ತನೆ * ಗಂಡನೊಂದಿಗೆ ತರಳಿದ ಮಹಿಳೆ ಮೈಮೇಲೆ ಕೈ ಹಾಕಿದ * ವಿರೋಧಿಸಿದ್ದಕ್ಕೆ ಮರುದಿನ ಫಾಲೋ ಮಾಡಿ ಹಲ್ಲೆ

ಪುಣೆ (ಜ. 16)   ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದನ್ನು ಮಹಿಳೆ ತಡೆದಿದ್ದರು.   ಇದಾದ ಮರುದಿನ 38 ವರ್ಷದ ವ್ಯಕ್ತಿ  35 ವರ್ಷ ಮಹಿಳೆಯನ್ನು  ಹತ್ಯೆ ಮಾಡಲು ಯತ್ನಿಸಿದ್ದ. ಮಹಿಳೆ ಗಂಡನ ಜತೆ ಶಾಪಿಂಗ್ ಗೆ ಹೋದಾಗ ಆಕೆಯನ್ನು ಅನುಚಿತವಾಗಿ ಸ್ಪರ್ಶ ಮಾಡಲು  ಯತ್ನಿಸಿದ್ದ.  ಈ ವೇಳೆ ಸಣ್ಣ ಗಲಾಟೆ ಆಗಿತ್ತು. 

 ಮರುದಿನ ಮಹಿಳೆ ತನ್ನ ಪತಿಯೊಂದಿಗೆ ಹಿಂತಿರುಗುತ್ತಿದ್ದಾಗ ಕಾರಿನಲ್ಲಿ ದಂಪತಿಯನ್ನು ಹಿಂಬಾಲಿಸಿದ್ದಾನೆ.  ಈಗ ಮಹಿಳೆ  ನೀಡಿದ ದೂರಿನ ಆಧಾರದ ಮೇಲೆ  ಕೊಂಡ್ವಾ  ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.    ನಂತರ 

ಉದ್ದೇಶಪೂರ್ವಕಾಗಿ  ದಂಪತಿ ಪ್ರಯಾಣಮಾಡುತ್ತಿದ್ದ ಕಾರಿಗೆ  ದ್ವಿಚಕ್ರ ವಾಹನ ಡಿಕ್ಕಿ ಮಾಡಿಸಲಾಗಿದೆ.  ದಾಳಿ ಮಾಡಿದ್ದು ಮಹಿಳೆ ಮತ್ತು ಪತಿ ಗಾಯಗೊಂಡಿದ್ದಾರೆ. ದ್ವಿಚಕ್ರ ವಾಹನದಲ್ಲಿ  ದುಷ್ಕರ್ಮಿ ತನ್ನ ತಂಡದೊಂದಿಗೆ ಆಗಮಿಸಿದ್ದ. ಮಹಿಳೆ ನೀಡಿದ  ದೂರಿನ ಆಧಾರದ ಮೇಲೆ ಆರೋಪಿಯನ್ನು ಸೆರೆ ಹಿಡಿಯಲಾಗಿದೆ.

ಗುಪ್ತಾಂಗ ಮುಟ್ಟಿ ಲೈಂಗಿಕ ಕಿರುಕುಳ: ಆರೋಪಿಗೆ ಧರ್ಮದೇಟು!

ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಮತ್ತು 354 (ಹೆಣ್ಣಿನ ಮೇಲೆ ದೌರ್ಜನ್ಯ ಅಥವಾ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಗರ್ಭಿಣಿ ಕೊಲೆ:  ಮತ್ತೊಂದು ಘಟನೆಯಲ್ಲಿ, ಗುರುವಾರ ಜಾರ್ಖಂಡ್‌ನ ಹಳ್ಳಿಯಲ್ಲಿ ಗರ್ಭಿಣಿಯನ್ನು ಆಕೆಯ ಪತಿ ಕೊಲೆ ಮಾಡಿದ್ದಾನೆ.  ಮದ್ಯ ಖರೀದಿಸಲು ಪತ್ನಿ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಹತ್ಯೆ ಮಾಡಿದ್ದಾನೆ.   ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ. 

ಮದ್ಯ ಖರೀದಿಸಲು ಪತಿಗೆ ಹಣ ನೀಡಲು ಮಹಿಳೆ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ. ಆರೋಪಿಯನ್ನು ತಿಲೇಶ್ವರ ಗಂಜು ಎಂದು ಗುರುತಿಸಲಾಗಿದ್ದು, ಶುಕ್ರವಾರ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ಹೆತ್ತ ತಾಯಿ ಮೇಲೆ ಅತ್ಯಾಚಾರ:  ಪುತ್ತೂರು(ಜ. 14) ಈ ಕಲಿಯುಗದಲ್ಲಿ ಎಂತೆಂಥ ಘನಘೋರ ಸುದ್ದಿಗಳನ್ನು ಬರೆಯಬೇಕಾದ ಪರಿಸ್ಥಿತಿ ಇದೆ. ಹೆತ್ತ ತಾಯಿಯ (Mother) ಮೇಲೆ ಅತ್ಯಾಚಾರ (Rape)ಎಸಗಿದ ಪುತ್ರ.. ಪುತ್ತೂರಿನಿಂದ (Puttur) ಅಂಥದ್ದೊಂದು ಘಟನೆ ವರದಿಯಾಗಿತ್ತು

ಹೆತ್ತ ತಾಯಿಯನ್ನೇ ಅತ್ಯಾಚಾರ ನಡೆಸಿದ ಪೈಶಾಚಿಕ ಪ್ರಕರಣವೊಂದು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರ ಎಂಬಲ್ಲಿ ನಡೆದಿದ್ದು, ದುಷ್ಕೃತ್ಯ ಎಸಗಿದ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು (Police) ಬಂಧಿಸಿದ್ದರು.

ಕೆದಂಬಾಡಿ ಗ್ರಾಮದ ಕುರಿಕ್ಕಾರ ನಿವಾಸಿ 33 ವರ್ಷದ ವ್ಯಕ್ತಿ  ಆರೋಪಿ. ಜ .12 ರ ತಡ ರಾತ್ರಿ ಘಟನೆ ನಡೆದಿದೆ. ತಡ ರಾತ್ರಿ ಹಾಗೂ ಮರುದಿನ ಬೆಳಗ್ಗೆೆ ಎರಡು ಬಾರಿ, ತಾಯಿಯ ತೀವ್ರ ವಿರೋಧದ ನಡುವೆಯೂ ಅಮಾನುಷವಾಗಿ ಪ್ರಾಾಣಿಯಂತೆ ಎರಗಿದ್ದಾನೆ.

ತಾಯಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.58 ವರ್ಷದ ಸಂತ್ರಸ್ತ ಈ ಮಹಿಳೆಯು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಈ ಬಗ್ಗೆೆ ದೂರು ನೀಡಿದ್ದು, ಮಗನ ವಿರುದ್ಧ ಪ್ರಕರಣ ಐಪಿಸಿ ಸೆಕ್ಷನ್ 376(2), 506 ರಂತೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಸಂಪ್ಯ ಠಾಣೆ ಪೊಲೀಸರು ವಶಕ್ಕೆೆ ಪಡೆದುಕೊಂಡಿದ್ದರು.

ರಾಜಸ್ಥಾನದ ಪ್ರಕರಣ: ಅಪ್ರಾಪ್ತ ವಯಸ್ಸಿನ ಮಾನಸಿಕ ಅಸ್ವಸ್ಥ ಬಾಲಕಿಯ (Girl) ಮೇಲೆ ಭೀಕರ ಸರಣಿ ಅತ್ಯಾಚಾರ (Gang Rape) ನಡೆಸಿ, ಆಕೆಗೆ ಗುಪ್ತಾಂಗಗಳಿಗೆ ಹಾನಿ ಮಾಡಿರುವ ಭೀಕರ ಘಟನೆಯೊಂದು ರಾಜಸ್ಥಾನದ (Jaipur)ಅಲ್ವಾರ್‌ ನಿಂದ ವರದಿಯಾಗಿತ್ತು.  ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ (Hospital) ದಾಖಲಾಗಿದ್ದ ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆಗೆ ಪೊಲೀಸರು ವಿಶೇಷ ತನಿಖಾ ತಂಡ ನಡೆಸಿದ್ದರೆ, ಸಿಎಂ ಅಶೋಕ್‌ ಗೆಹ್ಲೋಟ್‌ ಜಿಲ್ಲಾಧಿಕಾರಿಗಳಿಂದ ಘಟನೆ ಕುರಿತು ವರದಿ ಕೇಳಿದ್ದಾರೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು