* ಹಣ ಕೊಡಲು ಬಂದು ಹೆಣವಾಗಿಸಿದ~
* ಬಡ್ಡಿ ವ್ಯವಹಾರಕ್ಕೆ ಬಿತ್ತು ಹಾಡು ಹಗಲೇ ಮಹಿಳೆಯ ಹೆಣ
* ಹಾಡಹಗಲೇ ಈ ರೀತಿ ಮನೆಗೆ ನುಗ್ಗಿ ಶೂಟ್ ಮಾಡಿದ
ಬೆಳಗಾವಿ(ಜ.17) ಆಕೆಗೆ (Woman) ಗಂಡನೂ (Husband) ಇರಲಿಲ್ಲ, ಮಕ್ಕಳು ಇರಲಿಲ್ಲ ಕುಳಿತು ತಿಂದ್ರೂ ಕರಗದಷ್ಟು ಆಸ್ತಿ ಮಾತ್ರ ಗಂಡ ಮಾಡಿಟ್ಟು ಮೃತಪಟ್ಟಿದ್ದ. ಇನ್ನೂ ಇರೋ ಬರೋ ಆಸ್ತಿಯನ್ನೇ ಒಳ್ಳೆಯದಕ್ಕೆ ಉಪಯೋಗ ಮಾಡಿದ್ರೇ ಇಂದು ಈ ಗತಿ ಮಹಿಳೆಗೆ ಬರ್ತಿರಲಿಲ್ಲ. ಒಬ್ಬಂಟಿಯಾಗಿದ್ದ ಮಹಿಳೆ ಮನೆಗೆ ಹಾಡಹಗಲೇ ನುಗ್ಗಿದ ದುಷ್ಕರ್ಮಿಗಳು ಕಂಟ್ರಿ ಪಿಸ್ತೂಲ್ ನಿಂದ ಮಹಿಳೆಯನ್ನ ಗುಂಡುಹಾರಿಸಿ (Shot Dead) ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಅಷ್ಟಕ್ಕೂ ಒಂಟಿ ಮಹಿಳೆಕೊಲೆಗೆ ಕಾರಣವೇನೂ ಅಂತೀರಾ ಈ ಸ್ಟೋರಿ ನೋಡಿ...
ಮಹಿಳೆ ಮೇಲೆ ಗುಂಡಿನ ದಾಳಿ ವಿಚಾರ ಕೇಳಿ ಬೆಚ್ಚಿ ಬಿದ್ದ ಕಾಲೋನಿಯ ಜನರು, ಸ್ಥಳಕ್ಕೆ ಬಂದ ಪೊಲೀಸರಿಂದ ಪರಿಶೀಲನೆ, ಕುಟುಂಬಸ್ಥರ ಆಕ್ರಂದನ ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ. ಇಲ್ಲಿ ಕೊಲೆಯಾಗಿರುವ ಮಹಿಳೆಯ ಹೆಸರು ಶೈಲಾ ಸುಬೇದಾರ ಅಂತಾ.. 56 ವರ್ಷ. ಅಪಘಾದಲ್ಲಿ ಗಂಡನನ್ನ ಕಳೆದುಕೊಂಡಿದ್ದ ಮಹಿಳೆ ಒಂಟಿಯಾಗಿ ಜೀವನ ನಡೆಸುತ್ತಿದ್ದರು.
undefined
Suicide Case: ಫೈನಾನ್ಸಿಯರ್ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ: ಕಾರಣ ನಿಗೂಢ?
ಅಕ್ಕಪಕ್ಕದ ಮನೆಯಲ್ಲಿ ಸಂಬಂಧಿಕರು ವಾಸವಿದ್ರೂ ಯಾರ ಮೇಲೆಯೂ ಡಿಪೆಂಡ್ ಆಗದೇ ಜೀವನ ನಡೆಸುತ್ತಿದ್ದರು ಶೈಲಾ. ಕೋಟ್ಯಾಂತರ ರೂಪಾಯಿ ಆಸ್ತಿ ಹಾಗೂ ಹಣ ಇವರ ಬಳಿ ಇದ್ದೂ ಹೀಗಾಗಿ ಜೀವನ ನಡೆಸಲು ಯಾವುದೇ ತೊಂದರೆ ಇವರಿಗೆ ಇರಲಿಲ್ಲ. ಹಾಗಂತ ತಾವಾಯ್ತು ತಮ್ಮ ಜೀವನ ಆಯ್ತು ಅಂತಿದಿದ್ರೇ ಇನ್ನೂ ನಾಲ್ಕು ದಿನ ಚೆನ್ನಾಗಿ ಬದುಕಿ ಇವರು ಬಾಳಬಹುದಿತ್ತು. ಆದ್ರೇ ಇದ್ದ ಹಣವನ್ನೇ ಸಾಲದ ರೂಪದಲ್ಲಿ ಹೆಚ್ಚಿನ ಬಡ್ಡಿ ದರಕ್ಕೆ ಬೇರೆಯವರಿಗೆ ಶೈಲಾ ನೀಡುತ್ತಿದ್ದರಂತೆ. ವಾಹನಗಳನ್ನ ಅಡವಿಟ್ಟುಕೊಳ್ಳುವುದು ಅದರ ಮೇಲೆ ಸಾಲ ನೀಡುವುದು, ಆಸ್ತಿ ಪತ್ರವಿಟ್ಟು ಸಾಲ ನೀಡುವುದು ಒಬ್ಬೊಬ್ಬರಿಗೆ ಇಪ್ಪತ್ತು ಲಕ್ಷದ ವರೆಗೂ ಕೂಡ ಶೈಲಾ ಸಾಲ ನೀಡಿದ್ದರಂತೆ. ಈ ಸಾಲ ವಾಪಾಸ್ ಕೇಳಿದ್ದಕ್ಕೆ ಯಾರೋ ದುಷ್ಕರ್ಮಿಗಳು ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಪ್ಲ್ಯಾನ್ ಮಾಡಿಕೊಂಡು ಬಂದೇ
ಮೂರು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ...
ಇನ್ನೂ ಹತ್ಯೆಗೂ ಮುನ್ನ ತಮ್ಮ ಸಂಬಂಧಿ ಹುಡುಗರಿಗೆ ಕರೆ ಮಾಡಿದ್ದ ಶೈಲಾ ಒಬ್ಬರು ಇಪ್ಪತ್ತು ಲಕ್ಷ ಸಾಲ ತೆಗೆದುಕೊಂಡು ಹೋದವರು ವಾಪಾಸ್ ಕೊಡಲು ಬರ್ತಿದ್ದಾರೆ. ಈ ವೇಳೆ ಯಾರು ಇರಬಾರದು ಅಂತಾ ಹೇಳಿದ್ದು ನಾನು ಪೋನ್ ಮಾಡುವವರೆಗೂ ಮನೆಗೆ ಬರಬೇಡಿ ಅಂತಾ ಹೇಳಿರುತ್ತಾರೆ. ಈ ಕಾರಣಕ್ಕೆ ಇಬ್ಬರು ಹುಡುಗರು ಮನೆಯಲ್ಲೇ ಮಲಗಿರುತ್ತಾರೆ. ಹತ್ತು ಗಂಟೆ ನಂತರ ಮನೆಗೆ ಹೋಗಿ ನೋಡಿದಾಗ ಗುಂಡೇಟಿನಿಂದ ಶೈಲಾ ಮೃತಪಟ್ಟಿದ್ದನ್ನ ಕಂಡ ಸಂಬಂಧಿಕರು ಕೂಡಲೇ ಸಂಕೇಶ್ವರ ಪೊಲೀಸರಿಗೆ ಹೇಳಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆಯನ್ನ ನಡೆಸಿದ್ದಾರೆ ಇತ್ತ ಸುದ್ದಿ ತಿಳಿಯುತ್ತಿದ್ದಂತೆ ಎಎಸ್ಪಿ ನಂದಗಾವಿ ಅವರು ಕೂಡ ಭೇಟಿ ನೀಡಿ ಮಾಹಿತಿಯನ್ನ ಪಡೆದುಕೊಳ್ತಾರೆ. ಇನ್ನೂ ಶೈಲಾಗೆ ಕೊನೆಯಲ್ಲಿ ಬಂದ ಪೋನ್ ಕಾಲ್ ಕುರಿತು ಕೂಡ ಮಾಹಿತಿ ಪಡೆಯುತ್ತಿದ್ದು ಇದರ ಜತೆಗೆ
ಕಾಲೋನಿಯಲ್ಲಿರುವ ಸಿಸಿಟಿವಿ ಕೂಡ ಪರಿಶೀಲನೆಯನ್ನ ನಡೆಸುತ್ತಿದ್ದಾರೆ. ಇನ್ನೂ ಸಂಬಂಧಿಕರ ಆರೋಪದ ಪ್ರಕಾರ ಹಣ ತೆಗೆದುಕೊಂಡು ಹೋದವರೇ ವಾಪಾಸ್ ಕೇಳಿದ್ದಕ್ಕೆ ಈ ರೀತಿ ಹತ್ಯೆ ಮಾಡಿದ್ದಾರೆ ಅಂತಿದ್ದಾರೆ...
ಸದ್ಯ ಸಂಕೇಶ್ವರ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆಯನ್ನ ಕೈಗೆತ್ತಿಕೊಂಡಿದ್ದಾರೆ. ಇನ್ನೂ ಕೋಟ್ಯಾಂತರ ರೂಪಾಯಿ ಆಸ್ತಿ ಇದ್ರೂ ಬಡ್ಡಿ ವ್ಯವಹಾರಕ್ಕೆ ಬಿದ್ದು ಮಹಿಳೆ ಜೀವ ಕಳೆದುಕೊಂಡ್ಲಾ ಅಥವಾ ಕುಟುಂಬಸ್ಥರೇ ಆಸ್ತಿ ಮೇಲೆ ಕಣ್ಣಿಟ್ಟು ಕೃತ್ಯ ಎಸಗಿದ್ರಾ ಅನ್ನೋದು ತನಿಖೆಯಿಂದಷ್ಟೇ ಹೊರ ಬರಬೇಕಿದೆ.