Hubballi Crime ಗುಟ್ಕಾ ಕೊಡಿಸದ್ದಕ್ಕೆ ಸ್ನೇಹಿತನನ್ನೆ‌ ಮುಗಿಸಿದ ರೌಡಿ ಶೀಟರ್!

By Suvarna News  |  First Published May 24, 2022, 4:41 PM IST

ಹುಬ್ಬಳ್ಳಿಯಲ್ಲಿ  ಕ್ಷುಲ್ಲಕ ಕಾರಣಕ್ಕೆ‌ ನೆತ್ತರು ಹರಿದಿದೆ.  ವಿಮಲ್ ಗುಟ್ಕಾ ಕೊಡಿಸುವ ವಿಚಾರಕ್ಕೇ ಸ್ನೇಹಿತರಲ್ಲೇ ಜಗಳ ಪ್ರಾರಂಭವಾಗಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.  


ಹುಬ್ಬಳ್ಳಿ(ಮೇ.24): ಕಳೆದ ರಾತ್ರಿ ಹುಬ್ಬಳ್ಳಿಯಲ್ಲಿ (Hubballi) ಕ್ಷುಲ್ಲಕ ಕಾರಣಕ್ಕೆ‌ ನೆತ್ತರು ಹರಿದಿದೆ. ವಿಮಲ್ ಗುಟ್ಕಾ ಕೊಡಿಸುವ ವಿಚಾರಕ್ಕೇ ಸ್ನೇಹಿತರಲ್ಲೇ ಜಗಳ ಪ್ರಾರಂಭವಾಗಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.

ಸ್ನೇಹಿತನಿಂದಲೇ ಕೊಲೆಯಾದವನು  ಆನಂದ ನಗರದ ಮೆಹಬೂಬ್ ರಫೀಕ್ ಕಳಸ (28). ಟೈಲ್ಸ್ ಫೀಟೀಂಗ್ ಕೆಲಸ ಮಾಡುತ್ತಿದ್ದ ಮೆಹಬೂಬ್ ಹಾಗೂ ಆತನ ಸ್ನೇಹಿತ ಗೌಸ್ ಮೊದ್ದೀನ್ ಮಧ್ಯೆ ಗುಟ್ಕಾ ಕೊಡಿಸುವ ವಿಚಾರಕ್ಕೆ ಜಗಳ ಆರಂಭವಾಗಿದೆ. ಮಂಜುನಾಥ ನಗರ ಬಳಿ ಇರುವ ಕೊಡೆ ಬಾರ್ ಮಧ್ಯೆ ಸೇವಿಸಿದ್ದ ಇಬ್ಬರು ಸ್ನೇಹಿತರ ಹೊರಬಂದಿದ್ದರು. ಆಗ ಮೆಹಬೂಬ್ ರಫೀಕ್ ಗೆ, ವಿಮಲ್ ಗುಟ್ಕಾ‌ ಕೊಡಿಸುವಂತೆ ಗೌಸ್ ಮೊದ್ದೀನ್ ಬೇಡಿಕೆ ಇಟ್ಡಿದ್ದ ಆದ್ರೆ ನನ್ನ ಬಳಿ ಹಣ ಇಲ್ಲ‌ಎಂದು ಮೆಹಬೂಬ್ ನಿರಾಕರಿಸಿದ್ದೆ ಎನ್ನಲಾಗಿದೆ. ಇದರಿಂದ   ಇಬ್ಬರ ನಡುವೆ ಜಗಳ ಆರಂಭವಾಗಿದೆ. 

Tap to resize

Latest Videos

ಜಗಳವಾಡುತ್ತಲೇ ಇಬ್ಬರು ಆನಂದ ನಗರ ಸರ್ಕಲ್ ಗೆ ಬಂದಿದ್ದರು, ಈ ವೇಳೆ ಮೆಹಬೂಬ್ ನ ಹೊಟ್ಟೆಗೆ ಗೌಸ್ ಮೊದ್ದೀನ್ ಚಾಕುವನ್ನು ಇರಿದಿದ್ದ, ಪರಿಣಾಮ ಮೆಹಬೂಬ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೆಹಬೂಬ್ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸದ್ಯ ಗೌಸ್ ಮೊದ್ದೀನ್ ಎಸ್ಕೇಪ್ ಆಗಿದ್ದು,ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹಳೆ ಹುಬ್ಬಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು,ಪರಿಶೀಲನೆ ನಡೆಸುತ್ತಿದ್ದಾರೆ.

Vijayapura ಮಕ್ಕಳ ಮಾರಾಟ ಜಾಲ ಸಕ್ರಿಯ, ಮತ್ತೆ ಮುನ್ನಲೆಗೆ ಜಯಮಾಲಾ ಕೇಸ್ 

ರಿವಾಲ್ವರ್‌ ತೋರಿಸಿ ಯುವತಿ ಮೇಲೆ ಮನೆ ಮಾಲೀಕನಿಂದ ರೇಪ್‌!: ರಿವಾಲ್ವರ್‌ ತೋರಿಸಿ ಬೆದರಿಸಿ ಯುವತಿ ಮೇಲೆ ಅತ್ಯಾಚಾರ ಮಾಡಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ 20 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಶಾಂತಿನಗರ ನಿವಾಸಿ ಅನಿಲ್‌ ರವಿಶಂಕರ್‌ ಪ್ರಸಾದ್‌(46) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಬಿಹಾರ ಮೂಲದ ಆರೋಪಿ ಕೆಲ ವರ್ಷಗಳಿಂದ ನಗರದಲ್ಲಿ ಟೈಲ್ಸ್‌ ವ್ಯವಹಾರ ಮಾಡಿಕೊಂಡಿದ್ದಾನೆ. ಪತ್ನಿ ಹಾಗೂ ಮಕ್ಕಳೊಂದಿಗೆ ನೆಲೆಸಿದ್ದಾನೆ.

ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಯುವತಿ, ಆರೋಪಿ ಅನಿಲ್‌ ಮನೆಯನ್ನು ಬಾಡಿಗೆ ಪಡೆದಿದ್ದಳು. ಆಕೆಯ ಮನೆಗೆ ಹುಡುಗರು ಸೇರಿದಂತೆ ಹಲವು ಸ್ನೇಹಿತರು ಆಗಾಗ ಬರುತ್ತಿದ್ದರು. ಈ ವಿಚಾರವಾಗಿ ಆರೋಪಿ ಅನಿಲ್‌ ಯುವತಿ ಜತೆಗೆ ಗಲಾಟೆ ಮಾಡುತ್ತಿದ್ದ. ಈ ನಡುವೆ ಹುಡುಗನೊಬ್ಬ ಯುವತಿ ಮನೆಯಲ್ಲಿ ಉಳಿದುಕೊಂಡಿದ್ದ. ಈ ವೇಳೆ ಆರೋಪಿ ಅನಿಲ್‌ ಆತನ ದ್ವಿಚಕ್ರ ವಾಹನದ ಚಕ್ರಕ್ಕೆ ಚೈನ್‌ ಅಳವಡಿಸಿದ್ದ. ಬಳಿಕ ಯುವತಿ ಮನೆಗೆ ತೆರಳಿ ಅನೈತಿಕ ಚಟುವಟಿಕೆ ನಡೆಸುತ್ತಿರುವ ಅನುಮಾನದ ಮೇರೆಗೆ ಪೊಲೀಸರು ದ್ವಿಚಕ್ರ ವಾಹನಕ್ಕೆ ಚೈನ್‌ ಹಾಕಿದ್ದಾರೆ. ಈ ಸಂಬಂಧ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲಿದ್ದಾರೆ ಎಂದು ಯುವತಿ ಹಾಗೂ ಆಕೆಯ ಸ್ನೇಹಿತನನ್ನು ಹೆದರಿಸಿದ್ದ. ಬಳಿಕ ಯಾವುದೇ ದೂರು ದಾಖಲಾಗದಂತೆ ನಾನು ನೋಡಿಕೊಳ್ಳುವುದಾಗಿ ಆ ಯುವಕನನ್ನು ಕಳುಹಿಸಿದ್ದ ಎನ್ನಲಾಗಿದೆ.

OLYMPIC VALUES EDUCATION PROGRAMME ಭಾರತದಾದ್ಯಂತ ಪ್ರಾರಂಭ

ಏ.11ರಂದು ಅತ್ಯಾಚಾರ: ಆರೋಪಿ ಅನಿಲ್‌ ಏ.11ರಂದು ಯುವತಿ ಮನೆಗೆ ನುಗ್ಗಿ ಆಕೆಗೆ ಹಣೆಗೆ ರಿವಾಲ್ವರ್‌ ಇರಿಸಿ ಬೆದರಿಸಿ, ಅತ್ಯಾಚಾರ ಮಾಡಿದ್ದ ಎನ್ನಲಾಗಿದೆ. ಬಳಿಕ ಈ ವಿಚಾರವನ್ನು ಪೋಷಕರ ಬಳಿ ಹೇಳದಂತೆ ಹೆದರಿಸಿದ್ದ. ಕೆಲ ದಿನಗಳ ಬಳಿಕ ಯುವತಿ ಅತ್ಯಾಚಾರದ ವಿಚಾರವನ್ನು ಪೋಷಕರ ಬಳಿ ಹೇಳಿಕೊಂಡಿದ್ದಳು. ಇದೀಗ ಪೋಷಕರ ಸಲಹೆ ಮೇರೆಗೆ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಅಶೋಕನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯುವತಿ ಹಾಗೂ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವರದಿಗಾಗಿ ಎದುರು ನೋಡುತ್ತಿದ್ದಾರೆ.

click me!