ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆ ಬೆಡ್ ಮೇಲೆ ನೇಣುಬಿಗಿದ ಸ್ಥಿತಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ನಡೆದಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಮೇ.9): ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆ ಬೆಡ್ ಮೇಲೆ ನೇಣುಬಿಗಿದ ಸ್ಥಿತಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ನಡೆದಿದೆ.
undefined
ಗೀತಶ್ರೀ, ಮೃತ ಶಿಕ್ಷಕಿ. ಖಾಸಗಿ ಶಾಲೆಗೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆ. ಕಳೆದ ಏಳೆಂಟು ವರ್ಷಗಳ ಹಿಂದೆಯಷ್ಟೇ ಗೀತಶ್ರೀ ಹಾಗೂ ಪ್ರಭುಕುಮಾರ್ ಗೆ ವಿವಾಹವಾಗಿದ್ದಾರೆ. ವಿವಾಹಕ್ಕೆ ಮುನ್ನ ಪತಿ ಪ್ರಭುಕುಮಾರ ಪೋಷಕರು ಗೀತಶ್ರೀ ಕುಟುಂಬದವರಿಗೆ ಸುಳ್ಳು ಹೇಳಿ ಮದುವೆ ಮಾಡಿಸಿರುವ ಆರೋಪ ಕೇಳಿಬಂದಿದೆ. ಮಗನಿಗೆ ಸರ್ಕಾರಿ ನೌಕರಿ ಸಿಗಲಿದೆ ಎಂದು ನಂಬಿಸಿದ್ದ ಪ್ರಭುಕುಮಾರ ಪೋಷಕರು. ಮದುವೆ ಬಳಿಕ ಮನೆಯಲ್ಲಿ ಕೂರಬಾರದೆಂದು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ದುಡಿಯುತ್ತಿದ್ದ ಗೀತಾ.
ಚಿತ್ರದುರ್ಗ: ಬಿಸಲಿನ ತಾಪಕ್ಕೆ ಎಂಕೆ ಹಟ್ಟಿ ಕೆರೆಯಲ್ಲಿ ಮೀನುಗಳ ಮಾರಣಹೋಮ!
ಮದುವೆಯಾದ ಹೊಸದರಲ್ಲಿ ಚೆನ್ನಾಗಿಯೇ ಇದ್ದ ಕುಟುಂಬ ಬಳಿಕ ಗಂಡ ವರದಕ್ಷಿಣೆ ಕಿರುಕುಳ ನೀಡಲಾರಂಭಿಸಿದ್ದಾನೆ. ತವರು ಮನೆಯಿಂದ ಹಣ, ಒಡವೆ ತೆಗೆದುಕೊಂಡು ಬರುವಂತೆ ಪತಿರಾಯ ದಿನನಿತ್ಯ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ನಮ್ಮ ಆಕೆಯೇ ಗಂಡನೇ ವರದಕ್ಷಿಣೆಯ ಕಿರುಕುಳಕ್ಕೆ ಕೊಂದಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ಮಗಳ ಮೃತದೇಹ ಕಂಡು ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. ನಮ್ಮ ಮಗಳು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ವರದಕ್ಷಿಣೆಗಾಗಿ ಗಂಡನೇ ಕೊಲೆ ಮಾಡಿದ್ದಾನೆ. ನಮಗೆ ನ್ಯಾಯ ಬೇಕು, ಪೊಲೀಸರು ಸೂಕ್ತ ತನಿಖೆ ನಡೆಸಬೇಕು ಎಂದು ಮೃತ ಮಹಿಳೆಯ ಸಹೋದರ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್:
ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡು, ಹಾಗಾಗ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಗಳನ್ನು ಮಾಡಿಕೊಂಡು ಜೀವನ ಸಾಗಿಸ್ತಿದ್ದ ಜೋಡಿ ಇದಾಗಿತ್ತು. ಆದ್ರೆ ಕಳೆದ ವಾರದ ಹಿಂದಷ್ಟೇ ತವರು ಮನೆಗೆ ತೆರಳಿದ್ದ ಮೃತ ಮಹಿಳೆ ಗೀತಶ್ರೀ, ಮರಳಿ ಗಂಡನ ಮನೆಗೆ ಬಂದಾಗ ಮತ್ತದೇ ಕಿರುಕುಳ ನೀಡಿದ್ದಾನಂತೆ ಪಾಪಿ ಪತಿರಾಯ. ಪ್ರತಿ ನಿತ್ಯ ನನಗೆ ಹಣ ಬೇಕು ನಿಮ್ಮ ಮನೆಯವರಿಂದ ತೆಗೆದುಕೊಂಡು ಬಾ ಎಂದೇ ಪೀಡಿಸಿದ್ದಾನೆ. ಅದಕ್ಕೆ ಒಪ್ಪದ್ದಕ್ಕೆ ಕೊಲೆ ಮಾಡಿ ಆತ್ಮಹತ್ಯೆಯ ನಾಟಕ ಮಾಡಿದ್ದಾನೆ. ಕೊಲೆ ಮಾಡಿ ಸ್ವತಃ ಕಿರಾತಕ ಪ್ರಭುಕುಮಾರನೇ ಕಾಲ್ ಮಾಡಿ ನಮಗೆ ನಿಮ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಉಡಾಫೆಯಿಂದ ಮಾತನಾಡಿದ್ದಾನೆ. ತನ್ನ ಪತ್ನಿ ಸಾವನ್ನಪ್ಪಿದ್ದರು ತಲೆ ಮರೆಸಿಕೊಂಡಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಆದ್ದರಿಂದ ಪೊಲೀಸರು ಅವನನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡುವ ಮೂಲಕ ಸತ್ಯ ಹೊರಬೇಕಿದೆ ಎಂದು ಮೃತ ಮಹಿಳೆ ಪೋಷಕರು ಒತ್ತಾಯಿಸಿದರು.
ಸುಡುಗಾಡು ಸಿದ್ದರಿಗೆ ಹೊಸ ಬಡಾವಣೆ ಸಿಗೋದು ಯಾವಾಗ? ಜೋಪಡಿಯಲ್ಲಿದೆ 50ಕ್ಕೂ ಹೆಚ್ಚಿನ ಕುಟುಂಬ!
ಒಟ್ಟಾರೆಯಾಗಿ ಬದುಕಿ ಬಾಳಬೇಕಿದ್ದ ಮಹಿಳೆಯ ಸಾವು ಪುಟ್ಟ ಕಂದ ಅನಾಥವಾದಂತಾಗಿದೆ. ಇದ್ರಲ್ಲಿ ನಿಜವಾಗ್ಲೂ ಗಂಡನ ಕಿರುಕಳವೇ ಇದ್ಯಾ? ಅಥವಾ ಮಾನಸಿಕ ಒತ್ತಡದಿಂದ ಮಹಿಳೆ ನೇಣಿಗೆ ಶರಳಾದಳಾ? ತನಿಖೆ ನಂತರವೇ ಗೊತ್ತಾಗಲಿದೆ.