ಶಿವಮೊಗ್ಗ ರೌಡಿಶೀಟರ್‌ಗಳ ಹತ್ಯೆಗೆ ಸಿಕ್ತು ಬಿಗ್ ಟ್ವಿಸ್ಟ್; ಕೊಲೆ ಮಾಡಲು ಬಂದವರೇ ಬೀದಿ ಹೆಣವಾದರು!

By Sathish Kumar KH  |  First Published May 9, 2024, 3:05 PM IST

ಶಿವಮೊಗ್ಗ ಲಷ್ಕರ್ ಮೊಹಲ್ಲಾ ಮೀನು ಮಾರ್ಕೆಟ್‌ನಲ್ಲಿ ನಿನ್ನೆ ನಡೆದ ಇಬ್ಬರು ರೌಡಿಶೀಟರ್‌ಗಳ ಬರ್ಬರ ಹತ್ಯೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ.


ಶಿವಮೊಗ್ಗ (ಮೇ 09): ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನಿನ್ನೆ ನಡೆದ ಇಬ್ಬರು ರೌಡಿಶೀಟರ್‌ಗಳ ಬರ್ಬರ ಹತ್ಯೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಲಾಂಗು, ಮಚ್ಚು, ಚಾಕು, ಚೂರಿ ಹಿಡಿದುಕೊಂಡು ಕೊಲೆ ಮಾಡಲು ಹೊರಟ ರೌಡಿಶೀಟರ್‌ಗಳನ್ನೇ ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಹೌದು, ಶಿವಮೊಗ್ಗ ಲಷ್ಕರ್ ಮೊಹಲ್ಲಾದಲ್ಲಿ ಹಾಡ ಹಗಲೇ ನಡು ರಸ್ತೆಯಲ್ಲಿ ಇಬ್ಬರು ರೌಡಿ ಶೀಟರ್ ಗಳ ಹತ್ಯೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಲ್ಲಿ ಕೊಲೆ ಮಾಡಲು ಬಂದ ರೌಡಿಶೀಟರ್‌ಗಲೇ ಕೊಲೆಯಾಗಿ ಬೀದಿ ಹೆಣವಾಗಿದ್ದಾರೆ. ಇದು ಯುವಕರ ಮೇಲಿನ ಹಲ್ಲೆಯಲ್ಲ, ರೌಡಿಗಳ ನಡುವೆ ಗ್ಯಾಂಗ್ ವಾರ್ ಆಗಿದೆ ಎಂದು ತಿಳಿದುಬಂದಿದೆ. ರೌಡಿಶೀಟರ್ ಯಾಸಿನ್ ಖುರೇಶಿಯನ್ನು ಕೊಲೆ ಮಾಡಲು ಬಂದಿದ್ದ ಇಬ್ಬರು ರೌಡಿಶೀಟರ್ ಗಳು ಈಗ ಬೀದಿ ಹೆಣವಾಗಿದ್ದಾರೆ. ಹಾಡ ಹಗಲೇ ನಡು ರಸ್ತೆಯಲ್ಲಿ ರಕ್ತ ಕೋಡಿಯೇ ಹರಿದಿತ್ತು.

Tap to resize

Latest Videos

undefined

ಶಿವಮೊಗ್ಗದಲ್ಲಿ ಗ್ಯಾಂಗ್‌ವಾರ್‌ಗೆ ಮೂವರು ಬಲಿ; ರಕ್ಷಣೆ ಕೊಡಲಾಗದಿದ್ದರೆ ಜಾಗ ಖಾಲಿ ಮಾಡಿ: ಶಾಸಕ ಚನ್ನಬಸಪ್ಪ

ಶಿವಮೊಗ್ಗ ಲಷ್ಕರ್ ಮೊಹಲ್ಲಾದಲ್ಲಿ ಕೊಲೆಯಾದ ರೌಡಶೀಟರ್‌ಗಳನ್ನು ಕೆ.ಆರ್. ಪುರಂ ನಿವಾಸಿ ಸುಹೇಲ್ ಅಲಿಯಾಸ್ ಕಲಂದರ್ (30) ಅಣ್ಣಾನಗರದ ಗೌಸ್ ಅಲಿಯಾಸ್ ಕಾಲಾಗೌಸ್ (32) ಎಂದು ಪೊಲೀಸರು ಗುರುತಿಸಿದ್ದಾರೆ. ಇವರು ಶಿವಮೊಗ್ಗದ ರೌಡಿಶೀಟರ್ ಯಾಸಿನ್ ಕೊಲೆ ಮಾಡುವುದಕ್ಕೆಂದು ಬಂದಿದ್ದು, ಸುಖಾ ಸುಮ್ಮನೇ  ಖುರೇಶಿ ಹಲ್ಲೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಗೌಸ್ ಮತ್ತು ಸುಹೇಲನ ಮೇಲೆ ಯಾಸಿನ್ ಖುರೇಶಿ ಸ್ನೇಹಿತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ. ಹಲ್ಲೆಗೊಳಗಾದ ರೌಡಿಶೀಟರ್ ಯಾಸಿನ್ ಖುರೇಷಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. 

ರೌಡಿಶೀಟರ್‌ಗಳ ಕೊಲೆಯಲ್ಲ, ಗ್ಯಾಂಗ್‌ವಾರ್:  ಹೌದು, ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲಾದ ಮೀನಿನ ಮಾರ್ಕೆಟ್ ಬಳಿ ನಡೆದಿರುವುದು ಕೇವಲ ಕೊಲೆಯಲ್ಲ. ಇದು ಎರಡು ರೌಡಿ ಗುಂಪುಗಳ ನಡುವೆ ನಡೆದಿರುವ ಗ್ಯಾಂಗ್ ವಾರ್ ಎಂದು ಹೇಳಲಾಗುತ್ತಿದೆ. ರೌಡಿ ಶೀಟರ್ ಯಾಸಿನ್ ಖುರೇಶಿ ಕೊಲೆ ಮಾಡಲು 20ಕ್ಕೂ ಹೆಚ್ಚು ಬೈಕ್‌ಗಳಲ್ಲಿ ಮತ್ತೊಂದು ಗುಂಪಿನವರು ಅಟ್ಯಾಕ್ ಮಾಡಿದ್ದರು. ಮೊದಲು ಸುಹೇಲ್ ಮತ್ತು ಗೌಸ್ ಬಂದು ಕ್ಯಾತೆ ತೆಗೆದು ಹಲ್ಲೆ ಮಾಡಲು ಮುಂದಾಗಿದ್ದಾರೆ. ಆದರೆ, ಈ ವೇಳೆಗಾಗಲೇ ಯಾಸೀನ್ ಸಹಚರರು ದಾಳಿಯ ಮುನ್ಸೂಚನೆ ಅರಿತು ಇಬ್ಬರ ಮೇಲೆ ಅಟ್ಯಾಕ್ ಮಾಡಿದ್ದಾರೆ. ತಮ್ಮ ಬಳಿಯಿದ್ದ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಗೌಸ್ ಮತ್ತು ಸುಹೇಲ್ ಕೊಲೆಯಾಗುತ್ತಿದ್ದಂತೆ ಉಳಿದ ಎಲ್ಲರೂ ಪರಾರಿ ಆಗಿದ್ದಾರೆ.

Breaking: ಶಿವಮೊಗ್ಗದಲ್ಲಿ ಜೋಡಿ ಕೊಲೆ: ಅನ್ಯಕೋಮಿನ ಇಬ್ಬರು ಯುವಕರ ಬರ್ಬರ ಹತ್ಯೆ

ಇನ್ನು ಪೊಲೀಸರು ಬಂದು ಸುಹೇಲ್ ಮತ್ತು ಗೌಸ್‌ನ ಮೃತ ದೇಹಗಳನ್ನು ಆಸ್ಪತ್ರೆಗೆ ರವಾನೆ ಮಾಡುವ ಮುನ್ನ ಸ್ಥಳ ಪರಿಶೀಲನೆ ಮಾಡಿದಾಗ ಮೃತ ರೌಡಿಗಳ ಬಳಿ ಲಾಂಗು, ಮಚ್ಚು, ಚಾಕು, ಚೂರಿ ಹಾಗು ಕ್ರಿಕೆಟ್‌ನ ವಿಕೆಟ್‌ಗಳು ಇರುವುದು ಪತ್ತೆಯಾಗಿವೆ. ಆಗ, ಕೊಲೆ ಮಾಡಲು ಮಂದವರೇ ಬೀದಿ ಹೆಣವಾಗಿ ಬಿದ್ದಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಇದೀಗ ಶಿವಮೊಗ್ಗ ನಗರ ಕೋಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಲಷ್ಕರ್ ಮೊಹಲ್ಲಾದ ಮೀನು ಮಾರ್ಕೆಟ್ ಬಳಿಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

click me!