ಹನಿಟ್ರ್ಯಾಪ್‌ ಮಾಡಿ 30 ಜನರಿಗೆ 30 ಲಕ್ಷ ಟೋಪಿ: ಮೂವರ ಬಂಧನ

Published : Aug 02, 2023, 09:24 AM IST
ಹನಿಟ್ರ್ಯಾಪ್‌ ಮಾಡಿ 30 ಜನರಿಗೆ 30 ಲಕ್ಷ ಟೋಪಿ: ಮೂವರ ಬಂಧನ

ಸಾರಾಂಶ

ಸಾಮಾಜಿಕ ಜಾಲತಾಣಗಳಲ್ಲಿ ಸುಂದರ ಮಾಯಾಂಗನೆಯ ಫೋಟೋ ಬಳಸಿ ಜನರನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿಕೊಂಡು ಹಣ ಸುಲಿಗೆ ಮಾಡುತ್ತಿದ್ದ ಮೂವರು ಕಿಡಿಗೇಡಿಗಳನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಆ.02): ಸಾಮಾಜಿಕ ಜಾಲತಾಣಗಳಲ್ಲಿ ಸುಂದರ ಮಾಯಾಂಗನೆಯ ಫೋಟೋ ಬಳಸಿ ಜನರನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿಕೊಂಡು ಹಣ ಸುಲಿಗೆ ಮಾಡುತ್ತಿದ್ದ ಮೂವರು ಕಿಡಿಗೇಡಿಗಳನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಅಬ್ದುಲ್‌ ಖಾದರ್‌, ಶರಣಪ್ರಕಾಶ್‌ ಹಾಗೂ ಯಾಸಿನ್‌ ಬಂಧಿತರಾಗಿದ್ದು, ಆರೋಪಿಗಳಿಂದ ಹಣ ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಪ್ಪಿಸಿಕೊಂಡಿರುವ ಮುಂಬೈ ಮೂಲದ ನೇಹಾ ಪತ್ತೆಗೆ ತನಿಖೆ ನಡೆದಿದೆ. ಇತ್ತೀಚೆಗೆ ಮುಂಬೈ ಮೂಲದ ಸಾಫ್‌್ಟವೇರ್‌ ಉದ್ಯೋಗಿಯೊಬ್ಬರಿಗೆ ನೇಹಾಳ ಮೂಲಕ ಏಕಾಂತಕ್ಕೆ ಕರೆದು ಬಳಿಕ .20 ಸಾವಿರ ವಸೂಲಿ ಮಾಡಿದ್ದರು. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುಂದರಿ ಹೆಸರಿನಲ್ಲಿ ಟಾಕಿಂಗ್‌: ಈ ನಾಲ್ವರು ಕ್ರಿಮಿನಲ್‌ ಹಿನ್ನೆಲೆಯುಳ್ಳವರಾಗಿದ್ದು, ಇವರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖಾದರ್‌, ಯಾಸಿನ್‌ ಹಾಗೂ ಶರಣ ಪ್ರಕಾಶ್‌ ಪರಿಚಿತರಾಗಿದ್ದರು. ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಅದೇ ಸ್ನೇಹದಲ್ಲಿ ಎಲ್ಲರೂ ‘ಹನಿಟ್ರ್ಯಾಪ್‌’ ಕಾರ್ಯಾಚರಣೆಗಿಳಿದಿದ್ದರು. ನೇಹಾ ಮೂಲಕ ಜನರನ್ನು ಹನಿಟ್ರ್ಯಾಪ್‌ ಬಲೆಗೆ ಈ ಗ್ಯಾಂಗ್‌ ಸೆಳೆದು ವಂಚಿಸುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಮನೆ ಮಾಲೀಕನ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ವೇಳೆ ಸಿಲಿಂಡರ್ ಸ್ಪೋಟ: ಮನೆ ಧ್ವಂಸ

ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸುಂದರ ಫೋಟೋವನ್ನು ಡೀಸ್‌ಪ್ಲೇ (ಡಿಪಿ)ಗೆ ನೇಹಾ ಬಳಸುತ್ತಿದ್ದಳು. ಆಗ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ ಹಣವಂತರಿಗೆ ಆಕೆ ಗಾಳ ಹಾಕುತ್ತಿದ್ದಳು. ಹೀಗೆ ತನ್ನ ಮೋಹದ ಜಾಲಕ್ಕೆ ಬಿದ್ದವರ ಜತೆ ಚಾಟಿಂಗ್‌ ಶುರು ಮಾಡಿ ನೇಹಾ ‘ಮುಕ್ತ’ವಾಗಿ ಮಾತನಾಡುತ್ತಿದ್ದಳು. ಕೊನೆಗೆ ಮೋಡಿ ಮಾತಿಗೆ ಮರಳಾದವರಿಗೆ ‘ಏಕಾಂತ’ ಕಳೆಯಲು ಆಕೆ ಆಹ್ವಾನಿಸುತ್ತಿದ್ದಳು.

ಅಲ್ಲದೆ ಪೂರ್ವನಿಗದಿತ ಸಂಚಿನಂತೆ ತಾನೇ ಭೇಟಿ ಸ್ಥಳ ನಿಗದಪಡಿಸಿ ಸಂತ್ರಸ್ತರಿಗೆ ಆಕೆ ಲೋಕೇಷನ್‌ ಕಳುಹಿಸುತ್ತಿದ್ದಳು. ಆಗ ಲಾಡ್ಜ್‌ ಅಥವಾ ಹೋಟೆಲ್‌ಗೆ ಕೋಣೆಗೆ ಹೋದಾಗ ಇನ್ನುಳಿದ ಆರೋಪಿಗಳು ದಾಳಿ ನಡೆಸುತ್ತಿದ್ದರು. ತಮ್ಮನ್ನು ನೇಹಾಳ ಗಂಡ ಹಾಗೂ ಸಂಬಂಧಿಕರು ಎಂದು ಪರಿಚಯಿಸಿಕೊಂಡು ಆರೋಪಿಗಳು, ನಿನ್ನ ಚಾಟಿಂಗ್‌ ವಿವರ ಹಾಗೂ ಲಾಡ್ಜ್‌ಗೆ ಬಂದಿರುವ ಸಂಗತಿಯನ್ನು ಕುಟುಂಬದವರಿಗೆ ತಿಳಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಇದೇ ರೀತಿ 20-30 ಜನರಿಂದ ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಟೆಕ್ಕಿಗೆ ಇನ್‌ಸ್ಟಾಗ್ರಾಂನಲ್ಲಿ ಬಲೆ: ಕೆಲ ದಿನಗಳ ಹಿಂದೆ ಮುಂಬೈ ಮೂಲದ ಟೆಕ್ಕಿಗೆ ಇನ್‌ಸ್ಟಾಗ್ರಾಂನಲ್ಲಿ ನೇಹಾ ಬಲೆ ಬೀಸಿದ್ದಳು. ಆಗ ನೇಹಾಳ ಆಹ್ವಾನದ ಮೇರೆಗೆ ಪುಟ್ಟೇನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ವಿನಾಯಕ ಲೇಔಟ್‌ ಮನೆಯೊಂದರಲ್ಲಿ ಭೇಟಿಗೆ ಸಂತ್ರಸ್ತ ಬಂದಿದ್ದ. ಆ ವೇಳೆ ದಾಳಿ ನಡೆಸಿದ ಅಬ್ದುಲ್‌ ಖಾದರ್‌, ತನ್ನನ್ನು ನೇಹಾಳ ಪತಿ ಎಂದು ಪರಿಚಿಯಸಿಕೊಂಡು ಟೆಕ್ಕಿಗೆ ಬೆದರಿಸಿ .20 ಸಾವಿರ ಸುಲಿಗೆ ಮಾಡಿ ಕಳುಹಿಸಿದ್ದರು. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಆರೋಪಿಗಳ ಬಂಧನವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Raichur: ಗಾಂಜಾ ಮಿಶ್ರಿತ ಚಾಕಲೇಟ್ ವಶ: ಇಬ್ಬರ ಬಂಧನ

ಸಂತ್ರಸ್ತರಿಂದ 30 ಲಕ್ಷ ವಸೂಲಿ: ಎರಡು ವರ್ಷದಿಂದ ಈ ಹನಿಟ್ರ್ಯಾಪ್‌ ಗ್ಯಾಂಗ್‌ ಸಕ್ರಿಯವಾಗಿದ್ದು, ಏಳೆಂಟು ತಿಂಗಳಲ್ಲೇ 20-30 ಜನರಿಗೆ ವಂಚಿಸಿ ಸುಮಾರು 30 ಲಕ್ಷ ವಸೂಲಿ ಮಾಡಿರುವ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆದರೆ ಮೋಸ ಹೋದ ಬಹುತೇಕರು ಮರ್ಯಾದೆಗೆ ಅಂಜಿ ಪೊಲೀಸ್‌ ಠಾಣೆಗೆ ದೂರು ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!