ನಟ ದರ್ಶನ್ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಪರಿಸ್ಥಿತಿಯನ್ನು ಪರಿಶೀಲಿಸಲು ಜೈಲಿಗೆ ಭೇಟಿ ನೀಡಲಿದ್ದಾರೆ.
ಬೆಂಗಳೂರು (ಆ.26): ನಟ ದರ್ಶನ್ ಜೈಲಿನಲ್ಲಿದ್ದರೂ ಐಷಾರಾಮಿ ಜೀವನ ಮಾಡುತ್ತಾ ಕಾಫಿ, ಸಿಗರೇಟ್ ಸೇವನೆ ಮಾಡುತ್ತಾ ಮಜಾ ಮಾಡುತ್ತಿದ್ದಾನೆ. ಮತ್ತೊಂದೆಡೆ ರೌಡಿಶೀಟರ್‌ಗಳು ಅಕ್ರಮವಾಗಿ ಇಟ್ಟುಕೊಂಡ ಮೊಬೈಲ್‌ನಲ್ಲಿ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಾ ಹಾಯಾಗಿದ್ದಾನೆ. ಜೈಲಲ್ಲಿದ್ದರೂ ರೆಸಾರ್ಟ್‌ನಂತೆ ಫೀಲ್ ಅನುಭವಿಸುತ್ತಿರುವ ನಟ ದರ್ಶನ್‌ನ ಐಷಾರಾಮಿ ಜೀವನವನ್ನು ನೋಡಲು ಸ್ವತಃ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರೇ ಸೋಮವಾರ ಬೆಳಗ್ಗೆ ಜೈಲಿಗೆ ಹೋಗುತ್ತಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿ ಬೀದಿ ಹೆಣವಾಗಿ ಎಸೆದ ಆರೋಪದಲ್ಲಿ ನಟ ದರ್ಶನ್ ಜೈಲು ಸೇರಿದ್ದರೂ, ಕಿಂಚಿತ್ತು ತಪ್ಪಿತಸ್ಥ ಮನೋಭಾವನೆ ಇಲ್ಲದೇ ಜೈಲಿನಲ್ಲಿ ಐಷಾರಾಮಿ ಜೀವನ ಮಾಡುತ್ತಿದ್ದಾನೆ. ಬೆಂಗಳೂರಿನ ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಲ್ಲಿದ್ದರೂ ಅಲ್ಲಿ ಸಿಗರೇಟ್ ಸೇದುತ್ತಾ, ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಾ ರೆಸಾರ್ಟ್‌ನಲ್ಲಿರುವ ರೀತಿಯಲ್ಲಿಯೇ ಮಜಾ ಮಾಡುತ್ತಿದ್ದಾನೆ.
ಜೈಲು ಅವ್ಯವಸ್ಥೆಗೆ ಸಿಎಂ ಕೆಂಡಾಮಂಡಲ, ದರ್ಶನ್ ಗ್ಯಾಂಗ್ ಬೇರೆ ಜೈಲಿಗೆ ಶಿಫ್ಟ್ ಮಾಡಲು ಸಿದ್ದರಾಮಯ್ಯ ಖಡಕ್ ಸೂಚನೆ
ದರ್ಶನ್‌ಗೆ ನಟೋರಿಯಸ್ ರೌಡಿಗಳು, ಹಲವು ಸಣ್ಣಪುಟ್ಟ ರೌಡಿಶೀಟರ್‌ಗಳೆಲ್ಲರೂ ನಟ ದರ್ಶನ್‌ಗೆ ಸಲಾಂ ಹೊಡೆಯುತ್ತಾ ತಾವೂ ನಿಮ್ಮ ಅಭಿಮಾನಿ ಎಂದು ಬಿಲ್ಡಪ್ ತೆಗೆದುಕೊಂಡು ಮೆರೆಯುತ್ತಿದ್ದಾರೆ. ಇದಕ್ಕೆಲ್ಲ ಪೊಲೀಸರೇ ಹಣವನ್ನು ಪಡೆದು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ದೂರುಗಳು ಹಾಗೂ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಗೃಹ ಸಚಿವರೇ ನಟ ದರ್ಶನ್‌ನ ಐಷಾರಾಮಿ ಜೀವನವನ್ನು ದರ್ಶನ ಮಾಡಲು ಡಾ.ಪರಮೇಶ್ವರ ಅವರು ಪರಪ್ಪನ ಅಗ್ರಹಾರ ಜೈಲಿಗೆ ಹೋಗುತ್ತಿದ್ದಾರೆ.
ಇನ್ನು ಸ್ವತಃ ಗೃಹ ಸಚಿವ ಪರಮೇಶ್ವರ ಅವರೇ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜೈಲಿನ ಅಧಿಕಾರಿಗಳಿಂದ ತರಾತುರಿಯಲ್ಲಿ ಜೈಲಿನ ಆವರಣವನ್ನು ಸ್ವಚ್ಛತೆ ಮಾಡಿಸುತ್ತಿದ್ದಾರೆ. ಇದಕ್ಕಾಗಿ ಜೈಲಿನ ರಸ್ತೆಯಲ್ಲಿ ಸ್ವಚ್ಛತೆ ಕಾರ್ಯ ಆರಂಭಿಸಲಾಗಿಎ. ಪರಪ್ಪನ ಅಗ್ರಹಾರ ಜೈಲಿನ ಆವರಣದೊಳಗೆ ಜೈಲಿನ ಅಧಿಕಾರಿಗಳು ಮತ್ತು ಜೈಲಿನ ಸಂಪೂರ್ಣ ಸಿಬ್ಬಂದಿಯಿಂದ ಸ್ವಚ್ಚತಾ ಕಾರ್ಯ ಮಾಡಲಾಗುತ್ತಿದೆ. ಇನ್ನು ದರ್ಶನ್‌ಗೆ ಸರ್ಕಾರದಿಂದಲೇ ರಾಜಾತಿಥ್ಯ ನೀಡಲಾಗುತ್ತಿದೆ, ಪೊಲೀಸ್ ವ್ಯವಸ್ಥೆಯ ಮೇಲೆ ಬಿಗಿ ಹಿಡಿತವಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಒತ್ತಡಕ್ಕೆ ಸಿಲುಕಿದ್ದರಿಂದ ಸ್ವತಃ ಗೃಹ ಸಚಿವ ಪರಮೇಶ್ವರ ನೇರವಾಗಿ ವರದಿ ಪಡೆಯಲು ಜೈಲಿಗೆ ತೆರಳಿದ್ದಾರೆ.
ಕೊಲೆಪಾತಕಿಗಳ ಸಂಘ ಸೇರಿದ ಪೊರ್ಕಿ; ದರ್ಶನ್‌ನಿಂದ ವಿಡಿಯೋ ಕಾಲ್ ಮಾಡಿಸಿದ ರೌಡಿಶೀಟರ್ ಧರ್ಮ!
ದರ್ಶನ್‌ಗೆ ಬಿರಿಯಾನಿ ಸಪ್ಲೈ ಆಗುತ್ತದೆ ಎಂಬ ಆರೋಪ: ಜೈಲಿನಲ್ಲಿದ್ದರೂ ಐಷಾರಾಮಿ ಜೀವನ ಮಾಡುತ್ತಿರುವ ನಟ ದರ್ಶನ್ ತನಗೆ ಮನೆ ಊಟ ಮಾಡಲು ಅನುಮತಿ ಕೊಡಬೇಕೆಂದು ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ, ಅಸಲಿಯಾಗಿ ನಟ ದರ್ಶನ್‌ಗೆ ಈಗಾಗಲೇ ಬೆಂಗಳೂರಿನ ವಿವಿಧ ಹೋಟೆಲ್‌ಗಳಿಂದ ಬಿರಿಯಾನಿ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿವೆ. ಶಿವಾಜಿನಗರ ಹೋಟೆಲ್‌ಗಳಿಂದ ನಟ ದರ್ಶನ್‌ಗೆ ತರಹೇವಾರಿ ರುಚಿಕರವಾದ ಊಟ, ಗುಂಡು, ತುಂಡು ಎಲ್ಲವೂ ಜೈಲಿನೊಳಗೆ ಸರಬರಾಜು ಆಗುತ್ತಿದೆ ಎಂಬ ಆರೋಪವೂ ಕೇಳಿಬಂದಿದ್ದು, ಈ ಆಯಾಮದಲ್ಲಿಯೂ ಗೃಹ ಸಚಿವ ಪರಮೇಶ್ವರ ಅವರು ಮಾಹಿತಿ ಪಡೆಯಲ್ಲಿದ್ದಾರೆ ಎಂಬ ಮಾಹಿತಿಯಿದೆ.