
ಮೂಲ್ಕಿ (ನ.19): ಕಿನ್ನಿಗೋಳಿಯ ಶ್ರೀರಾಮ ಮಂದಿರ ಬಳಿ ಕಣಜದ ಹುಳು (wasp) ಕಡಿದು ಗೃಹರಕ್ಷಕ ದಳ ಸಿಬ್ಬಂದಿ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ. ಕಟೀಲು ಬಳಿಯ ಎಕ್ಕಾರು ದೇವರಗುಡ್ಡೆ ನಿವಾಸಿ ಸಂತೋಷ್ (35) ಮೃತರು.
ಮಂಗಳೂರಿನ (Mangaluru) ಕಂಕನಾಡಿ ಠಾಣೆಯಲ್ಲಿ ಗೃಹ ರಕ್ಷಕ (Home Guard) ದಳ ಸಿಬ್ಬಂದಿ ಸಂತೋಷ್ ಬುಧವಾರ ಸಂಜೆ ಶ್ರೀರಾಮ ಮಂದಿರ ಬಳಿ ಆಟೋದಲ್ಲಿ (Auto) ಹೋಗುತ್ತಿದ್ದಾಗ ಕಣಜದ ಹುಳುಗಳು ಕಿನ್ನಿಗೋಳಿ ಪರಿಸರದ ಶಾಲೆಯ (School) ಕೆಲ ಮಕ್ಕಳಿಗೆ ಕಡಿದು ಗಂಭೀರಾವಸ್ಥೆಯಲ್ಲಿರುವುದು ಕಂಡು ಬಂದಿತ್ತು. ಇದನ್ನು ಕಂಡ ಸಂತೋಷ್ ಅವರು ಮಕ್ಕಳನ್ನು (Children) ಕಣಜದ ಹುಳುಗಳಿಂದ ರಕ್ಷಿಸಿ ಕಿನ್ನಿಗೋಳಿಯ ಕಾನ್ಸೆಟ್ಟಾಆಸ್ಪತ್ರೆಗೆ (Hospital) ದಾಖಲಿಸಿದ್ದಾರೆ.
ಮಕ್ಕಳ ರಕ್ಷಣೆ ಸಂದರ್ಭ ಕಣಜದ ಹುಳು ಸಂತೋಷ್ ಅವರಿಗೂ ಕಡಿದಿದ್ದು ಅವರು ಯಾವುದೇ ಚಿಕಿತ್ಸೆ (Treatment) ಪಡೆಯದೆ ಮನೆ ಕಡೆ ತೆರಳಿದ್ದರು. ಮನೆಯಲ್ಲಿ ರಾತ್ರಿ ಸುಮಾರು 9 ಗಂಟೆಗೆ ಕುರ್ಚಿಯಲ್ಲಿ ಕುಳಿತವರು ಸ್ಥಳದಲ್ಲೇ ಅಸ್ವಸ್ತಗೊಂಡು ಮೃತಪಟ್ಟರು ಎಂದು ತಿಳಿದುಬಂದಿದೆ.
ಅವರು ಪತ್ನಿ, ಮೂವರು ಮಕ್ಕಳು, ತಾಯಿ ಮತ್ತು ಅಣ್ಣ ರನ್ನು ಅಗಲಿದ್ದಾರೆ. ಆರು ಮಕ್ಕಳ ಜೀವ ಉಳಿಸಿ, ಮಾನವೀಯತೆ ಮೆರೆದ ಸಂತೋಷ್ ಅವರ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.
ಕ್ಯಾಬ್ ಚಾಲಕ ಆತ್ಮಹತ್ಯೆ : ಉಬರ್ ಕ್ಯಾಬ್(Uber Cab) ಚಾಲಕನೊಬ್ಬ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಂದ್ರಾ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಂದ್ರಲೇಔಟ್ 1ನೇ ಹಂತದ ನಿವಾಸಿ ಮಂಜುನಾಥ (36) ಆತ್ಮಹತ್ಯೆಗೆ ಶರಣಾದವರು. ಬೆಳಗ್ಗೆ 9ರ ಸುಮಾರಿಗೆ ಪತ್ನಿಯನ್ನು ಅಂಗಡಿಗೆ ಕಳುಹಿಸಿ, ಬಳಿಕ ಮನೆಯ ಕಿಟಕಿಗೆ ವೇಲ್ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಅಂಗಡಿಯಿಂದ ಮನೆಗೆ ವಾಪಾಸಾದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ(Investigation) ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.
ತುರುವೆಕೆರೆ ಮೂಲದ ಮಂಜುನಾಥ್ ಕ್ಯಾಬ್ ಚಾಲಕರಾಗಿದ್ದು(Cab Driver), ಪತ್ನಿ ಮತ್ತು ಮಗುವಿನೊಂದಿಗೆ ನಗರದಲ್ಲಿ ನೆಲೆಸಿದ್ದರು. ಚೀಟಿ ವ್ಯವಹಾರದಲ್ಲಿ ತೊಡಗಿದ್ದ ಮಂಜುನಾಥ್, ಕೋವಿಡ್‌ಗೂ(Covid19) ಮುನ್ನ ಚೀಟಿಗಳಿಂದ ಹಣ ತೆಗೆದು ಸ್ನೇಹಿತರಿಗೆ ನೀಡಿದ್ದರು. ಬಳಿಕ ಕೋವಿಡ್-ಲಾಕ್‌ಡೌನ್‌ನಿಂದಾಗಿ(Lockdown) ಸ್ನೇಹಿತರು ಸಕಾಲಕ್ಕೆ ಚೀಟಿ ಹಣ ನೀಡಿರಲಿಲ್ಲ. ಮತ್ತೊಂದೆಡೆ ಕೋವಿಡ್‌ನಿಂದ ಕ್ಯಾಬ್ ಆದಾಯವೂ(Income) ಕಡಿಮೆಯಾಗಿತ್ತು. ಈ ನಡುವೆ ಚೀಟಿ ನಡೆಸುವವರು ಹಣ ಕಟ್ಟುವಂತೆ ಮಂಜುನಾಥ್‌ಗೆ ಒತ್ತಡ ಹಾಕುತ್ತಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಹಣ ಹಿಂದಿರುಗಿಸಲು ಅನ್ಯ ಮಾರ್ಗವಿಲ್ಲದೆ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ಒಂದೇ ಕುಟುಂಬದ ಐವರಲ್ಲಿ ನಾಲ್ವರು ಸಾವು
ಮಹಿಳೆ ಆತ್ಮಹತ್ಯೆ : Mangaluru(ಅಜೆಕಾರು): ಇಲ್ಲಿನ ಮರ್ಣೆ ಗ್ರಾಮದ ಎಣ್ಣೆಹೊಳೆ ಎಂಬಲ್ಲಿ ಮಹಿಳೆಯೋರ್ವರು ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸುಭಾಷಿಣಿ (40) ಮೃತರು. ಅವರು ಪೂನಾದಲ್ಲಿ(Pune) ಗಂಡನೊಂದಿಗೆ ವಾಸವಿದ್ದು, 10 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ(Mental Illness) ಬಳಲುತ್ತಿದ್ದರು. ಚಿಕಿತ್ಸೆ(Treatment) ಕೊಡಿಸುತ್ತಿದ್ದರೂ ಗುಣವಾಗದೇ ಅವರ ಗಂಡ ಅವರನ್ನು ಎಣ್ಣೆಹೊಳೆಯಲ್ಲಿರುವ ಅಕ್ಕನ ಮನೆಗೆ ತಂದು ಬಿಟ್ಟಿದ್ದರು. ಅವರು ಶನಿವಾರ ಅಪರಾಹ್ನ ಮಾಳಿಗೆಯ ಮರದ ಪಕ್ಕಾಸಿಗೆ ನೇಣು ಬಿಗಿದು ಮೃತಪಟ್ಟಿದ್ದಾರೆ. ಅಜೆಕಾರು ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.
ಹಗ್ಗದಿಂದ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
Udpi(ಕಾರ್ಕಳ): ಇಲ್ಲಿನ ನಲ್ಲೂರು ಗ್ರಾಮದ ಗಣಪತಿಕಟ್ಟೆ ಎಂಬಲ್ಲಿನ ಜಗದೀಶ್ ರಾವ್ (48) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅವರು, ಒಂದು ವರ್ಷದಿಂದ ಸಕ್ಕರೆ ಕಾಯಿಲೆಯಿಂದ(Diabetes) ಬಳಲುತ್ತಿದ್ದರು, ಚಿಕಿತ್ಸೆ ಮಾಡಿದರೂ ಗುಣವಾಗದೆ ಜಿಗುಪ್ಸೆಗೊಂಡು ಮನೆ ಸಮೀಪದ ಮಾವಿನಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ