Hit and Run: ಬೈಕ್‌ ಸವಾರನ ತಲೆಮೇಲೆ ಹರಿದ ಶಾಸಕ ಹರತಾಳು ಹಾಲಪ್ಪ ಕಾರು: ಬೈಕ್‌ ಸವಾರ ಸ್ಥಳದಲ್ಲಿಯೇ ಸಾವು

By Sathish Kumar KHFirst Published Feb 6, 2023, 4:59 PM IST
Highlights

ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಸಾಗದ ವಿಧಾನಸಭಾ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅವರ ಕಾರು ಬೈಕ್‌ ಸವಾರನಿಗೆ ಡಿಕ್ಕಿಯಾಗಿದ್ದು, ಕೆಳಗೆ ಬಿದ್ದ ಬೈಕ್‌ ಸವಾರನ ತಲೆಯ ಮೇಲೆ ಕಾರು ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಬೆಂಗಳೂರು (ಫೆ.06): ಸಿಲಿಕಾನ್ ಸಿಟಿಯಲ್ಲಿ ಹಿಟ್ ಅಂಡ್ ರನ್ ಗೆ ವ್ಯಕ್ತಿ ಬಲಿಯಾಗಿದ್ದಾನೆ. ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಸಾಗದ ವಿಧಾನಸಭಾ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅವರ ಸ್ಟಿಕ್ಕರ್‌ ಹೊಂದಿದ್ದ ಕಾರು ಬೈಕ್‌ ಸವಾರನಿಗೆ ಡಿಕ್ಕಿಯಾಗಿದ್ದು, ಕೆಳಗೆ ಬಿದ್ದ ಬೈಕ್‌ ಸವಾರನ ತಲೆಯ ಮೇಲೆ ಕಾರು ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬೈಕ್‌ ಹಿಂಬದಿ ಸವಾರನಿಗೆ ಗಂಭೀರ ಗಾಯವಾಗಿದೆ.

ಬೆಂಗಳೂರು ನಗರದಲ್ಲಿ ಟ್ರಾಫಿಕ್‌ ಇದ್ದೇ ಇರುತ್ತದೆ. ಆದರೂ, ಟ್ರಾಫಿಕ್‌ ಇರುವ ಸಾರ್ವಜನಿಕರು ಹೆಚ್ಚಾಗಿ ಓಡಾಡುವ ರಸ್ತೆಯಲ್ಲಿ ಅತಿವೇಗವಾಗಿ ಬಂದ ಶಾಸಕರ ಕಾರು ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದಿದೆ. ಬಳಿಕ ದ್ವಿಚಕ್ರ ವಾಹನ ಸವಾರನ ತಲೆ ಮೇಲೆ ಹರಿದಿದೆ. ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಲಸೂರು ಗೇಟ್ ಟ್ರಾಫಿಕ್ ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ, ಈ ದುರ್ಘಟನೆಯಿಂದ ನೃಪತುಂಗ ರಸ್ತೆಯಲ್ಲಿ ಭಾರಿ ಪ್ರಮಾಣದ ಟ್ರಾಫಿಕ್‌ ಜಾಮ್‌ ಉಂಟಾಗಿದೆ. 

Latest Videos

10 ತಿಂಗಳ ಮಗು ಹೋಗಬೇಡವೆಂದು ಅಳುತ್ತಿದ್ದರೂ ಬಿಟ್ಟು ಹೋದ ತಾಯಿ: ಕಾರು ಅಪಘಾತದಲ್ಲಿ ಅಮ್ಮ-ಅಕ್ಕ ಸಾವು

ಅತಿವೇಗವಾಗಿ ಬಂದು ಡಿಕ್ಕಿ: ಈ ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಮಾಜಿದ್ ಖಾನ್ (39) ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ತಲೆ ಮೇಲೆ ಕಾರ್ ಹರಿದಿತ್ತು. ಎಚ್ ಬಿ ಆರ್  ಲೇಔಟ್ ನಿವಾಸಿಯಾಗಿದ್ದ ಮಾಜಿದ್ ಖಾನ್ ಆಟೊ ಮೊಬೈಲ್ಸ್ ಅಂಗಡಿ ಇಟ್ಕೊಂಡಿದ್ದರು. ಮತ್ತೊಬ್ಬ ಗಾಯಾಳು ರಿಯಾಜ್ ಕಾಲು ಮುರಿದಿದ್ದು ತಲೆಗೆ ಗಾಯವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಎಂ ಎಲ್ ಎ ಹರತಾಳು ಹಾಲಪ್ಪ ಪಾಸ್ ಹೊಂದಿದ್ದ ಕಾರ್ ನಿಂದ ಅಪಘಾತವಾಗಿದೆ. ಅಪಘಾತದ ನಂತರ ಕೂಡಲೇ ಕಾರ್‌ಗೆ ಅಂಟಿಸಿದ್ದ  ಎಂಎಲ್‌ಎ ಹರತಾಳು ಹಾಲಪ್ಪ ಎಂಬ ಕಾರ್ ಸ್ಟಿಕ್ಕರ್ ಅನ್ನು ಬೆಂಬಲಿಗರು ತೆಗೆದಿದ್ದಾರೆ. ಹಲಸೂರು ಗೇಟ್‌ ಪೊಲೀಸ್‌ ಸ್ಟೇಷನ್ ಬಳಿ ಕಾರ್ ಸ್ಟಿಕ್ಕರ್ ತೆಗೆದಿಟ್ಟಿದ್ದಾರೆ. 

ಘಟನೆಯ ಪೂರ್ಣ ವಿವರ: ನೃಪತುಂಗ ರಸ್ತೆಯಲ್ಲಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಬಳಿ ಬೈಕ್ ನಲ್ಲಿ ಇಬ್ಬರು ಸವಾರರು ಹೋಗುತ್ತಿದ್ದರು. ಈ ವೇಳೆ ಇನ್ನೋವಾ ಕಾರ್ ನಿಂದ ಡಿಕ್ಕಿಯಾಗಿದೆ. ಒಬ್ಬರ ತಲೆ ಮೇಲೆ ಕಾರ್ ಹರಿದಿದೆ. ಮತ್ತೊಬ್ಬರ ಕಾಲಿನ ಮೇಲೆ ಕಾರ್ ಹರಿದಿದೆ. ಒಬ್ಬ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ನಂತರ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳಿದಂತೆ ಘಟನೆಯಲ್ಲಿ ಮೂರ್ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. KA 50 MA 6600 ನಂಬರಿನ ಇನ್ನೊವ ಕಾರ್  ಆಗಿದೆ. ಕಾರ್ ನಲ್ಲಿ ಡ್ರೈವರ್ ಮಾತ್ರ ಚಾಲನೆ ಮಾಡುತ್ತಿದ್ದರು. ರಾಮು ಸುರೇಶ್ ಎಂಬುವರ ಹೆಸರಿನಲ್ಲಿರೊ ಕಾರು ಆಗಿದೆ. ಯಲಹಂಕ ರಿಜಿಸ್ಟ್ರೇಷನ್ ನಲ್ಲಿರೊ ಕಾರ್‌ ಆಗಿದ್ದು, ಅಜಾಗರೂಕ ಚಾಲನೆಯಿಂದ ಅಪಘಾತಕ್ಕೆ ಕಾರಣವಾಗಿದೆ.

Davanagere: ಕಾಳಾಪುರ ಗಲಾಟೆ ತನಿಖೆ ಮುಗಿಸಿ, ಮಗಳ ಮನೆಗೆ ಹೊರಟ್ಟಿದ್ದ ಎಎಸ್ಐ ಅಪಘಾತದಲ್ಲಿ ಸಾವು

3 ಬೈಕ್‌, 2 ಕಾರುಗಳಿಗೆ ಡಿಕ್ಕಿ: ಫುಲ್‌ ಟ್ರಾಫಿಕ್‌ ಜಾಮ್‌ ಇರುವ ರಸ್ತೆಯಲ್ಲಿ ವೇಗವಾಗಿ ಬಂದ ಶಾಸಕರ ಇನೋವಾ ಕಾರು ಒಟ್ಟು 3 ಬೈಕ್‌, 2 ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಒಬ್ಬ ಬೈಕ್ ಸವಾರ ಮೃತನಾದರೆ, ಮೂವರಿಗೆ ಗಾಯವಾಗಿದೆ. ಕೂಡಲೇ ಗಾಯಾಳುಗಳನ್ನು ಮಾರ್ಥಸ್ ಅಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ, ಕಾರಿನಲ್ಲಿ ಶಾಸಕರು ಇರಲಿಲ್ಲ. ಕೇವಲ ಡ್ರೈವರ್‌ ಕಾರು ಚಾಲನೆ ಮಾಡಿಕೊಂಡು ಬರುವಾಗ ಘಟನೆ ನಡೆದಿದೆ. ಇನೋವಾ ಕಾರ ಡ್ರೈವರ್ ವಶಕ್ಕೆ ಪಡೆದ ಹಲಸೂರು ಗೇಟ್‌ ಠಾಣೆಯ ಪೊಲೀಸರು ಕಾರನ್ನು ಸೀಜ್‌ ಮಾಡಿದ್ದಾರೆ.

click me!