
ಧಾರವಾಡ (ಫೆ.6) ಅಂತಿಮ ವರ್ಷದ ವಿದ್ಯಾರ್ಥಿಯೋರ್ವ ನಗ್ನ ಸ್ಥಿತಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ಮೂಲದ ರೋಹಿತ್ ಟಿ.ಪಿ(22) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ.
ರೋಹಿತ್ ಕೊಟ್ಟೂರು ಮೂಲದವರಾಗಿದ್ದು, ಇಲ್ಲಿನ ಕೃಷಿ ವಿವಿ ಹಾಸ್ಟೆಲ್ ನಲ್ಲಿದ್ದ. ನಿನ್ನ ಕ್ಯಾಂಟೀನ್‌ನಲ್ಲಿ ಊಟ ಮಾಡಿ ಕೊಠಡಿಯೊಳಗೆ ಹೋಗಿದ್ದ ರೋಹಿತ್ ಬಳಿಕ ಹೊರಬಂದಿರಲಿಲ್ಲ. ಕ್ಲಾಸ್‌ಮೇಟ್‌ಗಳು, ಸಂಬಂಧಿಕರು ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಸಹಪಾಠಿಯೊಬ್ಬ ಕಿಟಕಿಯಿಂದ ನೋಡಿದಾಗ ರೋಹಿತ್ ಮೃತ ದೇಹ ಫ್ಯಾನ್‌ಗೆ ನಗ್ನವಾಗಿ ನೇತಾಡುತ್ತಿರುವುದು ಕಂಡಿದ್ದಾನೆ.
ರೋಹಿತ್ ನಗ್ನಸ್ಥಿತಿಯಲ್ಲಿ ನೇಣುಹಾಕಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. ವಿವವಸ್ತ್ರವಾಗಿ ಯಾಕೆ ನೇಣಿಗೆ ಶರಣಾಗಿದ್ದಾನೆ, ಆತ್ಮಹತ್ಯೆಗೆ ಏನು ಕಾರಣ ಎಂಬ ಬಗ್ಗೆ ತಿಳಿದಿಲ್ಲ. ಈ ಘಟನೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮಂಗಳೂರು: ಕಡಿಮೆ ಅಂಕ ಬಂದದ್ದಕ್ಕೆ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ!
ಸಾಲಬಾಧೆ: ರೈತನೋರ್ವ ನೇಣು
ಇಂಡಿ: ಸಾಲಬಾಧೆಯಿಂದ ತೋಟದಲ್ಲಿ ರೈತನೋರ್ವ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ತಾಲೂಕಿನ ಬೈರುಣಗಿ ಗ್ರಾಮದಲ್ಲಿ ನಡೆದಿದೆ. ಬೈರುಣಗಿ ಗ್ರಾಮದ ಕಲ್ಲಪ್ಪ ಬಿರಾದಾರ(59) ಆತ್ಮಹತ್ಯೆ ಮಾಡಿಕೊಂಡ ರೈತ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನಿಂದ ಕೃಷಿ ಸಾಲವಾಗಿ .1 ಲಕ್ಷ, ಟ್ರ್ಯಾಕ್ಟರ್ ಮೇಲೆ .4.50 ಲಕ್ಷ ಸಾಲ ಹಾಗೂ ಗ್ರಾಮದಲ್ಲಿ ಕೈಗಡವಾಗಿ .15 ಲಕ್ಷ ಸಾಲ ತೆಗೆದುಕೊಂಡಿದ್ದು, ಬೆಳೆ ಸಕಾಲಕ್ಕೆ ಬಾರದಿರುವುದರಿಂದ ಮಾಡಿದ ಸಾಲ ತೋರಿಸುವುದು ಹೇಗೆ ಎಂದು ಮನನೊಂದು ತೋಟದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ