ತನಿಖೆ ವೇಳೆ ಕನಿಷ್ಠ 21 ಇತರೆ ಮಹಿಳೆಯರಿಗೂ ಆತ ವಂಚನೆ ಮಾಡಿದ್ದಾನೆಂಬುದು ಬೆಳಕಿಗೆ ಬಂದಿದೆ. ಅಲ್ಲದೆ, ಮಹಿಳೆಯರಿಗೆ ಒಟ್ಟು 4.50 ಕೋಟಿ ರೂಪಾಯಿ ವಂಚಿಸಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಅಹಮದಾಬಾದ್ (ಆಗಸ್ಟ್ 18, 2023): ಯುಕೆಯಲ್ಲಿರೋ 'ಹೃದಯ ತಜ್ಞ'ರೊಬ್ಬರು ವಿವಾಹವಾಗುವ ನೆಪದಲ್ಲಿ ಮಹಿಳೆಯರ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಮಹಿಳೆಯರಿಂದ ಕೋಟಿ ಕೋಟಿ ರೂ. ವಂಚಿಸಲಾಗಿದೆ ಎಂದೂ ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಅಹಮದಾಬಾದ್‌ನ ಚರ್ಮರೋಗ ತಜ್ಞೆಯೊಬ್ಬರು ಆ ಯುಕೆ ಮೂಲದ ವೈದ್ಯರನ್ನು ಮದುವೆಯಾಗಲು ಹೋಗಿ 18 ಲಕ್ಷ ರೂ. ವಂಚನೆಗೊಳಗಾಗಿರುವುದು ತಿಳಿದುಬಂದಿದೆ. ಹಣ ಪಡೆದ ಬಳಿಕ ಆತ ಹಲವು ದಿನಗಳಿಂದ ಮಹಿಳೆಯ ಸಂಪರ್ಕಕ್ಕೆ ಬರದ ಕಾರಣ ತಾನು ವಂಚನೆಗೊಳಗಾಗಿದ್ದೇನೆ ಎಂದು ಅರಿತ ಮಹಿಳೆ ಪೊಲೀಸರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದೂ ವರದಿಯಾಗಿದೆ.
ಈ ತನಿಖೆ ವೇಳೆ ಕನಿಷ್ಠ 21 ಇತರೆ ಮಹಿಳೆಯರಿಗೂ ಆತ ವಂಚನೆ ಮಾಡಿದ್ದಾನೆಂಬುದು ಬೆಳಕಿಗೆ ಬಂದಿದೆ. ಅಲ್ಲದೆ, ಮಹಿಳೆಯರಿಗೆ ಒಟ್ಟು 4.50 ಕೋಟಿ ರೂಪಾಯಿ ವಂಚಿಸಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ ಆರಂಭದಲ್ಲಿ 35 ವರ್ಷದ ಮಹಿಳಾ ಚರ್ಮರೋಗ ತಜ್ಞರು ಮಹಿಳಾ ಸಹಾಯವಾಣಿಯನ್ನು ಸಂಪರ್ಕಿಸಿದಾಗ ಅವರು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಭೇಟಿಯಾದ ಡಾ. ದಿಲೀಪ್ ಕುಮಾರ್ ಎಂದು ಗುರುತಿಸಲಾದ ವ್ಯಕ್ತಿ ಕಣ್ಮರೆಯಾಗಿದ್ದಾರೆ ಎಂದು ವರದಿ ಮಾಡಿದಾಗ ವಂಚನೆ ಬೆಳಕಿಗೆ ಬಂದಿದೆ. ವೈದ್ಯನ ಸೋಗಿನಲ್ಲಿ ಆತ ತನ್ನನ್ನು ವಂಚಿಸಿದ್ದಾನೆ ಎಂದೂ ತಿಳಿದುಬಂದಿದೆ. ಸೈಬರ್ ಕ್ರೈಮ್ ಸಹಾಯವಾಣಿಯ ಮೂಲಕ ಮಹಿಳೆ ಅಂತಿಮವಾಗಿ CID (ಅಪರಾಧ) ಕ್ಕೆ ದೂರು ನೀಡಿದ್ದಾರೆ.
ಇದನ್ನು ಓದಿ: ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿ ಅಸಹ್ಯವಾಗಿ ಮುಟ್ತಿದ್ದ ಕಾಮುಕ ಶಿಕ್ಷಕ: ಪೋಷಕರಿಂದ ಧರ್ಮದೇಟು!
"ಮೊದಮೊದಲು, ಚರ್ಮರೋಗ ತಜ್ಞರು ತಾನು ವೈವಾಹಿಕ ವಂಚನೆಗೆ ಬಲಿಯಾಗಿರುವುದನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದರು. ರೋಗಿಗಳ ಸಮಾಲೋಚನೆಯ ಮೂಲಕ, ಆಪಾದಿತ ವೈದ್ಯರು ನಡೆಸಿದ ವಂಚನೆಯ ಆಳವನ್ನು ಅರಿತುಕೊಳ್ಳಲು ನಾವು ಅವರಿಗೆ ಸಹಾಯ ಮಾಡಿದೆವು" ಎಂದು ಸಿಐಡಿ (ಅಪರಾಧ) ಸೈಬರ್ ಸೆಲ್ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಮತ್ತು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ಮಹಿಳೆಯರನ್ನು ಗುರಿಯಾಗಿಸಲು ವಂಚಕ ವೈದ್ಯರು ಪ್ರೊಫೈಲ್‌ಗಳನ್ನು ರಚಿಸಿದ್ದಾರೆ ಎಂದು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಆತ 30 ಮತ್ತು 40 ರ ಹರೆಯದ ದುರ್ಬಲ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದಾನೆ. ಅವರ ವಿಶ್ವಾಸವನ್ನು ಗಳಿಸಿದ ನಂತರ, ಅವರು ವೈದ್ಯಕೀಯ ತುರ್ತುಸ್ಥಿತಿ ಇದೆ ಎಂದು ಹೇಳಿಕೊಳ್ಳುತ್ತಾರೆ ಮತ್ತು ಅವರಿಂದ ಹಣವನ್ನು ಪಡೆದುಕೊಳ್ಳುತ್ತಾನೆ. ಹಾಗೂ, ದುಬಾರಿ ಉಡುಗೊರೆಗಳನ್ನು ಪಡೆದಿದ್ದಾನೆ ಎಂದೂ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಈ ಕನ್ನಡಿ ಮುಂದೆ ನಿಂತವ್ರೆಲ್ಲ ಬೆತ್ತಲಾಗಿ ಕಾಣ್ತಾರಂತೆ: ನಾಸಾ ವಿಜ್ಞಾನಿಗಳಿಂದ್ಲೂ ಬಳಕೆ!