
ಕಾಸರಗೋಡು(ಆ.18) ಸಾಲ ಪಡೆದು ಮರುಪಾವತಿ ಮಾಡುವ ಜಾಯಮಾನ ಈತನಿಗಿಲ್ಲ. ಸಾಲ ಮರುಪಾವತಿ ಕೇಳಿದಾಗ ಹೊಸ ದಾಳ ಉರುಳಿಸುತ್ತಿದ್ದ. ತನ್ನ ಪತ್ನಿಯನ್ನು ಬೆದರಿಸಿ ಬೆತ್ತಲೇ ವಿಡಿಯೋ ಕರೆ ಮಾಡಿಸಿ ಸಾಲ ಮನ್ನಾ ಮಾಡಿಸುತ್ತಿದ್ದ ಅಥವಾ ಮರುಪಾವತಿ ದಿನಾಂಕ ಮುಂದೂಡುತ್ತಿದ್ದ. ಈತನ ಕಿರುಕುಳ ಹೆಚ್ಚಾಗುತ್ತಿದ್ದಂತೆ ಖುದ್ದು ಪತ್ನಿಯೇ ದೂರು ನೀಡಿದ್ದಾಳೆ. ಈ ಘಟನೆ ನಡೆದಿರುವುದು ಕಾಸರಗೋಡು ಜಿಲ್ಲೆಯಲ್ಲಿ.
ನೀಲೇಶ್ವರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 20 ವರ್ಷದ ಮಹಿಳೆಗೆ ಕೆಲ ತಿಂಗಳ ತಿಂಗಳ ಮದುವೆಯಾಗಿತ್ತು. ದಂಪತಿ ಪಾಲಾ ಬಳಿ ಇರುವ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಈ ಮಹಿಳೆಯ ಪತಿಗೆ ಊರು ತುಂಬಾ ಸಾಲ. ಇನ್ನು ಸಾಲ ಮರುಪಾವತಿ ಮಾಡಲು ಹೇಳಿದರೆ ಮತ್ತೆ ಆ ರಸ್ತೆಯಲ್ಲೇ ಹೋಗುವುದಿಲ್ಲ. ಫೋನ್ ಕರೆ ಸ್ವೀಕರಿಸಲ್ಲ. ಕೆಲವರು ಮನೆಗೆ ಬಂದು ಧಮ್ಕಿ ಹಾಕಿ ಹೋಗಿದ್ದಾರೆ.
ವಾಟ್ಸಪ್ನಲ್ಲಿ ಮತ್ತೊಂದು ನಗ್ನಚಿತ್ರ ವೈರಲ್: ಯುವತಿ ಮೋಸದ ಬಲೆಗೆ ಬಿದ್ದ ಯುವಕ!
ಸಾಲ ಬಾಧೆ ಹೆಚ್ಚಾಗುತ್ತಿದ್ದಂತೆ ಕಿರಾತಕ ಪತಿ ಹೊಸ ಐಡಿಯಾ ಮಾಡಿದ್ದಾನೆ. ಸಾಲ ಮಾರುಪಾವತಿ ಕೇಳುವರರ ಜೊತೆ ತನ್ನಪತ್ನಿಯನ್ನೇ ಮಲಗಿಸಲು ಪ್ರಯತ್ನ ಮಾಡಿದ್ದಾನೆ. ಸಾಲ ಪಡೆದವರು ಸಾಲ ಮರುಪಾವತಿಸಲು ಕೇಳಿದಾಗ, ಹೊಸ ದಾಳ ಉರುಳಿಸಿದ್ದಾನೆ. ಪತ್ನಿಯನ್ನು ಬೆದರಿಸಿ ಬೆತ್ತಲೇ ವಿಡಿಯೋ ಕರೆ ಮಾಡಲು ಸೂಚಿಸಿದ್ದಾನೆ.
ತನ್ನ ಪತ್ನಿಯನ್ನೇ ಬೆತ್ತಲೇ ಮಾಡಿ ಸಾಲ ಪಡೆವರಿಗೆ ವಿಡಿಯೋ ಕಾಲ್ ಮಾಡುತ್ತಿದ್ದ. ಈ ಫಿಗರ್ ಇದೇ ಫುಲ್ ಫ್ರಿ. ಬಾಡಿ ಮಸಾಜ್ ಸೇರಿ ಎಲ್ಲಾ ಸೇವೆ ನಿಮಗಾಗಿ ಎಂದು ಸಾಲ ಮನ್ನಾ ಮಾಡಿಸುತ್ತಿದ್ದ. ಈತನ ಕಿರುಕುಳ ಹೆಚ್ಚಾಗುತ್ತಿದ್ದಂತೆ ಪತ್ನಿ ನೀಲೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಪತಿ ನಾಪತ್ತೆಯಾಗಿದ್ದಾನೆ. ಫೋನ್ ಸ್ವಿಚ್ ಆಫ್ ಆಗಿದೆ. ಇತ್ತ ಮದವೆಯಾದ ಒಂದು ವರ್ಷಕ್ಕೆ ಮಹಿಳೆ ಪಡಬಾರದ ನೋವು ಅನುಭವಿಸುತ್ತಿದ್ದಾಳೆ.
ವಾಟ್ಸಾಪ್ ಕಾಲ್‌ನಲ್ಲಿ ಬೆತ್ತಲಾದ 78 ವರ್ಷದ ವೃದ್ಧ: ಮುತ್ತಿನ ನಗರಿಯಲ್ಲಿ ಸೈಬರ್ ವಂಚಕರಿಂದ 23 ಲಕ್ಷ ರೂ. ಪಂಗನಾಮ
ಇದೇ ರೀತಿ ಹಲವು ಘಟನೆಗಳು ನಡೆದಿದೆ. ಪತ್ನಿಯನ್ನು ಸಾಲ ಪಡೆವರ ಜೊತೆ ಮಲಗಿಸಿದ ಉದಾಹರಣೆಗಳಿವೆ. ಇತ್ತೀಚೆಗೆ ಮಂಗಳೂರಿನಲ್ಲಿ ಇನ್‌ಸ್ಪೆಕ್ಟರ್ ಎಂದು ನಂಬಿಸಿ ಅತ್ಯಾಚಾರ ಎಸದ ಘಟನೆ ನಡೆದಿತ್ತು. ಯುವತಿಯ ನಗ್ನ ಫೋಟೋ ತೆಗೆದು ಅದನ್ನು ವೈರಲ್ ಮಾಡುವುದಾಗಿ ಹೆದರಿಸಿ ಹಣಕ್ಕೆ ಬೇಡಿಕೆ ಇರಿಸಿದ ಯುವಕನೊಬ್ಬನನ್ನು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದರು. ರಾಯಚೂರು ಮೂಲದ ಯಮನೂರ ಬಂಧಿತ ಆರೋಪಿ. ಈತ ಬೀದಿ ನಾಟಕ ಕಲಾವಿದನಾಗಿದ್ದು ನಾಟಕದ ಪೊಲೀಸ್ ಎಸ್‌ಐ ದಿರಿಸು ಬಳಸಿಕೊಂಡು ಯುವತಿಗೆ ತಾನು ಪೊಲೀಸ್ ಇಲಾಖೆಯಲ್ಲಿರುವುದಾಗಿ ನಂಬಿಸಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ