ಹಾವೇರಿಯಲ್ಲಿ ಆರ್‌ಎಂಡಿ ಗುಟ್ಕಾ ಕದ್ದ ಖದೀಮರು, ತಮಿಳುನಾಡಲ್ಲಿ ತಿಂದು ಸಿಕ್ಕಿಬಿದ್ರು

By Sathish Kumar KH  |  First Published Jun 21, 2023, 5:21 PM IST

ಹಾವೇರಿಯ ಗೋದಾಮಿನಲ್ಲಿದ್ದ ಆರ್‌ಎಂಡಿ ಗುಟ್ಕಾವನ್ನು ಕದ್ದ ಖದೀಮರು ತಮಿಳುನಾಡಿನಲ್ಲಿ ಮಾರಾಟ ಮಾಡುವಾಗ ಲಾರಿ ಸಮೇತ ಸಿಕ್ಕಿಬಿದ್ದರು.


ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಹಾವೇರಿ (ಜೂ.21): ಎಂಥೆಂತಾ ಕಳ್ಳರು ಇರ್ತಾರೆ ಅಂತ ನಿಮಗೆ ಗೊತ್ತಾ? ಇಲ್ಲಿ ಕಳ್ಳರು ಕಳ್ಳತನ ಮಾಡಿದ್ದು ಚಿನ್ನ, ಬೆಳ್ಳಿನೂ ಅಲ್ಲ, ಹಣ, ವಜ್ರ ವೈಡೂರ್ಯಗಳನ್ನೂ ಅಲ್ಲ. ಬಾಯಲ್ಲಿ ಹಾಕೊಂಡು ಜಗಿಯೋ ಗುಟ್ಕಾನಾ... ಅದು ಒಂದಲ್ಲ ಎರಡಲ್ಲ, ಹತ್ತತ್ರ ಕೋಟಿ ಮೌಲ್ಯದ ಗುಟ್ಕಾ ಕದ್ದು ಎಸ್ಕೇಪ್ ಆಗಿದ್ರು ಐನಾತಿಗಳು. ಅದರೆ, ಕದ್ದ ಗುಟ್ಕಾವನ್ನು ಸಾಗಣೆ ಮಾಡಲು ಹೋಗಿ ಜೈಲು ಪಾಲಾಗಿದ್ದಾರೆ.

Latest Videos

undefined

ಆರ್.ಎಂ.ಡಿ ಗುಟ್ಕಾ ನಿಮಗೆ ಗೊತ್ತೇ ಇದೆ. ಗುಟ್ಕಾಗಳಲ್ಲೇ ಹೆಚ್ಚಿನ ದರಕ್ಕೆ ಮಾರಾಟ ಆಗೋ ಗುಟ್ಕಾ ಇದು. ಆರ್ ಎಂ ಡಿ ಗುಟ್ಕಾ ತಿನ್ನುವ ಗುಟ್ಕಾ ಪ್ರಿಯರಿಗೆನೂ ಕಡಿಮೆ ಇಲ್ಲ.ಒಂದು ಗುಟ್ಕಾ ಪ್ಯಾಕೇಟ್ ಗೆ 20 ರೂಪಾಯಿ ಇನ್ನು ಕೆಲವೆಡೆ 30 ರೂಪಾಯಿಗೆ ಕೂಡಾ ಈ ಗುಟ್ಕಾ ಮಾರಾಟ ಮಾಡ್ತಾರೆ. ಆರ್ ಎಂ ಡಿ ಗುಟ್ಕಾ  ವನ್ನೇ ಕದ್ದು ಲಾಭ ಮಾಡಿಕೊಳ್ಳಲು ಕಳ್ಳರು ಸ್ಕೆಚ್  ಹಾಕಿ ಕುಳಿತಿದ್ರು. ಅದು ಯಾವುದೋ ಒಂದು ಅಂಗಡಿ ಕಳ್ಳತನ ಮಾಡಿ ಒಂದಿಷ್ಡು ಗುಟ್ಕಾ ಪಾಕೆಟ್ ಎಗರಿಸೋ ಪ್ಲ್ಯಾನ್ ಅಲ್ಲವೇ ಅಲ್ಲ ಬಿಡಿ. ಪಕ್ಕದ ತಮಿಳುನಾಡಿನವರಗೂ ಈ ಕಳ್ಳ ಗುಟ್ಕಾ ಮಾರಾಟದ ಲಿಂಕ್ ಇದೆ ಅಂದರೆ ನೀವು ನಂಬಲೇ ಬೇಕು..

ನಂದಿನಿ ಹಾಲಿನ ದರ 5 ರೂ. ಹೆಚ್ಚಳ: ಕೆಎಂಎಫ್ ನೂತನ ಅಧ್ಯಕ್ಷ ಭೀಮಾನಾಯ್ಕ ನಿರ್ಧಾರ

ಮೊದಲು ಘಟನೆ ಹಿನ್ನಲೆ ನೋಡೋದಾದರೆ  ಹಾವೇರಿ ಜಿಲ್ಲೆ ರಾಣೇಬೆನ್ನೂರು ಪಟ್ಟಣದಲ್ಲಿ ಗುಟ್ಕಾ ಅಂಗಡಿ ಕಳ್ಳತನ ಆಗಿತ್ತು. ಕಳೆದ ಜೂನ್ 9 ನೇ ತಾರೀಖು ಗುಟ್ಕಾ ಗೋದಾಮನ್ನೇ ಒಂದು ಕಳ್ಳರ ಗ್ಯಾಂಗ್ ಲೂಠಿ ಮಾಡಿತ್ತು. ಬರೋಬ್ಬರಿ 87 ಲಕ್ಷ ರೂ. ಮೌಲ್ಯದ ಆರ್.ಎಂ.ಡಿ ಗುಟ್ಕಾ ಕಳ್ಳತನ ಮಾಡಿ ಕಳ್ಳರ ಗ್ಯಾಂಗ್ ಒಂದು ಪರಾರಿಯಾಗಿತ್ತು. ರಾಣೇಬೆನ್ನೂರು ನಗರದ ವಿಶಾಲ್ ಪ್ರಕಾಶ್ ಗುಪ್ತಾ ಎಂಬುದವರ ಗುಟ್ಕಾ ದಾಸ್ತಾನು ಅಂಗಡಿ ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದರು. ಆರ್‌ಎಂ ಡಿ ಪಾನ್ ಮಸಾಲ್ 2,720 ಬಾಕ್ಸ್, ಆರ್ ಎಂಡಿ ಪಾನ್ ಮಸಾಲಾಗೆ ಬಳಸುವ ತಂಬಾಕು 6,540 ಬಾಕ್ಸ್ ಹಾಗೂ ಎಂ ಗೋಲ್ಡ್ ತಂಬಾಕು 7,520 ಬಾಕ್ಸ್ ಕದ್ದು ಪರಾರಿಯಾಗಿದ್ದರು. ಇಷ್ಟೊಂದು ಗುಟ್ಕಾ ಬಾಕ್ಸ್ ಕದ್ದಿದ್ದು ಯಾರು?  ಇದರಲ್ಲಿ ಯಾರ ಕೈವಾಡ ಇದೆ ಎಂದು ತನಿಖೆಗೆ ಹೊರಟ ಪೊಲೀಸರಿಗೆ ಈ ಗುಟ್ಕಾ ಕಳ್ಳರ ಗ್ಯಾಂಗ್ ಹಿಡಿಯೋದು ಸವಾಲಾಗಿತ್ತು.

ರಾಣೆಬೆನ್ನೂರಿನಲ್ಲಿ ಕದ್ದು ತಮಿಳುನಾಡಿನಲ್ಲಿ ಸಿಕ್ಕಿಬಿದ್ರು:  ಗುಟ್ಕಾ ಕದ್ದು ಕೊಂಡೊಯ್ಯಲು ಲಾರಿ ಕೂಡಾ ಕಳ್ಳತನ ಮಾಡಿತ್ತು ಈ ಗ್ಯಾಂಗ್. ಸಾಗಿಸೋ ಲಾರಿನೂ ಕದ್ದು ಅದರಲ್ಲಿಯೇ ಗುಟ್ಕಾ ಸಾಗಿಸಿದ ಐನಾತಿ ಗ್ಯಾಂಗ್ ಇದು. ಕೊನೆಗೂ ಪೊಲೀಸರು ಈ ಗುಟ್ಕಾ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ. ಭಗವಾನ್ ರಾಮ್, ರತ್ನಾರಾಮ್, ಧಾನಾರಾಮ್, ಅರ್ಜುನ್ ಇವರೇ ಈ ಖತರ್ನಾಕ್ ಕಳ್ಳರು. ಎಲ್ಲರೂ ರಾಜಸ್ಥಾನ ಮೂಲದವರು. ಮೈಸೂರು ಬಳಿಯ ಭುಗತ್ ಗಲ್ಲಿಯಲ್ಲಿ ವಾಸವಾಗಿದ್ದರು. ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಲಾರಿ ಕಳ್ಳತನ ಮಾಡಿದ್ದ ಕಳ್ಳರು ನೇರವಾಗಿ ರಾಣೆಬೆನ್ನೂರಿನಲ್ಲಿ ಗುಟ್ಕಾ ಬಾಕ್ಸ್ ಗಳನ್ನು ಕದ್ದು ಲೋಡ್ ಮಾಡಿದ್ದರು.

ಕೋಟ್ಯಾಂತರ ಮೌಲ್ಯದ ಗುಟ್ಕಾ ಕದ್ದು ತಮಿಳುನಾಡಿನಲ್ಲಿ ದುಪ್ಪಟ್ಟು ಲಾಭಕ್ಕೆ ಮಾರಬಹುದು ಎಂಬ ಸ್ಕೆಚ್ ಹಾಕಿದ್ದರು. ಪಕ್ಕದ ತಮಿಳುನಾಡು ರಾಜ್ಯದಲ್ಲಿ ಗುಟ್ಕಾ ಬ್ಯಾನ್ ಆಗಿರೋ ಕಾರಣಕ್ಕೆ  ಕಾನೂನು ಬಾಹಿರವಾಗಿ ಡಬಲ್ ರೇಟ್ ಗೆ ಗುಟ್ಕಾ ಮಾರಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದರು. ಈ ಕಳ್ಳರ ಗ್ಯಾಂಗ್ ಗೆ ರಾಣೆಬೆನ್ನೂರು ಪಟ್ಟಣದಲ್ಲಿದ್ದ ಪ್ರಕಾಶ್ ಟೀ  ಡಿಪೋ ಅಂಗಡಿಯಲ್ಲಿ ಗುಟ್ಕಾ ಬಾಕ್ಸ್ ಇರೋ ಮಾಹಿತಿ ಕೊಟ್ಟಿದ್ದು ಚಂಪಾಲಾಲ್ ಎಂಬ ಮತ್ತೊಬ್ಬ ಐನಾತಿ. ಚಂಪಾಲಾಲ್ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಪರಾರಿಯಾಗಿರೋ ಚಂಪಾಲಾಲ್ ಗಾಗಿ ಪೋಲೀಸರು ಹುಡುಕಾಟ ನಡೆಸಿದ್ಧಾರೆ.

ಸರ್ಕಾರಿ ಶಾಲಾ ಮಕ್ಕಳ ಮೊಟ್ಟೆಗೆ ಕನ್ನ ಹಾಕಿದ ಕಾಂಗ್ರೆಸ್‌ : ವಾರಕ್ಕೊಂದೇ ಮೊಟ್ಟೆ

ಮೊಬೈಲ್‌ ಬಳಸದೇ ಲಾರಿಯಲ್ಲಿ ಗುಟ್ಕಾ ಸಾಗಣೆ: ಬ್ಯಾಡಗಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಿಂತಿದ್ದ ಐಶರ್ ಕ್ಯಾಂಟರ್ ವಾಹನ ಕದ್ದು ಅದರಲ್ಲೇ ಗುಟ್ಕಾ  ಬಾಕ್ಸ್ ಸಾಗಿಸಿದ್ದರು. ಮೊಬೈಲ್, ಇಂಟರ್ನೆಟ್ ಯಾವುದನ್ನೂ ಬಳಸದೇ, ಪೊಲೀಸರಿಗೆ ಯಾವುದೇ ಸುಳಿವು ಬಿಟ್ಟು ಕೊಡದೇ ಗುಟ್ಕಾ ಕಳ್ಳರು ಪರಾರಿಯಾಗಿದ್ದರು. ಒಂದು ವಾರ ಮನೆಗೂ ಹೋಗದೇ ಕಳ್ಳರನ್ನು ಹಿಡಿಯಲೇ ಬೇಕು ಎಂದು‌ ಪಣತೊಟ್ಟಿದ್ದ ಪೊಲೀಸರು, ರಾಣೆಬೆನ್ನೂರಿನಿಂದ ಮೈಸೂರಿನವರಗೆ ಹೈವೆಗಳಲ್ಲಿರುವ ಸಿಸಿ ಟಿವಿ ಪರಿಶೀಲನೆ ಮಾಡಿದ್ರು. ಕೊನೆಗೆ  ಹೇಗೋ ಈ ಕಳ್ಳರ ಗ್ಯಾಂಗ್ ಪತ್ತೆ ಹಚ್ಚಿ ಪೊಲೀಸರು ಹೆಡೆಮರಿಕಟ್ಟಿದ್ದಾರೆ. ಈಗಾಗಲೇ ಕದ್ದ ಗುಟ್ಕಾ ಬಾಕ್ಸ್ ಗಳಲ್ಲಿ ಶೇ.25 ಗುಟ್ಕಾ ತಮಿಳುನಾಡಿನಲ್ಲೇ ಮಾರಾಟ ಮಾಡಿದ್ದಾರೆ. ತನಿಖೆಯ ಜಾಡು ಹಿಡಿದಿದ್ದ ಪೊಲೀಸರಿಗೆ ಕಳ್ಳರು ಸಿಕ್ಕಿ ಬಿದ್ದಿದ್ದಾರೆ.

click me!