Crime News: ಪ್ರತ್ಯೇಕ ಪ್ರಕರಣ, ಮಹಿಳೆಯನ್ನು ಮಂಚಕ್ಕೆ ಕರೆದ CPI, ಮದುವೆಯಾಗುವುದಾಗಿ ವಂಚಿಸಿದ PSI

By Suvarna News  |  First Published Dec 19, 2021, 3:55 PM IST

* ಕಂಪ್ಲೇಂಟ್ ಕೊಡೋಕೆ ಬಂದ ಮಹಿಳೆಯರೇ ಈತನ ಟಾರ್ಗೆಟ್
* ಮಹಿಳೆಯನ್ನು ಮಂಚಕ್ಕೆ ಕರೆದ  CPI ವಿಡಿಯೋ ವೈರಲ್
* ಮದುವೆಯಾಗುವುದಾಗಿ ಮಹಿಳೆಯರಿಗೆ PSI ವಂಚನೆ


ಹಾವೇರಿ, (ಡಿ.19): ಓರ್ಬ ಸಿಪಿಐ ದೂರು ನೀಡಲು ಬಂದ ಮಹಿಳೆಯನ್ನು ಮಂಚಕ್ಕೆ ಕರೆದಿದ್ದಾನೆ. ಮತ್ತೊಂದೆಡೆ ಮದುವೆಯಾಗುವುದಾಗಿ ಪಿಎಸ್‌ಐ ಮೋಸ ಮಾಡಿ ಪರಾರಿಯಾಗಿದ್ದಾನೆ, ಈ ಎರಡೂ ಪ್ರತ್ಯೇಕ ಘಟನೆಗಳಾಗಿದ್ದು, ಈ ಇಬ್ಬರು ಪೊಲೀಸ್ ಅಧಿಕಾರಿಗಳ ಕರ್ಮಕಾಂಡ ಬಯಲಿಗೆ ಬಿದ್ದಿದೆ.

ಮಂಚಕ್ಕೆ ಕರೆದ ಸಿಪಿಐ
ಠಾಣೆಗೆ ದೂರು ನೀಡಲು ಬರುವ ಮಹಿಳೆಯರ ಫೋನ್​ ಸಂಖ್ಯೆ ತೆಗೆದುಕೊಂಡು ವಿಡಿಯೋ ಕರೆ(Video Cal) ಮಾಡಿ ಅವರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಸಿಪಿಐ (CPI)ನನ್ನು ಅಮಾನತು(suspend) ಮಾಡಲಾಗಿದೆ.

Latest Videos

undefined

Asianet Suvarna FIR: ಅವಳು ಬೇಕು, ಅವಳ ಮಗಳು ಬೇಕು ಎಂದವ ಹೆಣವಾದ

ಮಹಿಳಾ ಪೊಲೀಸ್ ಠಾಣೆ ಸಿಪಿಐ ಚಿದಾನಂದ ದೂರು ನೀಡಲು ಬರುವ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವುದು ಅಲ್ಲದೇ ಅವರ ಜೊತೆಗೆ ವೀಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದನು. ಪ್ರಸ್ತುತ ಆ ವೀಡಿಯೋಗಳು ಸಹ ವೈರಲ್ ಆಗಿವೆ..

ಠಾಣೆಗೆ ಬಂದ ಮಹಿಳೆಯರ ನಂಬರ್ ತೆಗೆದುಕೊಂಡು ಅವರಿಗೆ ಚಿದಾನಂದ ಬಾತ್ ರೂಂನಲ್ಲಿದ್ದಾಗ ವೀಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದನು. ಮಹಿಳೆಯರ ಜೊತೆಗೆ ಫೋನ್ ನಲ್ಲಿ ಕೆಟ್ಟದಾಗಿ ಮಾತನಾಡಿದ್ದು, ಓರ್ವ ಮಹಿಳೆಗೆ ಮಂಚಕ್ಕೆ ಕರೆದಿದ್ದಾನೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಈ ಹಿನ್ನೆಲೆ ಈತನ ವಿರುದ್ಧ ಎಸ್‍ಪಿ, ಪೂರ್ವ ವಲಯ ಐಜಿಪಿ ರವಿ.ಎಸ್ ಸೇರಿದಂತೆ ಹಲವರಿಗೆ ಮಹಿಳೆಯರು ದೂರು ನೀಡಿದ್ದು, ಅವರ ದೂರನ್ನು ಆಧರಿಸಿ ಪೂರ್ವ ವಲಯ ಐಜಿಪಿ ಹಾಗೂ ಅಧಿಕಾರಿಗಳು ಚಿದಾನಂದ ಬಗ್ಗೆ ತನಿಖೆ ಮಾಡಿದ್ದಾರೆ. ನಂತರ ಆತನನ್ನು ಅಮಾನತು ಮಾಡಲು ಆದೇಶ ಹೊರಡಿಸಿದ್ದಾರೆ.

Living Together: ಮದುವೆಗೆ ಒತ್ತಾಯ ಮಾಡಿದ ಪ್ರೇಯಸಿಯನ್ನೇ ಕೊಂದ ಶಿಕ್ಷಕ

ಮದುವೆಯಾಗುವುದಾಗಿ ಮಹಿಳೆಯರಿಗೆ PSI ವಂಚನೆ
ಪಿಎಸ್ಐ ಮಹಿಳೆಯರಿಗೆ ಮದುವೆಯಾಗುವುದಾಗಿ ನಂಬಿಸಿ, ವಂಚಿಸಿದ ಆರೋಪ ಕೇಳಿಬಂದಿದೆ. ಪಿಎಸ್ಐ ಮುತ್ತಪ್ಪ ವಿರುದ್ಧ ಹಲವು ಮಹಿಳೆಯರು ಆರೋಪಿಸಿದ್ದಾರೆ. ಕೊಪ್ಪಳ ಫಿಂಗರ್ ಪ್ರಿಂಟ್ ವಿಭಾಗದ ಪಿಎಸ್ಐ ಮುತ್ತಪ್ಪ ಬಡಿಗೇರ್ ವಿರುದ್ಧ ಮೋಸ ಹೋದವರು ಎಸ್​ಪಿ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆ ಪಿಎಸ್ಐ ವಿರುದ್ಧ ಕ್ರಮಕ್ಕೆ ಫಿಂಗರ್ ಪ್ರಿಂಟ್ ವಿಭಾಗದ ಎಡಿಜಿಗೆ ಪತ್ರ ಬರೆಯಲಾಗಿದೆ. ಈ ಹಿಂದೆ ಮುತ್ತಪ್ಪನಿಗೆ ಕೊಪ್ಪಳ ಎಸ್​ಪಿ ಟಿ.ಶ್ರೀಧರ್ ಎರಡು ಬಾರಿ ಎಚ್ಚರಿಕೆ ನೀಡಲಾಗಿತ್ತು ಎಂದು ತಿಳಿದುಬಂದಿದೆ.

ಪಿಎಸ್ಐ ಸುಮಾರು ನಾಲ್ಕೈದು ಮಹಿಳೆಯರಿಗೆ ಮೋಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಎಸ್​ಪಿ ಕಚೇರಿಗೆ ಆಗಮಿಸಿ ಮಹಿಳೆಯರು ನ್ಯಾಯ ಕೊಡಿಸುವಂತೆ ಕೇಳಿದ್ದಾರೆ. ವಧು ನೋಡುವ ನೆಪದಲ್ಲಿ ಬಂದು ಮುತ್ತಪ್ಪ ಯಾಮಾರಿಸುತ್ತಿದ್ದ ಎಂದು ಹೇಳಲಾಗುತ್ತಿದೆ.  ಮಹಿಳೆಯೊಬ್ಬರ ಕುಟುಂಬದಿಂದ ಎಸ್​ಪಿ ಅವರಿಗೆ ಮೌಖಿಕ ದೂರು ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಎಸ್​ಪಿ ಕಚೇರಿಯಿಂದ ಮುತ್ತಣ್ಣ ಬಡಿಗೇರ್ ಪರಾರಿಯಾಗಿದ್ದಾರೆ.

ಮಹಿಳೆಯರು ಆರೋಪಿಸುತ್ತಿದ್ದಂತೆಯೇ ಮುತ್ತಣ್ಣ ಬಡಿಗೇರ್ ಎಸ್ಕೇಪ್‌ ಆಗಿದ್ದು, ಅವರ ವಿರುದ್ಧ ಇನ್ನಷ್ಟು ಸಂದೇಹ ಬಲವಾಗಿದೆ.  ಸದ್ಯ ಯಾವುದೇ ಲಿಖಿತ ದೂರು ಬರಲಿಲ್ಲ. ದೂರು ಬಂದರೆ, ಕಾನೂನುಬದ್ಧವಾಗಿ ಕ್ರಮ ಜರುಗಿಸುವುದಾಗಿ ಶ್ರೀಧರ್‌ ಹೇಳಿದ್ದಾರೆ.
 

click me!