Rohini Court Blast: ನೆರೆ ಮನೆಯ ವಕೀಲನನ್ನು ಕೊಲ್ಲಲು ಕೋರ್ಟ್‌ನಲ್ಲಿ ಬಾಂಬ್‌ ಇಟ್ಟ DRDO ವಿಜ್ಞಾನಿ!

By Suvarna News  |  First Published Dec 19, 2021, 1:52 PM IST

*ಡಿಸೆಂಬರ್ 9 ರಂದು ರೋಹಿಣಿ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ
*47 ವರ್ಷದ DRDO ವಿಜ್ಞಾನಿ ಭರತ್ ಭೂಷಣ್  ಬಂಧಿಸಿದ ಪೋಲಿಸರು!
*ನೆರೆ ಮನೆಯ ವಕೀಲನನ್ನು ಕೊಲ್ಲಲು ಕಟಾರಿಯಾ ಮಾಸ್ಟರ್ ಪ್ಲ್ಯಾನ್!‌
*10 ವರ್ಷಗಳ ಹಿಂದೆ ಆರಂಭವಾಗಿತ್ತು ವಕೀಲನ ಕಾನೂನು ಹೋರಾಟ!


ನವದೆಹಲಿ(ಡಿ. 19): ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (DRDO) ದಲ್ಲಿ ಕೆಲಸ ಮಾಡುತ್ತಿರುವ 47 ವರ್ಷದ ವಿಜ್ಞಾನಿ ಭರತ್ ಭೂಷಣ್ ಕಟಾರಿಯಾ (Bharat Bhushan Kataria) ಅವರನ್ನು ಡಿಸೆಂಬರ್ 9 ರಂದು ರೋಹಿಣಿ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟಿಸಿದ  (Rohini Court Bomb Blast) ಆರೋಪದಲ್ಲಿ ಶುಕ್ರವಾರ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಶನಿವಾರ ತಿಳಿಸಿದ್ದಾರೆ. ಸೆರೆಮನೆವಾಸ ಅನುಭವಿಸುವ ಭಯ, ಹೆಂಡತಿಯ ಅನಾರೋಗ್ಯ ಕಾರಣ ಸೇರಿದಂತೆ ಹಲವು ಒತ್ತಡಗಳಿಂದಾಗಿ ವಿಜ್ಞಾನಿ ಹೀಗೆ ಮಾಡಿದ್ದಾರೆ ಎಂದು ಪೋಲಿಸ್‌ ಮೂಲಗಳು ತಿಳಿಸಿವೆ.

ಕಟಾರಿಯಾವರೊಂದಿಗೆ ಸುಮಾರು ಒಂದು ದಶಕದ ಕಾಲ "ಸುದೀರ್ಘ ಕಾನೂನು ಹೋರಾಟಗಳಲ್ಲಿ" ತೊಡಗಿದ್ದ ತನ್ನ ಹಳೆಯ ನೆರೆಹೊರೆಯವರಾದ ಅಮಿತ್ ವಶಿಷ್ಟ್ ಅವರನ್ನು ಕಟಾರಿಯಾ ಕೊಲ್ಲಲು ಬಯಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಿಜ್ಞಾನಿ ಸುಮಾರು ಒಂದು ತಿಂಗಳ ಕಾಲ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಮೂಲಕ ಬಾಂಬ್ ದಾಳಿಯನ್ನು ಯೋಜಿಸಿದ್ದರು ಎಂದು ಪೋಲಿಸರು  ಹೇಳಿದ್ದಾರೆ.

Latest Videos

undefined

ಡಿಸೆಂಬರ್‌ 9ರ ಸಂಜೆ ವಿಚಾರಣೆಗೆ ಹಾಜರಾಗಬೇಕಿದ್ದ ವಶಿಷ್ಟ್! 

ವಶಿಷ್ಟ್ ಅವರು ನ್ಯಾಯಾಲಯದ ಕೊಠಡಿ ಸಂಖ್ಯೆ 102 ನಲ್ಲಿದ್ದರು, ಕಟಾರಿಯಾ ಅವರು ವಕೀಲರ ಕುರ್ಚಿಯ ಹಿಂದೆ ಕಪ್ಪು ಲ್ಯಾಪ್‌ಟಾಪ್ ಬ್ಯಾಗ್‌ನಲ್ಲಿ ಇಒರಿಸಲಾಗಿದ್ದ ಸ್ಟೀಲ್ ಟಿಫಿನ್ ಬಾಕ್ಸ್‌ನಲ್ಲಿ ಬಾಂಬ್  ಇಟ್ಟಿದ್ದರು. ನಂತರ ರಿಮೋಟ್ ಕಂಟ್ರೋಲ್ ಬಳಸಿ ಬಾಂಬ್ ಸ್ಫೋಟಿಸಿದರು. ಆ ದಿನ ಸಂಜೆ ಇಬ್ಬರೂ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಬೇಕಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಶಿಷ್ಟ್ ಅವರ ಕಾಲಿಗೆ ಆಘಾತ ಮತ್ತು ಸಣ್ಣ ಗಾಯವಾಗಿದ್ದು, ನ್ಯಾಯಾಲಯದಲ್ಲಿ ಹಾಜರಿದ್ದ ಕಾನ್‌ಸ್ಟೆಬಲ್ ರಾಜೀವ್ ಅವರ ಎಡ ಭುಜ ಮತ್ತು ಪಾದಕ್ಕೆ ಗಾಯವಾಗಿದೆ. ಸುಧಾರಿತ ಬಾಂಬ್ ಅನ್ನು ಸರಿಯಾಗಿ ಜೋಡಿಸದ ಕಾರಣ, ಸ್ಫೋಟವು ಡಿಟೋನೇಟರ್, 12 ವೋಲ್ಟ್ ದ್ವಿಚಕ್ರ  ವೀಲ್ಹರ್ ಬ್ಯಾಟರಿಯಲ್ಲಿ ಮಾತ್ರ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

DRDO ವಿಜ್ಞಾನಿ ಈ ವರ್ತನೆಗೆ ಕಾರಣವೇನು?

ವಿಜ್ಞಾನಿ ಭರತ್ ಭೂಷಣ್ ಕಟಾರಿಯಾ ಅವರ ನೆರೆಹೊರೆಯವರಾದ ಅಮಿತ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.  ನವೆಂಬರ್ 1 ರಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು "ವಿಚಾರಣೆಯ ಅನಗತ್ಯ ಮುಂದೂಡಿಕೆ" ಗಾಗಿ ಕಟಾರಿಯಾಗೆ 1,000 ರೂ. ದಂಡ ವಿಧಿಸಿತ್ತು. 

ನ್ಯಾಯಾಲಯಕ್ಕೆ ಹಾಜರಾಗದಿದ್ದಕ್ಕಾಗಿ ದಂಡವನ್ನು ವಿಧಿಸಿದ್ದು, ಅವರ ಪತ್ನಿಗೆ ಕ್ಯಾನ್ಸರ್ ಇರುವುದು, 50,000 ಬಾಡಿಗೆ ನೀಡಬೇಕಾಗಿರುವುದು ಸೇರಿದಂತೆ  ಕ್ರಿಮಿನಲ್ ಆರೋಪಗಳನ್ನು ಎದುರಿಸುವ ಸಾಧ್ಯತೆಗಳು ವಿಜ್ಞಾನಿ ಭರತ್ ಭೂಷಣ್ ಕಾನೂನು ಕೈಗೆತ್ತಿಕೊಳ್ಳವಂತೆ ಮಾಡಿವೆ. ಇದು ನೆರೆಹೊರೆಯವರನ್ನು ಕೊಲ್ಲಲು ರೋಹಿಣಿ ನ್ಯಾಯಾಲಯದ ಒಳಗೆ ಬಾಂಬ್ ಇಡುವಂತೆ ಪ್ರೇರೇಪಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

10 ವರ್ಷಗಳ ಹಿಂದೆ ಕಾನೂನು ಹೋರಾಟ ಆರಂಭ!

"ಮೂರು ಅಂತಸ್ತಿನ ಕಟ್ಟಡದಲ್ಲಿ ಲಿಫ್ಟ್ ಅಳವಡಿಸುವ ವಿಚಾರವಾಗಿ ಕಟಾರಿಯಾ ಮತ್ತು ಅವರ ನೆರೆಯ ವಕೀಲ ಅಮಿತ್ ವಶಿಷ್ಟ್ ನಡುವೆ 10 ವರ್ಷಗಳ ಹಿಂದೆ ಕಾನೂನು ಹೋರಾಟ ಆರಂಭವಾಗಿತ್ತು ಎಂದು ಮೂಲಗಳು ತಿಳಿಸಿವೆ. ಅವರು ದೂರು ಪ್ರತಿ ದೂರುಗಳನ್ನು ಸಲ್ಲಿಸಲು ಪ್ರಾರಂಭಿಸಿದಾಗ ಅದು ಇನ್ನೂ ಅತಿರೇಕಕ್ಕೆ ತಿರುಗಿದೆ. ಕಟಾರಿಯಾ ಅವರು ತಮ್ಮ ನೆರೆಹೊರೆಯವರಿಂದ ನೀರಿನ ಟ್ಯಾಂಕ್ ಅನ್ನು ಸ್ಥಾಪಿಸುವ ಬಗ್ಗೆಯೂ ಕಾನೂನು ಮೊಕದ್ದಮೆಯನ್ನು ಎದುರಿಸಿದ್ದರು. ಜೊತೆಗೆ ಅವರ ಮೇಲೆ ಹಲವಾರು ಆರ್‌ಟಿಐಗಳು ಮತ್ತು ಅವರ ಕೆಲಸದ ಸ್ಥಳದಲ್ಲಿ ದೂರುಗಳನ್ನು ದಾಖಲಾಗಿವೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಯೂಟ್ಯೂಬ್‌ನಲ್ಲಿ ಬಾಂಬ್ ತಯಾರಿಸಲು ಕಲಿತ ವಿಜ್ಞಾನಿ!

"ತಾನು ಬೇಸತ್ತು ಮೂರು ವರ್ಷಗಳ ಹಿಂದೆ ತನ್ನ ಮನೆಯನ್ನು ತೊರೆದು ಅದೇ ಪ್ರದೇಶದಲ್ಲಿ ಬಾಡಿಗೆಗೆ ವಾಸಕ್ಕೆ ಹೋಗಿದ್ದೆ ಎಂದು ಕಟಾರಿಯಾ ಪೊಲೀಸರಿಗೆ ತಿಳಿಸಿದ್ದಾರೆ. ಅವರು 50,000 ರೂ ಬಾಡಿಗೆ ನೀಡುತ್ತಿದ್ದರು. ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಅವರು ಕಚೇರಿಯಿಂದ ರಜೆ ಕೂಡ ಸಿಗದ ಕಾರಣ ಅವರು ಹೆಚ್ಚು ಹತಾಶೆಗೊಂಡರು, ”ಎಂದು ಮೂಲಗಳು ತಿಳಿಸಿವೆ.

 "ಅವರು ಇ-ಕಾಮರ್ಸ್ ವೆಬ್‌ಸೈಟ್‌ಗಳಿಂದ ಹಲವಾರು ಸಾಧನಗಳನ್ನು ಮತ್ತು ಸ್ಥಳೀಯ ಅಂಗಡಿಯಿಂದ ಅಮೋನಿಯಂ ನೈಟ್ರೇಟ್ ಅನ್ನು ಆರ್ಡರ್ ಮಾಡಿದ್ದಾರೆ. ಇದಕ್ಕಾಗಿ ಅವರು ಸುಮಾರು 5,000 ರೂಪಾಯಿ ಖರ್ಚು ಮಾಡಿದರು ಮತ್ತು ಯೂಟ್ಯೂಬ್ ಸೇರಿದಂತೆ ಆನ್‌ಲೈನ್‌ನಲ್ಲಿ ಬಾಂಬ್ ತಯಾರಿಸುವುದನ್ನು ಕಲಿತಿದ್ದಾರೆ" ಎಂದು ತಿಳಿದುಬಂದಿದೆ.

ಇದನ್ನೂ ಓದಿ:

1) Police abuse Women: ಸಂತ್ರಸ್ತೆಯ ತಾಯಿಯನ್ನೇ ಬೆತ್ತಲಾಗಲು ಹೇಳಿದ, ಪೊಲೀಸ್ ಕಾಮಪುರಾಣ

2) Tumakuru Family Suicide : ತುಮಕೂರು ಎಇಇ ಕುಟುಂಬ ಆತ್ಮಹತ್ಯೆಗೆ ಬೇರೆ ಟ್ವಿಸ್ಟ್

3) Bengaluru Crime: ಎಣ್ಣೆ ಹಾಕಲು ನೂರು ರೂ. ಕೇಳಿದವನ ಕೊಲೆ ಮಾಡಿದ ಗೆಳೆಯ!

click me!