Viral Video: ತೀರದ ದಾಹ,  ಮದುವೆ ಮಂಟಪದಲ್ಲೇ ಮದುಮಗನಿಗೆ ಬಿಸಿ ಬಿಸಿ ಕಜ್ಜಾಯ!

Published : Dec 19, 2021, 02:31 PM IST
Viral Video: ತೀರದ ದಾಹ,  ಮದುವೆ ಮಂಟಪದಲ್ಲೇ ಮದುಮಗನಿಗೆ ಬಿಸಿ ಬಿಸಿ ಕಜ್ಜಾಯ!

ಸಾರಾಂಶ

* ಮದುವೆ ಮನೆಯಲ್ಲಿ ಮದುಮಗನೆ ಮೇಲೆಯೇ ಹಲ್ಲೆ * ಎಷ್ಟು ಹಣ ಕೊಟ್ಟರೂ ಇನ್ನು ಬೇಕೆಂದು ಪಟ್ಟು ಹಿಡಿದಿದ್ದ * ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ * ವರನ ವಿರುದ್ಧವೇ ವರದಕ್ಷಿಣೆ ಕಿರುಕುಳ ಪ್ರಕರಣ

ಗಜಿಯಾಬಾದ್(ಡಿ. 19)   ವರದಕ್ಷಿಣೆಗೆ (Dowry)ಹೆಚ್ಚಿನ ಡಿಮ್ಯಾಂಡ್ ಮಾಡಿದ ಮಹಾಪುರುಷನಿಗೆ ಮದುವೆ (Marriage) ಮಂಟಪದಲ್ಲಿಯೇ ಬಿಸಿ ಬಿಸಿ ಕಜ್ಜಾಯ ಸಿಕ್ಕಿದೆ.  ಮದುಮಗನ ಮೇಲೆ ವಧುವಿನ (Bride) ಸಂಬಂಧಿಕರು ಎರಗಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ (Uttar Pradesh)ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್  ನಿಂದ ಘಟನೆ ವರದಿಯಾಗಿದೆ. ಮದುವೆಯಾಗಬೇಕಿದ್ದ ವರ ಹೆಚ್ಚಿನ ವರದಕ್ಷಿಣೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ರೊಚ್ಚಿಗೆದ್ದ ವಧುವಿನ ಕುಟುಂಬಸ್ಥರು ಮದುವೆ ನಡೆಯುತ್ತಿದ್ದ ಸಾಹಿಬಾಬಾದ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿಯೇ ವರನಿಗೆ  ಕಜ್ಜಾಯ (Attack) ನೀಡಿದ್ದಾರೆ. ವರನಿಗೆ ಮಾತನಾಡಲು ಬಿಡದೆ ಹಲ್ಲೆ ಮಾಡಲಾಗಿದೆ. ವರನ ಸಂಬಂಧಿ ಮಹಿಳೆಯೊಬ್ಬರು ಕೊನೆಗೆ ಆತನ ರಕ್ಷಣೆ ಮಾಡಿದ್ದಾರೆ. ಇನ್ನೊಂದು ಕಡೆ ವರನ ವಿರುದ್ಧ ವರದಕ್ಷಿಣೆ ಬೇಡಿಕೆ ದೂರು ದಾಖಲಾಗಿದೆ.

ಕುದುರೆ ಏರಿ ಮದುವೆ ಮಂಟಪಕ್ಕೆ ಬಂದ ವಧು

10  ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ: ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿರುವಂತೆ ವರ ಹತ್ತು ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದ.  ಹಣ ಕೊಡಿ ಇಲ್ಲವಾದರೆ ಮದುವೆ ಕ್ಯಾನ್ಸಲ್ ಮಾಡಬೇಕಾಗುತ್ತದೆ ಎಂದು  ಬೆದರಿಕೆ ಹಾಕಿದ್ದ.

ಈಗಾಗಲೇ ವಧುವಿನ ಕಡೆಯವರು ಮೂರು ಲಕ್ಷ ನಗದು ಮತ್ತು ಒಂದು ಲಕ್ಷ ಮೌಲ್ಯದ ಆಭರಣ ನೀಡಿದ್ದರು.  ಆದರೂ ಹಣದ ದಾಹ ಈತಜಿಗೆ ಇಂಗಿರಲಿಲ್ಲ. ವರನ ಕುಟುಂಬಸ್ಥರು ಹಣಕ್ಕೆ ಬೇಡಿಕೆ ಇಡುತ್ತಲೇ ಬಂದಿದ್ದರು. ಮದುವೆ ದಿನವೇ ವಿಚಾರ ಸ್ಫೋಟವಾಗಿದೆ.

ಈಗಾಗಲೇ ಈ ಮಹಾಪುರುಷ ಮೂರು ಮದುವೆಯಾಗಿದ್ದಾನೆ. ಈತನ  ವಂಚನೆ ಈಗ ಗೊತ್ತಾಯಿತು ಎಂದು ವಧುವಿನ ಕುಟುಂಬದವರು ಆರೋಪಿಸಿದ್ದಾರೆ. ಆಗ್ರಾದ ಮುಜಾಮಿಲ್  ವರ ಇದೀಗ ಪೊಲೀಸರ ವಿಚಾರಣೆ ಎದುರಿಸಬೇಕಾಗಿದೆ.

ಮದುಮಗನನ್ನು ವಧುವಿನ ಕಡೆಯವರು ಮದುವೆ ಮಂಟಪದಲ್ಲಿ ಥಳಿಸಿರುವ ವಿಡಿಯೋವನ್ನ, ಮದುವೆಗೆ ಬಂದಿದ್ದವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.  ಕ್ಷಣಮಾತ್ರದಲ್ಲಿ ವಿಡಿಯೋ ವೈರಲ್ ಆಗಿದ್ದು ಪರ ವಿರೋಧದ ಅಭಿಪ್ರಾಯಗಳು ಕೇಳಿ ಬಂದಿವೆ. ಏನೇ ಇದ್ದರೂ ಹಲ್ಲೆ ಮಾಡಿದ್ದು ತಪ್ಪು ಎಂದು ಹಲವರು ವಾದ ಮುಂದಿಟ್ಟಿದ್ದಾರೆ. 

Viral Video: ಕುಸಿದು ಬಿತ್ತು ವಧುವರರಿದ್ದ ಎಲವೇಟೆಡ್‌ ಮದುವೆ ಮಂಟಪ

ಭೋಪಾಲ್ ನಿಂದ ವಿಚಿತ್ರ ಪ್ರಕರಣ:  ಭೋಪಾಲ್‌ನಲ್ಲಿ (Bhopal) ಪತಿ-ಪತ್ನಿಯರ ನಡುವಿನ ಜಗಳದ ವಿಭಿನ್ನ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ತನ್ನ ಮನೆಯಿಂದ ಸಿಕ್ಕ ಕಾರು ಮತ್ತಿತರ ವಸ್ತುಗಳನ್ನು ತೆಗೆದುಕೊಂಡು ಹೋಗಲು ಪತಿ ನಿರಾಕರಿಸಿ ಕಾರಣಕ್ಕೆ ಕೋಪಗೊಂಡ ಪತ್ನಿ ಈ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಈ ವಿಚಾರವಾಗಿ ಜಗಳ ಹೆಚ್ಚಾಗಿದ್ದು, ಪತ್ನಿ ಅತ್ತೆಯ ಮನೆಗೆ ಹೋಗಲು ಮುಂದಾಗುತ್ತಿಲ್ಲ. ಪತ್ನಿಯ ವರದಕ್ಷಿಣೆ (Dowry) ಪಡೆಯಬೇಕೆಂಬ ಒತ್ತಾಯ ಇದೀಗ ಇಡೀ ವಿಷಯವನ್ನು ನ್ಯಾಯಾಲಯದ ಮೆಟ್ಟಿಲೇರಿಸಿದೆ. ಪತ್ನಿಯನ್ನು ಮನೆಗೆ ಕಳುಹಿಸುವಂತೆ ಪತಿ ಹಿಂದೂ ವಿವಾಹ ಕಾಯ್ದೆಯ (Hindu Marriage Act) ಸೆಕ್ಷನ್ 9 ರ ಅಡಿಯಲ್ಲಿ ದೂರು ದಾಖಲಿಸಿದ್ದರು.

ವಧು ದಕ್ಷಿಣೆ ಪ್ರಕರಣವೂ ಜೋರು: ವರ ದಕ್ಷಿಣೆ ಕಿರುಕುಳದಿಂದ ಹೆಣ್ಣುಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಬಗ್ಗೆ ದಿನನಿತ್ಯ ನೋಡುತ್ತಿರುತ್ತೇವೆ. ಆದರೆ ವಧು ದಕ್ಷಿಣೆ ಕಿರುಕುಳದಿಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರು.. ಡೆತ್ ನೋಟ್‌ನಲ್ಲಿ ಸಾವಿಗೆ ಹೆಂಡತಿ ಹಾಗೂ ಅತ್ತೆ ಮನೆಯವರ ಕಾಟವೇ ಕಾರಣ ಎಂದೂ ಬರೆದಿಡಲಾಗಿದೆ.

ಪುಣೆಯ ಗೋಖಲೆನಗರ ಪ್ರದೇಶದ ತನ್ನ ಮನೆಯಲ್ಲಿ ತನ್ನ 30 ರ ಹರೆಯದ ವ್ಯಕ್ತಿ ಸೋಮವಾರ ತನ್ನ ಪತ್ನಿ ಮತ್ತು ಅತ್ತೆ ಮಾವಂದಿರ ಮೇಲೆ ಡೆತ್ ನೊಟ್ ಬರೆದಿಟ್ಟು ಸುಸೈಡ್ ಮಾಡಿಕೊಂಡಿದ್ದ.

ಹೆಂಡತಿ ಮತ್ತು ಆಕೆಯ ಪೋಷಕರು ಮತ್ತು ಸಂಬಂಧಿಕರು 130,000 ತೆಗೆದುಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಮರಾಠಿಯಲ್ಲಿ ಡೆತ್ ನೋಟ್ ಎಂಬ ಶೀರ್ಷಿಕೆಯ ಅವನ ಪತ್ರದ ಒಂದು ಭಾಗವನ್ನು ಆಗಸ್ಟ್ 22, 2021 ರಂದು ಬರೆಯಲಾಗಿದೆ. ನನ್ನ ಮಗುವನ್ನು ನನ್ನಂತೆ ಭಾವಿಸಿ ಮತ್ತು ನನ್ನ ಮಗುವನ್ನು ನೋಡಿಕೊಳ್ಳಿ. ಇದಕ್ಕೆ ಕಾರಣರಾದವರಿಗೆ ಮಹಾರಾಷ್ಟ್ರ ಪೊಲೀಸರು ಕಠಿಣ ಶಿಕ್ಷೆ ವಿಧಿಸಬೇಕು  ಎಂದು ಕೇಳಿಕೊಂಡಿದ್ದ. 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ
ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!