ಕೊಡಗು ವಿದ್ಯಾರ್ಥಿನಿಯ ತಲೆ ಕಡಿದ ಆರೋಪಿ ಕಾಡಿನಲ್ಲಿ ಬಂಧನ, ಅಪ್ರಾಪ್ತೆಯ ರುಂಡಕ್ಕಾಗಿ ಪೊಲೀಸರ ಶೋಧ!

By Gowthami KFirst Published May 10, 2024, 5:03 PM IST
Highlights

ಎಸ್ಎಸ್ಎಲ್‌ಸಿಯಲ್ಲಿ ಪಾಸಾಗಿ ಸಂತಸದಲ್ಲಿದ್ದ ವಿದ್ಯಾರ್ಥಿನಿಯ ತಲೆ ಕಡಿದು ಪರಾರಿಯಾಗಿದ್ದ ಆರೋಪಿಯನ್ನು ಶನಿವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.  ಆದರೆ ಅಪ್ತಾಪ್ತೆಯ ರುಂಡ ಇನ್ನೂ ಪತ್ತೆಯಾಗಿಲ್ಲ.

ಮಡಿಕೇರಿ (ಮೇ.10): ಎಸ್ಎಸ್ಎಲ್‌ಸಿಯಲ್ಲಿ ಪಾಸಾದ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಸೂರ್ಲಬ್ಬಿ ಸರ್ಕಾರಿ ‌ಪ್ರೌಢಶಾಲೆಯ ಏಕೈಕ ವಿದ್ಯಾರ್ಥಿನಿ ಮೀನಾ (16) ತಲೆ ಕಡಿದು ಹತ್ಯೆ ಮಾಡಿದ ಆರೋಪಿ   ಪತ್ತೆಯಾಗಿದ್ದಾನೆ. ಬಾಲಕಿಯನ್ನು ತಲೆ ಕಡಿದು ಕೊಂದು ತಲೆಮರೆಸಿಕೊಂಡಿದ್ದ ಮೊಣ್ಣಂಡ ಪ್ರಕಾಶ್ ಯಾನೆ ಪಾಪು (34) ಆರೋಪಿಯನ್ನು ಪೊಲೀಸರು ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಮ್ಮಿಯಾಲದಲ್ಲಿ ಘಟನೆ ನಡೆದಿದೆ. ಆದರೆ ಯುವತಿಯ ರುಂಡ ಕಡಿದು ಆರೋಪಿ ತೆಗೆದುಕೊಂಡು ಹೋಗಿದ್ದ. ಆರೋಪಿ ಬಾಲಕಿಯ ರುಂಡ ಸಮೇತವಾಗಿ ಪರಾರಿ ಆಗುದ್ದನು. ಆದರೆ, ಕಳೆದ ಮೂರು ದಿನಗಳಿಂದ ನಿರಂತರವಾಗಿ ಆರೋಪಿಯ ಪತ್ತೆಗೆ ಶ್ವಾನದಳದ ಸಹಾಯದಿಂದ ಪೊಲೀಸರು ಹುಡುಕುವಾಗ ಆರೋಪಿ ಪ್ರಕಾಶ್ ಕಾಡಿನಲ್ಲಿ ಪತ್ತೆಯಾಗಿದ್ದಾನೆ. ಬೆಳಗ್ಗೆ ಆರೋಪಿಯನ್ನು ಸೋಮವಾರಪೇಟೆ ಠಾಣೆಗೆ ಕರೆದು ತರಲಾಗಿದೆ. ಆದರೆ, ಸದ್ಯ ಬಾಲಕಿಯ ರುಂಡ ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.

10ನೇ ತರಗತಿ ಪಾಸ್‌ ಆದ ಖುಷಿಯಲ್ಲಿದ್ದ ಬಾಲಕಿಯ ತಲೆ ಕಡಿದು ಹತ್ಯೆ! ರುಂಡಕ್ಕಾಗಿ ಪೊಲೀಸರ ತೀವ್ರ ಹುಡುಕಾಟ

ಘಟನೆ ಹಿನ್ನೆಲೆ:
ಅಪ್ರಾಪ್ತ ಬಾಲಕಿ ಮೀನಾಳ ಜೊತೆ ಆರೋಪಿ ಮೊಣ್ಣಂಡ ಪ್ರಕಾಶ್ ಮದುವೆಗೆ   ಮುಂದಾಗಿದ್ದ. ಹೀಗಾಗಿ ನಿಶ್ಚಿತಾರ್ಥಕ್ಕೆ ರೆಡಿಯಾಗಿದ್ದ. ಆದರೆ  ಬಾಲ್ಯವಿವಾಹದ ವಿಚಾರ ತಿಳಿದ ಸೋಮವಾರ ಪೇಟೆ ಪೋಲೀಸರು ಬಾಲಕಿಯ ನಿಶ್ಚಿತಾರ್ಥ ತಡೆದು ಬುದ್ದಿ ಹೇಳಿದ್ದರು. ಹೀಗಾಗಿ ಬಾಲಕಿಗೆ 18 ವರ್ಷ ಆಗುತ್ತಿದ್ದಂತೆ ಮದುವೆ ಮಾಡಲು  ಎರಡು ಕುಟುಂಬಗಳು ಮುಂದಾಗಿದ್ದವು. ಬಾಲಕಿಗೆ 18 ವರ್ಷ ಆಗದ ಹಿನ್ನೆಲೆಯಲ್ಲಿ ಮಾಹಿತಿ ತಿಳಿದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೌನ್ಸೆಲಿಂಗ್‌ ಮಾಡಿ, ಎಂಗೇಜ್ಮೆಂಟ್ ತಡೆದಿದ್ದರು.

ಇದರಿಂದ ತೀವ್ರ ಸಿಟ್ಟಿಗೆದ್ದ ಮೊಣ್ಣಂಡ ಪ್ರಕಾಶ್ ಬಾಲಕಿಯ ಮನೆಗೆ ಬಂದು ಜಗಳವಾಡಿದ್ದ. ಹತ್ಯೆಗೂ ಮುನ್ನ ಹುಡುಗಿಯ ಮನೆಗೆ ನುಗ್ಗಿದ್ದ ಪಾಪಿ ಪ್ರಕಾಶ್ ಹುಡುಗಿಯ ತಂದೆ ತಾಯಿಯೊಂದಿಗೆ ಕೂಡ ಗಲಾಟೆ ಮಾಡಿ ಅವರ ಮೇಲೆ ಕೂಡ ಹಲ್ಲೆ ನಡೆಸಿದ್ದ, ಬಳಿಕ ಬಾಲಕಿ ಮೀನಾಳನ್ನು 100 ಮೀಟರ್ ದೂರ ಬಲವಂತಾಗಿ ಮನೆಯಿಂದ ಎಳೆದೊಯ್ದು ಕುತ್ತಿಗೆ ಕಡಿದು ಹತ್ಯೆ ಮಾಡಿದ್ದಾನೆ. ಮಾತ್ರವಲ್ಲ ಮುಂಡವನ್ನು ಅಲ್ಲೇ ಬಿಟ್ಟು, ರುಂಡವನ್ನು ತೆಗೆದುಕೊಂಡು ಪರಾರಿಯಾಗಿದ್ದ.

ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಹಾಸನದಲ್ಲಿ ಮೂವರು ಅರೆಸ್ಟ್

ತಂದೆ ತಾಯಿ ಮುಂದೆಯೇ ಬಾಲಕಿಯನ್ನು ಎಳೆಯೊಯ್ದು ಅಪ್ರಾಪ್ತ ಬಾಲಕಿಯ ಹತ್ಯೆ ಮಾಡಿದ್ದು, ಈ ಭೀಕರ ಘಟನೆಗೆ  ಇಡೀ ಕೊಡಗು  ಬೆಚ್ಚಿ ಬಿದ್ದಿದೆ. ಅಪ್ರಾಪ್ತ ಬಾಲಕಿಯ ತಂದೆ ಸುಬ್ರಹ್ಮಣಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೂರ್ಲಬ್ಬಿ ಶಾಲೆಯ 10ನೇ ತರಗತಿಯ ಏಕೈಕ ವಿದ್ಯಾರ್ಥಿಯಾಗಿದ್ದ ಯು.ಎಸ್.ಮೀನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಳು. ಇದರಿಂದ ಶಾಲೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ಬಂದಂತಾಗಿತ್ತು. ಪರೀಕ್ಷೆಯಲ್ಲಿ ಪಾಸ್‌ ಆಗಿದ್ದರಿಂದ ಮೀನ ಮಾತ್ರವಲ್ಲದೆ ಇಡೀ ಗ್ರಾಮವೇ ಖುಷಿಯಲ್ಲಿತ್ತು. ಅಷ್ಟರಲ್ಲೇ ರಾತ್ರಿ ಅವಳನ್ನು ಭೀಕರವಾಗಿ ಹತ್ಯೆ ನಡೆದಿತ್ತು.

click me!