
ಹಾಸನ (ಮೇ 21): ಹೊಸದಾಗಿ ಮದುವೆಯಾದ ದಂಪತಿಯ ನಡುವೆ ಸರಸ ಸಲ್ಲಾಪದಿಂದ ಕೆನ್ನೆಗೆ ಸಿಹಿಮುತ್ತು ಕೊಡುವುದನ್ನು ನಾವು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ, ಇಲ್ಲೊಬ್ಬ ಕಿರಾತಕ ಗಂಡ ಹೆಂಡತಿಯ ಕೆನ್ನೆಯನ್ನೇ ಬ್ಲೇಡ್‌ನಿಂದ ಕೊಯ್ದಿದ್ದಾನೆ.
ಹೌದು, ಈ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ, ಅಗ್ರಹಾರ ಬಡಾವಣೆಯಲ್ಲಿ ನಡೆದಿದೆ. ಪತಿಯಿಂದ ಹಲ್ಲೆಗೊಳಗಾದ ಪತ್ನಿಯನ್ನು ಅನುಷಾ ಎಂದು ಹೇಳಲಾಗಿದೆ. ಪತ್ನಿ ಮೇಲೆ ಮನಬಂದಂತೆ ಥಳಿಸಿರುವ ಪತಿ ಶರತ್ ಆಗಿದ್ದಾನೆ. ಕ್ಷುಲಕ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು, ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಇನ್ನು ಪತಿಯಿಂದ ಹಲ್ಲೆಗೊಳಗಾಗಿ ಪತ್ನಿ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದಳು.
ಪೆನ್‌ಡ್ರೈವ್ ಆಡಿಯೋ ಕೇಸ್‌ನಲ್ಲಿ ಡಿ.ಕೆ.ಶಿವಕುಮಾರ್ ರಾಜೀನಾಮೆ ಕೊಡಬೇಕು; ಕುಮಾರಸ್ವಾಮಿ ಆಗ್ರಹ
ಆದರೆ, ತನ್ನ ಮೇಲೆ ದೌರ್ಜನ್ಯದ ಕುರಿತು ಪೊಲೀಸರಿಗೆ ದೂರು ಕೊಡಬಹುದು ಎಂಬ ಭಯದಿಂದ ಪತ್ನಿ ದಾಖಲಾಗಿದ್ದ ಆಸ್ಪತ್ರೆಗೆ ನುಗ್ಗಿದ ಕಿರಾತಕ ಪತಿರಾಯ ಆಕೆಯನ್ನು ಕೊಲ್ಲಲು ಯತ್ನಿಸಿದ್ದಾನೆ. ಈ ವೇಳೆ ದೊಡ್ಡ ಮಾರಕಾಸ್ತ್ರಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು ಬಿಡುವುದಿಲ್ಲ ಎಂದು ಅರಿತ ಆರೋಪಿ ಶರಣ್, ಆಸ್ಪತ್ರೆಗೆ ಹೋಗಿ ಅಲ್ಲಿ ಚಿಕಿತ್ಸೆಗೆ ಬಳಸುತ್ತಿದ್ದ ಹರಿತವಾದ ಬ್ಲೇಡ್‌ನಿಂದ ತನ್ನ ಪತ್ನಿ ಅನುಷಾಳ ಕೆನ್ನೆ ಹಾಗೂ ಕೈಗಳನ್ನು ಮನಸೋ ಇಚ್ಛೆ ಕೊಯ್ದಿದ್ದಾನೆ. ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದನು.
ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ..ಕೈಕೊಟ್ಟ ಬೆಳೆ, ಜೀವನಕ್ಕೆ ಸಾಲದ ಮೊರೆ ಹೋದ ರೈತ ಆತ್ಮಹತ್ಯೆ
ಇನ್ನು ಘಟನೆಯ ಬೆನ್ನಲ್ಲಿಯೇ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಘಟನೆಯ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಆರೋಪಿಯ ಬಗ್ಗೆ ದೂರು ದಾಖಲಿಸಿಕೊಂಡು ಆತನ್ನು ಬಧಿಸಲು ಬಲೆ ಬೀಸಿದ್ದಾರೆ. ಜೊತೆಗೆ, ಯುವತಿ ಮೇಲೆ ಮತ್ತೊಮ್ಮೆ ಹಲ್ಲೆ ಮಾಡಲು ಬರುವ ಸಾಧ್ಯತೆ ಮನಗಂಡು ಪೊಲೀಸರು ಕಾವಲಿದ್ದಾರೆ. ಈ ಘಟನೆ ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ