ಶಿವಮೊಗ್ಗ: ಅಧಿಕಾರಿಗಳ ಕಿರುಕುಳ ಆರೋಪ; ಕರ್ತವ್ಯ ನಿರತ ಚಾಲಕ -ಕಂ-ನಿರ್ವಾಹಕ ಆತ್ಮಹತ್ಯೆಗೆ ಯತ್ನ

By Ravi JanekalFirst Published Mar 23, 2024, 8:55 PM IST
Highlights

ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕರ್ತವ್ಯನಿರತ ಚಾಲಕ -ಕಂ- ಕಾರ್ಯನಿರ್ವಾಹಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಡೆದಿದೆ. ಬಸವರಾಜು ಟಿ.ವಿ. ಆತ್ಮಹತ್ಯೆಗೆ  ಯತ್ನಿಸಿದವರು.

ಶಿವಮೊಗ್ಗ (ಮಾ.23): ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕರ್ತವ್ಯನಿರತ ಚಾಲಕ -ಕಂ- ಕಾರ್ಯನಿರ್ವಾಹಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಡೆದಿದೆ.

ಬಸವರಾಜು ಟಿ.ವಿ. ಆತ್ಮಹತ್ಯೆಗೆ  ಯತ್ನಿಸಿದವರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿವಮೊಗ್ಗ ವಿಭಾಗದ ಹೊನ್ನಾಳಿ ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಬಸವರಾಜು. ಕುಡಿಯುವ ನೀರಿನ ವಿಷಯಕ್ಕೆ ಹೊನ್ನಾಳಿ ಘಟಕದಲ್ಲಿ ಕರ್ತವ್ಯನಿರತ ಮೆಕ್ಯಾನಿಕ್ ಕೆ ರೇಣುಕಾ ಜಗಳವಾಗಿದೆ. ಬಸವರಾಜು ವಿರುದ್ಧ ಪದೇಪದೆ ತಗಾದೆ ಮಾಡುತ್ತಿರುವ ರೇಣುಕಾ. ಜಗಳ ನಡೆದಿದ್ದು ಕುಡಿಯುವ ನೀರಿನ ವಿಚಾರಕ್ಕೆ ಆದರೆ ಬಸವರಾಜು ಹಾಗೂ ಮಹೇಶ್ವರ, ಸಿ. ಚಾಲಕನ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ, ಜಾತಿ ನಿಂದನೆ ಪ್ರಕರಣದಲ್ಲಿ ಅಟ್ರಾಸಿಟಿ ಕೇಸ್ ದಾಖಲು ಮಾಡಲಾಗಿದೆ. ಈ ವಿಚಾದಲ್ಲಿ ಶಿವಮೊಗ್ಗ ವಿಭಾಗದ ಅಧಿಕಾರಿಗಳು ಪ್ರಚೋದನೆ ನೀಡಿದ್ದಾರೆಂದು ಆರೋಪಿಸಲಾಗಿದೆ. ಇವರಿಬ್ಬರ ಮೇಲೆ ಅಟ್ರಾಸಿಟಿ ಕೇಸ್ ದಾಖಲು ಮಾಡಿ ಜೈಲಿಗೆ ಕಳಿಸುವ ಹುನ್ನಾರ ನಡೆದಿದೆ. ಮಹಿಳೆ ಸಿಬ್ಬಂದಿ ಮುಂದೆ ಇಟ್ಟುಕೊಂಡು ಇಬ್ಬರು ಚಾಲಕರ ವಿರುದ್ಧ ಈ ರೀತಿ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ವಿಜಯಪುರ: ಚಲಿಸುವ ರೈಲಿಗೆ ಬಿದ್ದು ಯುವಕ ಆತ್ಮಹತ್ಯೆ!

ಈ ಘಟನೆ ಸಂಬಂಧ ಬಸವರಾಜು ಶಿವಮೊಗ್ಗ ವಿಭಾಗದ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಚಾಲಕ ಬಸವರಾಜುಗೆ ಸ್ಪಂದಿಸದ ಹಿನ್ನೆಲೆ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕರ್ತವ್ಯದಲ್ಲಿದ್ದಾಗಲೇ ಬಸ್ಸಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಬಸವರಾಜು, ಆತ್ಮಹತ್ಯೆ ಯತ್ನಕ್ಕೂ ಮುನ್ನ ನನ್ನ ಸಾವಿಗೆ ಶಿವಮೊಗ್ಗ ವಿಭಾಗದ ಅಧಿಕಾರಿಗಳು ಹಾಗೂ ಮೆಕ್ಯಾನಿಕ್ ಕೆ ರೇಣುಕಾ ಇವರುಗಳು ಕಾರಣವೆಂದು ಡೆತ್ ನೋಟು ಬರೆದಿದ್ದಾರೆ. ಸದ್ಯ ಚಾಲಕ ಬಸವರಾಜರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣದ ವಿಚಾರಣೆಗೆ ಮುಂದಾಗಿರುವ ಪೊಲೀಸರು. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಕುಡುಕ ಮಗನನ್ನು ಕೊಂದು ಆತ್ಮಹತ್ಯೆಯ ಕತೆ ಕಟ್ಟಿದ ತಂದೆ!

click me!