ಆಭರಣ ವಾಪಾಸ್‌ ಕೇಳಿದ್ದಕ್ಕೆ 84 ವರ್ಷದ ಅಜ್ಜಿಯ ಕೊಂದು ತುಂಡು ತುಂಡು ಮಾಡಿದ ಪಾತಕಿ!

Published : Mar 23, 2024, 07:25 PM IST
ಆಭರಣ ವಾಪಾಸ್‌ ಕೇಳಿದ್ದಕ್ಕೆ 84 ವರ್ಷದ ಅಜ್ಜಿಯ ಕೊಂದು ತುಂಡು ತುಂಡು ಮಾಡಿದ ಪಾತಕಿ!

ಸಾರಾಂಶ

ತನ್ನ ಚಿನ್ನದ ಆಭರಣವನ್ನು ವಾಪಾಸ್‌ ಕೇಳಿದ್ದ ಕಾರಣಕ್ಕೆ ನೆರೆಮನೆಯ ಅಜ್ಜಿಯನ್ನು ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬಳಿಕ ಆಕೆಯ ಶವವನ್ನು ಆತ ತುಂಡು ತುಂಡಾಗಿ ಕತ್ತರಿಸಿದ್ದ ಎನ್ನಲಾಗಿದೆ.

ನವದೆಹಲಿ (ಮಾ.22): ತನ್ನ ಚಿನ್ನದ ಆಭರಣವನ್ನು ಮರಳಿ ನೀಡುವಂತೆ ಒತ್ತಾಯ ಮಾಡಿದ ನೆರೆಮನೆಯ 84 ವರ್ಷದ ಅಜ್ಜಿಯನ್ನು ವ್ಯಕ್ತಿಯೊಬ್ಬ ಕೊಂದಿದ್ದಲ್ಲದೆ, ಆಕೆಯ ದೇಹವನ್ನು ಕೊಡಲಿಯಿಂದ ತುಂಡು ತುಂಡಾಗಿ ಕತ್ತರಿಸಿದ ಭೀಕರ ಘಟನೆ ನಡೆದಿದೆ. ತನ್ನ ನೆರೆಹೊರೆಯಲ್ಲಿದ್ದ ಕೃಷ್ಣಮೂರ್ತಿ ಎನ್ನುವವರ ಮನೆಯಲ್ಲಿ ಕಾರ್ಯಕ್ರಮಗಳಿದ್ದ ಕಾರಣಕ್ಕಾಗಿ ಓಬುಳಮ್ಮ ಎನ್ನುವ ಮಹಿಳೆ 15 ದಿನಗಳ ಹಿಂದೆ 7 ತೊಲದ ಚಿನ್ನಾಭರಣವನ್ನು ಸಾಲವಾಗಿ ನೀಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಓಬುಳಮ್ಮ, ಕೃಷ್ಣಮೂರ್ತಿಯ ಬಳಿ ಕೊಟ್ಟ ಚಿನ್ನವನ್ನು ವಾಪಾಸ್‌ ಕೇಳಿದ್ದಾರೆ. ಆದರೆ, ಕೃಷ್ಣಮೂರ್ತಿ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ಗ್ರಾಮದ ಹಿರಿಯರಿಗೆ ಓಬುಳಮ್ಮ ಈ ವಿಚಾರ ತಿಳಿಸಿದ್ದರು. ಈ ಹಂತದಲ್ಲಿ ಊರ ಹಿರಿಯರು ಆತನಿಗೆ ಬೈದು, ಆಕೆಯಿಂದ ಪಡೆದುಕೊಂಡಿದ್ದ ಚಿನ್ನವನ್ನು ವಾಪಾಸ್‌ ನೀಡುವಂತೆ ತಿಳಿಸಿದ್ದರು.

ಆದರೆ, ಅಜ್ಜಿ ಊರ ಹಿರಿಯರಿಗೆ ವಿಚಾರ ತಿಳಿಸಿದ್ದರಿಂದ ಕೃಷ್ಣಮೂರ್ತಿ ಹಾಗೂ ಆತನ ಕುಟುಂಬ ಕೋಪಗೊಂಡಿತ್ತು. ಅಜ್ಜಿಯ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಕೃಷ್ಣಮೂರ್ತಿ ಕಾಯುತ್ತಿದ್ದ. ಕಳೆದ ಶುಕ್ರವಾರ ಅಜ್ಜಿ ಹಾಗೂ ಕೃಷ್ಣಮೂರ್ತಿ ನಡುವೆ ಇದೇ ವಿಚಾರವಾಗಿ ಮಾತಿನ ಸಮರ ನಡೆದಿದೆ. ಇದರ ಬೆನ್ನಲ್ಲಿಯೇ ಕೊಡಲಿಯಿಂದ ಹೊಡೆದು ಅಜ್ಜಿಯ ಕೊಲೆ ಮಾಡಿದ್ದಾನೆ. ಆ ಬಳಿಕ ಆಕೃಯ ಮೃತದೇಹವನ್ನು ಕೊಡಲಿಯಿಂದಲೇ ತುಂಡು ತುಂಡಾಗಿ ಕತ್ತರಿಸಿ ಪಕ್ಕದಲ್ಲೇ ಇದ್ದ ಪೆನಕಚೇರ್ಲಾ ಅಣೆಕಟ್ಟಿನಲ್ಲಿ ಎಸೆದಿದ್ದಾನೆ.

ಮನೆ ಮುಂದಿನ ದಾರಿಗಾಗಿ ದಾಯಾದಿ ಕಲಹ; ಕೊಲೆಯಲ್ಲಿ ಅಂತ್ಯ !

ಮಹಿಳೆಯ ಮನೆಯವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿದ ನಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅಣೆಕಟ್ಟೆಯಿಂದ ಓಬುಳಮ್ಮ ಅವರ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮೃತ ಮಹಿಳೆ ಯರ್ರಗುಂಟ್ಲಾದಲ್ಲಿದ್ದ ತನ್ನ  ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರೆ, ಅವರ ಕುಟುಂಬ ಸದಸ್ಯರು ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು.

ಮದ್ವೆಯಾದ ಖುಷಿಯಲ್ಲಿ ಗುಂಡು ಹಾರಿಸಿದ ವಧು, ಇವ್ನ ಮದ್ವೆಯಾದವ್ನ ಕಥೆ ಅಷ್ಟೇ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!