ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆ ಬಲಿ; ಕೊಡಬೇಕಿದ್ದಿದ್ದು ಕೇವಲ 2,440 ರೂಪಾಯಿ!

Published : Nov 29, 2024, 04:49 PM IST
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆ ಬಲಿ; ಕೊಡಬೇಕಿದ್ದಿದ್ದು ಕೇವಲ 2,440 ರೂಪಾಯಿ!

ಸಾರಾಂಶ

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆ ಬಲಿಯಾಗಿದ್ದಾಳೆ. ಸಂಜೆಯೊಳಗೆ ಹಣ ಕಟ್ಲಿಲ್ಲ ಅಂದ್ರೆ ಮಾನ ಮರ್ಯಾದೆ ಹರಾಜು ಹಾಕ್ತೀವಿ ಅಂತಾ ಟಾರ್ಚರ್ ಮಾಡಿದ್ದಕ್ಕೆ ಕೊಟ್ಟ ಡೆಡ್ಲೈನಲ್ಲಿಯೇ  ಮರ್ಯಾದೆಗೆ ಅಂಜಿದ ಮಹಿಳೆ ಸಾವಿನ ಮನೆ ಕದ ತಟ್ಟಿದ್ದಾಳೆ. ಅಷ್ಟಕ್ಕೂ ಆಕೆ ಕೊಡಬೇಕಾಗಿದ್ದ ಹಣವಾದ್ರು ಎಷ್ಟು ಅಂತೀರಾ? ಈ ಸ್ಟೋರಿ ನೋಡಿ.

ವರದಿ : ಮಧು.ಎಂ.ಚಿನಕುರಳಿ.

ಮೈಸೂರು (ನ.29): ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆ ಬಲಿಯಾಗಿದ್ದಾಳೆ. ಸಂಜೆಯೊಳಗೆ ಹಣ ಕಟ್ಲಿಲ್ಲ ಅಂದ್ರೆ ಮಾನ ಮರ್ಯಾದೆ ಹರಾಜು ಹಾಕ್ತೀವಿ ಅಂತಾ ಟಾರ್ಚರ್ ಮಾಡಿದ್ದಕ್ಕೆ ಕೊಟ್ಟ ಡೆಡ್ಲೈನಲ್ಲಿಯೇ  ಮರ್ಯಾದೆಗೆ ಅಂಜಿದ ಮಹಿಳೆ ಸಾವಿನ ಮನೆ ಕದ ತಟ್ಟಿದ್ದಾಳೆ. ಅಷ್ಟಕ್ಕೂ ಆಕೆ ಕೊಡಬೇಕಾಗಿದ್ದ ಹಣವಾದ್ರು ಎಷ್ಟು ಅಂತೀರಾ? ಈ ಸ್ಟೋರಿ ನೋಡಿ.

ಮಹಿಳೆ ಕಟ್ಟಬೇಕಿದ್ದಿದ್ದು ಕೇವಲ 2,440 ರೂಪಾಯಿ ಅಷ್ಟೇ. ಆದ್ರೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನೀಡಿದ್ದ ಟಾರ್ಗೆಟ್ ಗೆ ಮಹಿಳೆ ಹೆಣ ಬಿದ್ದಿದೆ. ಹೌದು, ಈಕೆ ಹೆಸರು ಸುಶೀಲಾ. 48 ವರ್ಷ ವಯಸ್ಸು. ಮೈಸೂರು ಜಿಲ್ಲೆ ಹುಣಸೂರು ತಾಲೂಕಿ‌ ಕಿರಿಜಾಜಿ ಗ್ರಾಮದ ನಿವಾಸಿ. ಈಕೆ ಹುಣಸೂರು ಪಟ್ಟಣದಲ್ಲಿರೋ ಫಾರ್ಚೂನ್ ಮೈಕ್ರೋ ಫೈನಾನ್ಸ್ ನಿಂದ ಪುತ್ರ ನವೀನ್ ಕುಮಾರ್ ಗಾಗಿ 40 ಸಾವಿರ ಸಾಲ ಪಡೆದಿದ್ದಾಳೆ. ಪ್ರತಿ ತಿಂಗಳು 7 ನೇ ತಾರೀಖು ಪುತ್ರ ನವೀನ್ ಕುಮಾರ್ 2,440 ರೂಪಾಯಿ ಇ.ಎಂ.ಐ ಕಟ್ತಾ ಇದ್ದ. ಆದ್ರೆ ಇದೇ ತಿಂಗಳ 7ನೇ ತಾರೀಖಿನಂದು ಕಟ್ಟಬೇಕಿದ್ದ ಹಣವನ್ನ ಕಟ್ಟಿರಲಿಲ್ಲವಂತೆ. ಸ್ವಲ್ಪ ದಿನ ಟೈಂ ಕೊಟ್ರೆ ಕಟ್ತೀನಿ ಅಂತ ಪುತ್ರ ನವೀನ್ ಕುಮಾರ್ ಹೇಳಿದ್ನಂತೆ. ಆದ್ರೆ ಫೈನಾನ್ಸ್ ಸಿಬ್ಬಂದಿ ಹಣ ಕಟ್ಟಿಸಿಕೋಳ್ಳೋಕೆ ಹಿಂದೆ ಬಿದ್ದಿದ್ದಾರೆ. ನಿನ್ನೆ ಬೆಳಿಗ್ಗೆ ಮನೆ ಬಳಿ ಬಂದ ಫಾರ್ಚೂನ್ ಫೈನಾನ್ಸ್ ಸಿಬ್ಬಂದಿ ಉಮೇಶ್ ಹಾಗೂ ಇತರೆ ಸಿಬ್ಬಂದಿ ಮನೆ ಮುಂದೆ ಕುಳಿತು ಹಣ ಕಟ್ಟಿ ಇಲ್ಲ ಮರ್ಯಾದೆ ಹರಾಜು ಹಾಕ್ತೀವಿ ಅಂದಿದ್ದಾರೆ. ಹಣ ಕಟ್ಲಿಲ್ಲ ಅಂದ್ರೆ ಸಾಯಿರಿ ಸಾಲ ಮನ್ನ ಆಗುತ್ತೆ ಅಂತ ಗಲಾಟೆಮಾಡಿ ಸಂಜೆ ವರೆಗೂ ಡೆಡ್ ಲೈನ್ ನೀಡಿಹೋಗಿದ್ರಂತೆ. ಊಟ ಮಾಡೋ ವೇಳೆ ಸೋಸೆ ಮುಂದೆ ಮರ್ಯಾದೆ ಹೋಗಿದ್ದಕ್ಕೆ ಸುಶೀಲಾ ಮನನೊಂದು ಜಮೀನಿಗೆ ತೆರಳಿ ಕ್ರಿಮಿನಾಶಕ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಹಣಕ್ಕಾಗಿ ತಂಗಿಯನ್ನೇ ಟೆಕ್ಕಿಯೊಂದಿಗೆ ಮಲಗಿಸಿದ ಅಣ್ಣ! ಹನಿಟ್ರ್ಯಾಪ್ ಮಾಡಿ ಕೋಟಿ ಕೋಟಿ ಸುಲಿಗೆ!

ಇತ್ತ, ಪುತ್ರ ನವೀನ್ ಕುಮಾರ್ ಹುಣಸೂರು ಪಟ್ಟಣಕ್ಕೆ ಕೆಲಸದ ನಿಮಿತ್ತ ಹೋಗಿದ್ನಂತೆ. ಅಷ್ಟರಲ್ಲೇ ಫೈನಾನ್ಸ್ ಸಿಬ್ಬಂದಿ ಕೊಟ್ಟ ಟಾರ್ಚರ್ ಗೆ ಮನನೊಂದಿದ್ದ  ಸುಶೀಲಾ ಜಮೀನಿಗೆ ತೆರಳಿ ಕ್ರಿಮಿನಾಶ ಮಾತ್ರೆ ಸೇವನೆ ಮಾಡಿದ್ದಾರೆ. ಜಮೀನಿನಲ್ಲಿ ಅಸ್ವಸ್ಥರಾಗಿ ಬಿದ್ದಿದ್ದ ಸುಶೀಲಾ ರನ್ನ ಹುಣಸೂರು ಪಟ್ಟಣದ ಡಿ.ದೇವರಾಜ ಅರಸು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು.ಆದ್ರೆ ಚಿಕಿತ್ಸೆ ಫಲಿಸದೆ ಕೆ.ಆರ್. ಆಸ್ಪತ್ರೆಯಲ್ಲಿ ಸುಶೀಲಾ ಉಸಿರುಚೆಲ್ಲಿದ್ದಾರೆ. ಈ ಸಂಬಂಧ ಸಂಬಂಧಿಕರು ಫೈನಾನ್ಸ್ ಸಿಬ್ಬಂದಿ ಹಾಗೂ ಫೈನಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಸಂಬಂಧ ಕಿರುಕುಳ ನೀಡಿದವ್ರ ವಿರುದ್ಧ ಹುಣಸೂರು  ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇನ್ನಾದ್ರೂ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲ ವಸೂಲಿ ಮಾಡೋ ಮುನ್ನ ಜಾಗರೂಕತೆಯಿಂದ ನಡೆದುಕೋಳ್ಳಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ