ಟಿಳಕವಾಡಿಯ ದ್ವಾರಕಾನಗರದ ಪ್ರವೀಣ ಕುಮಾರ (31) ಗುಂಡಿನ ದಾಳಿಗೆ ಒಳಗಾಗಿ ಬಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿಧಾ ಕಿತ್ತೂರು, ನಾಜಿಯಾ ಸೇರಿದಂತೆ ಮೂವರನ್ನು ಬಂಧಿಸಿದ ಪೊಲೀಸರು
ಬೆಳಗಾವಿ(ನ.29): ನಗರದ ಕೆಎಂಎಫ್ ಡೈರಿ ಬಳಿ ಬುಧವಾರ ರಾತ್ರಿ ಯುವಕನ ಮೇಲೆ ಗುಂಡಿನ ದಾಳಿ ನಡೆಸಿದ್ದು ಆತನ ಮಾಜಿ ಪ್ರೇಯಸಿ ಎಂಬ ವಿಚಾರ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಮಾತ್ರವಲ್ಲ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯೂ ಸೇರಿದಂತೆ ಮಾಳಮಾರುತಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟಿಳಕವಾಡಿಯ ದ್ವಾರಕಾನಗರದ ಪ್ರವೀಣ ಕುಮಾರ (31) ಗುಂಡಿನ ದಾಳಿಗೆ ಒಳಗಾಗಿ ಬಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿಧಾ ಕಿತ್ತೂರು, ನಾಜಿಯಾ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
undefined
ಕಾರ್ಕಳ: ಎಎನ್‌ಫ್-ನಕ್ಸಲರ ನಡುವೆ ಭೀಕರ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂಗೌಡನ ಹತ್ಯೆ!
ಗುಂಡಿನ ದಾಳಿ ನಡೆಸಿದ್ದು ಯಾರು?:
ಗುಂಡಿನ ದಾಳಿಗೆ ಒಳಗಾಗಿ ಗಾಯಗೊಂಡಿರುವ ಪ್ರಣೀತಕುಮಾರ ಮತ್ತು ನಿಧಾ ಕಿತ್ತೂರು ಈ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ನಡುವೆ ಮನಸ್ತಾಪ ಬಂದು ಕಳೆದ ನಾಲ್ಕು ವರ್ಷಗಳ ಹಿಂದೆ ಬ್ರೇಕ್ ಅಪ್ ಆಗಿತ್ತು. ನಿಧಾ ಜೊತೆಗೆ ಪ್ರೀತಿಯನ್ನು ಬ್ರೇಕಪ್ ಮಾಡಿಕೊಂಡ ಬಳಿಕ ಮಹಾಂತೇಶ ನಗರದ ಸ್ಮಿತಾ ಜತೆಗೆ ಪ್ರವೀಣಕುಮಾರ ಸಲುಗೆ ಬೆಳೆಸಿಕೊಂಡಿದ್ದ. ಪ್ರತಿನಿತ್ಯ ಸ್ಮಿತಾ ಮನೆಗೆ ಹೋಗಿ ಬರುತ್ತಿದ್ದ. ನಿನ್ನ ಜೊತೆ ಬ್ರೇಕಪ್ ಆದ ನಂತರ ನನಗೆ ಸ್ಮಿತಾ ಸಿಕ್ಕಿದ್ದಾಳೆಂದು ಪ್ರವೀಣಕುಮಾರ ಫೋನ್ ಮಾಡಿ ಮಾಜಿ ಪ್ರೇಯಸಿ ನಿಧಾಗೆ ಹೇಳಿದ್ದನು. ಇದರಿಂದ ಕೆರಳಿದ ನಿಧಾ ತನ್ನ ಪರಿಷಯಸ್ಥರೊಂದಿಗೆ ಸ್ಮಿತಾ ಮನೆಗೆ ಅಗಮಿಸಿ ರಿವಾಲ್ವರ್ ಮೂಲಕ ಪ್ರಣೀತಕುಮಾರ ಮೇಲೆ ಎರಡು ಸಲ ಗುಂಡಿನ ದಾಳಿ ನಡೆಸಿದರು.
ಘಟನೆಯಲ್ಲಿ ಆತನ ಕಾಲು, ಮುಖದ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಆತನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಸ್ಥಿತಾಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಆತ ಕೂದಳೆಲೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬಿಮ್ಸ್ ಆಸ್ಪತ್ರೆಗೆ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಭೇಟಿ ನೀಡಿ ಪರಿಶೀಲಿಸಿದರು. ಈ ಪ್ರಕರಣ ಸಂಬಂಧ ನಿಧಾ ಕಿತ್ತೂರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರು ತಲೆ ಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯಲ್ಲಿ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಗುಂಡಿನ ದಾಳಿಗೆ ಬಳಕೆಯಾದ ಗನ್ ಯಾವುದು ಎಂಬುವುದರ ಕುರಿತು ತನಿಖೆ ನಡೆಯುತ್ತಿದೆ. ಪ್ರೀತಿ ವಿಚಾರ ಸಂಬಂಧ ಗಲಾಟೆಯಾಗಿದ್ದು, ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.
ಹುಬ್ಬಳ್ಳಿ: ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಫೈರಿಂಗ್
ಹುಬ್ಬಳ್ಳಿ: ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಸಿಸಿಬಿ ಪೊಲೀಸರು ಫೈರಿಂಗ್ ಮಾಡಿದ ಘಟನೆ ಇಂದು(ಭಾನುವಾರ) ನಡೆದಿದೆ. ಇಬ್ಬರು ಅಂತರಾಜ್ಯ ದರೋಡೆಕೋರರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದು ಇಬ್ಬರು ಖದೀಮರ ಕಾಲಿಗೆ ಗುಂಡೇಟು ತಗುಲಿತ್ತು.
ಬೆಂಗಳೂರು: ಯುವಕನ ನಗ್ನಗೊಳಿಸಿ ಹಲ್ಲೆಗೈದವನಿಗೆ ಗುಂಡೇಟು..!
ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಇಬ್ಬರು ದರೋಡೆಕೋರರ ಮೇಲೆ ಸಿಸಿಬಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಕುರ್ತಾ ಅಲಿಯಾಸ್ ಭರತ್ ಕುಮಾರ್ ಹಾಗೂ ಫಾರೂಕ್ ಅಲಿಯಾಸ್ ಟೊಮೆಟೊ ಫಾರೂಕ್ ಕಾಲಿಗೆ ಗುಂಡೇಟು ತಗುಲಿತ್ತು.
ಮೂಲತಃ ಮಂಗಳೂರು ಮೂಲದ ಭರತ್, ಫಾರುಕ್ ಕಾರು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಇವರ ಗ್ಯಾಂಗ್‌ನಲ್ಲಿ 15 ಜನರಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಮೂಲದ ರಾಹುಲ್ ಸುರ್ವೆ ಕಾರು ಅಡ್ಡಗಟ್ಟಿ ಖದೀಮರು ದರೋಡೆ ಮಾಡಿದ್ದರು. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಹತ್ತಿರ ದರೋಡೆ ನಡೆದಿತ್ತು.