ಹಿಂದಿ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ಅಜಾಜ್ ಖಾನ್ ಅವರ ಪತ್ನಿ ಫಾಲನ್ ಗುಲಿವಾಲಾ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿದೆ.
ಹಿಂದಿ ಬಿಗ್‌ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಯಾಗಿದ್ದ ಅಜಾಜ್ ಖಾನ್ ಮನೆಯಲ್ಲಿ ಮಾದವಸ್ತು ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಜಾಜ್ ಖಾನ್ ಪತ್ನಿ ಫಾಲನ್ ಗುಲಿವಾಲಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಡ್ರಗ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ಅಧಿಕಾರಿಗಳು ಫಾಲನ್ ಗುಲಿವಾಲಾ ಅವರನ್ನು ಬಂಧಿಸಿದ್ದಾರೆ. ದಂಪತಿಯ ಮುಂಬೈನಲ್ಲಿರುವ ಜೋಗೇಶ್ವರಿ ನಿವಾಸದಲ್ಲಿ 130 ಗ್ರಾಂ ಮರಿಜುವಾನಾ ಸೇರಿದಂತೆ ಹಲವು ಬಗೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ನಂತರ ಈ ಬಂಧನ ನಡೆದಿದೆ.
ಈ ಬೆಳವಣಿಗೆಗೂ ಮೊದಲು ಅಜಾಜ್ ಖಾನ್ ಉದ್ಯೋಗಿ ಸೂರಜ್ ಗೌಡ್ ಎಂಬಾತನನ್ನು ಅಕ್ಟೋಬರ್ 8 ರಂದು ಪೊಲೀಸರು ಬಂಧಿಸಿದ್ದರು. ಯುರೋಪಿಯನ್ ದೇಶವೊಂದರಿಂದ 100 ಗ್ರಾಂ ಎಂಡಿ (Mephedrone) ಯನ್ನು ಆರ್ಡರ್ ಮಾಡಿದ್ದು ಇದು ಕೊರಿಯರ್ ಮೂಲಕ ಅಂಧೇರಿಯಲ್ಲಿರುವ ಅಜಾಜ್‌ನ ಕಚೇರಿಯನ್ನು ತಲುಪಿತ್ತು. ಇದಾದ ನಂತರ ಅಜಾಜ್‌ನ ಉದ್ಯೋಗಿ ಸೂರಜ್ ಗೌಡ್‌ನನ್ನು ಪೊಲೀಸರು ಬಂಧಿಸಿದ್ದರು.
ಈ ಬೆಳವಣಿಗೆಯ ನಂತರ ಕಸ್ಟಮ್ ಅಧಿಕಾರಿಗಳು ಅಜಾಜ್ ಪತ್ನಿ ಫಾಲನ್ ಗುಲಿವಾಲಾ ವಾಸ ಮಾಡುತ್ತಿದ್ದ ನಿವಾಸದ ಮೇಲೆ ದಾಳಿ ಮಾಡಿದ್ದು, ಅಲ್ಲಿ ಅಧಿಕಾರಿಗಳಿಗೆ ಡ್ರಗ್ಸ್ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಫಾಲನ್ ಗುಲಿವಾಲಾಳನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಬಂಧನದ ನಂತರ ಪೊಲೀಸರು ಬಿಗ್‌ಬಾಸ್ ಸ್ಪರ್ಧಿ ಅಜಾಜ್ ಖಾನ್‌ನನ್ನು ಕೂಡ ಮನೆಯಲ್ಲಿ ಪತ್ತೆಯಾದ ಡ್ರಗ್ಸ್ ಹಾಗೂ ಕಚೇರಿಗೆ ಪಾರ್ಸೆಲ್ ರೂಪದಲ್ಲಿ ಬಂದ ಡ್ರಗ್ಸ್ ಬಗ್ಗೆ ಪ್ರಶ್ನಿಸಲು ಮುಂದಾಗಿದ್ದಾರೆ. ಆದರೆ ಅವರು ಈ ಬಗ್ಗೆ ವಿಚಾರಣೆ ನಡೆಸಲು ಸಿಕ್ಕಿಲ್ಲ ಎಂದು ವರದಿಯಾಗಿದೆ.
ಅಕ್ಟೋಬರ್‌ನಲ್ಲಿ ಡ್ರಗ್ ಸಾಗಣೆಯ ಬಗ್ಗೆ ಅಧಿಕಾರಿಗಳಿಗೆ ಸುಳಿವು ಸಿಕ್ಕಿದ ನಂತರ ತನಿಖೆ ಆರಂಭವಾಗಿದ್ದು, ಅಧಿಕಾರಿಗಳು ಖಾನ್ ಅವರ ಕಚೇರಿಗೆ ಈ ಡ್ರಗ್ ಪಾರ್ಸೆಲ್ ತಲುಪಿದ್ದನ್ನು ಪತ್ತೆಹಚ್ಚಿದರು. ಈ ಪ್ಯಾಕೇಜ್‌ನಲ್ಲಿ 100 ಗ್ರಾಂ ಎಮ್‌ಡಿಎಂಎ ಇರುವುದನ್ನು ಅವರು ಪತ್ತೆ ಮಾಡಿದ್ದರು. ಇದನ್ನು ಸೂರಜ್ ಗೌಡ್ ಆರ್ಡರ್ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು ತನಿಖೆ ನಡೆಯುತ್ತಿದೆ.
2021ರಲ್ಲಿ ಅಜಾಜ್ ಖಾನ್ ಬಳಿ 4.5 ಗ್ರಾಂ ತೂಕದ 31 ಅಲ್ಪ್ರಜೋಲಮ್ ಮಾತ್ರೆಗಳು (Alprazolam tablets)ಪತ್ತೆಯದ ನಂತರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB)ದಿಂದ ಅಜಾಜ್ ಖಾನ್ ಬಂಧಿತರಾಗಿದ್ದರು. ನಂತರ ಎರಡು ವರ್ಷಗಳ ಕಾಲ ಜೈಲಿನಲ್ಲಿ ಕಳೆದ ನಂತರ ಅವರು ಬಿಡುಗಡೆಯಾಗಿದ್ದರು. ಆದರೆ ಈಗ ಅವರ ಪತ್ನಿಯ ಬಂಧನವಾಗಿದೆ.
ಇದನ್ನೂ ಓದಿ:ಬಿಗ್ಬಾಸ್‌ನ ಅಜಾಜ್ ಖಾನ್‌ಗೆ ಫಾಲೋವರ್ಸ್ 6 ಲಕ್ಷ ಬಂದ ಮತ ಕೇವಲ 131
ಇದನ್ನೂ ಓದಿ:ಬಾಲಿವುಡ್ ನಟನ ಮನೆಯಲ್ಲಿ ಡ್ರಗ್ಸ್: ನಟ ಅರೆಸ್ಟ್