Bengaluru: ಹನುಮಂತನಗರ ಪೊಲೀಸರಿಂದ ಖತರ್ನಾಕ್ 'ಚಡ್ಡಿ' ಗ್ಯಾಂಗ್ ಬಂಧನ

By Govindaraj SFirst Published Jan 20, 2023, 8:43 AM IST
Highlights

ಚಡ್ಡಿ ಹಾಕಿಕೊಂಡು ಬೈಕ್ ಜೊತೆ ಫೀಲ್ಡಿಗೆ ಇಳಿದ್ರೆ ಮುಗೀತು. ಚಿನ್ನದ ಸರ ಕಿತ್ತುಕೊಳ್ಳದೇ ಹೋಗೋದಿಲ್ಲ ಈ ಗ್ಯಾಂಗ್. ಹೀಗೆ ಸರವೇಗದಲ್ಲಿ ಬಂದು ಸರ ಕಿತ್ತು ಪರಾರಿಯಾಗುತ್ತಿದ್ದವರು ಇದೀಗ ಅಂದರ್ ಆಗಿದ್ದಾರೆ.

ಬೆಂಗಳೂರು (ಜ.20): ಚಡ್ಡಿ ಹಾಕಿಕೊಂಡು ಬೈಕ್ ಜೊತೆ ಫೀಲ್ಡಿಗೆ ಇಳಿದ್ರೆ ಮುಗೀತು. ಚಿನ್ನದ ಸರ ಕಿತ್ತುಕೊಳ್ಳದೇ ಹೋಗೋದಿಲ್ಲ ಈ ಗ್ಯಾಂಗ್. ಹೀಗೆ ಸರವೇಗದಲ್ಲಿ ಬಂದು ಸರ ಕಿತ್ತು ಪರಾರಿಯಾಗುತ್ತಿದ್ದವರು ಇದೀಗ ಅಂದರ್ ಆಗಿದ್ದಾರೆ. ಹೌದು! ಹನುಮಂತನಗರ ಪೊಲೀಸರಿಂದ ಖತರ್ನಾಕ್ 'ಚಡ್ಡಿ'ಗ್ಯಾಂಗನ್ನು ಬಂಧಿಸಲಾಗಿದ್ದು, ಸುನೀಲ್ ಕುಮಾರ್ @ ಸ್ನ್ಯಾಚರ್ ಸುನೀಲ್ (37) ಶ್ರೀನಿವಾಸ್ @ ಚಡ್ಡಿ (25) ಬಂಧಿತ ಆರೋಪಿಗಳು. ಗಿರಿನಗರದ ಅಶೋಕನಗರದಲ್ಲಿ ಚೈನ್ ಸ್ನಾಚಿಂಗ್ ಮಾಡಿದ್ದ ಆರೋಪಿಗಳು, 56 ವರ್ಷದ ಸ್ಕೂಲ್ ಟೀಚರ್ ಕತ್ತಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದರು. 

ಜನವರಿ 4ರಂದು ಸರಗಳ್ಳತನ ಮಾಡಿದ್ದ ಆರೋಪಿಗಳನ್ನು ಹಿಡಿಯಲು ಹನುಮಂತನಗರ ಪೊಲೀಸರು ಪಡಬಾರದ ಪಾಡು ಪಟ್ಟಿದ್ದರು. 15 ದಿನ ನಿರಂತರ ಕಾರ್ಯಾಚರಣೆ ಬಳಿಕ ಪಿಎಸ್ಐ ಸುನೀಲ್ ಕಡ್ಡಿ ಲಾಕ್ ಮಾಡಿದ್ದರು. 2016 ರವರೆಗೆ 8 ವರ್ಷ ಜೈಲಿನಲ್ಲಿದ್ದ ಸುನೀಲ್ ಕುಮಾರ್, ನಂತರ ಜೈಲಿನಿಂದ ಹೊರಬಂದು ಸೈಲೆಂಟ್ ಆಗಿದ್ದ. ಮತ್ತೆ ಈ ಖತರ್ನಕ್ ಆಸಾಮಿ ಸರಗಳ್ಳತನಕ್ಕೆ ಇಳಿದಿದ್ದು, ಬಂಧಿತನಿಂದ ಒಂದೂವರೆ ಲಕ್ಷ ಮೌಲ್ಯದ 30 ಗ್ರಾಂ ಚಿನ್ನದ ಸರ ಜೊತೆಗೆ 12 ಬೈಕ್‌ಗಳು ಕೂಡ ವಶಕ್ಕೆ ಪಡೆಯಲಾಗಿದೆ.

ಗಾಂಜಾ ಸೇವನೆ ಆರೋಪ: ಪೊಲೀಸರ ವಿಚಾರಣೆಯಿಂದ ಮನನೊಂದ ಯುವಕ ಆತ್ಮಹತ್ಯೆ

ಕುಡಿತಕ್ಕಾಗಿ ಎಟಿಎಂ ದೋಚಲು ಯತ್ನಿಸಿದ್ದ ಸಪ್ಲೈಯರ್‌ ಬಂಧನ: ಇತ್ತೀಚೆಗೆ ಖಾಸಗಿ ಬ್ಯಾಂಕ್‌ನ ಎಟಿಎಂ ಘಟಕದಲ್ಲಿ ಕಳ್ಳತನಕ್ಕೆ ಯತ್ನಿಸಿ ಪರಾರಿಯಾಗಿದ್ದ ಬಾರ್‌ವೊಂದರ ಸಪ್ಲೈಯರ್‌ನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಂಗನಾಥಪುರದ ಕರಿಚಿತ್ತಪ್ಪ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಮಾಗಡಿ ರಸ್ತೆಯ ಕಾಮಾಕ್ಷಿಪಾಳ್ಯದ ಜಯಲಕ್ಷ್ಮಿ ವಾಣಿಜ್ಯ ಸಂಕೀರ್ಣದಲ್ಲಿರುವ ಆಕ್ಸಿಸ್‌ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ಯಂತ್ರ ಒಡೆದು ಹಣ ದೋಚಲು ಆರೋಪಿ ಯತ್ನಿಸಿದ್ದ. ಈ ಬಗ್ಗೆ ಎಟಿಎಂ ಘಟಕದ ಭದ್ರತಾ ಏಜೆನ್ಸಿಯ ಅಧಿಕಾರಿ ಜಗದೀಶ್‌ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಕರಿಚಿತ್ತಪ್ಪ, ಆರು ತಿಂಗಳಿಂದ ಕಾಮಾಕ್ಷಿಪಾಳ್ಯದ ನವರತ್ನ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ. ಮದ್ಯ ವ್ಯಸನಿಯಾಗಿದ್ದ ಆರೋಪಿ, ಸುಲಭವಾಗಿ ಹಣ ಸಂಪಾದನೆಗೆ ಅಡ್ಡದಾರಿ ತುಳಿದಿದ್ದಾನೆ. ತನ್ನ ಬಾರ್‌ ಹತ್ತಿರದಲ್ಲಿದ್ದ ಆಕ್ಸಿಕ್‌ ಬ್ಯಾಂಕ್‌ ಎಟಿಎಂನಲ್ಲಿ ಹಣ ದೋಚಲು ಆತ ಸಂಚು ರೂಪಿಸಿದ್ದ.  

ಅಂತೆಯೇ ಜ.14ರಂದು ರಾತ್ರಿ ಎಟಿಎಂ ಘಟಕಕ್ಕೆ ನುಗ್ಗಿದ ಕರಿಚಿತ್ತಪ್ಪ, ಮೊದಲು ಸಿಸಿಟಿವಿ ಕ್ಯಾಮೆರಾದ ಸಂಪರ್ಕ ಕಡಿತಗೊಳಿಸಿದ್ದಾನೆ. ಬಳಿಕ ಕಲ್ಲು ಹಾಗೂ ಕಬ್ಬಿಣದ ಸಲಾಕೆಯಿಂದ ಯಂತ್ರ ಒಡೆದು ಹಣ ದೋಚಲು ಯತ್ನಿಸಿ ಕೊನೆಗೆ ವಿಫಲನಾಗಿದ್ದಾನೆ. ಸಿಸಿಟಿವಿ ಕ್ಯಾಮೆರಾ ಸಂಪರ್ಕ ಕಡಿತಗೊಂಡ ಕೂಡಲೇ ಎಟಿಎಂ ಭದ್ರತಾ ಸಿಬ್ಬಂದಿ, ಮೇಲಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಈ ಮಾಹಿತಿ ಪಡೆದು ಅಧಿಕಾರಿ ಜಗದೀಶ್‌ ಹಾಗೂ ಸಿಬ್ಬಂದಿ, ಎಟಿಎಂ ಬಳಿಗೆ ಧಾವಿಸಿದ್ದಾರೆ. ಅಷ್ಟರಲ್ಲಿ ಆರೋಪಿ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

Bengaluru: 6 ವರ್ಷದ ಪ್ರೀತಿಗೆ ಬ್ರೇಕ್ ಬಿದ್ದಿದ್ದಕ್ಕೆ ಪ್ರಿಯತಮ ಆತ್ಮಹತ್ಯೆ

ಈ ಘಟನೆ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್‌ ಬಿ.ಎನ್‌.ಲೋಹಿತ್‌ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಮೂರ್ತಿ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿ ಮುಖಚಹರೆ ಪತ್ತೆಯಾಗಿದೆ. ಈ ಸುಳಿವು ಆಧರಿಸಿ ಅಕ್ಕಪಕ್ಕ ವಿಚಾರಿಸಿದಾಗ ಆರೋಪಿ ನವರತ್ನ ಬಾರ್‌ನ ಸಪ್ಲೈಯರ್‌ ಎಂಬುದು ಗೊತ್ತಾಗಿದೆ. ಈ ಕೃತ್ಯ ಎಸಗಿದ ಬಳಿಕ ಬಾರ್‌ ಕೆಲಸ ತೊರೆದು ಆರೋಪಿ, ತುಮಕೂರಿನ ಮರಳೂರು ಸರ್ಕಲ್‌ ಬಳಿ ಮಿಲ್ಟಿ್ರ ಹೋಟೆಲ್‌ನಲ್ಲಿ ಸಪ್ಲೈಯರ್‌ ಆಗಿ ಕೆಲಸ ಮಾಡುತ್ತಿದ್ದ. ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ನಗರಕ್ಕೆ ಕರೆ ತಂದಿದ್ದಾರೆ.

click me!