ಹೋಟೆಲ್‌ ಮ್ಯಾನೇಜರ್‌ ಮೇಲೆ ಹಲ್ಲೆ: ಹ್ಯಾಕರ್‌ ಶ್ರೀಕಿ, ವಿಷ್ಣು ಭಟ್‌ ಬಂಧನ

By Kannadaprabha NewsFirst Published Nov 7, 2021, 7:23 AM IST
Highlights

*  ಹೋಟೆಲಲ್ಲಿದ್ದ ಸ್ನೇಹಿತನನ್ನು ನೋಡಲು ಬಂದ ಭೀಮಾ ಜ್ಯುವೆಲ​ರ್ಸ್‌ ಮಾಲಿಕನ ಪುತ್ರ
*  ಏಕಾಏಕಿ ನುಗ್ಗಿದ ವಿಷ್ಣುಭಟ್‌ನನ್ನು ಪ್ರಶ್ನಿಸಿದ ಮ್ಯಾನೇಜರ್‌
*  ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ಹ್ಯಾಕರ್‌ ಶ್ರೀಕಿ
 

ಬೆಂಗಳೂರು(ನ.07):  ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ ಆರೋಪ(Allegation) ಸಂಬಂಧ ಭೀಮಾ ಜ್ಯುವೆಲ​ರ್ಸ್‌ ಮಾಲೀಕನ ಪುತ್ರ ವಿಷ್ಣು ಭಟ್‌(30) ಹಾಗೂ ವೆಬ್‌ಸೈಟ್‌ ಹ್ಯಾಕರ್‌(Hacker) ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ(28)ಯನ್ನು ಜೀವನ್‌ ಭೀಮಾನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ನಗರದ ಓಲ್ಡ್‌ ಏರ್‌ಪೋರ್ಟ್‌ ರಸ್ತೆಯ ರಾಯಲ್‌ ಆರ್ಕಿಡ್‌ ಪಂಚತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಶ್ರೀಕಿಯನ್ನು(Shreeki) ನೋಡಲು ಶನಿವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ವಿಷ್ಣು ಭಟ್‌ ಹೋಟೆಲ್‌ಗೆ ಬಂದಿದ್ದಾನೆ. ಈ ವೇಳೆ ಏಕಾಏಕಿ ಹೋಟೆಲ್‌ ಪ್ರವೇಶಿಸಿದ ವಿಷ್ಣು ಭಟ್‌ನನ್ನು ಹೋಟೆಲ್‌ ಮ್ಯಾನೇಜರ್‌ ಪ್ರಶ್ನಿಸಿದ್ದಾರೆ. ಅಷ್ಟಕ್ಕೆ ಆಕ್ರೋಶಗೊಂಡ ವಿಷ್ಣು ಭಟ್‌ ಏಕಾಏಕಿ ಮ್ಯಾನೇಜರ್‌ ಮೇಲೆ ಹಲ್ಲೆ(Assault) ಮಾಡಿದ್ದಾನೆ. ಅಷ್ಟರಲ್ಲಿ ಹೋಟೆಲ್‌ ಕೊಠಡಿಯಿಂದ ಹೊರ ಬಂದ ಸ್ನೇಹಿತ ಶ್ರೀಕಿ ಸಹ ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ವಿಷ್ಣು ಭಟ್‌ಗೆ ಪ್ರಚೋದನೆ ನೀಡಿದ್ದಾನೆ. ಈ ಸಂಬಂಧ ಹೋಟೆಲ್‌ ಮ್ಯಾನೇಜರ್‌ ನೀಡಿದ ದೂರು(Complaint) ಆಧರಿಸಿ ಇಬ್ಬರನ್ನೂ ಬಂಧಿಸಲಾಗಿದೆ(Arrested) ಎಂದು ಪೊಲೀಸರು(Police) ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ವ್ಯವಹಾರ ಮಾಡುವಾಗ ಇರಲಿ ಎಚ್ಚರ, ಯಾಮಾರಿಸುತ್ತೆ ಈ ನಟೋರಿಯಸ್ ಗ್ಯಾಂಗ್!

ಘಟನೆ ವೇಳೆ ಹೋಟೆಲ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಶ್ರೀಕಿ ಹಾಗೂ ವಿಷ್ಣು ಭಟ್‌ನನ್ನು ವಶಕ್ಕೆ ಪಡೆದು ಠಾಣೆಗೆ(Police Station) ಕರೆತಂದು ವಿಚಾರಣೆಗೆ ಒಳಪಡಿಸಿದ್ದರು. ಅಷ್ಟರಲ್ಲಿ ಹೋಟೆಲ್‌ ಮ್ಯಾನೇಜರ್‌ ದೂರು ನೀಡಿದ್ದರಿಂದ ಇಬ್ಬರನ್ನೂ ಬಂಧಿಸಲಾಗಿದೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ ವಿಷ್ಣು ಭಟ್‌ ಮದ್ಯ(Alcohol) ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಯಾರು ಈ ಶ್ರೀಕಿ?

ಸರ್ಕಾರಿ ವೆಬ್‌ಸೈಟ್‌ ಹ್ಯಾಕ್‌, ವಂಚನೆ, ಬಿಟ್‌ ಕಾಯಿನ್‌, ಡ್ರಗ್ಸ್‌(Drugs) ವ್ಯವಹಾರ ಸಂಬಂಧ ಈ ಹಿಂದೆ ಶ್ರೀಕಿಯನ್ನು ಸಿಸಿಬಿ ಪೊಲೀಸರು(CCB Police) ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ನಂತರ ಜಾರಿ ನಿರ್ದೇಶನಾಲಯವೂ(ED) ಸಹ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿತ್ತು. ಜಾಮೀನು(Bail) ಪಡೆದು ಜೈಲಿನಿಂದ(Jail) ಹೊರಬಂದಿದ್ದ ಶ್ರೀಕಿ ಕಳೆದ ನಾಲ್ಕು ತಿಂಗಳಿಂದ ಪಂಚತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ. ಇದೀಗ ಹಲ್ಲೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.

ಹ್ಯಾಕರ್‌ ಶ್ರೀಕಿ ವಿರುದ್ಧ ಮತ್ತಷ್ಟು ಕೇಸ್‌

ಡ್ರಗ್‌ ಮಾಫಿಯಾ: 9 ಕೋಟಿ ಬಿಟ್‌ ಕಾಯಿನ್‌ ಸಂಪಾದಿಸಿದ್ದ ಹ್ಯಾಕರ್‌ ಶ್ರೀಕಿ

ಇತ್ತೀಚೆಗೆ ಮಾದಕ ವಸ್ತು ಮಾರಾಟ ದಂಧೆಯಲ್ಲಿ ಸಿಕ್ಕಿಬಿದ್ದಿದ್ದ ಕುಖ್ಯಾತ ಅಂತಾರಾಷ್ಟ್ರೀಯ ಹ್ಯಾಕರ್‌(International Hacker) ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಹಲವು ವೆಬ್‌ಸೈಟ್‌ಗಳಿಗೆ ಕನ್ನ ಹಾಕಿ ದೋಚಿದ್ದ ಸುಮಾರು 9 ಕೋಟಿ ಮೌಲ್ಯದ 31 ಬಿಟ್‌ ಕಾಯಿನ್‌ಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದರು. 

ಪೋಕರ್‌ ಗೇಮ್‌ಗಳು ಸೇರಿದಂತೆ ದೇಶ-ವಿದೇಶದ ಸರ್ಕಾರಿ ಹಾಗೂ ಖಾಸಗಿ ವೆಬ್‌ಸೈಟ್‌ಗಳನ್ನು(Website) ಹ್ಯಾಕ್‌ ಮಾಡಿದ್ದ ಆರೋಪಿ, ಬಳಿಕ ಕ್ರಿಪ್ಪೋ ಕರೆನ್ಸಿಗಳಾದ ಬಿಟ್‌ ಕಾಯಿನ್‌, ವೈಎಫ್‌ಎ, ಇಥೆರಿಯಂ ಖಾತೆಗಳಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಕರೆನ್ಸಿ ದೋಚಿದ್ದ. ಇದುವರೆಗೆ ಆತನಿಂದ ಅಕ್ರಮವಾಗಿ ಹ್ಯಾಕ್‌(Hack) ಮಾಡಿ ಸಂಪಾದಿಸಿದ್ದ .9 ಕೋಟಿ ಮೌಲ್ಯದ 31 ಬಿಟ್‌ ಕಾಯಿನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. 

ರೆಸಾರ್ಟ್‌ಗಳಲ್ಲಿ ಕುಳಿತು ಹ್ಯಾಕಿಂಗ್‌

ಬೆಂಗಳೂರಿನ(Bengaluru) ಐಷಾರಾಮಿ ಹೋಟೆಲ್‌ ಹಾಗೂ ನಗರ ಹೊರವಲಯದ ರೆಸಾರ್ಟ್‌ಗಳೇ(Resort) ಶ್ರೀಕಿಯ ಅಡ್ಡೆಗಳಾಗಿದ್ದವು. ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿ ಬಿಟ್‌ ಕಾಯಿನ್‌ಗಳನ್ನು(Bitcoin) ಕಳವು(Theft) ಮಾಡಿ ಬಿಟ್‌ ಕಾಯಿನ್‌ ಟ್ರೇಡರ್‌ ರಾಬಿನ್‌ ಖಂಡೇಲ್‌ವಾಲ್‌ ಹಾಗೂ ಇತರೆ ಟ್ರೇಡರ್‌ಗಳಿಗೆ ಮಾರುತ್ತಿದ್ದ. ನಂತರ ಟ್ರೇಡರ್‌ಗಳಿಂದ ತನ್ನ ಸಹಚರರ ಬ್ಯಾಂಕ್‌ ಖಾತೆಗೆ ಹಾಗೂ ಹವಾಲ ಮುಖಾಂತರ ಹಣವನ್ನು ಸ್ವೀಕರಿಸಿ ಶ್ರೀಕಿ ಐಷರಾಮಿ ಜೀವನ ನಡೆಸುತ್ತಿದ್ದ. ಡಾರ್ಕ್ ವೆಬ್‌ಸೈಟ್‌ನಲ್ಲಿ ವಿದೇಶದಲ್ಲಿ ಡ್ರಗ್ಸ್‌ ಖರೀದಿಗೆ ಬಿಟ್‌ ಕಾಯಿನ್‌ಗಳನ್ನು ಬಳಸಿರುವುದು ತನಿಖೆಯಲ್ಲಿ ಮಾಹಿತಿ ಸಿಕ್ಕಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
 

click me!