* ವಿಚ್ಛೇದಿತ ಮಹಿಳೆಯನ್ನು ಕೊಲೆ ಮಾಡಿದ ಪ್ರಿಯಕರ
* ಆರೋಪಿಯನ್ನು ಬಂಧಿಸಿದ ವಿಜಯನಗರ ಠಾಣೆಯ ಪೊಲೀಸರು
* ವಿಚ್ಛೇದನ ಪಡೆದುಕೊಂಡು ಪ್ರಿಯಕರ ಜತೆ ಇದ್ದ ಮಹಿಳೆ
ಬೆಂಗಳೂರು, (ನ.06): ವಿಚ್ಛೇದಿತ ಮಹಿಳೆಯನ್ನು (Divorced woman) ಆಕೆಯ ಪ್ರಿಯಕರನೇ ಕೊಲೆ (Murder) ಮಾಡಿರುವ ಘಟನೆ ಬೆಂಗಳೂರಿನ (Bengaluru) ವಿಜಯನಗರ ಬಳಿ ಪಟ್ಟೇಗಾರಪಾಳ್ಯದ ಬಾಡಿಗೆಮನೆಯಲ್ಲಿ ನಡೆದಿದೆ.
ಗಾಯತ್ರಿ (26) ಎಂಬಾಕೆಯನ್ನು ಕೊಲೆ ಮಾಡಲಾಗಿದೆ. ಗಾಯತ್ರಿ ಪ್ರಿಯಕರ ಮಂಜುನಾಥ್ ಪ್ರಸಾದ್ ಕೊಲೆ ಆರೋಪಿ. ಆರೋಪಿಯನ್ನು ವಿಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮನೆಕೆಲಸ ಮಾಡಿಕೊಂಡು ಗಾಯತ್ರಿ ಜೀವನ ಸಾಗಿಸುತ್ತಿದ್ದಳು.
undefined
ಪಟಾಕಿ ಸಿಡಿತ ವಿಚಾರಕ್ಕೆ ಜಗಳ: ತಂದೆ ಜತೆ ಸೇರಿ ವ್ಯಕ್ತಿಯನ್ನು ಕೊಂದ ಟೆಕ್ಕಿ
ಮಹಿಳೆಗೆ ಮುಂಚೆಯೇ ಮದುವೆ ಆಗಿ ಎರಡು ಮಕ್ಕಳಿದ್ದವು. ಬಳಿಕ ತನ್ನ ಪತಿಯಿಂದ ಗಾಯತ್ರಿ ವಿಚ್ಛೇದನ ಪಡೆದುಕೊಂಡಿದ್ದಳು, ನಂತರ ಪ್ರಿಯಕರ ಮಂಜುಪ್ರಸಾದ್ ಎಂಬುವನ ಜೊತೆ ಸಂಬಂಧ ಇಟ್ಟುಕೊಂಡಿದ್ದಳು.
ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಅದು ತಾರಕಕ್ಕೇರಿದ್ದು, ಮಂಜುಪ್ರಸಾದ್, ಗಾಯತ್ರಿಯನ್ನು ಕೊಲೆ ಮಾಡಿದ್ದಾನೆ. ಈ ಬಗ್ಗೆ ವಿಜಯನಗರ ಠಾಣಾ ಪೊಲೀಸರು ತನಿಖೆ ನಡೆಸಿದ್ದಾರೆ.
ಊಟ ಖಾಲಿ ಎಂದಿದ್ದಕ್ಕೆ ಚಾಕು ಇರಿತ
ಊಟ ಖಾಲಿ ಆಗಿದೆ ಎಂದು ಹೇಳಿದ್ದಕ್ಕೆ ಹೊಟೆಲ್ ಮಾಲೀಕನಿಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಆರೋಪಿಯನ್ನು ರೌಡಿಶೀಟರ್ ಯಲ್ಲಪ್ಪ ಎಂದು ಗುರುತಿಸಲಾಗಿದೆ. ಹೋಟೆಲ್ ಮಾಲೀಕ ಚಂದ್ರಶೇಖರ್ ಚಾಕು ಇರಿತಕ್ಕೆ ಒಳಗಾದವರು. ಗಾಯಾಳು ಪ್ರಸ್ತುತ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿ 10 ಗಂಟೆಯ ನಂತರ ಮದ್ಯದ ಬಾಟಲಿ ಹಿಡಿದು ಸಿಗರೇಟು ಸೇದುತ್ತಾ ಬಂದಿದ್ದ ಯಲ್ಲಪ್ಪ, ಊಟ ಖಾಲಿ ಆಗಿದೆ ಎಂದಿದ್ದಕ್ಕೆ ಚಾಕು ಇರಿದು ಅಟ್ಟಹಾಸ ಮೆರೆದಿದ್ದ. ಈತ 2 ತಿಂಗಳಿಂದಷ್ಟೇ ಜೈಲಿನಿಂದ ಹೊರ ಬಂದಿದ್ದ ರೌಡಿಶೀಟರ್ ಎಂದು ಪೊಲೀಸರು ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸವಾರರು ಸಾವು
ಮಂಡ್ಯದ ಕೆ.ಆರ್.ಪೇಟೆ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಎರಡು ಬೈಕ್ ಮುಖಾಮುಖಿಯಾಗಿದ್ದು ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಸವಾರರಾದ ಮಧು (20), ದರ್ಶನ್ (21) ಮೃತರು. ಬೈಕ್ನಲ್ಲಿದ್ದ ಮತ್ತಿಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ. ಮೃತ ಮಧು ಸಾಸಲು ಗ್ರಾಮದವರು ಮತ್ತು ದರ್ಶನ್ ಹಾಲದಹಳ್ಳಿಯವರು. ವೇಗವಾಗಿ ಸಂಚರಿಸುತ್ತಿದ್ದ ಬೈಕ್ಗಳು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.
ಕೃಷಿ ಹೊಂಡಕ್ಕೆ ಬಿದ್ದು ಮೂವರು ಸಾವು
ಕ್ರಿಕೆಟ್ ಆಟವಾಡುತ್ತಿದ್ದಾಗ ಬಾಲ್ ಅನ್ನು ಎತ್ತಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಸೇರಿ ಒಟ್ಟು ಮೂವರು ಸಾವನ್ನಪ್ಪಿರುವ ಘಟನೆ ಆನೇಕಲ್ನಲ್ಲಿ ನಡೆದಿದೆ. ಆನೇಕಲ್ನ ಇಗ್ಗಲೂರು ಗ್ರಾಮದ ಬಳಿ ಕೃಷಿ ಹೊಂಡಕ್ಕೆ ಬಿದ್ದು ದುರಂತವಾಗಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಇಗ್ಗಲೂರು ಬಳಿ ಈ ಘಟನೆ ನಡೆದಿದೆ.
ಕೃಷಿ ಹೊಂಡಕ್ಕೆ ಬಿದ್ದ ಬಾಲ್ ತರಲು ಹೋಗಿ ಈ ದುರ್ಘಟನೆ ನಡೆದಿದೆ. ಕೃಷಿ ಹೊಂಡಕ್ಕೆ ಬಿದ್ದ ಒಬ್ಬನನ್ನು ರಕ್ಷಿಸಲು ಹೋಗಿ ಮೂವರು ಸಾವನ್ನಪ್ಪಿದ್ದಾರೆ. ಧೀಮಂತ ( 13), ಹೃಷಿಕೇಶ್ (9), ಅಮಿತ್ ಕುಮಾರ್ (31) ಮೃತಪಟ್ಟವರಾಗಿದ್ದಾರೆ. ಮಜುಮ್ದಾರ್ ಆಸ್ಪತ್ರೆಗೆ ಮೂವರ ಮೃತದೇಹಗಳನ್ನು ಸ್ಥಳಾಂತರ ಮಾಡಲಾಗಿದೆ. ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಕ್ರಿಕೆಟ್ ಬಾಲ್ ತರಲು ಹೋಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.ಒಬ್ಬನನ್ನು ಬಚಾವ್ ಮಾಡಲು ಹೋಗಿ ಮೂರು ಜನರ ಸಾವನ್ನಪ್ಪಿದ್ದಾರೆ.