ಹಾಸನದಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ರೌಡಿಶೀಟರ್‌ನ ಬರ್ಬರ ಹತ್ಯೆ!

By Gowthami K  |  First Published Jul 4, 2023, 4:53 PM IST

ಹಾಸನ ಜಿಲ್ಲೆಯಲ್ಲಿ ಹಾಡಹಗಲೇ ರೌಡಿಶೀಟರ್‌ನ ಬರ್ಬರ ಹತ್ಯೆಯಾಗಿದೆ. ನಡುರಸ್ತೆಯಲ್ಲಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ  ರೌಡಿಶೀಟರ್‌ ನನ್ನು ದುಷ್ಕರ್ಮಿಗಳು ಕೊಂದು ಹಾಕಿದ್ದಾರೆ.


ಚನ್ನರಾಯಪಟ್ಟಣ (ಜು.4): ಹಾಸನ ಜಿಲ್ಲೆಯಲ್ಲಿ ಹಾಡಹಗಲೇ ರೌಡಿಶೀಟರ್‌ನ ಬರ್ಬರ ಹತ್ಯೆಯಾಗಿದೆ. ನಡುರಸ್ತೆಯಲ್ಲಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ  ರೌಡಿಶೀಟರ್‌ ನನ್ನು ದುಷ್ಕರ್ಮಿಗಳು ಕೊಂದು ಹಾಕಿದ್ದಾರೆ. ಮಾಸ್ತಿಗೌಡ (30) ಕೊಲೆಯಾದ ರೌಡಿಶೀಟರ್ ಆಗಿದ್ದು, ಹಾಸನ ಜಿಲ್ಲೆ, ಚನ್ನರಾಯಪಟ್ಟಣದ ಧನಲಕ್ಷ್ಮೀ ಚಿತ್ರಮಂದಿರದ ಮುಂಭಾಗ ಘಟನೆ ನಡೆದಿದೆ.  ಇನ್ನೋವಾ ಕಾರಿನಲ್ಲಿ ಬಂದ ನಾಲ್ಕೈದು ಯುವವರು ಈ  ಕೃತ್ಯ ಎಸಗಿದ್ದಾರೆಂಬ ಆರೋಪವಿದೆ

ಮಾಸ್ತಿಗೌಡ ,ಚನ್ನರಾಯಪಟ್ಟಣ ತಾಲ್ಲೂಕಿನ ಹೊನ್ನಮಾರನಹಳ್ಳಿ ಗ್ರಾಮದವನಾಗಿದ್ದಾನೆ. ಹಲವು ಕೃತ್ಯಗಳ್ಲಲಿ ಈತನ ಹೆಸರಿದ್ದು, ರೌಡಿಶೀಟರ್ ಆಗಿದ್ದ. ಮಧ್ಯ ಪೇಟೆಯಲ್ಲಿ ನಡೆದ ಬರ್ಬರ ಹತ್ಯೆಯಿಂದ ಚನ್ನರಾಯಪಟ್ಟಣ ಜನತೆ ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tap to resize

Latest Videos

ಸಿಎಂ ತವರಿನಲ್ಲಿ ಸರ್ಕಾರಿ ವೈದ್ಯೆಯ ಲಂಚಾವತಾರ, ಸೂಜಿ ಚುಚ್ಚಿದ್ರು ಕಾಸು, ಬ್ಯಾಂಡೆಂಜ್

ಹುಲಿಕೆರೆ ಬಳಿ ಕತ್ತು ಸೀಳಿ ರೌಡಿಶೀಟರ್‌ ಕೊಲೆ
ಶ್ರೀರಂಗಪಟ್ಟಣ: ರೌಡಿ ಶೀಟರ್‌ನನ್ನು ಸ್ನೇಹಿತರೇ ಕತ್ತು ಸೀಳಿ ಕೊಲೆ ಮಾಡಿರುವ ಭೀಕರ ಘಟನೆ ತಾಲೂಕಿನ ಹುಲಿಕೆರೆ ಗ್ರಾಮದ ಬಳಿ ಕಳೆದವಾರ ನಡೆದಿತ್ತು ನಡೆದಿದೆ. ಕೆಆರ್‌ಎಸ್‌ ಪೊಲೀಸ್‌ ಠಾಣೆಯಲ್ಲಿ ರೌಡಿ ಶೀಟರ್‌ ಆಗಿದ್ದ ಸುಧೀರ್‌ (35)ನನ್ನು ಹಾಡಹಗಲೇ ಸ್ನೇಹಿತರೇ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಸುಧೀರ್‌ ಹಾಗೂ ಪೂರ್ಣಚಂದ್ರ ಮತ್ತು ಮೂರ್ನಾಲ್ಕು ಜನ ಸ್ನೇಹಿತರು ಜೊತೆಗೂಡಿ ಜೂ.29ರಂದು ಬೆಳಗ್ಗೆ ಪಾರ್ಟಿ ಮಾಡಿ ಮದ್ಯ ಸೇವನೆ ಮಾಡಿದ್ದಾರೆ. ಈ ವೇಳೆ ಪೂರ್ಣಚಂದ್ರ ಹಾಗೂ ಸ್ನೇಹಿತರು ಸುಧೀರ್‌ ಜೊತೆ ಸಣ್ಣಪುಟ್ಟಗಲಾಟೆ ಮಾಡಿಕೊಂಡಿದ್ದಾರೆ. ಇದರಿಂದ ಪಾರ್ಟಿಯಿಂದ ಹೊರನಡೆದ ಸುಧೀರ್‌ ತನ್ನ ಮನೆಗೆ ತೆರಳಿದ್ದಾನೆ.

ನಂತರ ಹುಲಿಕೆರೆ ರಸ್ತೆ ಬಳಿಗೆ ಬಂದ ಸುಧೀರ್‌ನನ್ನು ಪೂರ್ಣಚಂದ್ರ ಹಾಗೂ ಸ್ನೇಹಿತರು ಹಿಂಬಾಲಿಸಿ ಬಂದು ನಡು ರಸ್ತೆಯಲ್ಲೆ ಕುತ್ತಿಗೆ ಕತ್ತರಿಸಿ ಸುಧೀರ್‌ನನ್ನು ಹತ್ಯೆಗೈದು ಪರಾರಿಯಾಗಿದ್ದಾರೆ.

Bengaluru: ಹೋಟೆಲ್ ಉದ್ಯಮಿಯ ಬರ್ಬರ ಹತ್ಯೆ, ಲವರ್ ಜೊತೆಗೂಡಿ ಪತಿಗೆ ತಿಲಾಂಜಲಿ ಇಟ್ಟ ಪತ್ನಿ!

ಈ ಸಂಬಂಧ ಕೆಆರ್‌ಎಸ್‌ ಪೊಲೀಸ್‌ ಠಾಣೆಗೆ ಸಾರ್ವಜನಿಕರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಸುಧೀರ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ತನ್ನ ಸ್ನೇಹಿತರೇ ರೌಡಿಶೀಟರ್‌ ಸುಧೀರ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವುದು, ಹಳೆ ದ್ವೇಷವೇ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

click me!