Haveri: ಶಿಗ್ಗಾವಿಯ ಟಾಕೀಸ್‌ನಲ್ಲಿ ಫೈರಿಂಗ್ ಪ್ರಕರಣ: ಆರೋಪಿಯನ್ನು ಬಂಧಿಸದಿದ್ದರೆ ಬೀದಿಗಿಳಿದು ಹೋರಾಟ

By Govindaraj SFirst Published May 7, 2022, 6:08 PM IST
Highlights

ಕಳೆದ ಹತ್ತೊಂಬತ್ತು ದಿನಗಳ ಹಿಂದೆ ಇಡೀ ಹಾವೇರಿ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಶೂಟೌಟ್ ಪ್ರಕರಣದ ಆರೋಪಿ ಪೊಲೀಸರಿಗೆ ಇನ್ನೂ ಪತ್ತೆಯಾಗಿಲ್ಲ. ತಲೆ ಮರೆಸಿಕೊಂಡಿರೋ ಆರೋಪಿ ಪತ್ತೆಗೆ ಪೊಲೀಸರು ಹರಸಾಹಸ ಪಟ್ಟರೂ ಸಾಧ್ಯವಾಗಿಲ್ಲ.

ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ 

ಹಾವೇರಿ (ಮೇ.07): ಕಳೆದ ಹತ್ತೊಂಬತ್ತು ದಿನಗಳ ಹಿಂದೆ ಇಡೀ ಹಾವೇರಿ (Haveri) ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಶೂಟೌಟ್ ಪ್ರಕರಣದ (Shootout Case) ಆರೋಪಿ ಪೊಲೀಸರಿಗೆ (Police) ಇನ್ನೂ ಪತ್ತೆಯಾಗಿಲ್ಲ. ತಲೆ ಮರೆಸಿಕೊಂಡಿರೋ ಆರೋಪಿ ಪತ್ತೆಗೆ ಪೊಲೀಸರು ಹರಸಾಹಸ ಪಟ್ಟರೂ ಸಾಧ್ಯವಾಗಿಲ್ಲ. ಆರೋಪಿ ಎಲ್ಲಿದ್ದಾನೆ ಎಂಬುದು ಗೊತ್ತಿಲ್ಲ.ಪ್ರಕರಣದ ತನಿಖೆ ಎಲ್ಲಿಗೆ ಬಂತು ಅಂತನೂ ಗೊತ್ತಿಲ್ಲ. ಆರೋಪಿ ಬಂಧನಕ್ಕೆ ಆಗ್ರಹಿಸಿ ಗುಂಡೇಟು ತಿಂದ ಯುವಕನ ಪೋಷಕರು ಶಿಗ್ಗಾವಿಯಲ್ಲಿ (Shiggaon) ಇಂದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಕನ್ನಡದ ಹಿಟ್ ಸಿನಿಮಾ 'ಕೆಜಿಎಫ್ ಚಾಪ್ಟರ್ 2' (KGF 2) ಚಿತ್ರ ವೀಕ್ಷಣೆ ವೇಳೆ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಇಡೀ ಹಾವೇರಿ ಜಿಲ್ಲೆಯೇ ಬೆಚ್ಚಿಬಿದ್ದಿತ್ತು. 

ಸಿಎಂ ಬೊಮ್ಮಾಯಿ (Basavaraj Bommai) ಪ್ರತಿನಿಧಿಸುವ ತಾಲೂಕಿನಲ್ಲೇ ಗುಂಡಿನ ಸದ್ದು ಕೇಳಿ ಬಂದಿತ್ತು. ಕಳೆದ ಏಪ್ರಿಲ್ 19ರಂದು ರಾತ್ರಿ ಸುಮಾರು 10.30 ಕ್ಕೆ ಶಿಗ್ಗಾವಿಯ ರಾಜಶ್ರೀ ಚಿತ್ರಮಂದಿರದಲ್ಲಿ ಘಟನೆ ನಡೆದಿತ್ತು. ಆದರೆ ಇದುವರೆಗೆ ಈ ಪ್ರಕರಣದ ತನಿಖೆ ಮಾತ್ರ ಚುರುಕುಗೊಂಡಿಲ್ಲ. ಗುಂಡೇಟು ತಿಂದ ಯುವಕ ಸಾವು ಬದುಕಿನ ಮಧ್ಯೆ ಇನ್ನೂ ಹೋರಾಟ ನಡೆಸುತ್ತಿದ್ದಾನೆ. ಆರೋಪಿಗಳನ್ನು ಹೆಡಮುರಿ ಕಟ್ಟಿ. ಇಲ್ಲವಾದರೆ ಪ್ರತಿಭಟನೆ ಮಾಡಲು ರಸ್ತೆಗೆ ಇಳಿಯಬೇಕಾಗುತ್ತದೆ ಎಂದು ಪೊಲೀಸ್ ಇಲಾಖೆಗೆ ಖಡಕ್ ಎಚ್ಚರಿಕೆಯನ್ನು  ಕುಟುಂಬಸ್ಥರು ಮತ್ತು ಗ್ರಾಮಸ್ಥರು ನೀಡಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ 'ಕೆಜಿಎಫ್ 2' ಚಿತ್ರ ವೀಕ್ಷಣೆ ವೇಳೆ ಕ್ಷುಲ್ಲಕ ಕಾರಣಕ್ಕೆ ನಡೆದಿದ್ದ ಶೂಟೌಟ್ ಪ್ರಕರಣದ ಆರೋಪಿಯನ್ನು ಇನ್ನೂ ಬಂಧಿಸಿಲ್ಲ. 

Firing: ಕೆಜಿಎಫ್ 2 ಪ್ರದರ್ಶನದ ವೇಳೆ ಶೂಟೌಟ್‌: ಹಾವೇರಿಯಲ್ಲಿ ತಲ್ಲಣ..!

ಶಿಗ್ಗಾವಿಯ ರಾಜಶ್ರೀ ಚಿತ್ರಮಂದಿರದಲ್ಲಿ ವಸಂತ್ ಮತ್ತು ಮುಂಜುನಾಥ ಅಲಿಯಾಸ್ ಮಲ್ಲಿಕ್ ಪಾಟೀಲ್ ಎಂಬ ಯುವಕರ  ನಡುವೆ ಜಗಳ ಶುರುವಾಗಿತ್ತು. ಮುಂಜು ಅಲಿಯಾಸ್ ಮಲ್ಲಿಕ್ ಪಿಸ್ತೂಲ್‌ನಿಂದ ವಸಂತ್  ದೇಹಕ್ಕೆ ಮೂರು ಗುಂಡು ಹೊಕ್ಕಿಸಿದ್ದ.ಇದರಿಂದ ವಸಂತ್  ಇಂದಿಗೂ ಹುಬ್ಬಳ್ಳಿಯ ಕಿಮ್ಸ್  ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ. ಆದರೆ ಗುಂಡಿನ ದಾಳಿ ನಡೆಸಿದ್ದ ಆರೋಪಿ ಮಂಜುನಾಥ ಅಲಿಯಾಸ್ ಮಲ್ಲಿಕ್ ಪಾಟೀಲ್ ಇನ್ನೂ ಪತ್ತೆ ಆಗಿಲ್ಲ. ಆದ್ದರಿಂದ ಇಂದು ಶಿಗ್ಗಾವಿ ಪಟ್ಟಣದಲ್ಲಿ ವಸಂತ ಕುಟುಂಬಸ್ಥರು ಮತ್ತು ಮುಗುಳಿ ಗ್ರಾಮಸ್ಥರು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿ ಬಂಧಿಸಿ, ಇಲ್ಲ ನಾವು ರಸ್ತೆಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ‌. 

ರಾಜಶ್ರೀ ಟಾಕೀಸ್‌ನಲ್ಲಿ ಕೆಜಿಎಫ್ ನೈಟ್ ಶೋ ವೇಳೆ ಮುಗುಳಿ ಗ್ರಾಮದ ವಸಂತ ಕುಮಾರ್ ಶಿವಪೂರ ಎಂಬ 27 ವರ್ಷದ ಯುವಕನ ಮೇಲೆ ಆರೋಪಿ ಎನ್ನಲಾದ ಮಂಜುನಾಥ ಅಲಿಯಾಸ್ ಮಲ್ಲಿಕ್ ಮನಸ್ಸೊಯಿಚ್ಚೆ ಗುಂಡಿನ ದಾಳಿ ನಡೆಸಿದ್ದ. ಈ ವೇಳೆ ಎದ್ನೊಬಿದ್ನೊ ಎಂಬಂತೆ ಜನ ಥೀಯೆಟರ್‌ನಿಂದ ಓಡಿ ಹೊರ ಬಂದಿದ್ದರು. ಥಿಯೇಟರ್ ಮಾಲೀಕರಿಗೆ ಅವಾಗಲೇ ತಿಳಿದಿದ್ದು, ಚಿತ್ರಮಂದಿರದಲ್ಲಿ ಶೂಟೌಟ್ ನಡದಿದೆ ಅಂತಾ. ಅರೆ ಪ್ರಜ್ಞಾವಸ್ಥೆಯಲ್ಲಿ ನರಳುತ್ತಾ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ವಸಂತ್‌ನನ್ನು ಹುಬ್ಬಳ್ಳಿಯ ಕೀಮ್ಸ್‌ಗೆ ರವಾನೆ ಮಾಡಲಾಗಿತ್ತು.ಪ್ರಕರಣ ನಡೆದು 20 ದಿನಾ ಆಗುತ್ತಾ ಬಂದರು ಆರೋಪಿ ಪತ್ತೆಯಾಗಿಲ್ಲ. 

Haveri ಕೆಜಿಎಫ್ ಪ್ರದರ್ಶನದ ವೇಳೆ ಶೂಟೌಟ್, ಆರೋಪಿ ಪತ್ತೆಗೆ ಪೊಲೀಸರ ಬಲೆ

ಇದು ಸಿಎಂ ಕ್ಷೇತ್ರ ಇಲ್ಲಿಯೇ ಇಂತಹ ಪ್ರಕರಣಕ್ಕೆ ನಿರ್ಲಕ್ಷ್ಯ ವಹಿಸಿದರೆ ಬೇರೆ ಜಿಲ್ಲೆಯ ಕಥೆಯೇನು ಎಂಬ ಪ್ರಶ್ನೆಯನ್ನು ಮುಗುಳಿ ಗ್ರಾಮಸ್ಥರು ಕೇಳುತ್ತಿದ್ದಾರೆ. ಆದರೆ ಇತ್ತ ಎಸ್ಪಿ ಹನುಮಂತರಾಯ ಆರೋಪಿಯನ್ನು ಹಿಡಿಯಲು ಮೂರು ಟೀಮ್ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಇತ್ತ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪೊಲೀಸ್ ಇಲಾಖೆಯ ನಿರ್ಲಕ್ಷ್ಯತನದಿಂದ ಆರೋಪಿಯನ್ನು ಬಂಧಿಸಲಾಗುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಸಿಎಂ ಕ್ಷೇತ್ರವಾದ ಹಿನ್ನಲೆ, ಪೋಲಿಸ್ ಇಲಾಖೆ ಈ ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡಬೇಕಿತ್ತು. ಹೇಗಾದರೂ ಮಾಡಿ ಆರೋಪಿಯ ಹೆಡೆಮುರಿ ಕಟ್ಟೋಕೆ ಪ್ಲ್ಯಾನ್ ಮಾಡಬೇಕಿತ್ತು. ಆದರೆ ಈ ವಿಳಂಬದ ಹಿಂದೆ ಕಾಣದ ಕೈಗಳು ಕೆಲಸ ಮಾಡಿ ಆರೋಪಿ ರಕ್ಷಣೆ ಮಾಡಲು ನಿಂತಿದ್ದಾವಾ ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

click me!