Ramanagara Accident: ಕೆಎಸ್ಆರ್‌ಟಿಸಿ ಬಸ್ ಹಾಗೂ ಇನೋವಾ ಕಾರ್ ನಡುವೆ ಡಿಕ್ಕಿ: ಉಡುಪಿ‌ಯ ಮೂವರು ಸಾವು

By Govindaraj S  |  First Published May 7, 2022, 4:04 PM IST

ದೂರದೂರಿನಿಂದ ಕೆಲಸ ಅರಿಸಿ ಆತ ಕನಕಪುರಕ್ಕೆ ಬಂದಿದ್ದ. ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆತ ತನ್ನ ಕುಟುಂಬದವರನ್ನ ಕರೆತರುತ್ತಿದ್ದ. ಆದರೆ ಅಲ್ಲಿ ವಿಧಿಯಾಟವೆ ಬೇರೆ ಆಗಿತ್ತು. ಇನ್ನೇನೂ ಮನೆ ಸೇರುವ ಹೊತ್ತಿಗೆ ಜವರಾಯ ತನ್ನ ಅಟ್ಟಹಾಸ ಮೆರೆದು 6 ತಿಂಗಳ ಹಸುಗೂಸು ಸೇರಿ ಮೂವರನ್ನ ಬಲಿ ಪಡೆದುಕೊಂಡಿದ್ದಾನೆ.


ವರದಿ: ಜಗದೀಶ್ ಆರ್, ಏಷ್ಯಾ ನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ (ಮೇ.07): ದೂರದೂರಿನಿಂದ ಕೆಲಸ ಅರಿಸಿ ಆತ ಕನಕಪುರಕ್ಕೆ (Kanakapura) ಬಂದಿದ್ದ. ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆತ ತನ್ನ ಕುಟುಂಬದವರನ್ನ ಕರೆತರುತ್ತಿದ್ದ. ಆದರೆ ಅಲ್ಲಿ ವಿಧಿಯಾಟವೆ ಬೇರೆ ಆಗಿತ್ತು. ಇನ್ನೇನೂ ಮನೆ ಸೇರುವ ಹೊತ್ತಿಗೆ ಜವರಾಯ ತನ್ನ ಅಟ್ಟಹಾಸ ಮೆರೆದು 6 ತಿಂಗಳ ಹಸುಗೂಸು ಸೇರಿ ಮೂವರನ್ನ ಬಲಿ (Death) ಪಡೆದುಕೊಂಡಿದ್ದಾನೆ.

Tap to resize

Latest Videos

ಹೌದು! ಬೆಳ್ಳಂಬೆಳಿಗ್ಗೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರಿನ ಕೆಮ್ಮಾಳೆ ಬಳಿ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದ. ಇನ್ನೋವಾ ಕಾರು (Innova Car) ಹಾಗೂ ಕೆಎಸ್ಆರ್‌ಟಿಸಿ ಬಸ್ (KSRTC Bus) ನಡುವೆ ಅಪಘಾತ (Accident) ಸಂಭವಿಸಿ ಸ್ಥಳದಲ್ಲೆ ಮೂವರು ಮೂವರು ಮೃತಪಟ್ಟಿದ್ದಾರೆ‌. ಉಡುಪಿ (Udupi) ಮೂಲದ  ಉಮೇಶ್ (29)  ಅಕ್ಷತಾ (24) ಹಾಗೂ  ಅಕ್ಷತಾಳ 6 ತಿಂಗಳ ಹಸುಗೂಸು ಸುಮಂತ್ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. 

ಚಾರ್ಮಾಡಿ ಘಾಟ್ ನಲ್ಲಿ ಕಾರು ಅಪಘಾತ, ಹಣ ಚಿನ್ನ ದೋಚಿದ ದರೋಡೆಕೋರರು!

ಇತ್ತ ಅಕ್ಷತಾ ಪತಿ ಸುರೇಂದ್ರ ಹಾಗೂ ಸಂಬಂಧಿಯ 15 ವರ್ಷದ ನವನೀತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ಸಂಜೆ ಸುರೇಂದ್ರ ದಂಪತಿ ಉಡುಪಿಯಿಂದ ಬಾಡಿಗೆ ಕಾರಿನಲ್ಲಿ ಕನಕಪುರಕ್ಕೆ ಹೊರಟ್ಟಿದ್ರು. ಬೆಳಿಗ್ಗೆ 7.30 ಸುಮಾರಿಗೆ ಕನಕಪುರ ತಾಲೂಕಿನ ಸಾತನೂರು ತಲುಪಿದ್ರು. ಇನ್ನೂ 10 ಕಿಲೋಮೀಟರ್ ಕ್ರಮಿಸಿದ್ರೆ ಆ ಕುಟುಂಬ ಕನಕಪುರ ತಲುಪುತಿತ್ತು ಆದರೆ ಅಪಘಾತ ನಡೆದು ಮೂವರು ಸಾವನ್ನಪ್ಪಿದ್ದಾರೆ.

ಅಂದಹಾಗೇ ಸುರೇಂದ್ರ ಕಳೆದ 10 ವರ್ಷಗಳಿಂದ ಕನಕಪುರದ ರತ್ನ ಹೋಟೆಲ್‌ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ರು. ತನ್ನ ಪತ್ನಿ ಅಕ್ಷತಾ ಜತೆಗೆ ಕನಕಪುರದಲ್ಲೆ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ರು. ಪತ್ನಿಯನ್ನ ಡೆಲಿವರಿಗೆ ಅಂತಾ ಉಡುಪಿಗೆ ಕಳುಹಿಸಿದ್ರು. 6 ತಿಂಗಳ ನಂತ್ರ ತನ್ನ ಹಸುಗೂಸು ಮಗ ಹಾಗೂ ಹೆಂಡತಿಯನ್ನ ಕನಕಪುರಕ್ಕೆ ಸುರೇಂದ್ರ  ಕರೆತರುತ್ತಿದ್ರು. ಆದರೆ ಕೆಮ್ಮಾಳೆ ಬಳಿ ದುರಂತ ನಡೆದು ಹೋಗಿತ್ತು. 

Hubballi: ಚಲಿಸುವ ರೈಲಿಗೆ ಅಡ್ಡ ನಿಂತ ವ್ಯಕ್ತಿಯ ಕಾಲು ಕಟ್!

ಇತ್ತ ಕನಕಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಕ್ಷತಾ, ಅಕ್ಷತಾ ಮಗು ಹಾಗೂ ಚಾಲಕ ಉಮೇಶ್ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸುರೇಂದ್ರ ಅವರ ತಲೆಗೆ ಗಾಯವಾಗಿದ್ದು ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. 15 ವರ್ಷದ ನವನೀತ್ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ. ಒಟ್ಟಾರೆ ಇಂದು ಬೆಳಿಗ್ಗೆ ಜವರಾಯ ತನ್ನ ಅಟ್ಟಹಾಸ ಮೆರೆದು ಮಗು ಸೇರಿ ಮೂವರನ್ನ ಬಲಿ ಪಡೆದುಕೊಂಡಿದ್ದಾನೆ. ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!