ಹಾಸನದಲ್ಲಿ ಇಬ್ಬರು ಮುಸ್ಲಿಂ ಯುವಕರು ಬುಲೆಟ್ ಬೈಕ್‌ನಲ್ಲಿ ಸಂಚಾರ ಮಾಡುತ್ತಾ ಗನ್ ಹಿಡಿದು ಪೋಸ್ ಕೊಟ್ಟಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಹಾಸನ (ಜೂ.30): ಯುವಜನರಿಗೆ ಸೋಶಿಲಯಲ್ ಮೀಡಿಯಾದಲ್ಲಿ ಸ್ಟಾರ್ ಆಗುವ ಹುಚ್ಚು ಕಡಿಮೆಯೇನಿಲ್ಲ. ಹೀಗಾಗಿ, ತರಹೇವಾರಿ ರೀಲ್ಸ್‌ಗಳನ್ನು ಮಾಡಿ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಆದರೆ, ಹಾಸನದಲ್ಲಿ ಇಬ್ಬರು ಮುಸ್ಲಿಂ ಯುವಕರು ಬುಲೆಟ್ ಬೈಕ್‌ನಲ್ಲಿ ಜಾಲಿ ರೈಡ್ ಮಾಡುತ್ತಾ ಗನ್ ತೋರಿಸುತ್ತಾ ಪುಂಡಾಟ ಮೆರೆದಿದ್ದಾರೆ.
ಹಾಸನ ಪಟ್ಟಣದಲ್ಲಿ ಇಬ್ಬರು ಮುಸ್ಲಿಂ ಯುವಕರು ಗನ್ ಹಿಡಿದು ಬೈಕ್‌ನಲ್ಲಿ ಸಂಚಾರ ಮಾಡುತ್ತಾ ಪೋಸ್ ಕೊಟ್ಟು ಪುಂಡಾಟ ಮೆರೆದಿದ್ದಾರೆ. ಬೈಕ್ ಸವಾರ ವೇಗವಾಗಿ ಬುಲೆಟ್ ಓಡಿಸಿದರೆ, ಹಿಂಬದಿ ಸವಾರ ಗನ್ ಹಿಡಿದು ವಿವಿಧ ರೀತಿಯಲ್ಲಿ ಪೋಸ್ ನೀಡುತ್ತಾ, ಎದರಿಗೆ ಬಂದವರಿಗೆ ಶೂಟ್ ಮಾಡುವ ರೀತಿ ವರ್ತನೆ ಮಾಡಿದ್ದಾರೆ. ಇದರಿಂದ ಗಾಬರಿಗೊಂಡ ಸ್ಥಳೀಯರು ಹಾಗೂ ಇತರೆ ಪ್ರಯಾಣಿಕರು ಆತಂಕಗೊಂಡಿದ್ದಾರೆ. ಇನ್ನು ಜನರು ತತಕ್ಷಣ ಹಿಡಿಶಾಪ ಹಾಕಿ ಮುಂದೆ ಹೋಗಿದ್ದಾರೆ.
undefined
ಚೆಲುವಿನ ಚಿತ್ತಾರ ಮಾದರಿ ಪ್ರೇಮಕಥೆ: ಅಲ್ಲಿ ಹುಡ್ಗ ಹುಚ್ಚನಾದ್ರೆ, ಇಲ್ಲಿ ಹುಡುಗಿಯೇ ಹುಚ್ಚಿಯಾದ್ಲು!
ಗನ್ ಹಿಡಿದು ಬೆದರಿಸುತ್ತಾ ಪುಂಡಾಟಿಕೆ: ಆದರೆ, ನಾವು ಮಾಡಿದ ಕರ್ಮ ನಮ್ಮನ್ನು ಬಿಡುವುದಿಲ್ಲ ಎಂಬಂತೆ, ಗನ್ ತೋರಿಸುತ್ತಾ ರೀಲ್ಸ್ ಮಾಡಿದ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದಾದ ಕೂಡಲೆ ಶಾಸಕ ಸ್ವರೂಪ್ ಪ್ರಕಾಶ್ ಅವರೇನಿಮ್ಮ ಮತದಾರರಿಗೆ ಸ್ವಲ್ಪ ಬುದ್ದಿ ಹೇಳಿ ಅಂತ ಮಾಜಿ ಶಾಸಕ ಪ್ರೀತಂ ಗೌಡ ಫಾಲೋವರ್ಸ್‌ಗಳು ಕಿಡಿಕಾರಿದ್ದಾರೆ. ಆಗಿಂದಾಗ್ಗೆ ವ್ಹೀಲಿಂಗ್ ಪುಂಡಾಟ ನಡೆಸುತ್ತಿದ್ದವರ ನಡುವೆ ಪೊಲೀಸರಿಗೆ ತಲೆಬಿಸಿ ಗನ್ ಹಿಡಿದು ಬೆದರಿಸುತ್ತಾ ಪುಂಡಾಟಿಕೆ ಮೆರೆದ ಯುವಕರು ಮತ್ತಷ್ಟು ತಲೆಬಿಸಿ ಮಾಡಿದ್ದರು. ಇನ್ನು ಕೂಡಲೇ ಇಂಥವರಿಗೆ ಪೊಲೀಸರು ಸರಿಯಾಗಿ ಬುದ್ಧಿಪಾಠ ಕಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದರು.
ರೀಲ್ಸ್ ಮಾಡಲಿಕ್ಕೆ ಗನ್ ಬಳಕೆ: ಇನ್ನು ಬಕ್ರೀದ್ ಹಬ್ಬದ ನಿಮಿತ್ತ ಬೆಳಗ್ಗೆ ಹಬ್ಬ ಮಾಡಿದ ನಂತರ ಸಂಜೆ ವೇಳೆಗೆ ಹಾಸನ ನಗರದ ಹೊರವಲಯದಲ್ಲಿ ಬಂದ ಯುವಕರು ಬೈಕ್‌ನಲ್ಲಿ ಸುತ್ತಾಟ ಮಾಡಿದ್ದಾರೆ. ಈ ವೇಳೆ ರೀಲ್ಸ್ ಮಾಡುವ ಉದ್ದೇಶದಿಂದ ಗನ್ ತಂದಿದ್ದಾರೆ. KA 13 EK 5679 ನಂಬರಿನ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ನಲ್ಲಿ ಗನ್ ಹಿಡದು ತೋರಿಸುತ್ತಾ ಪುಂಡಾಟವನ್ನು ಮೆರೆದಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ, ಪೋಸ್ಟ್ ಅನ್ನು ಸಾರ್ವಜನಿಕರು ಪೊಲೀಸರಿಗೆ ಟ್ಯಾಗ್ ಮಾಡಿ ವಶಕ್ಕೆ ಪಡೆಯುವಂತೆ ಆಗ್ರಹಿಸಿದ್ದರು.
ಹೊಸಪೇಟೆ ಬಳಿ ಭೀಕರ ಅಪಘಾತ: ಬಳ್ಳಾರಿ ಕೌಲ್‌ಬಜಾರ್‌ನ ನಾಲ್ವರು ಸಾವು
ನಕಲಿ ಗನ್ ಹಿಡಿದು ಪುಂಡಾಟ: ಇನ್ನು ಸಾರ್ವಜನಿರಿಗೆ ಆತಂಕ ಹುಟ್ಟಿಸಿದ್ದ ಮುಸ್ಲಿಂ ಯುವಕರ ಗನ್ ಹಿಡಿದು ತಿರುಗಾಡುವ ಪುಂಡಾಟಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮುಸ್ಲಿಂ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಬುಲೆಟ್ ಬೈಕ್ ಹಾಗೂ ಗನ್ ವಶಕ್ಕೆ ಪಡೆದಿದ್ದು, ಗನ್ ಪರಿಶೀಲನೆ ಮಾಡಿದಾಗ ನಕಲಿ ಎಂಬುದು ತಿಳಿದುಬಂದಿದೆ. ಹಿಂಬದಿ ಬೈಕ್ ಸವಾರ ನಕಲಿ ಗನ್ ಹಿಡಿದು ಬೈಕ್ ನಲ್ಲಿ ಓಡಾಡುವುದನ್ನು ರೀಲ್ಸ್ ಮಾಡಲು ಹೋಗಿ ಆತಂಕ ಸೃಷ್ಟಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ನಿರ್ದೇಶನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಯುವಕರು, ಬೈಕ್ ಹಾಗೂ ಗನ್ ವಶಕ್ಕೆ ಪಡೆದಿದ್ದಾರೆ.