ಒಂದೇ ಕೋಮಿನ ಯುವಕರ ನಡುವೆ ಜಗಳ; ಬಕ್ರೀದ್ ಹಬ್ಬದ ದಿನವೇ ಯುವಕ ಕೊಲೆ

By Ravi Janekal  |  First Published Jun 30, 2023, 1:38 PM IST

ಬಕ್ರೀದ್ ಹಬ್ಬದಂದು ಸ್ನೇಹಿತರ ಜೊತೆ ಪಾರ್ಟಿ ಮಾಡುವಾಗ ಮಾತಿಗೆ ಮಾತು ಬೆಳೆದು ನಡೆದ ಜಗಳದಲ್ಲಿ ಯುವಕನೋರ್ವನನ್ನು ಕೊಲೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸೂರಿ ಕಾಲೋನಿಯಲ್ಲಿ ನಡೆದಿದೆ.


ಬಳ್ಳಾರಿ (ಜೂ.30) : ಬಕ್ರೀದ್ ಹಬ್ಬದಂದು ಸ್ನೇಹಿತರ ಜೊತೆ ಪಾರ್ಟಿ ಮಾಡುವಾಗ ಮಾತಿಗೆ ಮಾತು ಬೆಳೆದು ನಡೆದ ಜಗಳದಲ್ಲಿ ಯುವಕನೋರ್ವನನ್ನು ಕೊಲೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸೂರಿ ಕಾಲೋನಿಯಲ್ಲಿ ನಡೆದಿದೆ.

ಲಿಯಾಖತ್ ಅಲಿಯಾಸ್ ರೋಷನ್ (24) ಕೊಲೆಯಾದ ಯುವಕ. ಕಲ್ಬುರ್ಗಿಯಲ್ಲಿ ಅರೇಬಿಕ್ ವಿದ್ಯಾಭ್ಯಾಸ ಮಾಡುತ್ತಿದ್ದ  ಲಿಯಾಖತ್. ಬಕ್ರೀದ್ ಹಬ್ಬ ಹಿನ್ನಲೆಯಲ್ಲಿ ಬುಧವಾರ ಸಂಜೆ ಬಳ್ಳಾರಿಗೆ ಆಗಮಿಸಿದ್ದ ಯುವಕ. ಬೆಳಗ್ಗೆ ಕುಟುಂಬದವರೊಡಗೂಡಿ ಬಕ್ರೀದ್ ಹಬ್ಬ ಆಚರಿಸಿದ್ದ ಲಿಯಾಕತ್. ಸಂಜೆ ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದ. ಎಲ್ಲರೂ ಒಂದೇ ಸಮುದಾಯದ ಸ್ನೇಹಿತರು. ಪಾರ್ಟಿ ಮಾಡುವ ವೇಳೆ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ. ಸಣ್ಣ ಜಗಳ ವಿಕೋಪಕ್ಕೆ ತಿರುಗಿದೆ ಈ ವೇಳೆ ಮಾರಾಕಾಸ್ತ್ರದಿಂದ ನಡೆದ ದಾಳಿ ಬಲಿಯಾಗಿರುವ ಯುವಕ ಲಿಯಾಕರ್

Tap to resize

Latest Videos

undefined

ಬಕ್ರೀದ್ ಹಬ್ಬದಂದು ಹತ್ಯೆ ತಡೆಯಲು 250 ಮೇಕೆ ಖರೀದಿಸಿದ ಜೈನ ಸಮುದಾಯ!

ಆದರೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಸ್ಥಳಕ್ಕೆ ಎಎಸ್ಪಿ ನಟರಾಜ್, ಗ್ರಾಮೀಣ ಠಾಣೆಯ  ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿದ್ದ ಸ್ಥಳ ಪರಿಶೀಲನೆ ನಡೆಸಿ, ಸಂಶಯಾಸ್ಪದ ಯುವಕರನ್ನು ವಶಕ್ಕೆ ಪಡೆದಿರುವ ಪೊಲೀಸರು.

ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿ‌ ತನಿಖೆ ಕೈಗೊಂಡಿದ್ದಾರೆ.

click me!