Life Threatening: ಕಾಂಗ್ರೆಸ್‌ ಮುಖಂಡನ ವಿರುದ್ಧ FIR

By Kannadaprabha News  |  First Published Dec 19, 2021, 12:07 PM IST

*  ಹಣದ ವ್ಯವಹಾರ ಹಿನ್ನೆಲೆಯಲ್ಲಿ ಜೀವ ಬೆದರಿಕೆ, ಹಲ್ಲೆ ಆರೋಪ
*  ಮೂರು ಖಾಲಿ ಪೇಪರ್‌ನಲ್ಲಿ ಹಾಕಿ ಸಹಿ ಹಾಕುವಂತೆ ಒತ್ತಾಯ
*  ನಾವು ಯಾರಿಗೂ ಬೆದರಿಕೆ ಹಾಕಿಲ್ಲ: ಆಂಜಿನೇಯಲು


ಬಳ್ಳಾರಿ(ಡಿ.19):  ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಬುಡಾ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌(Congress) ಮುಖಂಡ ಜೆ.ಎಸ್‌. ಆಂಜಿನೇಯಲು(GS Anjineyalu) ಹಾಗೂ ಅವರ ಮಕ್ಕಳ ವಿರುದ್ಧ ಇಲ್ಲಿನ ಕೌಲ್‌ಬಜಾರ್‌ ಠಾಣೆಯಲ್ಲಿ ಜೀವ ಬೆದರಿಕೆ, ದೌರ್ಜನ್ಯ ಆರೋಪದಡಿ ಎಫ್‌ಐಆರ್‌(FIR) ದಾಖಲಾಗಿದೆ.

ಪೂರ್ಣಚಂದ್ರರಾವ್‌ ಎಂಬುವರು ದೂರು(Complaint) ನೀಡಿದ್ದು, ‘ಜೆ.ಎಸ್‌. ಆಂಜಿನೇಯಲು ಹಾಗೂ ಅವರ ಮಕ್ಕಳಾದ ಶಿವು, ಅಖಿಲ್‌, ಪವನ್‌ ಅವರು ಮನೆಗೆ ನುಗ್ಗಿ ಹಲ್ಲೆ(Assault) ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಿನ್ನ ಸಹೋದರ ಡ್ಯಾನಿಯಲ್‌ ನನಗೆ ಹಣ ಕೊಡಬೇಕಾಗಿದ್ದು, ಆ ಹಣವನ್ನು ನೀನೇ ಕೊಡಬೇಕು. ಇಲ್ಲದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿ, ನಂತರ ಗಾಂಧಿ ನಗರದ ಅಮ್ಮಾ ಹೋಟೆಲ್‌ ಬಳಿ ಮಾತನಾಡಲು ಕರೆಸಿ ಮೂರು ಖಾಲಿ ಪೇಪರ್‌ನಲ್ಲಿ ಹಾಕಿ ಸಹಿ ಹಾಕುವಂತೆ ಒತ್ತಾಯಿಸಿದರು. 

Latest Videos

undefined

Fraud| ಒಂದೇ ಸೈಟ್‌ ಹಲವರಿಗೆ ಮಾರಾಟ, ಡಿ ಗ್ರೂಪ್‌ ಅಧ್ಯಕ್ಷನ ವಿರುದ್ಧ FIR

ಸಹಿ ಮಾಡಲು ಒಪ್ಪದಿದ್ದಾಗ ನಿನ್ನ ಇಲ್ಲಿಯೇ ಮುಗಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಬಲವಂತದಿಂದ ಸಹಿ ಮಾಡಿಸಿಕೊಂಡಿದ್ದಾರೆ. ಈ ವಿಷಯ ಯಾರಿಗಾದರೂ ಹೇಳಿದರೆ, ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಎಸಗಿದ ಜೆ.ಎಸ್‌.ಆಂಜಿನೇಯಲು ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಪೂರ್ಣಚಂದ್ರರಾವ್‌ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜೆ.ಎಸ್‌. ಆಂಜಿನೇಯಲು, ನಾವು ಯಾರಿಗೂ ಬೆದರಿಕೆ ಹಾಕಿಲ್ಲ. ವ್ಯವಹಾರ ಲೇವಾದೇವಿ ಇರುವುದು ನಿಜ. ಕೊಟ್ಟ ಹಣ(Money) ಕೇಳಿದ್ದಕ್ಕೆ ಈ ರೀತಿಯಾಗಿ ಸುಳ್ಳು ಆರೋಪ(Allegation) ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಶಾಸಕರ ವಿರುದ್ಧ ಎಫ್‌ಐಆರ್‌ ದಾಖಲು

ಬಂಗಾರಪೇಟೆ: ವಿಧಾನಪರಿಷತ್‌ ಚುನಾವಣೆ (MLC Election) ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಸ್ಥಳೀಯ ಕಾಂಗ್ರೆಸ್‌ ಶಾಸಕರು (Congress MLA) ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. 

ನವೆಂಬರ್‌ 27ರಂದು ಪಟ್ಟಣದ ಎಸ್‌.ಎನ್‌.ರೆಸಾರ್ಟ್‌ನಲ್ಲಿ ಎಂಎಲ್‌ಸಿ ಚುನಾವಣೆ  ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಅನಿಲ್‌ ಕುಮಾರ್‌ ಪರವಾಗಿ ಪ್ರಚಾರ ಸಭೆಯಲ್ಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ (SN Narayana swamy) ತಮ್ಮ ಭಾಷಣದಲ್ಲಿ ಗ್ರಾಪಂ ಸದಸ್ಯರು ಯಾರೂ ಬಿಜೆಪಿ (BJP) ಅಭ್ಯರ್ಥಿಯ ಹಣಕ್ಕೆ ಬೆರಗಾಗಿ ಮತ ಹಾಕಬೇಡಿ, ನೀವು ಬಿಜೆಪಿಗೆ ಮತ ಹಾಕಿದರೆ ನನಗೆ ಎಲ್ಲ ಗೊತ್ತಾಗುತ್ತದೆ. ಮತದಾನದ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಗಳನ್ನು ಅಳವಡಿಸಲಾಗುವುದು. ನೀವು ಯಾರಿಗೆ ಮತ ಹಾಕಲಾಗಿದೆ ಎಂದು ಅದರ ಮೂಲಕ ತಿಳಿಯಲಿದೆ. ಆದ್ದರಿಂದ ಎಚ್ಚರಿಕೆಯಿಂದ ಮತ ಚಲಾಯಿಸಿ ಎಂದು ಬೆದರಿಕೆ ಹಾಕಿದ್ದರು. 

ಮಾಜಿ ಸಚಿವ ಶಂಕರ್‌ ವಿರುದ್ಧ ಕಿಡಿಕಾರಿದ್ದ ರೈತನ ವಿರುದ್ಧ ಕೇಸ್‌..!

ಅಲ್ಲದೆ ಈ ಹಿಂದೆ ನಡೆದ ಗ್ರಾಪಂ ಚುನಾವಣೆಗಳಲ್ಲಿ (Grama Panchayat Election)  ಸಹ ಯಾವ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಮೋಸ ಮಾಡಿದರು ಎಂಬುದು ನನ್ನ ಬಳಿ ಆದಾರವಿದೆ. ಅಧಿಕಾರಿಗಳು ನನ್ನ ಮಾತು ಕೇಳುವರು ಅವರ ಮೂಲಕ ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳುವೆ ಎಂದು ಬ್ಲಾಕ್‌ ಮೇಲ್‌ ಮಾಡುವ ರೀತಿ ಗ್ರಾಪಂಃ ಸದಸ್ಯರಿಗೆ ಎಚ್ಚರಿಕೆ ನೀಡಿದ್ದ ಭಾಷಣದ ವಿಡಿಯೋ ಎಲ್ಲಾ ಕಡೆ ವೈರಲ್‌  ಆಗಿತ್ತು.

ಈ ಹಿನ್ನೆಲೆಯಲ್ಲಿ ಶಾಸಕರ(MLA) ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿತ್ತು. ಪುರಸಭೆ ಮುಖ್ಯಾಧಿಕಾರಿ ಯಶವಂತ್‌ ಕುಮಾರ್‌ ನೀಡಿದ ದೂರಿನ ಮೇರೆಗೆ ಸ್ಥಳಿಯ ಪೊಲೀಸ್‌ ಠಾಣೆಯಲ್ಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿತ್ತು.
 

click me!