* ಕ್ರೆಡಿಟ್ ಕಾರ್ಡ್ ಮಾಲಿಕರಿಂದಲೇ ಹಣ
* ಸುಲಿದ ರಾಷ್ಟ್ರೀಕೃತ ಬ್ಯಾಂಕ್‌ಗೆ ದಂಡ
* ಫ್ರಾನ್ಸ್‌ನಲ್ಲಿ ಕಳುವಾಗಿದ್ದ ಕ್ರೆಡಿಟ್ ಕಾರ್ಡ್
ಬೆಂಗಳೂರು(ಜ.02): ವಿದೇಶದಲ್ಲಿ ಕ್ರೆಡಿಟ್ ಕಾರ್ಡನ್ನು ಕದ್ದಿದ್ದ ಕಳ್ಳರು ಬಳಕೆ ಮಾಡಿದ್ದ ಮೊತ್ತವನ್ನು ಕಾರ್ಡ್ ಮಾಲೀಕರಿಂದ ವಸೂಲಿ ಮಾಡಿದ್ದ ನಗರದ ರಾಷ್ಟ್ರೀಕೃತ ಬ್ಯಾಂಕ್‌ಗೆ(Nationalized Bank) 10 ಸಾವಿರ ದಂಡ ವಿಧಿಸಿರುವ ಗ್ರಾಹಕರ ಹಕ್ಕುಗಳ ನ್ಯಾಯಾಲಯ(Court), ಸಂಪೂರ್ಣ ಮೊತ್ತ ಹಿಂದಿರುಗಿಸಲು ಸೂಚಿಸಿದೆ. ಅಲ್ಲದೆ, ಗ್ರಾಹಕರಿಗೆ (ಕಾರ್ಡ್ ಮಾಲೀಕರು) ನಡೆಸಿದ ಕಾನೂನು ಹೋರಾಟ ವೆಚ್ಚವಾಗಿ 5 ಸಾವಿರಗಳನ್ನು ಆದೇಶದ ಪ್ರತಿ ಸಿಕ್ಕ ಬಳಿಕ 6 ತಿಂಗಳಲ್ಲಿ ಪಾವತಿ ಮಾಡಬೇಕು ಎಂದು ಆದೇಶಿಸಿದೆ.
ಪ್ಯಾರಿಸ್‌ಗೆ(Paris) ತೆರಳಿದ್ದ ಅರ್ಜಿದಾರರು ಕಾರ್ಡ್(Cridt Card) ಕಳೆದುಕೊಂಡ ತಕ್ಷಣ ಅಲ್ಲಿಯ ಪೊಲೀಸರಿಗೆ(Police) ದೂರು ನೀಡಿದ್ದಾರೆ. ಅಲ್ಲದೇ, ಆರ್‌ಬಿಐ(RBI) ನಿಯಮಾವಳಿ ಪ್ರಕಾರ ಬ್ಯಾಂಕ್ ವಹಿವಾಟಿನ ದುರ್ಬಳಕೆಗೆ ಸಂಬಂಧಿಸಿದಂತೆ ಕಾರ್ಡ್ ಕಳೆದುಹೋದ 3 ದಿನಗಳ ಒಳಗೆ ಬ್ಯಾಂಕ್‌ಗೆ ಇ-ಮೇಲ್ ಮೂಲಕ ಹಾಗೂ ನೇರವಾಗಿ ತೆರಳಿ ದೂರು ನೀಡಿದ್ದಾರೆ. ಈ ವೇಳೆ ಬ್ಯಾಂಕ್ ಎಚ್ಚೆತ್ತುಕೊಂಡು, ಪರಿಶೀಲಿಸಿ ಕ್ರಮ ಕೈಗೊಳ್ಳಬಹುದಿತ್ತು. ಹಾಗೆಯೇ, ಅರ್ಜಿದಾರರ ಖಾತೆಯಿಂದ ಕಳುವಾಗಿದ್ದ ಹಣವನ್ನು 10 ದಿನಗಳಲ್ಲಿ ತುಂಬಬೇಕಿತ್ತು. ಆದರೆ, ನಿಗದಿತ ಅವಧಿಯಲ್ಲಿ ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಬ್ಯಾಂಕ್(Bank), ಅರ್ಜಿದಾರರಿಂದಲೇ ಹಣ ಜಮೆ ಮಾಡಿಸಿಕೊಂಡಿರುವುದು ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸಿದಂತಾಗಿದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
undefined
Director Nagashekar Files Complaint: ನಿರ್ದೇಶಕರಿಗೆ 50 ಲಕ್ಷ ವಂಚಿಸಿ ದಂಪತಿ ಪರಾರಿ!
ಇದೇ ವೇಳೆ ಬ್ಯಾಂಕ್ ಅರ್ಜಿದಾರರಿಂದ ಬಲವಂತವಾಗಿ ಜಮೆ ಮಾಡಿಸಿಕೊಂಡಿರುವ 1 ಲಕ್ಷವನ್ನು ಬಡ್ಡಿ ಸಹಿತ ಹಿಂದಿರುಗಿಸಬೇಕು. ಅಲ್ಲದೆ, ನ್ಯಾಯಾಂಗ ವೆಚ್ಚವಾಗಿ 5 ಸಾವಿರ ಮತ್ತು ಮಾನಸಿಕವಾಗಿ ತೊಂದರೆ ನೀಡಿದ್ದಕ್ಕೆ .10 ಸಾವಿರ ಪರಿಹಾರ(Compensation) ನೀಡಲು ಸೂಚಿಸಿದೆ.
ಪ್ರಕರಣದ ಹಿನ್ನೆಲೆ
ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆ ನಿವಾಸಿ ಹಾಗೂ ನಿವೃತ್ತ ಎಂಜಿನಿಯರ್ ವಿಜಯ್ ಬಸುತ್ಕರ್ (70) 2019ರ ಡಿಸೆಂಬರ್ 30ರಂದು ಪ್ಯಾರಿಸ್‌ಗೆ ತೆರಳಿದ್ದರು. ಅಲ್ಲಿನ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ವೇಳೆ 700 ಯುರೋ, ಡ್ರೈವಿಂಗ್ ಲೈಸೆನ್ಸ್ ಹಾಗೂ 3 ಕ್ರೆಡಿಟ್ ಕಾರ್ಡ್ ಇದ್ದ ಪರ್ಸ್ ಕಳೆದುಹೋಗಿತ್ತು. ಕಾರ್ಡ್ ಕದ್ದಿದ್ದ ಕಳ್ಳರು, ಕ್ರೆಡಿಟ್ ಕಾರ್ಡ್‌ನಿಂದ 1,300 ಯುರೋ (ಸುಮಾರು .1 ಲಕ್ಷ)ಗಳನ್ನು ಬಳಕೆ ಮಾಡಿದ್ದರು. ಪರ್ಸ್ ಕಳ್ಳತನವಾದ ಕೂಡಲೇ ಅರ್ಜಿದಾರರು ಪ್ಯಾರಿಸ್ ಪೊಲೀಸರಿಗೆ ದೂರು ನೀಡಿದ್ದರು.
ಅಲ್ಲದೇ, ಕ್ರೆಡಿಟ್ ಕಾರ್ಡ್ ನೀಡಿದ್ದ ಬ್ಯಾಂಕ್‌ಗೆ ಇ-ಮೇಲ್ ಮೂಲಕ ಮಾಹಿತಿ ನೀಡಿ, ತಕ್ಷಣ ಕಾರ್ಡ್ ಬ್ಲಾಕ್ ಮಾಡುವಂತೆ ಮನವಿ ಮಾಡಿದ್ದರು. ಅಲ್ಲದೆ, 2020ರ ಜನವರಿ 2ರಂದು ಬೆಂಗಳೂರಿಗೆ ವಾಪಸ್ಸಾದ ಕೂಡಲೇ ಬ್ಯಾಂಕಿಗೆ ತೆರಳಿ ಲಿಖಿತ ದೂರು ದಾಖಲಿಸಿದ್ದರು. ಆದರೆ, ಮನವಿ ಪರಿಗಣಿಸದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಾಕಿ (ಕಳುವಾದ) ಹಣ ಪಾವತಿಸುವಂತೆ ಒತ್ತಾಯಿಸಿತ್ತು. ಅದರಂತೆ, ಅರ್ಜಿದಾರರು ಬ್ಯಾಂಕ್‌ಗೆ ಹಣ ಜಮಾ ಮಾಡಿದ್ದರು. ನಂತರ ಅರ್ಜಿದಾರರು ಬ್ಯಾಂಕಿನ ಕ್ರಮವನ್ನು ಪ್ರಶ್ನಿಸಿ 2020ರ ಜನವರಿ 29ರಂದು ಶಾಂತಿನಗರದಲ್ಲಿರುವ ಒಂದನೇ ಹೆಚ್ಚುವರಿ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿದ್ದರು.
Cybercrime : ನಿವೃತ್ತ ಮಹಿಳಾ ಬ್ಯಾಂಕ್ ಅಧಿಕಾರಿಗೆ ಲಾಟರಿ ಆಸೆ.. ಒಕೆ ಅಂದಿದ್ದಕ್ಕೆ!
ಕಡಿಮೆ ಬಡ್ಡಿ ಆಸೆ ತೋರಿಸಿ 6 ಕೋಟಿ ವಂಚನೆ
ಬೆಂಗಳೂರು: ಕಡಿಮೆ ಬಡ್ಡಿಗೆ 400 ಕೋಟಿ ಸಾಲ(Loan) ಕೊಡಿಸುವುದಾಗಿ ನಂಬಿಸಿ ಇಬ್ಬರು ಉದ್ಯಮಿಗಳಿಂದ ಮುಂಗಡವಾಗಿ 5.85 ಕೋಟಿ ಹಣ ಪಡೆದು ಟೋಪಿ ಹಾಕಿದ್ದ ಐವರು ವಂಚಕರನ್ನು ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು(Police) ಬಂಧಿಸಿದ ಘಟನೆ ಡಿ.24 ರಂದು ನಡೆದಿತ್ತು.
ಕೇರಳ ಮೂಲದ ಸೈಯ್ಯದ್ ಇಬ್ರಾಹಿಂ ಅಲಿಯಾಸ್ ಡ್ಯಾನಿಯಲ್ ಆಮ್ಸಸ್ಟ್ರಾಂಗ್, ಕೊಯಮತ್ತೂರಿನ ವಿವೇಕ್ ಅಲಿಯಾಸ್ ವಿಕ್ಕಿ ಅಲಿಯಾಸ್ ವಿವೇಕಾನಂದ, ಕ್ರಿಸ್ಟೋಪರ್ ಅಲಿಯಾಸ್ ರಾಘವನ್, ರಘುವರನ್ ಅಲಿಯಾಸ್ ರಘು, ಶಿವರಾಮನ್ ಅಲಿಯಾಸ್ ನಾಗರಾಜು ಬಂಧಿತರು(Arrest). ಆರೋಪಿಗಳಿಂದ(accused) 4.10 ಕೋಟಿ ಮೌಲ್ಯದ 8.215 ಕೆ.ಜಿ. ಚಿನ್ನಾಭರಣ, 35 ಲಕ್ಷ ಮೌಲ್ಯದ ಬಿಎಂಡಬ್ಲ್ಯೂ ಕಾರು, 10 ಲಕ್ಷ ಬೆಲೆಯ ಎರ್ಟಿಗಾ, .36.6 ಲಕ್ಷ ನಗದು ಹಾಗೂ ಅವರ ಖಾತೆಯಲ್ಲಿ 1.86 ಲಕ್ಷ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.