ಡ್ಯೂಟಿಲೂ ಫುಲ್‌ ಟೈಟ್‌: ಸರ್ಕಾರಿ ಕಚೇರಿಯಲ್ಲೇ ಮದ್ಯ ಸೇವಿಸಿದ ಉದ್ಯೋಗಿ; ವಿಡಿಯೋ ವೈರಲ್‌

By BK Ashwin  |  First Published Aug 28, 2023, 10:29 PM IST

ಉತ್ತರ ಪ್ರದೇಶದ ಸ್ವೈಜ್‌ಪುರದ ನೋಂದಾವಣೆ ಇಲಾಖೆಯಲ್ಲಿ ನಿಯೋಜನೆಗೊಂಡ ಕಪೂರ್ ಸಿಂಗ್ ಎಂಬ ಅಧಿಕಾರಿ ಸರ್ಕಾರಿ ಕಚೇರಿಯೊಳಗೇ ಮದ್ಯಪಾನ ಸೇವಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ.


ಲಖನೌ (ಆಗಸ್ಟ್‌ 28, 2023): ಹರ್ದೋಯ್‌ನಲ್ಲಿರುವ ಸರ್ಕಾರಿ ನೌಕರನೊಬ್ಬ ಕರ್ತವ್ಯದ ವೇಳೆ ಕಚೇರಿಯಲ್ಲಿ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಉತ್ತರ ಪ್ರದೇಶದ ಸ್ವೈಜ್‌ಪುರದ ನೋಂದಾವಣೆ ಇಲಾಖೆಯಲ್ಲಿ ನಿಯೋಜನೆಗೊಂಡ ಅಧಿಕಾರಿಯಾಗಿರುವ ಇವರು ತೀವ್ರ ಕುಡಿತದ ಚಟ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದ ಸ್ವೈಜ್‌ಪುರದ ನೋಂದಾವಣೆ ಇಲಾಖೆಯಲ್ಲಿ ನಿಯೋಜನೆಗೊಂಡ ಕಪೂರ್ ಸಿಂಗ್ ಎಂಬ ಅಧಿಕಾರಿ ಸರ್ಕಾರಿ ಕಚೇರಿಯೊಳಗೇ ಮದ್ಯಪಾನ ಸೇವಿಸುತ್ತಿರುವ ವಿಡಿಯೋ ವೈರಲ್‌ ಆಗಿದ್ದು, ಇವರು ಪ್ರದರ್ಶಿಸುತ್ತಿರುವ ವರ್ತನೆ ಆತಂಕ ಮೂಡಿಸಿದೆ.

Tap to resize

Latest Videos

ಇದನ್ನು ಓದಿ: ಕೊನೆಯ ಆಸೆ ಎಂದು ರಸಗುಲ್ಲಾ ಕೊಟ್ಟು ಬಾಲಕನನ್ನು ಕೊಂದ ಮೂವರು ಅಪ್ರಾಪ್ತರು!

ವಿಡಿಯೋ ನೋಡಿ..

- सरकारी दफ्तर में एक कर्मचारी का शराब पीते वीडियो वायरल,रजिस्ट्री ऑफिस सवायजपुर में तैनात चपरासी कपूर सिंह का दारू पीने का वीडियो हुआ वायरल,ऑफिस में जाम छलकते नजर आ रहा है कर्मचारी,हरदोई के सवायजपुर रजिस्ट्री ऑफिस का बताया जा रहा है pic.twitter.com/5gVKmrEI6u

— anuj Pal (@anujPal50037043)

ವೈರಲ್ ಆಗಿರುವ ವಿಡಿಯೋದಲ್ಲಿ, ಉದ್ಯೋಗಿ ಕೈಯಲ್ಲಿ ಮದ್ಯಪಾನದ ಲೋಟ ಹಿಡಿದಿರುವುದನ್ನು ನಾವು ನೋಡಬಹುದು. ಈ ಘಟನೆಯನ್ನು ಅಧಿಕೃತ ಕಡತಗಳು ಮತ್ತು ಮೇಜಿನ ಮೇಲೆ ಇರಿಸಲಾದ ದಾಖಲೆಗಳ ಸುತ್ತಲೂ ಸರ್ಕಾರಿ ಕಚೇರಿಯಲ್ಲಿ ಈ ವಿಡಿಯೋ ರೆಕಾರ್ಡ್‌ ಮಾಡಲಾಗಿದೆ. ಸಾಲಿನಲ್ಲಿದ್ದ ಯಾರೊಂದಿಗಾದರೂ ಮಾತನಾಡುವಾಗ ಅವರು ಒಂದು ಕೈಯಲ್ಲಿ ಫೋನ್ ಮತ್ತು ಇನ್ನೊಂದು ಕೈಯಲ್ಲಿ ಮದ್ಯವನ್ನು ಹಿಡಿದಿರುವುದು ಕಂಡುಬಂದಿದೆ. 

ವರದಿಗಳ ಪ್ರಕಾರ, ಆವರಣದಲ್ಲಿ ತನ್ನ ಕರ್ತವ್ಯದ ಸಮಯದಲ್ಲಿ ವ್ಯಕ್ತಿ ಮದ್ಯವನ್ನು ಸೇವಿಸಿದ್ದಾನೆ, ಕೈಯ್ಯಲ್ಲಿ ಮದ್ಯ ತುಂಬಿರುವ ಲೋಟ ಹಿಡಿದುಕೊಂಡಿರುವ ವಿಡಿಯೋ ರೆಕಾರ್ಡ್‌ ಆಗಿದ್ದರೂ, ಅವನು ಅದನ್ನು ಸೇವಿಸಿದ ನಿಖರವಾದ ಕ್ಷಣವನ್ನು ರೆಕಾರ್ಡ್ ಮಾಡಲು ವಿಡಿಯೋ ತೆಗೆದವರು ವಿಫಲವಾಗಿದ್ದಾರೆ.

ಇದನ್ನೂ ಓದಿ: ಪ್ರೇಮಿ ವಿರುದ್ಧ ಸಾಕ್ಷಿ ಹೇಳ್ಲಿಲ್ಲ ಅಂತ 8 ತಿಂಗಳ ಗರ್ಭಿಣಿಯನ್ನೇ ಕತ್ತು ಹಿಸುಕಿ ಕೊಂದ ಪೋಷಕರು 

ಇತ್ತೀಚಿನ ದಿನಗಳಲ್ಲಿ ಇದೇ ರೀತಿಯ ಇನ್ನೊಂದು ಸುದ್ದಿ ಪಂಜಾಬ್‌ನಲ್ಲಿ ವರದಿಯಾಗಿತ್ತು. ಕಳೆದ ತಿಂಗಳು, ಪಂಜಾಬ್ ಪೊಲೀಸರು ಹೋಶಿಯಾರ್‌ಪುರದ ಸೆಂಟ್ರಲ್ ಜೈಲಿನ ಆಂಬ್ಯುಲೆನ್ಸ್‌ನಲ್ಲಿ ಮದ್ಯ ಸೇವಿಸುತ್ತಿರುವುದು ಕಂಡುಬಂದಿತ್ತು. ಸಮವಸ್ತ್ರ ಧರಿಸಿದ್ದ ಪೊಲೀಸರು ವಾಹನದಲ್ಲಿ ಕುಳಿತು ಕೈದಿಯೊಂದಿಗೆ ಮದ್ಯ ಸೇವಿಸಿದ್ದರು. ಈ ವಿಚಾರ ತಿಳಿದು ಬಂದ ನಂತರ ಪೊಲೀಸರು ಇಲಾಖಾ ವಿಚಾರಣೆ ಆರಂಭಿಸಿದ್ದು, ಈ ಘಟನೆ ಹೆಚ್ಚು ಸುದ್ದಿ ಮಾಡಿತ್ತು. ಅದಾದ ಬಳಿಕ, ಉತ್ತರ ಪ್ರದೇಶದ ಈ ಸರ್ಕಾರಿ ಅಧಿಕಾರಿ ಸರ್ಕಾರಿ ಕಚೇರಿಯಲ್ಲೇ ಮದ್ಯಪಾನ ಹಿಡಿದುಕೊಂಡಿರುವ ವಿಡಿಯೋ ಸೆರೆಯಾಗಿದ್ದು, ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: ನನ್‌ ಜತೆ ಮಲಗು ಬಾ ಅಂತ ಸೊಸೆಗೆ ಒತ್ತಾಯಿಸ್ತಿದ್ದ ಮಾವ: ಕುಡುಗೋಲಿನಿಂದ ಗಂಡನ ಕತ್ತು ಸೀಳಿದ ಅತ್ತೆ

click me!