Hyderabad: ಮಗಳಿಲ್ಲದ ಭೂಮಿಯಲ್ಲಿ ಬದುಕೋಕೆ ಸಾಧ್ಯವಿಲ್ಲ ಎಂದ ತಂದೆ, ರೈಲಿಗೆ ಸಿಕ್ಕು ಆತ್ಮಹತ್ಯೆ

By Santosh NaikFirst Published Aug 28, 2023, 7:55 PM IST
Highlights

5 ವರ್ಷದ ಮಗಳ ಸಾವಿನಿಂದ ತೀವ್ರವಾಗಿ ದುಃಖಿತನಾಗಿದ್ದ ತಂದೆ, ಈ ನೋವನ್ನು ತಾಳಲಾರದೆ ಸೋಮವಾರ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೈದರಾಬಾದ್‌ (ಆ.28): ತಂದೆ-ಮಗಳ ಪ್ರೀತಿ ವಿಶೇಷವಾದದ್ದು. ಚಿಕ್ಕಿನಿಂದಲೂ ಎದೆಗೆ ಒತ್ತಿಕೊಂಡು ಬೆಳೆದ ಮಗು ಅನಾರೋಗ್ಯಕ್ಕೆ ತುತ್ತಾಗಿ ಕಣ್ಣೆದುರಲ್ಲೇ ಪ್ರಾಣ ಬಿಟ್ಟಿದ್ದು ತಂದೆಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಗೆ ಮಗಳಿಲ್ಲದ ಭೂಮಿಯಲ್ಲಿ ಬದುಕೋಕೆ ಸಾಧ್ಯವಿಲ್ಲ ಎಂದುಕೊಂಡ ಆತ ರೈಲಿನ ಎದುರು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ ಖೈರತಾಬಾದ್‌ ಪ್ರದೇಶದಲ್ಲಿ ಸೋಮವಾರ ನಡೆದಿದೆ.  ಪೊಲೀಸರು ವರದಿಯ ಪ್ರಕಾರ ಮೃತ ಕಿಶೋರ್‌ನ ಐದು ವರ್ಷದ ಪುತ್ರಿ ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಸಾವು ಕಂಡಿದ್ದಳು. ಇದರಿಂದ ಆತ ನೋವಿನಲ್ಲಿ ಮುಳುಗಿ ಹೋಗಿದ್ದ ಎನ್ನಲಾಗಿದೆ.ಮಾಹಿತಿ ಪಡೆದ ರೈಲ್ವೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಖೈರಾತಾಬಾದ್‌ ಪ್ರದೇಶದವರೇ ಆಗಿದ್ದ ಕಿಶೋರ್‌ಗೆ ಐದು ವರ್ಷದ ಆರಾಧ್ಯ ಎನ್ನುವ ಮಗಳಿದ್ದಳು. ಅನಾರೋಗ್ಯಕ್ಕೆ ತುತ್ತಾಗಿದ್ದ ಈಕೆಗೆ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಕಿಶೋರ್‌ ಚಿಕಿತ್ಸೆ ಕೊಡಿಸಿದ್ದರು. ಏನೇ ಆದರೂ ಆರಾಧ್ಯ ಗುಣಮುಖರಾಗುವ ಲಕ್ಷಣ ಕಂಡಿರಲಿಲ್ಲ. ವಿಧಿಯ ಆಟದ ಮುಂದೆ ಕಿಶೋರ್‌ ಹಾಗೂ ಆರಾಧ್ಯರ ಹೋರಾಟ ಸೋತಿತ್ತು. ಕೆಲ ದಿನಗಳ ಹಿಂದೆ ಆರಾಧ್ಯ ಅಸುನೀಗಿದ್ದಳು.

ಚಿಕ್ಕಿಂದಿನಿಂದಲೂ ಎದೆಗೆ ಒತ್ತಿಕೊಂಡು ಬೆಳೆಸಿದ್ದ ಮಗಳನ್ನು ಒಂದೇ ಸಾರಿ ಕಳೆದುಕೊಂಡಾಗ ಕಿಶೋರ್‌ ಖಿನ್ನತೆಗೆ ಜಾರಿದ್ದರು. ಮಗಳು ಕಣ್ಣೆದುರೇ ಉಸಿರು ಚೆಲ್ಲಿದ ಕ್ಷಣವನ್ನು ಆತನಿಗೆ ಮರೆತು ಹೋಗುತ್ತಲೇ ಇರಲಿಲ್ಲ. ಪುಟ್ಟ ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಇದ್ದಿದ್ದಕ್ಕೆ ತನ್ನನ್ನು ತಾನೇ ಶಪಿಸಿಕೊಳ್ಳುತ್ತಿದ್ದ. ಮಗಳಿಲ್ಲದ ಬದುಕಿನಲ್ಲಿ ಇದ್ದು ಏನು ಮಾಡಲಿ, ಯಾರಿಗಾಗಿ ಬದುಕಲಿ ಎಂದುಕೊಂಡ ಆತ, ಖೈರತಾಬಾದ್‌ನಲ್ಲಿ ಸೋಮವಾರ ಮಧ್ಯಾಹ್ನದ ವೇಳೆಗೆ ರೈಲಿನ ಎದುರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚೆಸ್‌ ಸೂಪರ್‌ಸ್ಟಾರ್‌ ಪ್ರಜ್ಞಾನಂದನ ತಂದೆ-ತಾಯಿಗೆ ಎಲೆಕ್ಟ್ರಿಕ್‌ ಕಾರ್‌ ಗಿಫ್ಟ್‌ ನೀಡಿದ ಆನಂದ್‌ ಮಹೀಂದ್ರಾ!

Latest Videos

ಇದರ ಬೆನ್ನಲ್ಲಿಯೇ ಪೊಲೀಸರು ಪ್ರಕರಣದ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ್ದಾರೆ. ಈ ನಡುವೆ ಮಗಳ ಮೇಲೆ ಕಿಶೋರ್‌ ಇಟ್ಟ ಪ್ರೀತಿಗೆ, ಮಗಳ ಸಾವನ್ನು ನೋಡಲಾಗದೇ ಈತ ಸಾವು ಕಂಡ ರೀತಿಗೆ ಸಂಬಂಧಿಗಳಲ್ಲಿ ಸೂತಕದ ಛಾಯೆ ಆವರಿಸಿದೆ.

ಚೆಸ್‌ ವಿಶ್ವಕಪ್‌ನಲ್ಲಿ ಪ್ರಜ್ಞಾನಂದನ ಸಾಧನೆ ಮೆಚ್ಚಿದ ಆನಂದ್‌ ಮಹೀಂದ್ರಾ

click me!