ಸ್ವಂತ ಚಿಕ್ಕಮ್ಮನ ಮಗನ ಜೀವ ತೆಗೆದು ಅಮಾಯಕನಂತಿದ್ದ ಐನಾತಿ ಡಾಕ್ಟರ್ ಅಂದರ್

By Suvarna NewsFirst Published Aug 1, 2022, 8:09 PM IST
Highlights

 ಇದು ಎಂಥಾ ಲೋಕವಯ್ಯ ಅನ್ನೋ ಸಿನಿಮಾ ಸಾಂಗ್ ನೀವು ಕೇಳೇ ಇರಬೇಕು. ಈ ಜಗತ್ತಿನಲ್ಲಿ ಎಂಥೆಂತಾ ಐನಾತಿಗಳಿರ್ತಾರೆ ಅಂದರೆ ಸಮಾಜದ ಮುಂದೆ ನಾವು ಸಾಚಾ ಅಂತ ಪೋಸ್ ಕೊಡ್ತಿರ್ತಾರೆ. ಹೀಗೆ ಸ್ವಂತ ಚಿಕ್ಕಮ್ಮನ ಮಗನನ್ನೇ ಮರ್ಡರ್ ಮಾಡಿ ಏನೂ ಗೊತ್ತಿರದ ಅಮಾಯಕನಂತೆ ನಾಟಕ ಆಡಿದ ಸರ್ಕಾರಿ ವೈದ್ಯನ ನಿಜ ಬಣ್ಣ ಈಗ ಬಯಲಾಗಿದೆ. 

ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ


ಹಾವೇರಿ (ಆಗಸ್ಟ್.01):
ಸ್ವಂತ ಚಿಕ್ಕಮ್ಮನ ಮಗನ ಜೀವ ತೆಗೆದು ಏನು ಗೊತ್ತಿಲ್ಲದಂತೆ ಅಮಾಯಕನಂತೆ ನಾಟಕ ಮಾಡಿದ್ದ ಸರ್ಕಾರಿ ಡಾಕ್ಟರ್‌ನ ನಿಜ ಬಣ್ಣ ಬಟಾಬಯಲಾಗಿದ್ದು, ಇದೀಗ ಡಾಕ್ಟರ್ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು....ಕಳೆದ ಜುಲೈ 28 ರಂದು ಹಾವೇರಿ ತಾಲೂಕು ಗುತ್ತಲ ರಸ್ತೆಯಲ್ಲಿ ನವೀನ್ ರಾಥೋಡ್ ಶವ ಪತ್ತೆಯಾಗಿತ್ತು. ಈ ಸಾವಿನ ಪ್ರಕರಣವನ್ನು ಹಿಡಿದು ಹೊರಟ ಪೊಲೀಸರಿಗೆ ಮೃತ ಸಂಬಂಧಿಕ ಸಿಕ್ಕಿಬಿದ್ದಿದ್ದಾನೆ.

ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ, ಅದನ್ನ ವಿಡಿಯೋ ಮಾಡಿ ಕಿರುಕುಳ ನೀಡುತ್ತಿದ್ದವ ಅಂದರ್

ಕಳೆದ ಜುಲೈ 28 ರಂದು ಹಾವೇರಿ ತಾಲೂಕು ಗುತ್ತಲ ರಸ್ತೆಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿತ್ತು. ಹೂವಿನ ಹಡಗಲಿ ಮೂಲದ ನವೀನ್ ಎಂಬ ಯುವಕನನ್ನು ಕೊಲೆ ಮಾಡಿ ಶವ ಬಿಸಾಕಿ ಹೋಗಿದ್ರು. ಹಾವೇರಿ ತಾಲೂಕು ಗುತ್ತಲ ರಸ್ತೆ ಬಳಿ ಮರದ ಕೆಳಗೆ ಯುವಕನ ಶವ ನೋಡಿ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಸಿದ್ರು. ಗುತ್ತಲ ಮುಖ್ಯ ರಸ್ತೆಯ ಕನವಳ್ಳಿ ಗ್ರಾಮದ ಶಿಬಾರದ ಬಳಿ ಮರದ ಕೆಳಗೆ ಶವ ಬಿದ್ದಿತ್ತು.ಅಲ್ಲಿ ಪೋಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಮೃತ ಯುವಕ ನವೀನ್ ನ ಡಿ.ಎಲ್ ಸಿಕ್ಕಿತ್ತು. ಡ್ರೈವಿಂಗ್ ಲೈಸನ್ಸ್ ನಲ್ಲಿದ್ದ ಮಾಹಿತಿ ಪ್ರಕಾರ ಮೃತ ಪಟ್ಟ ಯುವಕ 26 ವರ್ಷದ ನವೀನ್ ರಾಥೋಡ್ ಎಂದು ಗೊತ್ತಾಯಿತು. ಬಳಿಕ ಮೃತ ನವೀನ್ ಸಂಬಂಧಿಕರಿಗೆ ಮೃತ ದೇಹ ಪತ್ತೆಯಾದ ಬಗ್ಗೆ ಮಾಹಿತಿ ನೀಡಲಾಗಿತ್ತು.ಮೃತ ನವೀನ್ ರಾಥೋಡ್ ಸಂಬಂಧಿಕರಾದ ರಾಜು ಅನ್ನೋರು ಕಂಪ್ಲೇಂಟ್ ಕೂಡಾ ನೀಡಿದ್ರು. ದೂರು ಆಧರಿಸಿ ನವೀನ್ ಮರ್ಡರ್ ಕೇಸ್ ಬೆನ್ನಟ್ಟಿದ ಪೋಲೀಸರು 3 ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

 ಪತ್ತೆಯಾದ ನವೀನ್ ದೇಹದ ಮೇಲೆ ಹಲವು ಗಾಯಗಳಿದ್ದವು.ಈ ಬಗ್ಗೆ ಹಾವೇರಿ ಗ್ರಾಮೀಣ ಪೋಲೀಸ್ ಠಾಣೆ ಸಿಪಿ ಐ ನಾಗಮ್ಮ ತನಿಖೆ ನಡೆಸಿದ್ದರು‌‌. ತನಿಖೆ ವೇಳೆ ಆರೋಪಿಗಳಾದ ಪ್ರಶಾಂತ್ ಲಮಾಣಿ, ಡಾ. ಚಿರಂಜೀವಿ ಅವರನ್ನು ಅರೆಸ್ಟ್  ಮಾಡಿ ವಿಚಾರಿಸಿದ ಪೋಲಿಸರಿಗೆ ಶಾಕ್ ಆಗಿತ್ತು. ಅಂದು ನವೀನ್ ಮೃತ ದೇಹ ಪತ್ತೆಯಾದ ದಿನ ಶವ ನೋಡಲು ಕೊಲೆ ಆರೋಪಿ ಡಾ.ಚಿರಂಜೀವಿ ಕೂಡಾ ಬಂದಿದ್ದ. ಸ್ಥಳದಲ್ಲಿ ಪೊಲೀಸರ ಜೊತೆ ಭಾರಿ ಅಮಾಯಕನಂತೆ ನಟಿಸಿದ್ದ. ಮಾಧ್ಯಮಗಳ ಮುಂದೆ ಬಂದು ಹೇಳಿಕೆ ಕೂಡಾ ಕೊಟ್ಟಿದ್ದ. 

ಮೃತ ನವೀನ್ ಗಾಂಜಾ ಹೊಡೀತಾ ಇದ್ದ.ಕುಡಿಯೋ ಚಟ ಇತ್ತು. ನಮ್ಮ ಮನೆಯಲ್ಲೇ ಇದ್ದ ನವೀನ್ ಏನೂ ಕೆಲಸ ಮಾಡ್ತಾ ಇರಲಿಲ್ಲ. ಅವನಿಗೆ ಜೀವನ ನಡೆಸಿಕೊಂಡು ಹೋಗೋಕೆ ಆಟೋ ಕೂಡಾ ಕೊಡಿಸಿದ್ವಿ. ಅದರೆ ಅವನು ಕುಡಿಯೋದು ಬಿಡಲಿಲ್ಲ ಅಂತ ಬಹಳ‌ ದುಃಖಿತನಾಗೇ ಮೀಡಿಯಾಗಳಿಗೆ ಹೇಳಿಕೆ ನೀಡಿದ್ದ. ಬಹುಷ ಮುಂದೆ ನಾನು ಪೊಲೀಸರ ಅತಿಥಿ ಆಗ್ತೀನಿ ಅಂತ ಡಾ. ಚಿರಂಜೀವಿ ಅಂದುಕೊಂಡಿರಲಿಲ್ಲ ಅನಿಸುತ್ತೆ. ಕೊನೆಗೆ ಪೊಲೀಸರು ಡಾ. ಚಿರಂಜೀವಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.

ಡ್ರಿಂಕ್ಸ್ ನಲ್ಲಿ ನಿದ್ದೆ ಮಾತ್ರೆ ಹಾಕಿ ಪ್ರಜ್ಞೆ ತಪ್ಪಿಸಿ ಕೊರಳು ಬಿಗಿದು ಕೊಂದ್ರು
ಡಾ.ಚಿರಂಜೀವಿ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕು ಮೈಲಾರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ.  ಡಾ. ಚಿರಂಜೀವಿ ಈ ಪ್ರಕರಣದ ಪ್ರಮುಖ ಆರೋಪಿ. ಮೃತ ನವೀನ್ ರಿಲೇಟಿವ್ ಆಗಿದ್ದ ಡಾ. ಚಿರಂಜೀವಿ  ಹಾಗೂ ಅವರ ಅಸಿಸ್ಟೆಂಟ್ ಪ್ರಶಾಂತ್ ಇಬ್ರೂ ಸೇರಿ ನವೀನ್ ಮರ್ಡರ್  ಮಾಡಿದ್ದಾರೆ.

 ಮೃತ ನವೀನ್ ಡಾ. ಚಿರಂಜೀವಿಯವರ ಮನೆಯಲ್ಲೇ ಇದ್ದ.ಮೃತ ನವೀನ್ ಗೆ ಸ್ವಲ್ಪ ಅಪರಾಧಿಕ ಹಿನ್ನೆಲೆಯೂ ಇತ್ತು.ಆಗಾಗ  ಮನೆಯಲ್ಲಿ ಗಲಾಟೆ ಮಾಡ್ತಾ ಇದ್ದ.ಇದರಿಂದ ನೊಂದಿದ್ದ  ಡಾ.ಚಿರಂಜೀವಿ ನವೀನ್ ನನ್ನು ಜೀವಂತ ಬಿಡವಾರದು, ಮುಗಿಸಬೇಕು ಅಂತ ನಿರ್ಧಾರ ಮಾಡಿದ್ರಂತೆ.ತಮ್ಮ ಅಸಿಸ್ಟೆಂಟ್ ಪ್ರಶಾಂತ್ ಲಮಾಣಿ  ಜೊತೆ ಸೇರಿ ನವೀನ್ ಮರ್ಡರ್ ಮಾಡಿದ್ದಾರೆ.ಮುಂದೆ ಇಬ್ಬರೂ ಪ್ಲ್ಯಾನ್ ಮಾಡಿ ನವೀನ್ ಗೆ ಡ್ರಿಂಕ್ಸ್ ಗರ ನಿದ್ದೆ ಮಾತ್ರೆ ಹಾಕಿ ಕುಡಿಸಿದ್ದಾರೆ.ತಮ್ಮದೇ ಕ್ಲೀನಿಕ್ ನಲ್ಲಿದ್ದ 10 ನಿದ್ರೆ ಮಾತ್ರೆ ಹಾಕಿ ಕುಡಿಸಿದ್ದಾರೆ.ಬಳಿಕ ಅರೆ ಪ್ರಜ್ಞಾವಸ್ತೆಯಲ್ಲಿದ್ದ ನವೀನ್ ನನ್ನು ಬೈಕ್ ನಲ್ಲಿ ತಂದು ಬಸ್ ಸ್ಟಾಂಡ್ ನಲ್ಲಿ ಹಾಕ್ತಾರೆ.ಅದಾದ ಬಳಿಕ ಯಾಕೋ ಸರಿ ಅನ್ನಿಸದೇ ಡಾಕ್ಟರ್ ತಮ್ಮ ಕಾರಿನ ಬ್ಯಾಕ್ ಸೀಟ್ ನಲ್ಲಿ  ನವೀನ್ ನನ್ನು ಎತ್ತಿ ಕೂರಿಸಿಕೊಂಡು  ಬರ್ತಾರೆ.

ಕನವಳ್ಳಿ ಶಿಬಾರದ ಬಳಿ ಬಟ್ಟೆಯಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲ್ತಾರೆ. ಬಳಿಕ ಜೀವ ಹೋಗಿದ್ದು ಗೊತ್ತಾಗಿ ಬಾಡಿ  ಒಗೆದು ಹೋಗುತ್ತಾರೆ.‌ ಈ ಕುರಿತು ಇಂದು ಸುದ್ದಿಗೋಷ್ಟಿ ನಡೆಸಿದ ಹಾವೇರಿ ಎಸ್ ಪಿ ಹನುಮಂತರಾಯ ಡಾ. ಚಿರಂಜೀವಿಯವರ ಕುಕೃತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು...

click me!