ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಆ.1): ಇತ್ತೀಚಿನ ದಿನಗಳಲ್ಲಿ ಚೈನ್ ಲಿಂಕ್ ವ್ಯವಹಾರಗಳು ಹೆಚ್ಚಾಗಿವೆ. ಅಗತ್ಯ ವಸ್ತುಗಳಿಂದ ಹಿಡಿದು ವೈದ್ಯಕೀಯ ಚಿಕಿತ್ಸೆ ಸಲಕರಣೆಗಳು ಸಹ ಚೈನ್ ಲಿಂಕ್ ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಹೀಗಾಗಿ ಚೈನ್ ಲಿಂಕ್ ಸಿಸ್ಟಮ್ ಸ್ಕೀಮ್(Chain link system Scheme) ಗೆ ಜನರು ಮಾರು ಹೋಗುತ್ತಿದ್ದಾರೆ. ಇಂತಹ ಮೋಸದ ಮಾರ್ಕೆಟ್ ಸ್ಕೀಮ್ ನ ಸ್ಕ್ಯಾಮ್(Market Scheme Scam) ಬಗ್ಗೆ ಕೇಳಿದ್ರೆ ನೀವು ದಂಗಾಗ್ತೀರಿ. ಬಣ್ಣ ಬಣ್ಣದ ಕನಸು ಕಟ್ಟಿ, ಆಕಾಶ ತೋರಿಸಿ ಕೋಟಿ ಕೋಟಿ ಲೂಟಿ ಮಾಡುವ ದಂಧೆ ವ್ಯವಸ್ಥೆವಾಗಿ ನಡೆದಿದೆ. ಅದರಲ್ಲಿ ಮನೆಯಲ್ಲೇ ಇದ್ದು ಲಕ್ಷಾಂತರ ರೂಪಾಯಿ ಹಣ ಸಂಪಾದಿಸುವ ಆಸೆ ಹುಟ್ಟಿಸಿ, ಮೊಟಿವೇಷನ್ ಸ್ಪೀಚ್(Motivation speech) ಮಾಡೋ ಮೂಲಕ ಜನರಿಗೆ ವಂಚನೆ ಮಾಡೋ ಚೈನ್ ಲಿಂಕ್ ಸಿಸ್ಟಮ್ ಕಂಪನಿಗಳು ರಾಜ್ಯದಲ್ಲಿ ನಿತ್ಯ ಸಾವಿರಾರು ಹುಟ್ಟಿಕೊಳ್ತಿವೆ. ಅಂಥಹದ್ದೇ ಕಂಪನಿಯೊಂದು ರಾಯಚೂರು ಜಿಲ್ಲೆಯ ಸಾವಿರಾರು ಜನರಿಗೆ ಪ್ರೊಡಕ್ಟ್ ಆಸೆ ತೋರಿಸಿ, ಉಪಯೋಗಕ್ಕೆ ಬಾರದ ಪ್ರೊಡಕ್ಟ್ ಗಳನ್ನ ನೀಡಿ ಒಬ್ಬೊಬ್ಬರಿಂದ 8990 ರೂಪಾಯಿ ಪಡೆದು ಮೋಸ ಮಾಡಿರೋದು ಬೆಳಕಿಗೆ ಬಂದಿದೆ. ಅದುವೇ ಟ್ರಿಲೇನಿಯರ್ ಮೈನ್ಸ್ ವೇಂಚರ್ ಪ್ರೈವೆಟ್ ಲಿಮಿಟೆಡ್ ಕಂಪನಿ.
ತುಮಕೂರಿನಲ್ಲಿ ತಲೆಎತ್ತಿದೆ ನಕಲಿ ಚೈನ್ ಲಿಂಕ್ ಕಂಪನಿ, ಉದ್ಯೋಗದ ಹುಡುಕಾಟದಲ್ಲಿರುವವರೇ ಟಾರ್ಗೆಟ್!
ಕುಂದಾಪುರ ಮೂಲದ ಕಂಪನಿಯಿಂದ ಮೋಸದ ಆರೋಪ:
ಚೈನ್ ಲಿಂಕ್ ವ್ಯಾಪಾರಿಗಳು ದಿನೇ ದಿನೇ ಹೆಚ್ಚಾಗುತ್ತಲ್ಲೇ ಇವೆ. ಅದರಲ್ಲಿ ಒಂದಾದ ಕುಂದಾಪುರ(Kundapura) ಮೂಲದ ಸಂದೇಶ್ ಶೆಟ್ಟಿ(Sandesh shetty) ಅನ್ನೋ ವ್ಯಕ್ತಿ ಈ ಟ್ರಿಲೇನಿಯರ್ ಮೈನ್ಸ್ ವೇಂಚರ್ ಪ್ರೈವೆಟ್ ಲಿಮಿಟೆಡ್ ಕಂಪನಿಯನ್ನ ಹುಟ್ಟು ಹಾಕಿದ್ದು, ಜನರಿಗೆ ಬಣ್ಣ ಬಣ್ಣದ ಆಸೆ, ಆಮಿಷಗಳನ್ನ ತೋರಿಸಿ ವಂಚನೆ ಮಾಡುತ್ತಲೇ ಬರಮುಂದಾಗಬೇಕಿದದಈ ಸಂದೇಶ್ ಕುಮಾರ್ ಶೆಟ್ಟಿ ಜೊತೆ ಮೃತ್ಯಂಜಯ, ವೆಂಕಪ್ಪ ಲಮಾಣಿ ಸೇರಿ ನೂರಾರು ಜನರ ತಂಡವೇ ಇದೆ. ಇವರೆಲ್ಲಾ ಮಧ್ಯಮ ವರ್ಗದ, ಬಡ, ಕೂಲಿ ಕಾರ್ಮಿಕರು, ಗೃಹಿಣಿಯರು ಹಾಗೂ ವಿದ್ಯಾರ್ಥಿಗಳನ್ನೇ ಟಾರ್ಗೇಟ್ ಮಾಡಿ, ಹಣ ಗಳಿಸುವ ಸುಲಭ ಮಾರ್ಗದ ಹೆಸರಿನಲ್ಲಿ ಯಾಮಾರಿಸ್ತಿದ್ದಾರೆ. ಸಿಂಧನೂರಿನ ಗೀತಾ ಅನ್ನೋರನ್ನ ಆರಂಭದ ಕೋವೀಡ್ ಲಾಕ್ ಡೌನ್ ಟೈಮ್ ನಲ್ಲಿ ಪರಿಚಯ ಮಾಡಿಕೊಂಡಿದ್ದ ಈ ತಂಡ, ಅವರಿಗೆ ಹಣ ಗಳಿಸೋ ಆಸೆ ತೋರಿಸಿ, 1500ಕ್ಕೂ ಹೆಚ್ಚು ಜನರ ಐಡಿ ಮಾಡಿಸಿದ್ರು. ಹೆಚ್ಚೆಚ್ಚು ಜನರ ಐಡಿ ಮಾಡಿಸಿ, ಅಚೀವ್ಮೆಂಟ್ ಮಾಡಿದಂತೆ ಗಿಫ್ಟ್ ನೀಡೋ ಕನಸನ್ನು ಕಟ್ಟಿಸಿದ್ರೂ. ಅದರಂತೆ ಅಚೀವ್ಮೆಂಟ್ ಮಾಡಿದ್ದ ಗೀತಾರಿಗೆ ಈ ಕಂಪನಿಯಿಂದ ಸಿಕ್ಕಿದ್ದು ನಾತ್ರ ಟರ್ಮೀನೇಟ್ ಭಾಗ್ಯ.
ವಾಹನ ಸಾಗಿಸುವುದಾಗಿ ಹಣ ಪಡೆದು ವಂಚನೆ: ಖತರ್ನಾಕ್ ಖದೀಮರ ಸೆರೆ
ಕಾರ್ ಅಚೀವ್ ಮಾಡಿದ ಮಹಿಳೆಗೆ ಟರ್ಮೀನೇಟ್ ಭಾಗ್ಯ:
ರಾಯಚೂರು(Raichuru) ಜಿಲ್ಲೆ ತಾಲೂಕಿನ ಸಿಂಧನೂರು(Sindhanuru) ಪಟ್ಟಣದ ಗೀತಾ ಅವ್ರು ಕಾರ್ ಅಚೀವ್ ಮಾಡಿದ ಕಾರಣಕ್ಕೆ, ಅವರಿಗೆ ಕಾರ್ ಕೊಡಿಸದೇ ಮಹಾಮೋಸ ಮಾಡಿರೋ ಕಂಪನಿ ಇಲ್ಲ ಸಲ್ಲದ ಕಾರಣ ಹೇಳಿ ಅವರನ್ನೇ ಕಂಪನಿಯಿಂದ ಟರ್ಮೀನೇಟ್ ಮಾಡಿದೆ. ಇದ್ರಿಂದ ನೊಡಿರೋ ಗೀತಾ ಅವ್ರು ಕಂಪನಿ ಎಂಡಿ ಸಂದೇಶ್ ಕುಮಾರ್(Sandesh Kumar), ಮೃತ್ಯಂಜಯ(Mrityunjay) ಹಾಗೂ ವೆಂಕಪ್ಪ ಲಮಾಣಿ(Venkappa Lamani) ವಿರುದ್ದ ಸಿಂಧನೂರು ನಗರ ಠಾಣೆಯಲ್ಲಿ(Sindhanuru City Police) ದೂರು ದಾಖಲಿಸಿದ್ದಾರೆ. ಇನ್ನೂ ಟ್ರಿಲೇನಿಯರ್ ಮೈನ್ಸ್ ವೇಂಚರ್ ಪ್ರೈವೆಟ್ ಲಿಮಿಟೆಡ್ ಕಂಪನಿ(Trillionaire Mindz Private Limited)ಯ ಮಹಾಮೋಸ ಇದೇ ಮೊದಲಲ್ಲ. 2020ರ ಡಿಸೆಂಬರ್ ನಲ್ಲಿ ಇದೇ ರೀತಿ ಬೆಂಗಳೂರಿನ ಸುಮಾರು ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ಟಾರ್ಗೇಟ್ ಮಾಡಿ ಚೈನ್ ಲಿಂಕ್ ಸಿಸ್ಟಮ್ ಆಧಾರದಲ್ಲಿ 8990 ರೂಪಾಯಿನಂತೆ ಕಟ್ಟಿಸಿಕೊಂಡು ಯಾವುದೇ ಪ್ರೊಡಕ್ಟ್(Product) ನೀಡದೇ ಮೋಸ ಮಾಡಲಾಗಿತ್ತು. ಹೀಗಾಗಿ ಬೆಂಗಳೂರಿನ(Bengaluru) ಸಾವಿರಾರು ವಿದ್ಯಾರ್ಥಿಗಳು ಬೆಂಗಳೂರಿನ ಸುಬ್ರಹ್ಮಣ್ಯ ಪೊಲೀಸ್ ಠಾಣೆ(Subrahmanya Polic Station)ಯಲ್ಲಿ 10 ಕೋಟಿಗೂ ಅಧಿಕ ವಂಚನೆ ಮಾಡಿದ್ದರ ಆಧಾರದಲ್ಲಿ ದೂರು ದಾಖಗಿತ್ತು. ದೂರು ದಾಖಲಾಗ್ತಿದ್ದಂತೆ ಎಂಡಿ ಸಂದೇಶ ಕುಮಾರ್ ಶೆಟ್ಟಿಯ ಬಂಧನವೂ ಆಗಿತ್ತು. ಆದ್ರೆ ಅದಾದ್ಮೇಲೆ ಉತ್ತರ ಕರ್ನಾಟಕದಲ್ಲಿ ತನ್ನ ದಂಧೆಯನ್ನ ಈ ಟ್ರಿಲೇನಿಯರ್ ಮೈನ್ಸ್ ವೇಂಚರ್ ಪ್ರೈವೆಟ್ ಲಿಮಿಟೆಡ್ ಕಂಪನಿ ಆರಂಭಿಸಿದೆ. ಮನೆಯಲ್ಲಿದ್ದೇ ಹಣ ಗಳಿಸಬಹುದು ಅನ್ನೋ ಹಣದಾಸೆಗೆ ಅದೇಷ್ಟೋ ಜನ ತಮ್ಮ ಹೆಂಡತಿಯರ ಮಾಂಗಲ್ಯ ಸೂತ್ರವನ್ನ ಮಾರಿ ಈ ಮಹಾಮೋಸದ ಕಂಪನಿಗೆ ಹಣ ಕಟ್ಟಿ ಐಡಿ ಪಡೆದಿದ್ರು. ಹಣ ಕಟ್ಟಿ ಐಡಿ ಪಡೆದ್ಮೇಲೆ ಈ ಕಂಪನಿಯ ಮೋಸ ಅದೇಷ್ಟೋ ಜನರಿಗೆ ಅರಿವಾದಾಗಲೇ ದಿಗ್ಭ್ರಮೆಗೊಂಡು, ಕಂಪನಿಯಿಂದ ಹೊರಬಂದಿದ್ದಾರೆ.
ಒಟ್ನಲ್ಲಿ ಸ್ಕೀಮ್ ಹೆಸರಿನಲ್ಲಿ ಕೋಟಿ ಕೋಟಿ ಸ್ಕ್ಯಾಮ್ ಮಾಡಿರೋ ಖದೀಮರು ಜನರ ಮೈಂಡ್ ಸೆಟ್ ಅನ್ನೇ ಅಡ್ವಾಂಟೇಜ್ ಆಗಿ ಮಾಡಿಕೊಂಡಿದ್ದಾರೆ. ಇಂತಹ ಬಣ್ಣದ ಲೋಕ ತೋರಿಸಿ ಹಣ ಗಳಿಸೋ ದಾರಿ ಹೇಳ್ಕೋಡೋ ಕಂಪನಿಗಳ ಬಗ್ಗೆ ಜನ ಅಲರ್ಟ್ ಆಗಬೇಕಿದೆ. ಇತ್ತ ಜನರಿಗೆ ಮೋಸ ಮಾಡಿ, ವಂಚನೆ ಮಾಡಿರೋ ಕಂಪನಿಯ ವಿರುದ್ಧ ಪೊಲೀಸರು ಸೂಕ್ತ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಂಡು, ವಂಚನೆಗೊಳದಾವ್ರಿಗೆ ನ್ಯಾಯ ಕೊಡಿಸಲು ಮುಂದಾಗಬೇಕಿದೆ.