
ಮಧ್ಯಪ್ರದೇಶ (ಅ. 01): ತಂಬಾಕು ತರಲು ನಿರಾಕರಿಸಿದ ತನ್ನ 8 ವರ್ಷದ ಮೊಮ್ಮಗಳನ್ನು ಅಜ್ಜ ಕೊಂದಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ (Madhya Pradesh) ಗುನಾ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಪದೇ ಪದೇ ಮನವಿ ಮಾಡಿದರೂ ಸಮೀಪದ ಅಂಗಡಿಯಿಂದ ತಂಬಾಕು ತರಲು ಬಾಲಕಿ ನಿರಾಕರಿಸಿದ್ದಳು ಎನ್ನಲಾಗಿದೆ. ಹೀಗಾಗಿ ಕೋಪಗೊಂಡ ಆರೋಪಿ ಆಕೆಯನ್ನು ಕೊಂದು ಶವವನ್ನು ಮೇವಿನ ರಾಶಿಯಲ್ಲಿ ಹೂತು ಹಾಕಿದ್ದಾನೆ. ಜಿಲ್ಲೆಯ ಚತರ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು 60 ವರ್ಷದ ಮುನ್ನಾ ಸಹರಿಯಾ ಎಂದು ಗುರುತಿಸಲಾಗಿದೆ. ಈತ ಮೃತ ಬಾಲಕಿಯ ಅಜ್ಜನ ಸೋದರ ಸಂಬಂಧಿ ಎಂದು ವರದಿಗಳು ತಿಳಿಸಿವೆ. ತಂಬಾಕು ತರಲು ನಿರಾಕರಿಸಿದ್ದಕ್ಕಾಗಿ ಆರೋಪಿ ಕುಪಿತಗೊಂಡು ಕೊಡಲಿಯಿಂದ ಬಾಲಕಿ ತಲೆಗೆ ಹೊಡಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ತಂದೆ ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಪೋಷಕರು ಮನೆಯಲ್ಲಿಲ್ಲದಿದ್ದಾಗ ಈ ಘಟನೆ ನಡೆದಿದೆ.
ಕೆಲಸದಿಂದ ಮನೆಗೆ ಹಿಂದಿರುಗಿದಾಗ ಬಾಲಕಿ ಪತ್ತೆಯಾಗಿಲ್ಲ, ಹೀಗಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ತಂಡ ಮನೆ ಶೋಧ ನಡೆಸಿದಾಗ ಮೇವಿನ ರಾಶಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಘಟನೆಯ ಸಮಯದಲ್ಲಿ ಮನೆಯಲ್ಲಿ ಸಹಾರಿಯಾ ಅಷ್ಟೇ ಮನೆಯಲ್ಲಿದ್ದರು ಎಂದು ಸಂತ್ರಸ್ತೆಯ ಪೋಷಕರು ಆರೋಪಿಸಿದ್ದಾರೆ. ಬಳಿಕ ಆರೋಪಿ ಸಹಾರಿಯಾನನ್ನು ಪೊಲೀಸರು ಗ್ರಾಮದ ಹೊರಗಿನಿಂದ ಬಂಧಿಸಿದ್ದಾರೆ. ಬಾಲಕಿಯನ್ನು ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಕಪ್ಪಗಿದ್ದೀಯ ಎಂದು ಪತಿ ಟೀಕೆ; ಗಂಡನ ಮರ್ಮಾಂಗ ಕತ್ತರಿಸಿ, ಕೊಡಲಿಯಿಂದ ಕೊಂದ ಪತ್ನಿ
ಬೆಳಗಾವಿ ಬಾಲಕನ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ: ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಬಳಿ ಹಿರಣ್ಯಕೇಶಿ ನದಿಯ ಹಿನ್ನೀರಿನಲ್ಲಿ ಅಪರಿಚಿತ ಬಾಲಕನ ರುಂಡವಿಲ್ಲದ ಮುಂಡ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಾ.ಸಂಜೀವ ಪಾಟೀಲ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರುದ್ದೀನ ಕೊಣ್ಣೂರು ಮತ್ತು ಹನುಮಂತ ದೇವನೂರ ಬಂಧಿತ ಆರೋಪಿಗಳು. ನೂರುದ್ದೀನ ಬಾಲಕನ ರುಂಡ ಕತ್ತರಿಸಿ, ಶಾಲಾ ಸಮವಸ್ತ್ರವನ್ನು ಬಿಚ್ಚಿ ಬ್ಯಾಗ್ ಸಮೇತ ಕಿತ್ತುಕೊಂಡು ಹತ್ಯೆ ಮಾಡಿದ್ದಾನೆ. ಬಾಲಕನ ಸೈಕಲ್‌ನ್ನು ಬಾವಿಗೆ ಎಸೆದಿದ್ದಾನೆ.ಈ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ತನ್ನ ಸ್ನೇಹಿತ ಹನುಮಂತನ ಸಹಾಯ ಪಡೆದಿದ್ದ ಎಂದರು.
10ರಿಂದ 12 ವರ್ಷದ ಬಾಲಕನ ರುಂಡವಿಲ್ಲದ ಮೃತದೇಹ ಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪರಿಶೀಲಿಸಿದ ವೇಳೆ ಇದು ಕೊಲೆ ಪ್ರಕರಣ ಎಂಬುದು ಬೆಳಕಿಗೆ ಬಂದಿತು. ಇದೇ ವೇಳೆ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕನ ಕಾಣೆ ಪ್ರಕರಣಕ್ಕೆ ಇದು ಹೊಂದಾಣಿಕೆಯಾಗಿರುವುದು ಕಂಡುಬಂದಿತು. ಈ ಪ್ರಕರಣ ಬೇಧಿಸಲು ಎರಡು ಪ್ರತ್ಯೇಕ ಪೊಲೀಸರ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಿದ ವೇಳೆ ಬಾಲಕನನ್ನು ಹತ್ಯೆ ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು.
ದೇಗುಲ ನಿವೇಶನ ವಿಚಾರಕ್ಕೆ ಜೋಡಿ ಕೊಲೆ: ದೇವಸ್ಥಾನಕ್ಕಾಗಿ ಹೋರಾಡಿದವರಿಗೆ ಸಾವಿನ ಉಡುಗೊರೆ!
ಈ ಪ್ರಕರಣ ಬೇಧಿಸುವಲ್ಲಿ ಗೋಕಾಕ ಡಿವೈಎಸ್ಪಿ, ಸರ್ಕಲ್ ಇನ್ಸಪೆಕ್ಟರ್ ಮೊಹಮ್ಮದ ರಫೀಕ್ ತಹಸೀಲ್ದಾರ, ಹುಕ್ಕೇರಿ ಠಾಣೆ ಇನ್ಸಪೆಕ್ಟರ್ ರಮೇಶ ಛಾಯಾಗೋಳ, ಸಂಕೇಶ್ವರ ಠಾಣೆ ಇನ್ಸಪೆಕ್ಟರ್ ಪ್ರಹ್ಲಾದ ಚೆನ್ನಗಿರ ಮತ್ತು ತಂಡದ ಕಾರ್ಯವನ್ನು ಶ್ಲಾಘಿಸಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ ಮೊದಲಾದವರು ಉಪಸ್ಥಿತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ